Author: admin
ಬಂಟರ ಚಾವಡಿ ಪರ್ಕಳದ 2024-26ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ದಿನಾಂಕ 14-04-2024 ನೇ ಆದಿತ್ಯವಾರದಂದು ಪರ್ಕಳದ ಸುರಕ್ಷಾ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ತಾರನಾಥ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಮಾರಿ ದೃತಿ ಶೆಟ್ಟಿ ಮತ್ತು ಕುಮಾರಿ ಅನಿಷಾ ಶೆಟ್ಟಿಯವರು ಪ್ರಾರ್ಥನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಹಿರೆಬೆಟ್ಟು ಸ್ವಾಗತಿಸಿ, ಕಾರ್ಯಾಧ್ಯಕ್ಷ ವಸಂತ ಶೆಟ್ಟಿ ಚೆನ್ನಿಬೆಟ್ಟು ಪ್ರಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷರಾದ ಶ್ರೀ ತಾರನಾಥ ಹೆಗ್ಡೆಯವರು ಮಾತನಾಡಿ, ಬಂಟರು ಸಂಘಟಿತರಾಗುವ ಅವಶ್ಯಕತೆಯ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿದರು. 2024-26ನೇ ಸಾಲಿನ ಅಧ್ಯಕ್ಷರಾಗಿ ಶ್ರೀ ಅರುಣಾಚಲ ಹೆಗ್ಡೆಯವರು ಅಧಿಕಾರ ವಹಿಸಿಕೊಂಡರು. ಕಾರ್ಯಾಧ್ಯಕ್ಷರಾಗಿ ವಸಂತ ಶೆಟ್ಟಿ ಹಿರೆಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಹೆಗ್ಡೆ, ಕೋಶಾಧಿಕಾರಿಯಾಗಿ ವಸಂತ ಶೆಟ್ಟಿ ಚೆನ್ನಿಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ದಿವಾಕರ ಶೆಟ್ಟಿ ಹೆರ್ಗ ಅಧಿಕಾರ ವಹಿಸಿಕೊಂಡರು. ದ್ವಿತೀಯ ಪಿ ಯು ಸಿ ಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ ಕುಮಾರಿ ಖುಷಿ ಹೆಗ್ಡೆ ಆತ್ರಾಡಿಯವರನ್ನು ಸನ್ಮಾನಿಸಲಾಯಿತು. ಅಕಾಲಿಕ ನಿಧನರಾದ ಸಂಘದ ಸಂಘಟನಾ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಸುರತ್ಕಲ್ ಘಟಕದ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ದೀಪ ಪ್ರಜ್ವಲನೆಗೈದ ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಯುಎಸ್ ಎ ಮಾತನಾಡಿ, “ಅಮೇರಿಕದಲ್ಲಿ ಯಕ್ಷಗಾನ ಮಾಡಿಸುವ ಮೂಲಕ ಅಲ್ಲಿನ ಜನರಿಗೂ ನಮ್ಮ ಕರಾವಳಿಯ ಸಂಸ್ಕೃತಿಯ ಪರಿಚಯ ಮಾಡಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸಲ್ಲಬೇಕು. ಯಕ್ಷಧ್ರುವ ಟ್ರಸ್ಟ್ ಈ ಮೂಲಕ ಸಾಗರದಾಚೆಗೂ ಯಕ್ಷಪ್ರೇಮಿಗಳ ಬಾಂಧವ್ಯವನ್ನು ಬೆಸೆದಿದೆ. ಯುರೋಪ್ ರಾಷ್ಟ್ರಗಳಲ್ಲಿ ಪಟ್ಲ ತಂಡದೊಂದಿಗೆ ಸಂಚಾರ ನಡೆಸಿರುವುದು ನನ್ನ ಜೀವನದ ಅವಿಸ್ಮರಣೀಯ ದಿನಗಳು. ಮುಂದೆಯೂ ಅಮೇರಿಕದಲ್ಲಿ ಪಟ್ಲರ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತೇನೆ” ಎಂದು ಹೇಳಿದರು. ಬಳಿಕ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು, “ನನ್ನನ್ನು ತಾಯಿ ಕಟೀಲು ದುರ್ಗೆ ಯಕ್ಷಗಾನ ಕಲಾವಿದರ ಸೇವೆ ಮಾಡುವಂತೆ ಅನುಗ್ರಹ ನೀಡಿದ್ದಾಳೆ. ಅವಳ ಅಣತಿಯಂತೆ ನಾನಿಂದು ಯಕ್ಷಗಾನ ಕಲಾವಿದರಿಗೆ ನೆರವು…
ನೀರಿನಿಂದಲೇ ಜನನ, ನೀರಿನಿಂದಲೇ ಮರಣ ಹೊಂದುವ ಉಪ್ಪು ನಮ್ಮ ದಿನ ನಿತ್ಯ ಜೀವನದಲ್ಲಿ ಹಲವಾರು ರೀತಿಯಲ್ಲಿ ಉಪಯೋಗಿಸುವ ಅವಶ್ಯಕ ವಸ್ತು. ರುಚಿಯ ಇನ್ನೊಂದು ಅರ್ಥವೇ ಉಪ್ಪು. ಗ್ರಹ ಬಳಕೆ ಹಾಗೂ ಕೈಗಾರಿಕಾ ಬಳಕೆಗಾಗಿ ಉಪ್ಪು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಆವಿಯಾಗುವ ಮೂಲಕ ನೀರಿನಿಂದ ಬೇರ್ಪಡಿಸಲಾಗುವ ನೈಸರ್ಗಿಕ ಉಪ್ಪು ನಿಸರ್ಗದ ಅದ್ಬುತವೆಂದೇ ಹೇಳಬಹುದು. ಸಂಸ್ಕರಿಸಿದ ಉಪ್ಪಿಗೂ, ನೈಸರ್ಗಿಕ ಉಪ್ಪಿಗೂ ತುಂಬಾ ವ್ಯತಾಸವಿದ್ದು, ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ. ಉಪ್ಪಿನ ಋಣ ತೀರಿಸಲು ಸಾಧ್ಯವೇ ಎಂಬ ಭಾವನಾತ್ಮಕ ಬಂಧವೂ ಜನಪದಗಳು ಉಪ್ಪಿನ ಮಹತ್ವವನ್ನು ತಿಳಿಸುತ್ತದೆ. ಭಾಯಂದರನ ಉಪ್ಪು ತಯಾರಿಕಾ ಪ್ರದೇಶಕ್ಕೆ ಭೇಟಿ ನೀಡಿದಾಗ ಬೃಹತ್ ಗಾತ್ರದ ಬಣವೆಗಳು ಗಮನ ಸೆಳೆದವು. ನಮ್ಮ ಊರಿನಲ್ಲಿ ಅಕ್ಕಿ ಭತ್ತದ ರಾಶಿ ಹಾಕಿದಂತೆ ಉಪ್ಪು ಸಂಗ್ರಹಿಸಿದ ಬಳಿಕ ಅದನ್ನು ಗುಪ್ಪೆ ಹಾಕಿ ಬಿಸಿಲು ಇಬ್ಬನಿ ಮತ್ತು ದೂಳಿನಿಂದ ರಕ್ಷಿಸಲು ಅದರ ಮೇಲೆ ಹುಲ್ಲು, ಪ್ಲಾಸ್ಟಿಕ್ ಪರದೆ ಹಾಸುತ್ತಾರೆ. ಎಕರೆಗಟ್ಟಲೇ ಭೂಮಿಯಲ್ಲಿ ಹಿಮದ ರಾಶಿಯಂತೆ ಅಲ್ಲಲ್ಲಿ ಚದುರಿದ ಪುಟ್ಟ…
31 ವರ್ಷಗಳ ಸುದೀರ್ಘ ಸೇವೆಯನ್ನು ದೇಶಕ್ಕಾಗಿ ಅರ್ಪಿಸಿದ ವೀರ ಯೋಧ, ದೇಶಭಕ್ತ ಶ್ರೀ ಕರ್ನಲ್ ಅಗರಿ ಜಗಜೀವನ್ ಭಂಡಾರಿಯವರಿಗೆ ಮೇ 19 ರಂದು ಮಂಗಳೂರು ಪುರಭವನದಲ್ಲಿ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಪ್ರಸ್ತುತ ಪಡಿಸುವ ಅನುಬಂಧ ಕಾರ್ಯಕ್ರಮದಲ್ಲಿ 2024 ರ ಸಾಲಿನ ಬಂಟ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಎನ್ ಹೆಗ್ಡೆ, ಮಣಿಪಾಲ ವಿದ್ಯಾಸಂಸ್ಥೆಯ ಉಪಕುಲಪತಿ ಡಾ. ಎಚ್ ಎಸ್ ಬಲ್ಲಾಳ್, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ ಎಂ ಜಯಕರ್ ಶೆಟ್ಟಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ ಎ ಸದಾನಂದ ಶೆಟ್ಟಿ, ಹಿರಿಯ ಉದ್ಯಮಿ ಚಿಕ್ಕಪ್ಪ ನಾಯ್ಕ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಿ ಅಪ್ಪಣ್ಣ ಹೆಗ್ಡೆ, ಎ ಜೆ ಸಮೂಹ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ವಿಟ್ಲ ಘಟಕದ 4ನೇ ವಾರ್ಷಿಕೋತ್ಸವವು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು. ಹವ್ಯಾಸಿ ಯಕ್ಷಗಾನ ಕಲಾವಿದೆ ಶ್ರೀಮತಿ ಜಯಲಕ್ಷ್ಮಿ ರೈ ಅಡ್ಯನಡ್ಕ ಮತ್ತು ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಬಹುಮುಖ ಪ್ರತಿಭೆ ರಿಷಿತ್ ರಾಜ್ ವಿಟ್ಲ ಇವರನ್ನು ಸಂಮಾನಿಸಲಾಯಿತು. ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಗೌರವಾಧ್ಯಕ್ಷರಾದ ವಿಟ್ಲ ಅರಮನೆಯ ಕೃಷ್ಣಯ್ಯ ಅರಸರು, ಮಾರಪ್ಪ ಶೆಟ್ಟಿ ಬೈಲುಗುತ್ತು, ಮಾಧವ ಮಾವೆ, ಮೋಹನದಾಸ ರೈ ಎರುಂಬು, ಸಂತೋಷ್ ಶೆಟ್ಟಿ ಪೆಲತ್ತಡ್ಕ ಉಪಸ್ಥಿತರಿದ್ದರು. ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಇವರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಕೆ ಇವರು ಪ್ರಸ್ತಾವಿಸಿದರು. ಸುರೇಶ್ ಶೆಟ್ಟಿ ಪಡಿಬಾಗಿಲು ನಿರೂಪಿಸಿ ವಿಜಯಶಂಕರ ಆಳ್ವರವರು ವಂದಿಸಿದರು.
ಸಾಧಾರಣ 1980ರವರೆಗೆ ನಮ್ಮವರು ಉತ್ತರ ಕ್ರಿಯಾದಿಗಳನ್ನು ಜಾತಿ ಪದ್ಧತಿಯಂತೆ ಮನೆಯಲ್ಲೇ ನಡೆಸುತ್ತಿದ್ದರು. ಆನಂತರ ಹೆಚ್ಚಿನ ಸೌಕರ್ಯಕ್ಕಾಗಿ ಪೇಟೆ ಪಟ್ಟಣಗಳ ಮಂದಿರ, ದೇವಾಲಯ, ಛತ್ರಗಳಿಗೆ ವರ್ಗವಾಯಿತು. ಕಾಲಕ್ಕೆ ತಕ್ಕ ಬದಲಾವಣೆ ಅನಿವಾರ್ಯವಾದರೂ ಮೂಲ ಸಂಸ್ಕಾರಕ್ಕೆ ಸಂಪೂರ್ಣ ತೀಲಾಂಜಲಿ ನೀಡುವುದು ಕ್ಷಮ್ಯವೇ? ನಾವು ಶೂದ್ರ ಸಂಪ್ರದಾಯದವರು. ಹಿಂದೆ ಮೃತರ ಶವ ಸಂಸ್ಕಾರವಾದ ದಿವಸ ಉತ್ತರಕ್ರಿಯೆವರೆಗೆ ನಿತ್ಯ ಎರಡು ಹೊತ್ತು ಮನೆಯವರು ನೀರಿಡುತ್ತಿದ್ದರು. 11 ಅಥವಾ 13 ನೇ ದಿನ ಮನೆಯಲ್ಲೇ ಮಡಿವಾಳ ಮತ್ತು ಕ್ಷೌರಿಕ ಪೌರೋಹಿತ್ವದಲ್ಲಿ ಕ್ರಿಯಾ ಭಾಗಗಳನ್ನು ಮಾಡಿ, ಬಂದವರೆಲ್ಲರಿಂದ ದೂಪೆಗೆ ಅನ್ನ ಹಾಕಿಸುವುದು, ಕ್ಷೌರಿಕ ಜಲ ಸಂಪ್ರೋಕ್ಷಣೆಯಿಂದ ಶುದ್ಧವಾಗಿ ಮನೆಗೆ ಬಂದು ಭೋಜನ ಮಾಡಿ ಅದೇ ದಿನ ರಾತ್ರಿ ಮೀನು ಮಾಂಸದ ಅಡುಗೆ ಮಾಡಿ ಒಂದು ಎಲೆ ಹಾಕಿ ಬಡಿಸಿ ಮೃತರ ಆತ್ಮವನ್ನು ಒಳಗೆ ಕರೆಯುವುದು ಕ್ರಮ. 16 ನೇ ದಿನ ಕುಟುಂಬದ ಮನೆಯಲ್ಲಿ ಸರ್ವ ಪಿತೃಗಳಿಗೆ 16 ಎಲೆ ಹಾಕಿ ಬಡಿಸಿ ಪ್ರಾರ್ಥಿಸಿ ಪಿತೃಗಳೊಂದಿಗೆ ಸೇರಿಸುವುದು ಪದ್ಧತಿ. ಆನಂತರ ಒಂದು…
ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿದ್ದು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳೂ ಇದರಿಂದ ಹೊರತಾಗಿಲ್ಲ. ಹೀಗಾಗಿ ಇಂದಿನ ದಿನಗಳಲ್ಲಿ ಮೌಲ್ಯಯುತ ಶಿಕ್ಷಣ ಎಲ್ಲಿ ದೂರವಾಗುತ್ತದೋ ಎಂಬ ಆತಂಕ ಎದುರಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಹೇಳಿದರು. ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಸಂವಾದ ನಡೆಸಿದರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಹಾಸ್ಟೆಲ್ ನಲ್ಲಿದ್ದುಕೊಂಡು ಕಲಿತ ಬಗ್ಗೆ ಸ್ವ ಅನುಭವ ಹೇಳಿದ ಡಾ ಮೋಹನ್ ಆಳ್ವ, ಹಾಸ್ಟೆಲ್ ನಲ್ಲಿ ವಿದ್ಯೆ ಜೊತೆ ಕ್ರೀಡೆ ಸಾಂಸ್ಕೃತಿಕಕ್ಕೂ ಒತ್ತು ನೀಡಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನುಭವ. ಅದಕ್ಕಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹಾಸ್ಟೆಲ್ ಸಹಿತ ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಉಪಸ್ಥಿತರಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿಬಿ ಹರೀಶ್…
ಬೃಹತ್ತಾಗಿದ್ದ ದಟ್ಟಡವಿಗೆ ಹೊಂದಿಕೊಂಡಿದ್ದ ಒಂದು ಗ್ರಾಮ. ಜನಸಂಖ್ಯೆಯೂ ತೀರಾ ಕಡಿಮೆಯಿತ್ತು. ವ್ಯವಸಾಯವೇ ಪ್ರಮುಖ ಕಸುಬಾಗಿತ್ತಾದರೂ ಕೆಲವರು ಕಾಡಿಗೆ ತೆರಳಿ ಒಣಮರಗಳನ್ನು ಕಡಿದು ಕಟ್ಟಿಗೆಯನ್ನು ಹೊತ್ತೂಯ್ದು ಕಾಡಿನಿಂದಾಚೆ ಇದ್ದ ನಗರದಲ್ಲಿ ಮಾರಿ ಜೀವನ ಸಾಗಿಸುತ್ತಿದ್ದರು. ಅಂತವರಲ್ಲಿ ನಿಜಗುಣನೂ ಒಬ್ಬ. ಸ್ವಲ್ಪ ಧಡೂತಿ ದೇಹದವನಾದರೂ ಕೆಲಸದಲ್ಲೇನೂ ಕಳ್ಳಾಟವಿರಲಿಲ್ಲ. ಅವನ ಮೈಯೊಂದೇ ಸ್ವಲ್ಪ ಭಾರವೆನಿಸಿ ಕೆಲಸದ ನಡುವೆ ಆಗಾಗ್ಗೆ ವಿಶ್ರಾಂತಿ ಪಡೆಯುತ್ತಿದ್ದುದೊಂದೇ ಅವನ ಅವಗುಣ. ಇಂತಹ ನಿಜಗುಣನು ಅಂದೂ ಸಹ ತನ್ನ ನಿತ್ಯದ ಕಾರ್ಯಕ್ಕಾಗಿ ಕಾಡಿಗೆ ತೆರಳಲು ಸಿದ್ಧವಾದನು. ಅವನ ತಾಯಿ ಅವನಿಗೆ ದೊಡ್ಡದೊಂದು ಡಬ್ಬಿಯಲ್ಲಿ ಆಹಾರವನ್ನು ತುಂಬಿಕೊಟ್ಟು ಮನೆಯಿಂದ ಬೀಳ್ಕೊಟ್ಟಳು. ಕಾಡಿನೊಳಗೆ ಸ್ವಲ್ಪದೂರದ ವರೆಗೂ ನಡೆದ ನಿಜಗುಣನಿಗೆ ತಲೆಯ ಮೇಲೆ ಹೊತ್ತಿದ್ದ ಡಬ್ಬಿ ಹಾಗೂ ಬೃಹತ್ ಗಾತ್ರದ ಮೈಯಿಂದಾಗಿ ದೂರ ನಡೆಯುವುದು ಆಯಾಸವಾಗತೊಡಗಿತು. ಸಮೀಪದ ಮರದ ನೆರಳೊಂದರಡಿ ಕುಳಿತ ನಿಜಗುಣನು ಅಮ್ಮ ಕೊಟ್ಟಿದ್ದ ಬುತ್ತಿಯ ಡಬ್ಬಿಯನ್ನು ಬಿಚ್ಚಿ ಅದರಲ್ಲಿದ್ದ ಆಹಾರವನ್ನು ಸೇವಿಸಿದನು. ಕೆಲವು ಸಮಯದ ವಿಶ್ರಾಂತಿಯನ್ನೂ ಪಡೆದ ಅನಂತರ ಅವನಲ್ಲಿ ಹೊಸದೊಂದು ಉತ್ಸಾಹ ಮೂಡಿತು.…
ಬಂಟರ ಸಂಘ ಮುಂಬೈಯ ಸಿಟಿ ಪ್ರಾದೇಶಿಕ ಸಮಿತಿಯ ತಂಡದವರಿಂದ ನೂತನ ಪರಿಕಲ್ಪನೆ ಮನೆಗೆ – ಮನಕ್ಕೆ ಭಜನ ಸತ್ಸಂಗವನ್ನು ಆರಂಭಿಸಿದೆ. ಸನಾತನ ಸoಸ್ಕೃತಿಯನ್ನು ಉಳಿಸುವ ಮುನ್ನಡೆಸುವ ಸಲುವಾಗಿ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಸಲುವಾಗಿ ಮನೆ ಮನ ಭಜನೆ ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ ಪಕ್ಕಳ ಅವರ ಮುತುವರ್ಜಿಯಲ್ಲಿ ಹೊಸ ಯೋಜನೆ ಯೋಚನೆಯೊಂದಿಗೆ ಆರಂಭಿಸಿದೆ. ಸುಮಾರು 25 ಮಂದಿಯ ಸಿಟಿ ಪ್ರಾದೇಶಿಕ ಸಮಿತಿಯ ಭಜನಾ ತಂಡ ಈಗಾಗಲೇ ಎರಡು ಮನೆ ಮನ ಭಜನೆ ಕಾರ್ಯಕ್ರಮ ಪೂರ್ತಿಗೊಳಿಸಿದೆ. ಇತ್ತೀಚೆಗೆ ಶ್ರೀ ದಿಲೀಪ್ ಶೆಟ್ಟಿ – ಶ್ರೀಮತಿ ವೃಂದ ಡಿ ಶೆಟ್ಟಿ ದಂಪತಿಗಳ ಸ್ವಗ್ರಹದಲ್ಲಿ ಭಜನ ಸತ್ಸಂಗ ನಡೆಸಲಾಯಿತು. ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಕೃಷ್ಣ ಶೆಟ್ಟಿ , ಸಂಚಾಲಕರಾದ ಶ್ರೀ ಶಿವರಾಮ ಶೆಟ್ಟಿ ಕಾರ್ಯನಗುತ್ತು, ಉಪ ಕಾರ್ಯಾಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ , ಕಾರ್ಯದರ್ಶಿ ಶ್ರೀ ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್ , ಮಾಜಿ ಕಾರ್ಯಾಧ್ಯಕ್ಷೆಯರು ಶ್ರೀಮತಿ ಕಲ್ಪನಾ ಕೃಷ್ಣ ಶೆಟ್ಟಿ, …
ಕನ್ನಡ ವಿಭಾಗ, ಮುಂಬಯಿ ವಿಶ್ವಾವಿದ್ಯಾಲಯದಲ್ಲಿ ಎಪ್ರಿಲ್ 13 ರ ಶನಿವಾರದಂದು ಮಧ್ಯಾಹ್ನ 2:00 ರಿಂದ ಮುಂಬಯಿ ವಿಶ್ವವಿದ್ಯಾಲಯ ಜೆ. ಪಿ. ನಾಯಕ್ ಭವನದಲ್ಲಿ ಕನ್ನಡ ವಿಭಾಗದ 46 ರ ಸಂಭ್ರಮ, ನಿರಂಜನ ಶತಮಾನೋತ್ಸವ, ಉಪನ್ಯಾಸ ಹಾಗೂ ಆರು ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾಡಲಿದ್ದಾರೆ. ಕರ್ನಾಟಕ ಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯ ಅವರ ‘ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ – ಡಾ. ಸುಧಾಮೂರ್ತಿ’ ಹಾಗೂ ‘ರಸ ಋಷಿ ರಾಷ್ಟ್ರಕವಿ ಕುವೆಂಪು’, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ‘ನನ್ನ ಇತ್ತೀಚೆಗಿನ ಓದು’, ಕನ್ನಡ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಅನುವಾದಿಸಿರುವ ‘ಫ್ರಮ್ ವರ್ಡ್ಸ್ ಟು ನೋಬಲ್ ಡೀಡ್ಸ್…