ಮಣಿಪುರ ಕುಂತಳನಗರದ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದ ಎರಡು ದಿನಗಳ ಅದ್ದೂರಿ ಸಮಾರಂಭಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಲೋಕಕಲ್ಯಾಣಕ್ಕೆ ತೆರೆದಿಟ್ಟ ಅರಿವಿನ ಹೆಬ್ಬಾಗಿಲು ಆಗಿರುವ ಭಾರತಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಆಚರಿಸುವುದು ಸಂಭ್ರಮದ ಸಾರ್ಥಕ ಕ್ಷಣ. ಸಮಾಜದ ಕಟ್ಟ ಕಡೆಯ ಮಗುವನ್ನೂ ಅಕ್ಷರ ಪ್ರಪಂಚಕ್ಕೆ ತೆರೆದುಕೊಳ್ಳುವಲ್ಲಿ ನೀಡಿರುವ ಸೇವೆಯು ಪ್ರಶಂಸನೀಯ ಎಂದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕನ್ನಡ ಶಾಲೆಯೊಂದರ 100 ವರ್ಷದ ಸಂಭ್ರಮ ನಿಜಕ್ಕೂ ಸ್ಥಾಪಕರ ಸೇವಾ ಮನೋಭಾವದ ನೈಜ ಪರಿಶ್ರಮಕ್ಕೆ ಸಂದ ಮೌಲ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದು ಶಾಲೆ ನಡೆದು ಬಂದ ದಾರಿ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಶಾಬನ್ ಬ್ಯಾರಿ, ಸಾಧಕರಾದ ರಾಘು ಪೂಜಾರಿ ಕಲ್ಮಂಜೆ, ಸಮಾಜ ಸೇವಕ ಅಶೋಕ್ ಶೆಟ್ಟಿ, ಸೆಲಿನ್ ಪುಷ್ಪ ಆಳ್ವ, ಪಡುಬಿದ್ರಿ ಪಲ್ಲವಿ ಸಂತೋಷ್ ಶೆಟ್ಟಿ, ಉಡುಪಿ ಸ್ವದೇಶ್ ನಾಗೇಶ್ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು.
ಬಿಜೆಪಿ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಶುಭ ಹಾರೈಸಿದರು. ವೇದಿಕೆಯಲ್ಲಿ ಹುಬ್ಬಳ್ಳಿ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ನ ರಾಜೇಂದ್ರ ವಿ. ಶೆಟ್ಟಿ, ಶಿವಿಕ ಪ್ಲಾಸ್ಟಿಕ್ಸ್ನ ಎಂ.ಡಿ ಮಧುಕರ ಶೆಟ್ಟಿ, ಓಫುಲ ಸಾಫ್ಟ್ವೇರ್ ಎಂ.ಡಿ. ಸುಭಾಸ್ ಸಾಲಿಯಾನ್, ಮಣಿಪುರ ಗ್ರಾ.ಪಂ. ಅಧ್ಯಕ್ಷೆ ಕುಮಾರಿ ಚೈತ್ರಾ, ಗ್ರಾ.ಪಂ.ಸದಸ್ಯ ಸಂತೋಷ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ನ್ಯಾಯವಾದಿ ಎನ್.ಕೆ. ಆಚಾರ್ಯ, ಮುಂಬಯಿ ಹೊಟೇಲ್ ಉದ್ಯಮಿ ಅಶೋಕ್ ಶೆಟ್ಟಿ, ದೆಂದೂರು ಗೋಪು ಪೂಜಾರಿ, ಮಣಿಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ವಿನ್ಸೆಂಟ್ ಡಿಸೋಜ, ಉದ್ಯಮಿ ಭರತ್ ಶೆಟ್ಟಿ ದೆಂದೂರು, ಸತೀಶ್ ಶೆಟ್ಟಿ, ರಾಘವ ಕೋಟ್ಯಾನ್, ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಸಂಚಾಲಕರಾದ ಅನುಸೂಯ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರ ಭುವರಾಯ ಆಚಾರ್ಯ, ಆರ್ಥಿಕ ಸಮಿತಿಯ ಸಂಚಾಲಕ ಸಂಚಾಲಕ ಗುರುರಾಜ್ ಭಟ್, ಆಡಳಿತ ಮಂಡಳಿಯ ಜತೆಕಾರ್ಯದರ್ಶಿ ಸಂಧ್ಯಾ ಕಿಶೋರ್ ಶೆಟ್ಟಿ, ವೈ. ಕರುಣಾಕರ ಶೆಟ್ಟಿ, ಶಿಕ್ಷಕರಕ್ಷಕ ವೃಂದದ ಅಧ್ಯಕ್ಷೆ ರೇಶ್ಮಾ, ಉಪಾಧ್ಯಕ್ಷೆ ಆಶಾ, ವಿದ್ಯಾರ್ಥಿನಾಯಕ ಧನುಷ್ ಪೂಜಾರಿ, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರದೀಪ್ ಪೂಜಾರಿ, ಉಪಾಧ್ಯಕ್ಷ ಅಶೋಕ್ ಪೂಜಾರಿ, ಖಜಾಂಚಿ ಪ್ರವೀಣ್ ಪೂಜಾರಿ ಇದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೈ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಶಾ ಶೇಖರ್ ವಂದಿಸಿದರು. ಉಪನ್ಯಾಸಕ ಸಚೇಂದ್ರ ಅಂಬಾಗಿಲು ನಿರೂಪಿಸಿದರು.