ನಮ ಮಾತೆರ್ಲಾ ಒಂಜೆ – ಕಲಾ ತಂಡದ 18 ನೇ ವಾರ್ಷಿಕೋತ್ಸವ ಸಮಾರಂಭ ಡಿಸೆಂಬರ್ 19ರಂದು ಇಲ್ಲಿನ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ ಆಶಕ್ತರಿಗೆ ಆರ್ಥಿಕ ನೆರವು, ಯಕ್ಷಗಾನ ಬಯಲಾಟ ಸಹಿತ ವಿವಿಧ ಕಾರ್ಯಕ್ರಮಗಳು ನಡೆದವು. ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಲಿನಿಕ್ ನ ವೈದ್ಯರಾದ ಎನ್. ಎಂ. ತುಳುಪುಳೆ ವಹಿಸಿದ್ದರು.
ವೇದಿಕೆಯಲ್ಲಿ, ಗಂಗಾಧರ ಮಿತ್ತಮಾರ್, ಸುಲ್ಕೇರಿಮೊಗ್ರು, ಸುಭಾಶ್ಚಂದ್ರ ರೈ ಪಡ್ಯೋಡಿ ಗುತ್ತು, ಸುಂದರ ಹೆಗ್ಡೆ, ಸದಾನಂದ ಪೂಜಾರಿ ಉಂಗಿಲಬೈಲು, ನಾಗಕುಮಾರ ಜೈನ್, ಸತೀಶ್ ಪೂಜಾರಿ, ಹಿಲರಿ ಫೆರ್ನಾಂಡಿಸ್, ಅಬ್ದುಲ್ ಹಮೀದ್ ಸುನ್ನತ್ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಚಿದಾನಂದ ಪೂಜಾರಿ ಎಲ್ದಕ್ಕ ಶಿರ್ಲಾಲ್ (ಸಾಮಾಜಿಕ, ಧಾರ್ಮಿಕ), ಪ್ರಕಾಶ್ ಶೆಟ್ಟಿ ನೊಚ್ಚ ಅಳೆದಂಗಡಿ (ಸಾಮಾಜಿಕ,ಧಾರ್ಮಿಕ) ಅಲೋಶಿಯಸ್ ಡಿಸೋಜಾ ದೈಲಾ ಅಳದಂಗಡಿ, (ಸಹಕಾರಿ ಕ್ಷೇತ್ರ), ರಾಕೇಶ್ ಹೆಗ್ಡೆ ಬಳೆಂಜ (ಕೃಷಿ, ಸಾಮಾಜಿಕ), ಸುಂದರ ಶೆಟ್ಟಿ ಪರಾರಿ ಮನೆ ಸುಲ್ಕೇರಿ (ಸಾಮಾಜಿಕ, ಧಾರ್ಮಿಕ) ವಸಂತ ಬಿ. ಬಂಗೇರ ಶಾಂತಿಬೆಟ್ಟು ಗರ್ಡಾಡಿ (ನಾಟಕ, ಕಿರುಚಿತ್ರ), ಮಂಜುನಾಥ ಆಚಾರ್ಯ ಅಳದಂಗಡಿ (ಸಾಮಾಜಿಕ, ಧಾರ್ಮಿಕ), ಲಕ್ಷ್ಮಿ ನಾರಾಯಣ ಗೊಲ್ಲ ಅಳದಂಗಡಿ (ಕಲಾ ಸೇವೆ), ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಾದ ಕಡಬ ಶ್ರೀನಿವಾಸ ರೈ, ಜಯಾನಂದ ಸಂಪಾಜೆ, ದಿನೇಶ್ ಶೆಟ್ಟಿ ಕೊಡಪದವು ಇವರನ್ನು ಅತಿಥಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಫೋನ್ಸ್ ಮೋನಿಸ್ ಪಿಲ್ಯ, ಶರತ್ ನಿನ್ನಿಕಲ್ಲು ಇವರಿಗೆ ಆರ್ಥಿಕ ನೆರವು ವಿತರಿಸಲಾಯಿತು.
ಅಜಿತ್ ಕುಮಾರ್ ಜೈನ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ವಸಂತ ಗರ್ಡಾಡಿ ವಂದಿಸಿದರು. ಕಲಾತಂಡದ ಸ್ಥಾಪಕರಾದ ರಮೇಶ್, ಅಧ್ಯಕ್ಷ ಜನಾರ್ದನ ಕೊಡಂಗೆ, ಪ್ರಧಾನ ಕಾರ್ಯದರ್ಶಿ ಎ. ದರ್ಶನ್ ಶೆಟ್ಟಿ ಅಳದಂಗಡಿ, ಉಪಾಧ್ಯಕ್ಷರಾದ ಶ್ರೀಧರ್ ಕರಂಬಾರು ಮತ್ತು ಮುಖೀಮ್ ಖಾನ್ ಪಿಲ್ಯ, ಕಾರ್ಯದರ್ಶಿ ಸಂತೋಷ ಅರುವ, ಸಂಚಾಲಕರಾದ ನವೀನ್ ನಾವರ, ಹರೀಶ್ ಡೆಪ್ಪುಣ, ಸಂಘಟನಾ ಕಾರ್ಯದರ್ಶಿ ಮಾರ್ಕ್ ಡಿಸೋಜಾ ಹಾಗೂ ಕಲಾ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.