ಬಂಟರ ಯಾನೆ ನಾಡವರ ಸಂಘ ಬೈಂದೂರು ಆಶ್ರಯದಲ್ಲಿ ಬಂಟರ ಪ್ರತಿಭಾ ಸಂಭ್ರಮ ಜನವರಿ 5 ರಂದು ಬೈಂದೂರಿನ ಬಂಟರ ಭವನದಲ್ಲಿ ನಡೆಯಲಿದೆ. 18 ವರ್ಷ ವಯೋಮಾನದವರಿಗೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಭಾಷಣ, ಚಿತ್ರಕಲೆ, ಗಾಯನ, ರಸಪ್ರಶ್ನೆ ಸಹಿತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಬಂಟರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಹೆಸರನ್ನು ನೋಂದಾಯಿಸಲು ಜನವರಿ 3 ಕೊನೆಯ ದಿನವಾಗಿತ್ತು ಎಂದು ಅಧ್ಯಕ್ಷ ಸಾಲ್ಗದ್ದೆ ಶಶಿಧರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.