ಡಾ. ಅವಿನ್ ಆಳ್ವರವರು ಮಂಗಳೂರು ಶಾಖೆಯ ಭಾರತೀಯ ವೈದ್ಯಕೀಯ ಸಂಘದ (IMA) ಕಾರ್ಯದರ್ಶಿಯಾಗಿದ್ದು, 2023 -24ನೇ ಸಾಲಿನ ಕರ್ನಾಟಕ ರಾಜ್ಯದ ಅತ್ಯುತ್ತಮ ಕಾರ್ಯದರ್ಶಿ ಮತ್ತು ಭಾರತದ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ ಎಂಬ ಎರಡು ಪ್ರತಿಷ್ಠಿತ ಗೌರವಗಳನ್ನು ಗಳಿಸಿದ್ದಾರೆ. ಈ ಪ್ರಶಸ್ತಿಗಳು ಕ್ರಮವಾಗಿ ಕರ್ನಾಟಕ ರಾಜ್ಯ ಮಂಡಳಿ ಮತ್ತು ನವದೆಹಲಿಯ IMA ಕೇಂದ್ರ ಕಚೇರಿಯಿಂದ ಪ್ರದಾನ ಮಾಡಲ್ಪಟ್ಟಿವೆ. ಈ ಪ್ರಶಸ್ತಿಗಳು ವೈದ್ಯಕೀಯ ಕ್ಷೇತ್ರದಲ್ಲಿ ಅವರ ಅಪರೂಪದ ಶ್ರೇಷ್ಠ ನಾಯಕತ್ವ, ಅಪಾರ ಸೇವಾ ಮನೋಭಾವ ಮತ್ತು ಉತ್ತಮ ಕೊಡುಗೆಗಳಿಗೆ ನೀಡಲಾದ ಗೌರವವಾಗಿದೆ.
ಡಾ. ಅವಿನ್ ಆಳ್ವರವರು 11 ತಿಂಗಳ ಅವಧಿಯಲ್ಲಿ 123 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿ ಮಂಗಳೂರನ್ನು ಕರ್ನಾಟಕದ 180 IMA ಶಾಖೆಗಳಲ್ಲಿಯೇ ಮೊದಲ ಸ್ಥಾನಕ್ಕೆ ತಂದು ನಿಲ್ಲಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಅವರು 28 ರಾಜ್ಯಗಳು ಮತ್ತು ಸುಮಾರು 3000 ಶಾಖೆಗಳ ನಡುವೆ ಅಗ್ರಸ್ಥಾನ ಪಡೆದು ವೈಶಿಷ್ಟತೆಯನ್ನು ಸಾಧಿಸಿದ್ದಾರೆ.