ಬಂಟರ ಸಂಘ ಪಡುಬಿದ್ರಿ ಹಾಗೂ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಹಯೋಗದೊಂದಿಗೆ ಅಂತರ್ ರಾಜ್ಯ ಬಂಟ ಕ್ರೀಡೋತ್ಸವ -2024 ಡಿಸೆಂಬರ್ 29ರಂದು ಪಡುಬಿದ್ರಿಯಲ್ಲಿ ದಿವಂಗತ ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ಜರಗಿತು. ಹಲವಾರು ವಿಶೇಷತೆಗಳ ವೈಭವದಿಂದ ನಡೆದ ಈ ಕ್ರೀಡಾಕೂಟದಲ್ಲಿ ಆಕರ್ಷಕ ಪಥಸಂಚಲನ, ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಹಗ್ಗ ಜಗ್ಗಾಟ ಪಂದ್ಯಾಟಗಳು ಜರಗಿತು. ಕಬಡ್ಡಿ ಪಂದ್ಯಾಟದಲ್ಲಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಯುವ ಉದ್ಯಮಿ, ಕಲ್ಯಾ ಗುರ್ಮೆದಬೈಲು ಹಿರಿಯಣ್ಣ ಶೆಟ್ಟಿ ಮತ್ತು ಲೀಲಾ ಶೆಟ್ಟಿ ದಂಪತಿಗಳ ಪುತ್ರ ಗಣೇಶ್ ಶೆಟ್ಟಿ ಡೊಂಬಿವಲಿ ಮಾಲಕತ್ವದ ತನಿಷ್ಕಾ ಮುಂಬಯಿ ತಂಡವು ಗೆದ್ದು ಟ್ರೋಫಿ ಹಾಗೂ 1,00,001 ರೂಪಾಯಿಯನ್ನು ತನ್ನದಾಗಿಸಿಕೊಂಡಿತು.
ಮುಂಬಯಿ ಬಂಟರ ಸಂಘದ ನಿಕಟಪೂರ್ವ ಮಹಿಳಾ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಹಾಗೂ ಪಡುಬಿದ್ರಿ ಬಂಟರ ಸಂಘದ ಪದಾಧಿಕಾರಿಗಳು ವಿಜೇತ ತಂಡ ತನಿಷ್ಕಾ ಮುಂಬಯಿ ತಂಡಕ್ಕೆ ಬಹುಮಾನವನ್ನು ವಿತರಿಸಿದರು. ತನಿಷ್ಕ ಮುಂಬಯಿ ತಂಡದ ಸ್ಟಾರ್ ಆಟಗಾರ ಭರತ್ ಶೆಟ್ಟಿ ಬೆಸ್ಟ್ ರೈಡರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.