ತೆಂಕು ಬಡಗು ಯಕ್ಷಗಾನ ರಂಗದ ಚಾರ್ಲಿ ಚಾಪ್ಲಿನ್ ಬಿರುದಾಂಕಿತ ಸೀತಾರಾಮ ಕುಮಾರ್ ಕಟೀಲು ಅವರ ಯಕ್ಷ ಪಯಣದ ಸುವರ್ಣ ಸಂಭ್ರಮಾಚರಣೆಯನ್ನು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ನಾಗವೃಜ ಕ್ಷೇತ್ರ ಪಾವಂಜೆ ಇಲ್ಲಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಸಂಸ್ಮರಣಾ ವೇದಿಕೆಯಲ್ಲಿ ವಿವಿಧ ಯಕ್ಷಗಾನ, ತಾಳಮದ್ದಲೆ, ನೃತ್ಯ ವೈಭವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಮೊಕ್ತೇಸರ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಹಾಗೂ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಮಠ ಅವರ ಉಪಸ್ಥಿತಿಯಲ್ಲಿ ಜರಗಿತು.
ಈ ಸಂದರ್ಭ ಪುಣೆಯ ಉದ್ಯಮಿ, ಸಮಾಜ ಸೇವಕ, ಪುಣೆ ಬಂಟರ ಸಂಘದ ಉಪಾಧ್ಯಕ್ಷ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಸಂಚಾಲಕ, 2024ರ ಸಾಲಿನ ಬಂಟರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು ಅವರಿಗೆ ಯಕ್ಷರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಕಲಾ ಪೋಷಕ ಟಿ ಶಾಮ್ ಭಟ್, ಪುಣೆಯ ಹೋಟೆಲ್ ಉದ್ಯಮಿ ಸುಭಾಷ್ ಹೆಗ್ಡೆ, ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ, ಶ್ರೀನಿವಾಸ ಸಾಫಲ್ಯ, ಗಣೇಶ್ ಅಮೀನ್ ಸಂಕಮಾರ್, ಹರಿಕೃಷ್ಣ ಪುನರೂರುರವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.