Author: admin

ಮುಂಬಯಿ, ಸೆ.07: ಉಡುಪಿ ಹಿರಿಯಡ್ಕ ಇಲ್ಲಿನ ಕೊಂಡಾಡಿ ನಿವಾಸಿ ಶಾರದಾ ಯು.ಶೆಟ್ಟಿ (85.) ಕಳೆದ ಸೋಮವಾರ ವೃದ್ಧಾಪ್ಯ ಸಹಜತೆಯಿಂದ ತನ್ನ ಸ್ವನಿವಾಸದಲ್ಲಿ ನಿಧನರಾದರು. ಕಟಪಾಡಿ ಅಚಾಡ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮೂಡಬೆಟ್ಟು ಗುತ್ತು ಕಟಪಾಡಿ ದಿವಂಗತ ಉಮಾನಾಥ ಶೆಟ್ಟಿ ಇವರ ಧರ್ಮಪತ್ನಿಯಾಗಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿದ್ದರು. ಮೃತರು ಪ್ರೇಮನಾಥ ಶೆಟ್ಟಿ (ಜೋಗೇಶ್ವರಿ-ಮುಂಬಯಿ), ವಿಶ್ವನಾಥ ಶೆಟ್ಟಿ, ಶ್ರೀನಾಥ್ ಶೆಟ್ಟಿ, ಅಮರನಾಥ ಶೆಟ್ಟಿ (ನಾಲ್ಕು ಸುಪುತ್ರರು) ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಬುಧವಾರ (ಸೆ.07) ಬೆಳಗ್ಗೆ 9 ಗಂಟೆಗೆ ಉಡುಪಿ ಹಿರಿಯಡ್ಕ ಕುಧಿ ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನ ಕೊಂಡಾಡಿ ಸಮೀಪದ ಹತ್ತಿರ ನೆರವೇರಿಸಲ್ಪಟ್ಟಿತು.

Read More

ಅದೃಷ್ಟ ಮತ್ತು ಪ್ರಯತ್ನ ಜತೆ ಜತೆಯಾಗಿರುತ್ತದೆ. ಕೆಲವೊಮ್ಮೆ ಪ್ರಯತ್ನವಿಲ್ಲದೇ ಅದೃಷ್ಟ ಖುಲಾಯಿಸಿ ಬಿಡುತ್ತದೆ. ಇನ್ನು ಕೆಲವೊಮ್ಮೆ ಒಂದಷ್ಟು ಪ್ರಯತ್ನ ಪಟ್ಟರೂ ಗೆಲುವು ನಮ್ಮದಾಗುವುದಿಲ್ಲ. ಆದರೆ ನಮ್ಮ ಪ್ರಯತ್ನದಲ್ಲಿ ಸೋಲದೆ ಸತತ ಪ್ರಯತ್ನ ಪಟ್ಟರೆ ಯಶಸ್ಸು ನಮ್ಮದಾಗಬಹುದು. ಚಿನ್ನದ ಗಣಿಗಾರಿಕೆಯ ಕೆಲಸ ಆರಂಭಿಸಿದ ವ್ಯಕ್ತಿಯೊಬ್ಬ ತಿಂಗಳುಗಟ್ಟಲೆ ಚಿನ್ನದ ಹೊಸ ನಿಕ್ಷೇಪಕ್ಕಾಗಿ ದುಡಿದ. ಆದರೆ ಎಷ್ಟು ಆಳಕ್ಕೆ ಅಗೆದರೂ ಚಿನ್ನದ ಅದಿರು ಕಾಣಿಸಲಿಲ್ಲ. ಸುಸ್ತಾಗಿ ಸೋತು ಹೋದ. ತನ್ನಿಂದ ಆಗದು ಎಂದು ಕೈ ಚೆಲ್ಲಿ ಕುಳಿತ. ಸೋತು ತನ್ನ ಕೆಲಸವನ್ನು ನಿಲ್ಲಿಸಿದ. ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ಇನ್ನೊಬ್ಬ ಗಣಿಗಾರಿಕೆಯ ವ್ಯಕ್ತಿಗೆ ತನ್ನ ವಸ್ತುಗಳನ್ನು ಮಾರಿ ಹೊರಟು ಹೋದ. ಅರ್ಧ ಅಗೆದು ಬಿಟ್ಟ ಹೊಂಡವನ್ನು ಮತ್ತಷ್ಟು ಅಗೆಯುವಂತೆ ಅಲ್ಲಿನ ತಂತ್ರಜ್ಞ ಹೊಸದಾಗಿ ಬಂದವನಿಗೆ ಹೇಳಿದ. ಮೂರು ಅಡಿಗಳಷ್ಟು ಅಗೆದರೆ ಚಿನ್ನದ ಆದಿರು ಇದೆ ಎಂದ ಹೊಸದಾಗಿ ಬಂದಾತ. ಅಗೆಯಲು ಆರಂಭಿಸಿದ. ಸುಮಾರು ಮೂರು ನಾಲ್ಕು ಅಡಿಗಳಷ್ಟು ಅಗೆಯುವಷ್ಟರಲ್ಲಿ ಅವನಿಗೆ ಚಿನ್ನದ ನಿಕ್ಷೇಪ ಕಾಣಿಸಿತು.…

Read More

ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗವು ಖ್ಯಾತ ಸಂಘಟಕ, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರಿಗೆ ‘ಸಾರ್ವಭೌಮ’ ಗೌರವ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 10ರಂದು ಶನಿವಾರ ಮಧ್ಯಾಹ್ನ 2 ರಿಂದ ವಿಶ್ವವಿದ್ಯಾಲಯದ ಕಲೀನಾ ಕ್ಯಾಂಪಸ್ಸಿನಲ್ಲಿರುವ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿದೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಮಾನ್ಯ ಸುನಿಲ್ ಕುಮಾರ್ ಅವರು ಈ ಗೌರವ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಂಬಯಿಯ ಗಣ್ಯರ ಉಪಸ್ಥಿತಿಯಲ್ಲಿ ಈ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ. ಗೌರವಾನ್ವಿತ ಅತಿಥಿಗಳಾಗಿ ಸದಾಶಿವ ಶೆಟ್ಟಿ, ಕೂಳೂರು ಕನ್ಯಾನ (ಆಡಳಿತ ನಿರ್ದೇಶಕರು, ಹೇರಂಬ ಇಂಡಸ್ಟ್ರೀಸ್), ಆನಂದ ಶೆಟ್ಟಿ (ಆಡಳಿತ ನಿರ್ದೇಶಕರು, ಆರ್ಗಾನಿಕ್ ಕೆಮಿಕಲ್ಸ್), ಸುಧಾಕರ ಹೆಗ್ಡೆ (ಆಡಳಿತ…

Read More

ಬಂಟ್ವಾಳ ಬಂಟರ ಸಂಘದ ಯುವ ವಿಭಾಗದ ವತಿಯಿಂದ ದೀಪಾವಳಿ ಪ್ರಯುಕ್ತ ಜರಗುವ 2 ನೇ ವರ್ಷದ ‘ಬೊಲ್ಪುದ ಐಸಿರ -2’ ಅದ್ದೂರಿ ಕಾರ್ಯಕ್ರಮದ ಸಂಚಾಲಕರಾಗಿ ವಿಕ್ರಮ್ ಶೆಟ್ಟಿ ಸರಪಾಡಿ ಆಯ್ಕೆಯಾಗಿದ್ದಾರೆ. ನವೆಂಬರ್ 11 ರಂದು ಸಂಜೆ 5ಕ್ಕೆ ಬಂಟ್ವಾಳ ಬಂಟರ ಸಂಘದಲ್ಲಿ ದೀಪಾವಳಿ ಪ್ರಯುಕ್ತ ಜರಗುವ ಬೊಲ್ಪುದ ಐಸಿರ 2 ಅದ್ದೂರಿ ಕಾರ್ಯಕ್ರಮದಲ್ಲಿ ದೇಶ ಹಾಗೂ ರಾಜ್ಯದ ಪ್ರಮುಖ ಕಲಾವಿದರ ಭಾಗವಹಿಸುವಿಕೆಯಲ್ಲಿ ವಿವಿಧ ಕಾರ್ಯಕ್ರಮ ಜರುಗಲಿದೆ. ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ್ ಡಿ. ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷರಾದ ನಿಶಾನ್ ಆಳ್ವ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದೆ. ಬಂಟರ ಸಂಘದ ಯುವ ವಿಭಾಗ ನಡೆಸಿಕೊಡುವ ಈ ಕಾರ್ಯಕ್ರಮದ ಸ್ವಾಗತ ಸಮಿತಿ ಸಂಚಾಲಕರಾಗಿ, ವೇದಿಕೆ ಸಮಿತಿ, ಆಹಾರ ಸಮಿತಿ, ಸುಡುಮದ್ದು ಸಮಿತಿ, ಕೌಂಟರ್ ಸಮಿತಿ ಎಂಬ ಹಲವು ಸಮಿತಿ ರಚಿಸಲಾಗಿದೆ. ಆಮಂತ್ರಣ ಪತ್ರಿಕೆ ಬಿಡುಗಡೆಯಲ್ಲಿ ಚಂದ್ರಹಾಸ ಶೆಟ್ಟಿ, ನಿಶಾನ್ ಆಳ್ವ, ತರುಣ್ ಶೆಟ್ಟಿ, ಗೋಕುಲ್ ಭಂಡಾರಿ, ದೀಪಕ್ ಶೆಟ್ಟಿ ಹಾಗೂ…

Read More

ಮುಂಬಯಿ (ಆರ್ ಬಿ ಐ), ಸೆ.08: `ಮನಸ್ಸಿಗೆ ವಯಸ್ಸಾಗಬಾರದು, ದೇಹಕ್ಕೆ ವಯಸ್ಸಾಗೋದು ಸಹಜ, ಚಿಂತನ ಮಂಥನದಿಂದ ಮನಸ್ಸನ್ನು ಸದಾ ಯೌವನವಾಗಿಡಲು ಸಾದ್ಯವಿದೆ. ಕವನಗಳು, ಸುಲಭ ತುತ್ತಿನಲ್ಲಿ ಜೀರ್ಣವಾಗಬೇಕೆಂದೇನಿಲ್ಲ, ಕವನವನ್ನು ಅರ್ಥೈಸಿ ಕೊಳ್ಳುವುದಕೊಸ್ಕರ, ಅದನ್ನ ಮತ್ತೆಮತ್ತೆ ಓದಬೇಕೆನ್ನುವ ಮನೋಭಿಲಾಷೆ ಹುಟ್ಟು ಹಾಕಿದರೆ, ಕವನದ ಮಂಥನ ಸಾಧ್ಯವಾಗುತ್ತದೆ. ಕಾವ್ಯ ಬರೇ ಕನ್ನಡಿಯಲ್ಲಿರುವ ಪ್ರತಿಬಿಂಬವಷ್ಟೆ ಆಗದೆ, ಅದು ಸಮಾಜಕ್ಕೆ ಬೆಳಕನ್ನು ಚೆಲ್ಲುವ ಸಾಧನವಾದರೆ ಅದೇ ಕಾವ್ಯದ ಸಾರ್ಥಕತೆ’ ಎಂದು ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ನಾಡಿನ ಶ್ರೇಷ್ಠ ಕವಿ ಸುಬ್ರಾಯ ಚೊಕ್ಕಾಡಿ ನುಡಿದರು. ಐಲೇಸಾ-ದಿ ವಾಯ್ಸ್ ಆಫ್ ಓಷನ್ (ರಿ). ಡಿಜಿಟಲ್ ಸಂಸ್ಥೆ ತನ್ನ ಎರಡನೇ ಹುಟ್ಟುಹಬ್ಬದ ಶುಭಾವಸರದಲ್ಲಿ ಕಳೆದ ಭಾನುವಾರ ಸುಳ್ಯ ಹಳೇ ಗೇಟು ಅಲ್ಲಿನ ಚೊಕ್ಕಾಡಿ ಅವರ `ಪ್ರಕೃತಿ’ ನಿವಾಸ, ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆ ಇಲ್ಲಿ ಆಯೋಜಿಸಿದ್ದ `ವಯೋ ಸಮ್ಮಾನ್’ ವಿಶಿಷ್ಟ ಗೌರವ ಸ್ವೀಕರಿಸಿ ಚೊಕ್ಕಾಡಿ ಮಾತನಾಡಿದರು. ಐಲೇಸಾ ತಂಡವು ಸುಬ್ರಾಯ ಚೊಕ್ಕಾಡಿ ಅವರ 83ನೆ ವಯೋನಡಿಗೆಯ ಸ್ಮರಣಾರ್ಥ, ಕಾವ್ಯ…

Read More

ಸುಂದರ ಬದುಕು ಪ್ರತಿಯೊಬ್ಬರ ಕನಸಾಗಿದೆ. ಅದನ್ನು ಸಾರ್ಥಕಗೊಳಿಸುವುದು ಅವರವರ ಕೈಯಲ್ಲಿದೆ. ಆ ಕನಸು ನನಸಾಗಬೇಕಾದರೆ ನಮ್ಮನ್ನು ಚಿಂತೆ, ಖೇದ, ದುಗುಡದಂತಹ ಋಣಾತ್ಮಕ ಭಾವಗಳು ಬಾಧಿಸಬಾರದು. ಪ್ರತಿಯೊಬ್ಬರಿಗೂ ಅವರದೇ ಆದ ಭಾವನಾ ಲೋಕವಿರುವುದರಿಂದ ಆಸೆಗಳು, ಆಚಾರ- ವಿಚಾರಗಳು, ಕಾರ್ಯ ವೈಖರಿಗಳು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತವೆ. ನಮ್ಮ ಖುಷಿ, ನೆಮ್ಮದಿ, ದುಃಖಗಳೆಲ್ಲವೂ ಸುತ್ತಲಿನ ಜನರು, ಪರಿಸ್ಥಿತಿಗಳನ್ನು ಅವಲಂಬಿಸಿರುತ್ತವೆ. ಹೀಗಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಕುಟುಂಬದ ಸದಸ್ಯರು, ಸಹಪಾಠಿಗಳು, ಸಹೋದ್ಯೋಗಿಗಳು ಮತ್ತು ನೆರೆಕರೆಯವರ ಜತೆ ಉತ್ತಮ ಒಡನಾಟ ಹೊಂದುವುದರಿಂದ ನಾವು ಸಂತೋಷವಾಗಿ ರುತ್ತೇವೆ. ಇವರೆಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದಿದ್ದರೆ ಮನಸ್ಸು ನೆಮ್ಮದಿಯಿಂದ ಇರುವುದಿಲ್ಲ. ಪರಸ್ಪರರಲ್ಲಿ ಸಮಾನ ಹಿತಾಸಕ್ತಿಗಳು, ಆಲೋಚನೆಗಳು, ಭಾವನೆಗಳು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಹಾಗಾಗಬೇಕಾದರೆ ಇನ್ನೊಬ್ಬರ ಭಾವನೆಗಳಿಗೆ ಬೆಲೆ ನೀಡಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಬಾಂಧವ್ಯ ಗಟ್ಟಿಯಾದಂತೆ ಅವರ ಬಗ್ಗೆ ನಮ್ಮಲ್ಲಿ ನಂಬಿಕೆ ಮೂಡಿ ವಿಶ್ವಾಸ ಹೆಚ್ಚುತ್ತದೆ. ಇದರಿಂದ ನಮ್ಮಲ್ಲಿ ಸಹಜವಾಗಿ ಧೈರ್ಯದ ಮನೋಭಾವ ಮೂಡಿ ಎಂಥ ಪರಿಸ್ಥಿತಿಯನ್ನು ಎದುರಿಸಬಲ್ಲೆವು ಎಂಬ ಛಾತಿ…

Read More

ಸೋಲಿನ ಮೂಲಕವೇ ಗೆಲುವಿನ ಮೆಟ್ಟಿಲು ಸುಲಭವಾಗುತ್ತದೆ. ನಾನು ಕೂಡ ಬಹಳಷ್ಟು ಸ್ಪರ್ಧೆಗಳಲ್ಲಿ ಸೋಲು ಕಂಡಿದ್ದೇನೆ. ಆದರೆ ಸೋಲಿಗೆ ಹೆದರಿ ನನ್ನ ಕನಸನ್ನು ಸಾಕಾರ ಮಾಡುವ ಬಗ್ಗೆಯೇ ಯೋಚಿಸುತ್ತಿದ್ದೆ. ಇದರ ಪರಿಣಾಮವೇ ಇಂದಿನ ಫಲಿತಾಂಶ ಎನ್ನುತ್ತಾರೆ ಮಿಸ್ ಇಂಡಿಯಾ ಯುನಿವರ್ಸ್ – 2022 ಆಗಿ ಆಯ್ಕೆಗೊಂಡ ಮಂಗಳೂರು ಮೂಲದ ದಿವಿತಾ ರೈ. ಮಿಸ್ ಯಿನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ದಿವಿತಾ ರೈ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ವಸತಿ ನಿಲಯದ ಅಮೃತೋತ್ಸವ ಸಮಿತಿ ವತಿಯಿಂದ ಬಂಟ್ಸ್ ಹಾಸ್ಟೆಲ್ ನ ಗೀತಾ ಎಸ್. ಎಂ ಶೆಟ್ಟಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಹುಟ್ಟೂರ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸೋಲು ಸಾಮಾನ್ಯ. ಇದಕ್ಕಾಗಿ ಭಯ ಬೇಡ. ಹಿಂದೆ ಸರಿಯಲೂ ಬಾರದು. ಕನಸುಗಳ ಸಾಕಾರಕ್ಕಾಗಿ ಧೈರ್ಯದಿಂದ ಮುನ್ನುಗ್ಗುವ ಹಾಗೂ ವಿಶ್ವಾಸದಿಂದ ಗುರಿ ಮುಟ್ಟುವ ಮನೋಭಾವ ಬೇಕು. ಬಂಟರ ಸಮಾಜ ಹೋರಾಟದ ಮನೋಭಾವವನ್ನು ಮೈಗೂಡಿಸಿದೆ, ಇದೇ ಸಮುದಾಯದಲ್ಲಿ ಹುಟ್ಟಿದ ನಾನು…

Read More

ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲೊಂದಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯು, 2023-24ನೇ ಸಾಲಿನ ಅರ್ಧ ವಾರ್ಷಿಕ ಅವಧಿ ದಿನಾಂಕ 30.09.2023ಕ್ಕೆ ರೂ. 900 ಕೋಟಿ ಮೀರಿದ ಒಟ್ಟು ವ್ಯವಹಾರವನ್ನು ದಾಖಲಿಸಿ ಪ್ರಗತಿ ಪಥದಲ್ಲಿ ಯಶಸ್ಸಿನ ಹೊಸ ಮೈಲಿಗಲ್ಲನ್ನು ದಾಟಿದ ಸಾಧನೆ ಮಾಡಿದೆ. ದಿನಾಂಕ30.09.2023ಕ್ಕೆಠೇವಣಾತಿಯು ರೂ.484 ಕೋಟಿ,ಹೊರಬಾಕಿ ಸಾಲ ರೂ.417 ಕೋಟಿ,ಒಟ್ಟು ವ್ಯವಹಾರ ರೂ.901 ಕೋಟಿಯನ್ನು ಮೀರಿದ್ದು ತನ್ನ “Vision 2025”ರರೂ. 1,000 ಕೋಟಿ ಒಟ್ಟು ವ್ಯವಹಾರದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿದೆ. ಹಿಂದಿನ ಸಾಲಿನ30.09.2022ಕ್ಕೆಹೋಲಿಸಿದಾಗ, ಠೇವಣಾತಿಯು ರೂ. 72 ಕೋಟಿ ಹೆಚ್ಚಳಗೊ0ಡು ಶೇ.18 ರಷ್ಟು ವೃದ್ಧಿಗೊ0ಡಿರುವುದು, ಹೊರಬಾಕಿ ಸಾಲವು ರೂ.75 ಕೋಟಿ ಹೆಚ್ಚಳಗೊ0ಡು ಶೇ.22ರಷ್ಟು ವೃದ್ಧಿಗೊ0ಡಿರುವುದು, ಒಟ್ಟು ವ್ಯವಹಾರವು ರೂ.148 ಕೋಟಿ ಹೆಚ್ಚಳಗೊ0ಡು ಶೇ.20 ರಷ್ಟು ವೃದ್ಧಿಯಾಗಿರುವುದು.ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 16 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿರುವುದು.ಸ್ಥಾಪನೆಯಾದಾಗಿನಿಂದಲೂ ಡಿವಿಡೆಂಡ್ ನೀಡುತ್ತಿರುವ ಸಂಸ್ಥೆ, ಕಳೆದ 5ವರ್ಷಗಳಿಂದ ಸದಸ್ಯರಿಗೆ ನಿರಂತರವಾಗಿ ಶೇ. 25 ಡಿವಿಡೆಂಡ್ ನೀಡುತ್ತಿರುವುದು.…

Read More

ಬಂಟ ಸಮಾಜದ ಹೆಮ್ಮೆಯ ಸುಪುತ್ರ ಸರ್ವ ಸಮಾಜದ ಏಳಿಗೆಗೆ ಮಹಾನ್ ಕೊಡುಗೆ ನೀಡಿ ಪ್ರಾತಃ ಸ್ಮರಣೀಯರು ಆಗಿರುವ ಶ್ರೀ ಸುಂದರರಾಮ್ ಶೆಟ್ಟಿಯವರ ನೆನಪಿನಲ್ಲಿ ಸುಂದರ್ ರಾಮ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಮತ್ತು ಮುಲ್ಕಿ ಬಂಟರ ಸಂಘ ಜಂಟಿಯಾಗಿ ನೀಡುವ ಸುಂದರರಾಮ್ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಈ ಸಮಾರಂಭವು ಮುಲ್ಕಿ ಬಂಟರ ಸಭಾ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ, ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿ ಯ ನಿಕಟ ಪೂರ್ವ ಅಧ್ಯಕ್ಷರಾದ ಮುಡ್ಕುರು ಶ್ರೀ ರತ್ನಾಕರ ಶೆಟ್ಟಿ,ಶ್ರೀ ಸುಚರಿತ ಶೆಟ್ಟಿ, ಮುಲ್ಕಿ ಬಪ್ಪನಾಡು ದೇವಸ್ಥಾನದ ಮೊಕ್ತೇಸರ ಶ್ರೀ ಮನೋಹರ್ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷರು ಶ್ರೀಪುರುಷೋತ್ತಮ ಶೆಟ್ಟಿ, ಗೌರವ ಅಧ್ಯಕ್ಷರು ಶ್ರೀ ಸಂತೋಷ್ ಕುಮಾರ್ ಹೆಗ್ಡೆ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಶುಭಾಶಂಸನೆ ಶ್ರೀ ಕುದಿ…

Read More

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಮತ್ತು ಶಾಸಕಾಂಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಂಟ ಸಮಾಜದ ಉದಯ ಕುಮಾರ್ ಶೆಟ್ಟಿ ಅವರನ್ನು ಕೇಂದ್ರ ಸರಕಾರ ನೇಮಕ ಮಾಡಿದೆ. ಉದಯ ಕುಮಾರ್ ಶೆಟ್ಟಿ ಈ ಹಿಂದೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ, ಶಾಸಕಾಂಗ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈಗ ಹೆಚ್ಚುವರಿ ಕಾರ್ಯದರ್ಶಿಯಾಗಿ ಭಡ್ತಿ ಪಡೆದಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕರ್ನಾಟಕದ ಅಧಿಕಾರಿಯೊಬ್ಬರು ಕಾನೂನು ಸಚಿವಾಲಯದ ಉನ್ನತ ಹುದ್ದೆಗೇರಿದಂತಾಯಿತು. ಪ್ರಸ್ತುತ ಅವರು ಗುಜರಾತ್ ನ ರಾಷ್ಟೀಯ ರಕ್ಷಾ ವಿವಿ ಆಡಳಿತ ಮಂಡಳಿಯ ಎಕ್ಸ್ – ಆಫಿಷಿಯೋ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 2003 ಬ್ಯಾಚ್ ನ ಭಾರತೀಯ ಕಾನೂನು ಸೇವೆಗೆ ಸೇರಿದ ಶೆಟ್ಟಿಯವರು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಗ್ರಾಮದವರು. ಉದಯ ಕುಮಾರ್ ಶೆಟ್ಟಿ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಎಲ್ಎಲ್ ಬಿ ಮಾಡಿ ನಂತರ ಬೆಂಗಳೂರು ವಿವಿಯಿಂದ ಕಾರ್ಮಿಕ ಕಾನೂನುಗಳಲ್ಲಿ ಎಲ್ ಎಲ್…

Read More