ಅಂತರಾಷ್ಟ್ರೀಯ ಜೇಸಿಐ ಪುತ್ತೂರು ವಲಯ 15ರ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭವು ಡಿಸೆಂಬರ್ 26ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಲಿದೆ. ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಗೌರವ ಅತಿಥಿಗಳಾಗಿ ಸಂತ ಫಿಲೋಮೀನಾ ಕಾಲೇಜಿನ ಪ್ರಾಂಶುಪಾಲ ವ. ಆಂಟನಿ ಪ್ರಕಾಶ್ ಮೊಂತೇರೊ, ಜೇಸಿಐ ಇಂಡಿಯಾದ ವಲಯ 15, ರೀಜನ್ ಇದರ ವಲಯ ಉಪಾಧ್ಯಕ್ಷ (ಝಡ್ ವಿಪಿ)ಸುಹಾಸ್ ಎಪಿಎಸ್ ರವರು ಭಾಗವಹಿಸಲಿದ್ದಾರೆ.
ನೂತನ ತಂಡ : 2025 ನೇ ಸಾಲಿನ ಪುತ್ತೂರು ಜೇಸಿಐ ಅಧ್ಯಕ್ಷರಾಗಿ ಭಾಗ್ಯೇಶ್ ರೈ, ಉಪಾಧ್ಯಕ್ಷರುಗಳಾಗಿ ಜಿತೇಶ್ ರೈ (ನಿರ್ವಹಣೆ), ಶರತ್ ಶ್ರೀನಿವಾಸ್ (ತರಬೇತಿ), ರಾಜಶೇಖರ್ (ಕಾರ್ಯಕ್ರಮ), ವಿಘ್ನೇಶ್ (ಬೆಳವಣಿಗೆ ಮತ್ತು ಅಭಿವೃದ್ಧಿ), ಸುಹಾಸ್ ರೈ (ಉದ್ಯಮ), ನಿರೋಶ್ (ಸಾರ್ವಜನಿಕ ಸಂಪರ್ಕ ಮಾರ್ಕೆಟಿಂಗ್), ಕಾರ್ಯದರ್ಶಿ ಮನೋಹರ್ ಪಾಟಾಳಿ, ಜೊತೆ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ರುಕ್ಮಯ, ಮಹಿಳಾ ಜೇಸಿ ಸಂಯೋಜಕರಾಗಿ ಆಶಾ ಮೋಹನ್, ಜೆಜೆಸಿ ವಿಂಗ್ ಚೇರ್ ಪರ್ಸನ್ ಸ್ವಸ್ಥಿ ಶೆಟ್ಟಿ, ಜೆಜೆಸಿ ವಿಂಗ್ ಸಂಯೋಜಕರಾಗಿ ಅಶ್ವಿನಿ ಕೆ, ನಿರ್ವಹಣೆ ನಿರ್ದೇಶಕರಾಗಿ ಪ್ರಜ್ವಲ್ ರೈ ಸೊರಕೆ, ಸುಪ್ರೀತ್ ಕೆ.ಸಿ, ಬೆಳವಣಿಗೆ ಮತ್ತು ಅಭಿವೃದ್ಧಿ ನಿರ್ದೇಶಕರಾಗಿ ಗೌರವ ಭಾರದ್ವಾಜ್, ವಿರೂಪಾಕ್ಷ, ತರಬೇತಿ ನಿರ್ದೇಶಕರಾಗಿ ಜಗನ್ನಾಥ್ ಅರಿಯಡ್ಕ, ಅನೂಪ್ ಕೆ.ಜೆ, ಕಾರ್ಯಕ್ರಮ ನಿರ್ದೇಶಕರಾಗಿ ಸಂದೀಪ್ ರೈ, ಶೋಭಾ ರೈ, ಉದ್ಯಮ ನಿರ್ದೇಶಕರಾಗಿ ಪ್ರಜ್ವಲ್ ಡಿ’ಸೋಜಾ, ಹರಿ ಗಣೇಶ್, ಸಾರ್ವಜನಿಕ ಸಂಪರ್ಕ ಮಾರ್ಕೆಟಿಂಗ್ ನಿರ್ದೇಶಕರಾಗಿ ಸಾಯಿ ರಾಮ್ ಬಾಳಿಲ, ರಕ್ಷಿತ್, ನಳಪಾಕ ಸಂಯೋಜಕರಾಗಿ ಸತೀಶ್ ನಾಯ್ಕ್, ಶರತ್ ಆಳ್ವ, ಸಂದೇಶ್ ರೈ, ಚೇತನ್ ರವರು ಆಯ್ಕೆಯಾಗಿದ್ದು, ಜೇಸಿಐ ಮಾಜಿ ಅಧ್ಯಕ್ಷರುಗಳು ಸಲಹೆಗಾರರಾಗಿ ಮಾರ್ಗದರ್ಶನ ನೀಡಲಿದ್ದಾರೆ.