ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಸುಣ್ಣಾರಿ, ಕುಂದಾಪುರವು ಒಂದರ ನಂತರ ಒಂದು ಅದ್ಭುತ ಸಾಧನೆ ಮಾಡುತ್ತ ಹೊಸ ಶಕೆಯನ್ನು ನಿರಂತರ ಮಾಡುತ್ತಾ ಬಂದಿರುವ ಗ್ರಾಮೀಣ ಭಾಗದ ಹೆಗ್ಗಳಿಕೆಯ ವಿದ್ಯಾಸಂಸ್ಥೆಯಾಗಿದೆ. ಈ ವಿದ್ಯಾಸಂಸ್ಥೆಯು ‘ಜೆಇಇ’ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಷ್ಟ್ರವೇ ಹೆಮ್ಮೆಯಿಂದ ಗುರುತಿಸಿದ ಸಂಸ್ಥೆ, ‘ನೀಟ್’ನಲ್ಲಿಯೂ ಸಹ ಈಡೀ ರಾಜ್ಯವೇ ಗುರುತಿಸಿದ್ದು ಮಾತ್ರವಲ್ಲದೇ 35 ವಿದ್ಯಾರ್ಥಿಗಳು ಮೆಡಿಕಲ್ನಲ್ಲಿ ಉಚಿತ ಸೀಟ್ನನ್ನು ಪಡೆದಿರುವ ವಿದ್ಯಾಸಂಸ್ಥೆ, ಕರ್ನಾಟಕ ಬೋರ್ಡ್ ಪರೀಕ್ಷೆಯಲ್ಲಿ 13 ರ್ಯಾಂಕ್ಗಳನ್ನು ಗಳಿಸಿ ರಾಜ್ಯದ ಎಲ್ಲಾ ಜನತೆಯು ಎಕ್ಸಲೆಂಟ್ ಸಾಧನೆಯತ್ತ ನಿಬ್ಬೆರಗಾಗುವಂತೆ ಮಾಡಿದ ವಿದ್ಯಾಸಂಸ್ಥೆ, ಅಷ್ಟೆ ಅಲ್ಲದೇ ವಾಣಿಜ್ಯ ವಿಭಾಗದಲ್ಲಿಯೂ ‘ಸಿಎ’, ‘ಸಿಎಸ್’ ಎನ್ನುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದೇಶದಲ್ಲೇ ಅತ್ಯಧಿಕ 31.58% ಉತ್ತೀರ್ಣತೆಯನ್ನು ಗಳಿಸಿ, ಪ್ರಥಮ ಹಂತದಲ್ಲಿಯೇ ಉತ್ತೀರ್ಣಗೊಂಡ ಹೆಗ್ಗಳಿಕೆಯ ಸಂಸ್ಥೆಯಾಗಿ ಈಡೀ ಶಿಕ್ಷಣವಲಯದಲ್ಲಿಯೇ ಹೊಸ ಶೈಕ್ಷಣಿಕ ಅಲೆಯನ್ನು ಸೃಷ್ಟಿಸಿದ ಒಂದು ವಿದ್ಯಾಸಂಸ್ಥೆಯಾಗಿದೆ.
ಕೇವಲ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಗುರುತಿಸಿಕೊಂಡು ಬಂದಿರುವುದು ಮಾತ್ರವಲ್ಲದೇ ಕ್ರೀಡಾಕ್ಷೇತ್ರದಲ್ಲಿ ಒಂದರ ಮೇಲೆ ಒಂದು ಸಾಧನೆಯನ್ನು ಮಾಡುತ್ತಾ ಬಂದಿರುವುದು ಗಮನಾರ್ಹ. ವಾಲಿಬಾಲ್, ಪುಟ್ಬಾಲ್, ಹ್ಯಾಂಡ್ಬಾಲ್, ಚೆಸ್ ಮಾತ್ರವಲ್ಲದೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಈಡೀ ರಾಷ್ಟ್ರವೇ ಗುರುತಿಸುವಂತೆ ಮಾಡಿದ್ದು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಾಧನೆಯ ಗರಿಮೆಗೆ ಹೊಸ ಅಧ್ಯಾಯ ಬರೆದಂತಾಗಿದೆ. ಈ ಸಾಧನೆಯ ಗರಿಮೆಯ ತೂಕವನ್ನು ಹೆಚ್ಚಿಸಿದ್ದು ನಮ್ಮ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಹೆಮ್ಮೆಯ ವಿದ್ಯಾರ್ಥಿನಿ ನವಮಿ ಎಸ್ ಶೆಟ್ಟಿ. ದಿನಾಂಕ 23-12-2024 ರಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸಿದ 68ನೇ ರಾಷ್ಟ್ರೀಯ ‘ಕರಾಟೆ ಸ್ಪರ್ಧೆ’ 2024-25ರ ಸಾಲಿನ ಈ ಕರಾಟೆ ಸ್ಪರ್ಧೆಯು ಮಧ್ಯಪ್ರದೇಶದ ರಾಜ್ಯದ ಇಂದೋರ್ನಲ್ಲಿ ಬಹಳ ಅದ್ಧೂರಿಯಾಗಿ ಜರುಗಿತು. ಕರ್ನಾಟಕ ತಂಡದ ಪರವಾಗಿ ನಮ್ಮ ವಿದ್ಯಾಸಂಸ್ಥೆಯ ನವಮಿ ಎಸ್ ಶೆಟ್ಟಿ ಅವರು 65 ಕೆಜಿ ‘ಕುಮಟೆ’ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಈಡೀ ಕ್ರೀಡಾವಲಯದಲ್ಲಿ ಕರ್ನಾಟಕ ರಾಜ್ಯವು ಹೆಮ್ಮೆ ಪಡುವಂತೆ ಮಾಡಿದ್ದು ಎಕ್ಸಲೆಂಟ್ ಹೆಮ್ಮೆಯ ವಿಚಾರ. ಕರ್ನಾಟಕ ತಂಡದ ಪರವಾಗಿ ನಮ್ಮ ಎಕ್ಸಲೆಂಟ್ ವಿದ್ಯಾರ್ಥಿನಿಯು ಭಾಗವಹಿಸಿ ವಿಜೇತರಾಗಿರುವುದು ಈಡೀ ದೇಶದಲ್ಲಿಯೇ ಎಕ್ಸಲೆಂಟ್ನ ಸಾಧನೆಯನ್ನು ಗುರುತಿಸುವಂತಾಗಿದೆ. ಈ ನಮ್ಮ ವಿದ್ಯಾರ್ಥಿಯು ಈ ಹಿಂದೆ ನಡೆದಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ರಾಘವೇಂದ್ರ ಹೈ-ಟೆಕ್ ಪದವಿ ಪೂರ್ವ ಕಾಲೇಜು, ದಾವಣಗೆರೆ ಇದರ ಸಂಯುಕ್ತ ಆಶ್ರಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯ 65 ಕೆಜಿ ‘ಕುಮಟೆ’ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಈ ಹಿಂದೆ ಆಯ್ಕೆಯಾಗಿರುವುದು ಗಮನಾರ್ಹ. ಈಗ ಈಡೀ ರಾಷ್ಟ್ರದಲ್ಲಿಯೇ ದ್ವಿತೀಯ ಸ್ಥಾನ ಪಡೆದಿರುವುದು ಸಂಸ್ಥೆಯ ಕೀರ್ತಿಯನ್ನು ರಾಷ್ಟ್ರದಲ್ಲಿ ಗುರುತಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಈ ಅತ್ಯುತ್ತಮ ಸಾಧನೆ ಮಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಹೆಮ್ಮೆಯ ಕ್ರೀಡಾಪಟುವಾದ ನವಮಿ ಎಸ್ ಶೆಟ್ಟಿ ಅವರಿಗೆ ಎಕ್ಸಲೆಂಟ್ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಕಾರ್ಯದರ್ಶಿಗಳು ಹಾಗೂ ಬೋಧಕ – ಬೋಧಕೇತರ ಸಿಬ್ಬಂಧಿಗಳು, ಈ ವಿದ್ಯಾರ್ಥಿಯ ಮುಂದಿನ ಕ್ರೀಡಾ ಭವಿಷ್ಯಯು ಉಜ್ವಲವಾಗಲಿ ಎಂದು ಹರಸಿ, ಅಭಿನಂದನೆ ಸಲ್ಲಿಸಿದರು.