Author: admin

ಭಾಸ್ಕರ್ ಶೆಟ್ಟಿ (ಅಧ್ಯಕ್ಷ)-ಸವಿತಾ ಸುರೇಶ್ ಶೆಟ್ಟಿ (ಮಹಿಳಾಧ್ಯಕ್ಷೆ) ಮುಂಬಯಿ (ಆರ್ ಬಿ ಐ), ಆ.28: ಕರ್ನಾಟಕ ಕರಾವಳಿಯ ಮುಲ್ಕಿ ಸಮೀಪದ ಕುಬೆವೂರು ಶ್ರೀ ಜಾರಂದಾಯ ಸೇವಾ ಸಮಿತಿ ಮುಂಬಯಿ ಇದರ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಆದಿತ್ಯವಾರ ಮುಲುಂಡ್ ಪಶ್ಚಿಮದ ಹೊಟೇಲ್ ಸ್ವಾದ್ ಇದರ ಸಭಾಗೃಹದಲ್ಲಿ ಅಡ್ವಕೇಟ್ ರಾಮಣ್ಣ ಎಂ.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿತು. ಗತವರ್ಷದ ಲೆಕ್ಕಪರಿಶೋಧನೆ ಹಾಗೂ ಅನುಮೋದನೆ, ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ, ಮಹಿಳಾ ವಿಭಾಗದ ರಚನೆ ಇನ್ನಿತರ ವಿಷಯಗಳೊಂದಿಗೆ ಸಭೆಯು ನಡೆಸಲ್ಪಟ್ಟಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು ಭಾಸ್ಕರ ಎಸ್.ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಸಭೆಯು ಪುನಾರಾಯ್ಕೆಗೊಳಿಸಿತು. ಇತರ ಪದಾಧಿಕಾರಿಗಳಾಗಿ ಜಗದೀಶ್ ಎಂ. ಶೆಟ್ಟಿ (ಉಪಾಧ್ಯಕ್ಷ), ಸಂತೋಷ್ ಜೆ.ಭಂಡಾರಿ (ಕಾರ್ಯದರ್ಶಿ), ದಿವಾಕರ ಎಸ್. ಶೆಟ್ಟಿ (ಕೋಶಾಧಿಕಾರಿ), ಶಂಕರ ಎನ್.ಶೆಟ್ಟಿ (ಉಪ ಕಾರ್ಯದರ್ಶಿ), ಶ್ರೀಧರ ಪೂಜಾರಿ ( ಉಪ ಕೋಶಾಧಿಕಾರಿ) ಮತ್ತು ನ್ಯಾಯವಾದಿ ರಾಮಣ್ಣ ಎಂ.ಭಂಡಾರಿ ಅವರನ್ನು ಸಲಹೆಗಾರರಾಗಿ ಸಭೆಯು ಸರ್ವಾನುಮತದಿಂದ ನೇಮಿಸಿತು. ಸಭೆಯಲ್ಲಿ ಮಹಿಳಾ ವಿಭಾಗದ ಆಯ್ಕೆ ನಡೆದಿದ್ದು,…

Read More

ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಭಾಸ್ಕರ್ ನಾಯ್ಕ್ ರಚಿಸಿ ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ “ಕುದ್ರು” ಚಿತ್ರ ಅಕ್ಟೋಬರ್ 13 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಾಯಕ ನಟ ಹರ್ಷಿತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಕುದ್ರು’ ಎಂದರೆ ನೀರಿನಿಂದ ಸುತ್ತುವರೆದ ದ್ವೀಪ. ಈ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೂರು ಕಟುಂಬಗಳು‌ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಆ ಸಮಯದಲ್ಲಿ ವಾಟ್ಸಪ್ ಸಂದೇಶವೊಂದರಿಂದ ಎಲ್ಲರಲ್ಲೂ ಮನಸ್ತಾಪ ಬರುತ್ತದೆ. ಚಿತ್ರದ ಮೊದಲ ಭಾಗದ ಕಥೆ ಕಾಲೇಜಿನಲ್ಲಿ ನಡೆಯುತ್ತದೆ. ಆನಂತರ ಕುತೂಹಲ ಮೂಡಿಸುವ ಕಥಾಹಂದರವಿದೆ. ಅದನ್ನು ಚಿತ್ರದಲ್ಲೇ ನೋಡಬೇಕು. ಉಡುಪಿ, ಮಲೆನಾಡು, ಗೋವಾ ಹಾಗೂ ಆಯಿಲ್ ರಿಗ್ ನಲ್ಲಿ ಚಿತ್ರೀಕರಣವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಜನಪ್ರಿಯವಾಗಿದೆ ಎಂದರು. ಈ ಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯಾಗಿ ನಟಿ ಡೈನ ಡಿಸೋಜ, ಮುಸ್ಲಿಂ ಹುಡುಗನಾಗಿ ನಟ ಫರ್ಹಾನ್, ಮಂಗಳೂರಿನ ನಮಿತಾ, ಪ್ರವೀಣ್ ಬಂಗೇರ, ಕಾಂತಾರ ಸತೀಶ್ ಆಚಾರ್ಯ ನಟಿಸಿದ್ದಾರೆ.…

Read More

“ಹಸಿದವರು ವ್ಯಾಕರಣವನ್ನು ಉಣ್ಣಲಾರರು ; ಬಾಯಾರಿದವರು ಕಾವ್ಯರಸದಿಂದ ತಣಿಯಲಾರರು ವೇದಗಳನ್ನೋದಿ ಯಾರೂ ಕುಲೊದ್ಧಾರ ಮಾಡಿಕೊಂಡವರಿಲ್ಲ. ಆದ್ದರಿಂದ ಹಣ ಗಳಿಸು ಅದಿಲ್ಲದೆ ಗುಣಗಳಿಗೆ ಬೆಲೆಯಿಲ್ಲ” ಬಹುಶಃ ಹಳ್ಳಿ ಬಿಟ್ಟು ಪಟ್ಟಣ ಸೇರಿದ ಹೆಚ್ಚಿನವರ ಬದುಕಿನ ಹೆಜ್ಜೆಗುರುತನ್ನು ಅರಸುತ್ತ ಸಾಗಿದಾಗ ಮೇಲಿನ ಸುಭಾಷಿತದ ಆಳ ಅರಿವಾಗುತ್ತದೆ. ಉಳ್ತೂರು ಮೋಹನ್‍ದಾಸ್ ಶೆಟ್ಟಿ ಬಂಟರ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ಮಾತೃ ಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನಲ್ಲಿ ಉಪಕಾರ್ಯಾಧ್ಯಕ್ಷರಾಗಿ ಇದೀಗ ಕಾರ್ಯಾಧಕ್ಷರಾಗಿ ಆಯ್ಕೆಯಾಗಿರುವುದು ಅವರ ಸಾಧನೆಗೆ ಸಂದ ದೊಡ್ಡ ಗೌರವ. ಇವರು ಕಳೆದ 15 ವರ್ಷಗಳಿಂದ ಈ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಂಸ್ಥೆಗೆ ಶೇರು ಬಂಡವಾಳ ಸಂಗ್ರಹಿಸುವುದರಲ್ಲಿ ಮೈಲಿಗಲ್ಲು ನಿರ್ಮಿಸಿದವರು. ಇವರ ಸಮಾಜ ಸೇವೆಯ ತುಡಿತಕ್ಕೆ ಸಂಘಟನಾ ಶಕ್ತಿಯ ಚಾತುರ್ಯಕ್ಕೆ ಇದು ಒಂದು ಉತ್ತಮ ಉದಾಹರಣೆ. ಉಳ್ತೂರು ಕಟ್ಟೆ ಮನೆ ಶ್ರೀ ದಾರಪ್ಪ ಶೆಟ್ಟಿ ಮತ್ತು ಶ್ರೀಮತಿ ಭಾಗೀರಥಿ ಶೆಟ್ಟಿಯವರ ಸುಪುತ್ರರಾದ ಇವರು ಉಳ್ತೂರಿನಲ್ಲಿ ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಪಡೆದರು. ನಂತರ 1982ರಲ್ಲಿ ಕುಂದಾಪುರದ…

Read More

ಅಹಂಕಾರ ಎಂದರೆ ಜೀವದ ಸ್ವಕೃತ ಧರ್ಮ ಎನ್ನಬಹುದು. ಸ್ವಕೃತ ಎಂಬ ಶಬ್ದವನ್ನು “ಸ್ವ’ದ ಅರಿವಿನಿಂದ ಅಂದರೆ ತನ್ನತನದ ಅರಿವಿನಿಂದ ಜೀವವು ಸ್ವೀಕರಿಸಿದ ಕೃತಿಸ್ವರೂಪ ಕರ್ಮ ಎಂಬ ಅರ್ಥದಲ್ಲಿ ಬಳಸಬಹುದು. “ನನ್ನೊಳಗಿರುವ ನಾನು ಹೋದರೆ ಹೋದೇನು” ಎಂದು ಹೇಳಿದ ಕನಕದಾಸರ ಮಾತಿನಿಂದ ಮನುಷ್ಯನಲ್ಲಿನ ನನ್ನತನದ, ಅಂದರೆ ಅಹಂಭಾವದ ವ್ಯರ್ಥತೆಯು ತಿಳಿಯುತ್ತದೆ. ಅಹಂಭಾವವು ಮನುಷ್ಯನ ಲೌಕಿಕ ಮತ್ತು ಪಾರಮಾರ್ಥಿಕ ಸುಖದಲ್ಲಿನ ಒಂದು ದೊಡ್ಡ ಅಡಚಣೆಯಾಗಿದೆ. ಅಹಂ ಭಾವದ ಬೀಜವು ಮನುಷ್ಯ ಜನ್ಮದಲ್ಲಿಯೇ ಇರುವುದರಿಂದ ಇದಕ್ಕೆ ಹಿರಿಯ-ಕಿರಿಯ, ಬಡವ-ಬಲ್ಲಿದ, ಅಶಿಕ್ಷಿತ-ಸುಶಿಕ್ಷಿತ ಎಂಬ ಯಾವುದೇ ಭೇದ ಇಲ್ಲ. ಎಲ್ಲರಲ್ಲಿಯೂ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಅಹಂಕಾರ ಭಾವವು ಇದ್ದೇ ಇರುತ್ತದೆ. ಅಹಂಭಾವವು ಹೊಲದಲ್ಲಿ ಬೆಳೆಯುವ ಹುಲ್ಲಿನಂತೆ ಇರುತ್ತದೆ. ಎಲ್ಲಿಯವರೆಗೆ ನಾವು ಆ ಹುಲ್ಲನ್ನು ಬೇರುಸಹಿತವಾಗಿ ನಾಶ ಮಾಡುವುದಿಲ್ಲವೋ ಅಲ್ಲಿ ಯವರೆಗೆ ಆ ಹೊಲದಲ್ಲಿ ಉತ್ತಮ ಫ‌ಸಲು ಬರುವುದಿಲ್ಲ. ಆ ಹುಲ್ಲನ್ನು ಮನುಷ್ಯ ಪ್ರತೀ ದಿನವೂ ಸತತವಾಗಿ ನಾಶ ಮಾಡುತ್ತಲೇ ಇರಬೇಕಾಗುತ್ತದೆ. ಅದು ಸಾಧ್ಯವಾಗದಿದ್ದಲ್ಲಿ ಆ ಹುಲ್ಲು ಇಡೀ…

Read More

“ಸೋಲೆಂಬ ರೋಗವನ್ನು ಕೊಲ್ಲಲು ಆತ್ಮವಿಶ್ವಾಸ ಮತ್ತು ಶ್ರಮವೇ ಮದ್ದು” ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರ ಮಾತಿದು. ತೀರ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ಶ್ರೀಯುತ ಹಾಲಾಡಿ ಆದರ್ಶ್ ಶೆಟ್ಟಿಯವರ ಬದುಕಿನಲ್ಲಿ ಈ ಮಾತು ನೂರಕ್ಕೆ ನೂರು ಸತ್ಯ. “ತಾಳ್ಮೆ ಕಹಿ ಎನ್ನುವುದು ನಿಜ ಆದರೆ ಅದರ ಫಲ ಸಿಹಿಯಾಗುತ್ತದೆ” ಶ್ರೀಯುತ ಹಾಲಾಡಿ ಆದರ್ಶ್ ಶೆಟ್ಟಿ ನಂಬಿದ ಜೀವನ ಮೌಲ್ಯವಿದು. ಹೋಟೆಲು ಉದ್ಯಮದಲ್ಲಿ 18 ವರ್ಷದ ಸುದೀರ್ಘ ಅನುಭವವಿರುವ ಶ್ರೀಯುತ ಹಾಲಾಡಿ ಆದರ್ಶ್ ಶೆಟ್ಟಿಯವರು ಈ ಎತ್ತರಕ್ಕೆ ಬೆಳೆದು ನಿಲ್ಲಲು ಕಾರಣವಾದದ್ದು ವೃತ್ತಿಯುದ್ಧ ಅವರು ನಡೆಸಿಕೊಂಡು ಬಂದ ಆತ್ಮಾವಲೋಕನ ಮತ್ತು ತಾಳ್ಮೆ. ಸ್ನೇಹ ಜೀವಿಯಾಗಿ, ಸಂಘಟನಾ ಶಕ್ತಿಯಾಗಿ ಈ ಉದ್ಯಮದಲ್ಲಿ ಅವರು ಬೆಳೆದು ನಿಂತ ಕಥೆ ಇತರರಿಗೆ ಮಾದರಿಯಾಗುವಂತಹದ್ದು. ಸ್ವಭಾವತಃ ಆದರ್ಶ್ ಶೆಟ್ಟಿ ಆಹಾರ ಪ್ರಿಯ, ಭೋಜನ ಪ್ರಿಯರು. ಯಾವುದೇ ಆಹಾರವಿರಲಿ ಅದರ ಸ್ವಾದದಲ್ಲಿರುವ ವಿಶೇಷತೆಯನ್ನು ಗುರುತಿಸಿ ಅದು ಬಹುಜನಪ್ರಿಯವಾಗುವಂತೆ ರೂಪಿಸುವಲ್ಲಿ ಇವರು ನಿಸ್ಸೀಮರು. ತನ್ನಲ್ಲಿರುವ ಈ ವಿಶೇಷತೆಯನ್ನು ವೃತ್ತಿಯಾಗಿಸಿಕೊಂಡು…

Read More

ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಸ್ಟಾರ್ ಹೀರೋ ಹಾಗೂ ಹೀರೋಯಿನ್ ಆಗಬೇಕು ಅನ್ನೋ ಕನಸಿಟ್ಟುಕೊಂಡು ನೂರಾರು ಜನರು ಚಿತ್ರರಂಗಕ್ಕೆ ಬರುತ್ತಾರೆ. ಇದರಲ್ಲಿ ಕೆಲವರು ಯಶಸ್ಸು ಕಂಡು ಸಿನಿ ಕ್ಷೇತ್ರದಲ್ಲೇ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಕೆಲವರು ನಟನೆ ಕಲಿತುಕೊಂಡು ಸಿನಿಮಾಗೆ ಎಂಟ್ರಿ ಕೊಟ್ಟರೆ, ಮತ್ತೆ ಕೆಲವರು ಮಾಡಲಿಂಗ್ ಕ್ಷೇತ್ರದಿಂದ‌ ಬಂದು ಸಿನಿಮಾ ಜಗತ್ತಿನಲ್ಲಿ ಯಶಸ್ಸು ಕಾಣ್ತಾರೆ. ಇದೀಗ ಬಂಟ ಸಮಾಜದ ಪ್ರತಿಭೆ ಸಮೃದ್ದಿ ವಿ ಶೆಟ್ಟಿ ಅವರು ‘ಮಿಸ್ ಕ್ವೀನ್ ಆಫ್ ಇಂಡಿಯಾ 2023’ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗೋದಕ್ಕೆ ಸಜ್ಜಾಗಿದ್ದಾರೆ. ಮಿಸ್ ಕ್ವೀನ್ ಆಫ್ ಇಂಡಿಯಾ 2023 : ಕೇರಳದ ಕೊಚ್ಚಿಯಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ 30 ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಮಣಪ್ಪುರಂ ಫೈನಾನ್ಸ್ ಆಯೋಜಿಸಿದ್ದ ಮಿಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಅಂತಿಮವಾಗಿ ಉಡುಪಿ ಮೂಲದ ಸಮೃದ್ದಿ ವಿ ಶೆಟ್ಟಿ ‘ಮಿಸ್ ಕ್ವೀನ್ ಆಫ್ ಇಂಡಿಯಾ 2023’ ಕಿರೀಟ ಮುಡಿಗೇರಿಸಿಕೊಂಡಿದ್ದು, ಕರ್ನಾಟಕದ ಹಾಗೂ ಬಂಟ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಶ್ರೀ ಐಕಳ ಹರಿಶ್ ಶೆಟ್ಟಿಯವರ ಸಮರ್ಥ ಅಧ್ಯಕ್ಷತೆಯಲ್ಲಿ ಸಮಾಜಮುಖಿ ಕೆಲಸಗಳನ್ನು ಶ್ರದ್ಧಾ ಭಕ್ತಿಯಿಂದ ಇದ್ದವರಿಂದ ಪಡೆದು ಇಲ್ಲದವರಿಗೆ ಹಂಚಿ ಬಡವರ ಕಣ್ಣೊರೆಸುವ ಶ್ಲಾಘನೀಯ ಕೆಲಸ ಮಾಡುತ್ತಿದೆ ಸಮಾಜದ ಅರ್ಥರ ಧ್ವನಿಯಾಗಿ ನೋಂದವರ ಪಾಲಿಗೆ ಸದಾ ಸೃಜನ ಶೀಲ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಸಮಾಜದ ಪ್ರತಿಯೊಬ್ಬರಿಗೂ ಕೂಡ ಭರವಸೆಯ ಬೆಳಕನ್ನು ಮೂಡಿಸಿದೆ ಒಕ್ಕೂಟದ ಕೆಲಸ ಶ್ಲಾಘನೀಯ ನಾನು ನಿಮ್ಮ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತು ಸಂಪೂರ್ಣ ಸಹಕಾರ ನೀಡುತ್ತೇನೆ. ನೀವು ಇತಿಹಾಸ ನಿರ್ಮಾಣ ಮಾಡಿದ್ದೀರಿ ನಿಮ್ಮ ಕೆಲಸವು ಇನ್ನು ಮುಂದುವರಿಯಬೇಕಾದರೆ ನಾವೆಲ್ಲ ನಿಮ್ಮ ಜೊತೆ ಇರಬೇಕು, ಖಂಡಿತವಾಗಿಯೂ ನಿಮ್ಮ ಅಮೂಲ್ಯ ಚಟುವಟಿಕೆಗಳಿಗೆ ನಾವೆಲ್ಲರೂ ಜೊತೆಯಾಗಿದ್ದು ನಾನು ಸಂಪೂರ್ಣ ಹೃದಯಪೂರ್ವಕ ಬೆಂಬಲವನ್ನು ನೀಡುತ್ತೇನೆ ಎಂಬ ಭರವಸೆಯನ್ನು ಎಂ ಆರ್ ಜಿ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಶ್ರೀ ಪ್ರಕಾಶ್ ಶೆಟ್ಟಿ ಕೆ ನುಡಿದರು. ಮುಂಬೈಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶ್ವ ಬಂಟರ ಸಮ್ಮೇಳನ ಹಾಗೂ ಮಹಾಧಿವೇಶನದ ಆಮಂತ್ರಣ ಪತ್ರಿಕೆಯನ್ನು…

Read More

ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಗುರು ಪೂರ್ಣಿಮೆಯ ಆಚರಣೆಯು, ಒಡಿಯೂರು ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರ ಶುಭಾಶಿರ್ವಾದದೊಂದಿಗೆ ಜುಲೈ 3 ರಂದು ಪುಣೆ ಶ್ರೀ ಗುರುದೇವ ಸೇವಾ ಬಳಗದ ಗೌರವ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್ ಶೆಟ್ಟಿ ದಂಪತಿಗಳ ಅಯೋಜಕತ್ವದಲ್ಲಿ ಪುಣೆಯ ಬಾಣೇರ್ ನಲ್ಲಿಯ ಫಿಲಿವಿಲದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ. ಜರಗಿತು. ಗುರು ಪೂರ್ಣಿಮೆಯ ಅಂಗವಾಗಿ ಪುಣೆಯ ಖ್ಯಾತ ಪುರೋಹಿತರಾದ ಕಾತ್ರಜ್ ಹರೀಶ್ ಭಟ್ ಮತ್ತು ತಂಡದವರ ನೇತೃತ್ವದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಹಾಗೂ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗೂ ಬಳಗದ ಸದಸ್ಯರಿಂದ ಭಜನಾ ಮಂಡಳಿಯ ಗುರುಗಳಾದ ಶ್ರೀ ದಾಮೋದರ ಬಂಗೇರರವರ ಮುಂದಾಳತ್ವದಲ್ಲಿ ಭಜನೆ ನಡೆಯಿತು. ಶ್ರೀ ರೋಹಿತ್ ಶೆಟ್ಟಿ ಶ್ರೀಮತಿ ಸ್ನೇಹಲತಾ ಅರ್.ಶೆಟ್ಟಿ ದಂಪತಿಗಳು ಗಣಹೋಮ, ಸತ್ಯನಾರಾಯಣ ಪೂಜೆಗೆ ಕುಳಿತು ಪೂಜಾ ವಿಧಿ ವಿಧಾನ ನೆರವೆರಿಸಿದರು. ನಂತರ…

Read More

“ಈ ಪ್ರಪಂಚವನ್ನು ತಾನು ಕಂಡದ್ದಕ್ಕಿಂತ ಹೆಚ್ಚು ಸಂತೋಷದಾಯಕವಾಗಿ ಮತ್ತು ಸುಂದರವಾಗಿ ಮಾಡುವವನು ಸುಸಂಸ್ಕೃತ ” ಎಂದು ಖ್ಯಾತ ಪಾಶ್ಚಾತ್ಯ ಚಿಂತಕ ಅಡ್ವಿನ್ ಅರ್ನಾಲ್ಡ್ ಹೇಳುತ್ತಾರೆ. ಕಳೆದ ಮೂರು ದಶಕಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್‍ಕಿರಣ್ ರೈ, ಕೃಷಿ ಅಭಿವೃದ್ಧಿ ಅಧಿಕಾರಿಯಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಇಲ್ಲಿ 1986 ರಿಂದ 2015ರ ವರೆಗೆ ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಯನ್ನು ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿ ಪರಿಣಿತರಾದ ಶ್ರೀಯುತರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ದೇಶದ ವಿವಿಧ ರಾಜ್ಯಗಳ ಶಾಖೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಅನುಭವವನ್ನು ವಿಸ್ತರಿಸಿಕೊಂಡರು. ಮುಂಬಾಯಿಯಲ್ಲಿದ್ದುಕೊಂಡು ಅವರು ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಯಲ್ಲಿ ನೀಡಿದ ಸೇವೆ ಅವರಿಗೆ ಕೀರ್ತಿಯನ್ನು ತಂದಿತು. ಈ ಬ್ಯಾಂಕಿನ ಅತ್ಯುನ್ನತ ಹುದ್ದೆಯಾದ ಜನರಲ್ ಮ್ಯಾನೆಜರ್ ಆಗಿಯೂ ಬಡ್ತಿ ಹೊಂದಿ ಇವರ ಸೇವೆಯನ್ನು ಗಮನಿಸಿ ಸರಕಾರವು ಇವರನ್ನು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‍ನ ಅಧ್ಯಕ್ಷರಾಗಿ ನಾಮ ನಿರ್ದೇಶನ ಮಾಡಿತು. ಇಲ್ಲಿ 1 1/2 ವರ್ಷ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ಅಕ್ಟೋಬರ್ 28ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ಜರಗಲಿರುವ “ವಿಶ್ವ ಬಂಟರ ಕ್ರೀಡಾಕೂಟ” ಹಾಗೂ ಅಕ್ಟೋಬರ್ 29 ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ “ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ಅಕ್ಟೋಬರ್ 11ರಂದು ಸಂಜೆ 4 ಗಂಟೆಗೆ “ಸಿಲ್ವರ್ ಬಿಲ್ಸ್ ಹಾಲ್ ಗೋಲ್ಡ್ ಪಿಂಚ್ ಹೋಟೆಲ್, ಬಂಟ್ಸ್ ಹಾಸ್ಟೆಲ್ ಇಲ್ಲಿ ಜರಗಲಿರುವುದು. ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟ ಪ್ರತಿಷ್ಠಾನದ ಅಧ್ಯಕ್ಷ ಡಾ. ಎ. ಜೆ. ಶೆಟ್ಟಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ, ಸಂಸದ ನಳಿನ್ ಕುಮಾರ್…

Read More