ಬಂಟರ ಸಂಘ ಮುಂಬಯಿಯ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಪಕ್ಕಳರ ನೇತೃತ್ವದಲ್ಲಿ ಮನೆ ಮನೆಗೆ ಭಜನಾ ಸತ್ಸಂಗ ಎಂಬ ವಿನೂತನ ಪರಿಕಲ್ಪನೆಯ ತಿಂಗಳ ಭಜನೆ ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಅನಿತಾ ಅಶೋಕ್ ಶೆಟ್ಟಿಯವರ ಸ್ವಗೃಹದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷ ಕಾರ್ಯಾನಗುತ್ತು ಶಿವರಾಮ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷ ಕೃಷ್ಣ ವಿ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗ ಮತ್ತು ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆಯರಾದ ಕಲ್ಪನ ಕೃಷ್ಣ ಶೆಟ್ಟಿ, ಸುಚಿತ ಕೆ ಶೆಟ್ಟಿ, ಸಮಿತಿಯ ಉಪ ಕಾರ್ಯಾಧ್ಯಕ್ಷ ಪದ್ಮನಾಭ ಶೆಟ್ಟಿ, ಕಾರ್ಯದರ್ಶಿ ಸುರೇಂದ್ರ ಶೆಟ್ಟಿ ಮಾರ್ನಾಡ್, ಜತೆ ಕಾರ್ಯದರ್ಶಿ ನಿತೇಶ್ ಶೆಟ್ಟಿ, ಜತೆ ಕೋಶಾಧಿಕಾರಿ ಕೇಶವ ಶೆಟ್ಟಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ತನುಜ ಶೆಟ್ಟಿ, ಭಜನಾ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅನಿತಾ ಅಶೋಕ್ ಶೆಟ್ಟಿಯವರು ಮಹಿಳಾ ಸದಸ್ಯೆಯರಿಗೆ ಹಳದಿ ಕುಂಕುಮವನ್ನಿತ್ತು ಉಡುಗೊರೆ ನೀಡಿ ಗೌರವಿಸಿದರು. ಸಿಟಿ ಪ್ರಾದೇಶಿಕ ಸಮಿತಿಯ ವತಿಯಿಂದ ಅಶೋಕ್ ಶೆಟ್ಟಿ -ಅನಿತಾ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಕೊನೆಗೆ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.