Author: admin

ಬಂಟೆರೆಂಕುಲು…ಬಂಟೆರ್.. ಉಡಲ್ ಡ್ ಪರಪುಂಡ್ ಕ್ಷತ್ರಿಯ ನೆತ್ತೆರ್… ಗುತ್ತು, ಗರಡಿ, ಬಾವ, ಬೂಡ್, ಬರ್ಕೆದ ಗುರ್ಕ್ರಾರ್ಲೆಂಕುಲ್.. ಬಗ್ಗ್ ದ್ ಜ ಏರೆಗ್ಲಾ.. ಬಗ್ಗಯ ದುಂಬಗೊಲಾ ತಂಕೊಗ್ ನನೊಂಜಿ ಪುದರ್ಬಂಟೆರೆಂಕುಲು… ಬಂಟೆರ್.. ಪಿರಾಕ್ ದ ಕಾಲೋಡಿಂಚಿ ಗತ್ತ್ ಡ್ ಮೆರೆಯಿನವು ನಮ್ಮ ಬಂಟ ಸಮುದಾಯ. ಸಾಮಾಜೊಡ್ ನಾಲ್ ಜನತ್ತ ಎದುರ್ ದೆರ್ತ್ ತೋಜುನಾಯೆ ಬಂಟೆ. ಪೊಕ್ಕಡೆಗ್ ನಮನ್ ಬಂಟೆರ್ ಪಂದ್ ಪನ್ಪುಜೆರ್. ನಮನ ಆಚಾರ ವಿಚಾರೊಲೆನ್ ತೂನಗನೇ ಗೊತ್ತಾವು ನಮ್ಮ ಛಾತಿ ದಾದ ಪಂಡ್ದ್. ಬಂಟೆರೆನ್ ಕ್ಷತ್ರಿಯೆ ಪಂದ್ ಪನ್ಪೆರ್. ಬಂಟಡ ಕ್ಷಾತ್ರ ತೇಜ ಮಾತ್ರ ಅತ್ತ್ ಗುಣಲಾ ಉಂಡು. ಒರಿ ಕ್ಷತ್ರಿಯೆ ಏಪೊಗುಲಾ ಏರೆಗ್ಲಾ ಪೋಡ್ಯುಜೆ ಅಂಚನೆ ತನ್ನ ಕೈತಲ್ ಸಹಾಯ ನಟ್ಟೊಂದು ಬತ್ತಿನಕ್ಲೆನ್ ಬರಿಕೈಟ್ ಕಡಪುಡುಜೆ. ಗುರು ಹಿರಿಯೆರೆಗ್, ದೈವ ದೇವೆರೆಗ್ ತರೆ ತಗ್ಗಾದ್ ನಡಪುನಾಯೆನೆ ಕ್ಷತ್ರಿಯೆ. ಈ ಗುಣಕುಲ್ ಬಂಟಡ ಇತ್ತಿನವೆಡಾತ್ರನೆ ಆಯನ್ ಕ್ಷತ್ರಿಯೆ ಪನ್ಪಿನಿ. ಗುತ್ತು-ಬರಿಕೆ, ಬಾವ-ಬೂಡುಲೆಡ್ ಗುರ್ಕಾರ್ಮೆ ಮಲ್ತೋಂದು ಸಮಾಜೋದ ಮಾತ ಸಮುದಾಯೊಲೆನ್ ಸಮಾನವಾದ್ ತೂದ್…

Read More

One of Great Doctor ಜಗವೇ ಝಣ ಝಣ ಕಾಂಚಾಣದ ಬೆನ್ನತ್ತಿ ಹಣವೇ ಬದುಕೆನ್ನುವ ರೀತಿಯಲ್ಲಿ ದುಡ್ಡಿನ ಹಿಂದೋಡುವ ಕಾಲಮಾನದಲ್ಲಿ, ಸೇವೆಯ ಉದ್ದೇಶವೇ ಹೆಸರು ಮಾಡುವುದೆಂಬ ತಪ್ಪು ಕಲ್ಪನೆಯೇ ವಾಸ್ತವಕ್ಕೆ ಪೈಪೋಟಿ ನೀಡುವ ಈ ಹೊತ್ತಿನಲ್ಲಿ, ನಮ್ಮ ನಡುವೆ ಯಾವುದೇ ಹಣದ ಫಲಾಪೇಕ್ಷೆಯಿಲ್ಲದೆ “ವೈದ್ಯೋ ನಾರಾಯಣೋ ಹರಿಃ” ಎನ್ನುವ ಉಕ್ತಿಗೆ ಪುನರ್ಜೀವ ತುಂಬುವಂತೆ ನಿಜವಾದ ಅರ್ಥದಲ್ಲಿ ಜನ ಸೇವೆಗೈಯ್ಯುತ್ತಿರುವ ಆ ವ್ಯಕ್ತಿಯೇ ಡಾ.ಸನ್ಮಾನ್ ಶೆಟ್ಟಿ ಅವರು. ಮೂಲತಃ ನೈಲಾಡಿ ಗ್ರಾಮದವರಾದ ಇವರು 24.04.1974ರಲ್ಲಿ ಎನ್. ಸರಸ್ವತಿ ಶೆಟ್ಟಿ ನೈಲಾಡಿ ಹಾಗೂ ಹೆಚ್. ಶ್ರೀಧರ್ ಶೆಟ್ಟಿ ಹೊಸ್ಮಠ ಇವರ ಜ್ಯೇಷ್ಠ ಪುತ್ರರಾಗಿ ಜನಿಸಿದರು. ಎಮ್.ಬಿ.ಬಿ.ಎಸ್ ಪೂರ್ಣಗೊಳಿಸಿದ ನಂತರ ಇವರು 2000 ನೇ ಇಸವಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮುಲ್ಕಿಯಲ್ಲಿ ವೈದ್ಯಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದರು. ಸರಳ ವ್ಯಕ್ತಿತ್ವ, ಸಹಾನುಭೂತಿ ತುಂಬಿದ ಇವರ ಮಾತುಗಳು ಇವರ ಬಳಿ ಬರುವ ರೋಗಿಗಳ ಆತ್ಮಶಕ್ತಿಯನ್ನು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ. ತಮ್ಮ ಪ್ರೀತಿಭರಿತ ಸೇವೆಯಿಂದ ಮುಲ್ಕಿಯಲ್ಲಿ ಮನೆಮಾತಾದ ಈ ಮಹನೀಯರ…

Read More

ತುಳುನಾಡಿನ ಇಂದಿನ ಪ್ರಗತಿಗೆ ನಮ್ಮ ಹಿರಿಯರ ಶ್ರಮ ಕಾರಣ. ಆಟಿ ಆಚರಣೆ ಮೊದಲಾದ ಕಾರ್ಯಕ್ರಮಗಳ ಮೂಲಕ ಹಿರಿಯರ ಕಷ್ಟದ ದಿನಗಳನ್ನು ಸ್ಮರಿಸಿ ನಾವು ತಿದ್ದಿಕೊಳ್ಳೋಣ ಎಂದು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು. ಸುರತ್ಕಲ್ ಬಂಟರ ಸಂಘ ಮತ್ತು ಮಹಿಳಾ ವೇದಿಕೆ ಆಶ್ರಯದಲ್ಲಿ ಚೇಳಾರು ಖಂಡಿಗೆ ಶ್ರೀ ಉಳ್ಳಾಯ ದೈವಸ್ಥಾನದ ವಠಾರದಲ್ಲಿ ನಡೆದ ಆಟಿದ ಪೊರ್ಲು ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಎಸ್. ಪೂಂಜ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಿಥುನ್ ರೈ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ದೇವಾನಂದ ಎಂ. ಶೆಟ್ಟಿ, ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ, ಸುರತ್ಕಲ್ ಮಾತಾ ಡೆವಲಪರ್ಸ್ ನ ಮಾಲಕ ಸಂತೋಷ್ ಕುಮಾರ್ ಶೆಟ್ಟಿ, ಉಡುಪಿ ಸಮೂಹ ಶಿಕ್ಷಣ ಸಂಸ್ಥೆ ಮಣಿಪಾಲದ ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ, ಉಳ್ಳಾಯ ದೈವಸ್ಥಾನದ ಗಡಿ ಪ್ರಧಾನ ಆದಿತ್ಯ ಮುಕ್ಕಾಲ್ದಿ, ಗೌರವಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಬಂಟರ…

Read More

ಯಕ್ಷ ಮಿತ್ರರು ಸುರತ್ಕಲ್ ಇದರ 18 ನೇ ವರ್ಷದ ಪ್ರಯುಕ್ತ ಅ.8 ರಂದು ಭಾನುವಾರ ಸುರತ್ಕಲ್ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ವೇದಿಕೆಯಲ್ಲಿ ಕರ್ಣಾವಸಾನ ಯಕ್ಷಗಾನ ತಾಳಮದ್ದಳೆ ನಡೆಯಿತು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ, ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಅವರನ್ನು ಸನ್ಮಾನಿಸಲಾಯಿತು. ದಿನೇಶ್ ಶೆಟ್ಟಿ ಕಾವಳಕಟ್ಟೆ ಅಭಿನಂದನಾ ಭಾಷಣದಲ್ಲಿ ಸದಾಶಿವ ಆಳ್ವರ ಕಲಾ ಸೇವೆಯನ್ನು ಕೊಂಡಾಡಿದರು. ತಾಳಮದ್ದಲೆ ಅರ್ಥಧಾರಿ ಯಾಗಿ ಸದಾಶಿವ ಆಳ್ವರವರ ಮಾತುಗಾರಿಕೆ, ತುಳು ಭಾಷೆಯಲ್ಲಿ ಅವರಿಗಿರುವ ಹಿಡಿತ ಇಂದಿನ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದ್ದಾರೆ. ಈ ಹಿಂದೆ ಕಾಂಚನ ಸಂಜಿವ ರೈ, ಬೆಳ್ಳಾರೆ ವಿಶ್ವನಾಥ ಶೆಟ್ಟಿ ತುಳು ಭಾಷೆಯ ಬಗ್ಗೆ ಇದ್ದ ಒಲವು, ಭಾಷಾ ಶುದ್ಧತೆಯನ್ನು ಈಗ ನಾವು ಸದಾಶಿವ ಆಳ್ವರಲ್ಲಿ ಕಾಣಬಹುದು ಎಂದರು. ಇಡ್ಯಾ ದೇವಸ್ಥಾನದ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್ ರವರ ಆಶೀರ್ವಚನದಲ್ಲಿ ಯಕ್ಷಮಿತ್ರರು ಯಕ್ಷಗಾನ ಕಲೆಯನ್ನು ಆರಾಧಿಸುತ್ತಾರೆ. ನಿರಂತರ ತಾಳಮದ್ದಳೆಯನ್ನು ಮಾಡುವ ಮೂಲಕ ಯಕ್ಷ ಕಲೆಗೆ ಪ್ರೋತ್ಸಾಹ ನೀಡುತ್ತಾರೆ. ಸದಾಶಿವ…

Read More

ನವಿಮುಂಬಯಿಯ ನೆರುಲ್ ಪಶ್ಚಿಮದಲ್ಲಿರುವ ನೋಂದಾಯಿತ ಚಾರಿಟೇಬಲ್ ಟ್ರಸ್ಟ್ ಆಗಿರುವ ನೆರುಲ್ ಜಿಮ್ಖಾನದ ಪ್ರಸ್ತುತ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಕಳಬಾವ ವಿಕಾಸ್ ಎಚ್ ಶೆಟ್ಟಿಯವರು ತನ್ನ ಮಾದರಿ ಕಾರ್ಯಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಹಾಗೂ ಬಂಟ ಬಾಂಧವರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ. ದಿವಂಗತ ಐಕಳಬಾವ ಸರ್ವಾಣಿ ಶೆಟ್ಟಿ ಮತ್ತು ಹಿರಿಯಣ್ಣ ಶೆಟ್ಟಿ ಕೆಂಜೂರು ದಂಪತಿಯ ಪುತ್ರರಾಗಿರುವ ವಿಕಾಸ್ ಶೆಟ್ಟಿಯವರು ಸ್ವಂತ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿದ್ದಾರೆ. ಸಮರ್ಥ ನಾಯಕರೂ, ದೂರಗಾಮಿ ಚಿಂತಕರೂ ಆಗಿರುವ ವಿಕಾಸ್ ಶೆಟ್ಟರು ಜವಾಬ್ದಾರಿ ವಹಿಸಿಕೊಂಡಿರುವ ಎಲ್ಲಾ ಸಂಘ ಸಂಸ್ಥೆಗಳಲ್ಲೂ ನಿಸ್ವಾರ್ಥದಿಂದ ದುಡಿಯುವ ಮೂಲಕ ಸಂಘ ಹಾಗೂ ಅದರ ಆಶ್ರಿತರಿಗೆ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ವಿಕಾಸ್ ಶೆಟ್ಟರಿಗೆ ಬಾಲ್ಯದಿಂದಲೂ ಬಡವರ ಬಗ್ಗೆ ವಿಶೇಷ ಪ್ರೀತಿ, ಒಲವು, ಕಾಳಜಿ. ನಾಯಕತ್ವ ಹಾಗೂ ಆಡಳಿತ ನಿರ್ವಹಣೆಯಲ್ಲಿ ಎತ್ತಿದ ಕೈಯಾಗಿರುವ ಇವರು ಕಠಿಣ ಪರಿಶ್ರಮಿ. ತಾನು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಷ್ಠೆ, ಬದ್ಧತೆ, ಅರ್ಪಣಾ ಮನೋಭಾವನೆ, ಗುಣಮಟ್ಟವನ್ನು ಕಾಪಾಡಿಕೊಂಡು ಬಾಂದವರು…

Read More

ಯಕ್ಷಗಾನ ಕಲಾವಿದರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಯೋಜನೆಗಳಲ್ಲಿ ಒಂದಾದ ಯಕ್ಷಾಶ್ರಯದಡಿ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯವನ್ನು ಟ್ರಸ್ಟ್ ಕಚೇರಿಯಲ್ಲಿ ವಿತರಿಸಲಾಯಿತು. ಸುಂಕದಕಟ್ಟೆ ಮೇಳದ ಜಯೇಂದ್ರ ಕಿದೂರ್, ಸಸಿಹಿತ್ಲು ಮೇಳದ ಗುಡ್ಡಪ್ಪ ಸುವರ್ಣ ಇವರುಗಳಿಗೆ 2ನೇ ಕಂತು ಮತ್ತು ಬಪ್ಪನಾಡು ಮೇಳದ ನಾಗಪ್ಪ ಪಡುಮಲೆ ಇವರಿಗೆ ಕೊನೆಯ ಕಂತಿನ ಮೊತ್ತದ ಚೆಕ್ಕನ್ನು ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ವಿತರಿಸಿದರು. ಈ ಸಂದರ್ಭದಲ್ಲಿ ಫೌಂಡೇಶನ್ನಿನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ, ಬಪ್ಪನಾಡು ಮೇಳದ ದಿನೇಶ್ ಕೊಡಪದವು ಜತೆಗಿದ್ದರು.

Read More

ಬರೋಡಾ (ಆರ್ ಬಿ ಐ), ಆ.15: ಗುಜರಾತ್ ರಾಜ್ಯದ ಬರೋಡಾ ಮಹಾನಗರದಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್‍ನಲ್ಲಿ ತುಳು ಸಂಘ ಬರೋಡಾ ನಿರ್ಮಿತ ವಿಶ್ವದ ಪ್ರಪ್ರಥಮ ಹಾಗೂ ಏಕೈಕ ತುಳು ಚಾವಡಿ ಇದರ ಸಭಾಗೃಹದಲ್ಲಿ ಇಂದಿಲ್ಲಿ ಸೋಮವಾರ ತುಳು ಸಂಘ ಬರೋಡಾ ಸಂಸ್ಥೆಯು ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದೊಂದಿಗೆ ರಾಷ್ಟ್ರದ 76ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಸಂಭ್ರಮಿಸಿತು. ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ (ಬೆಳ್ತಂಗಡಿ) ಇವರ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ಸಂಘದ ಸಾಂಸ್ಕೃತಿಕ ಕೇಂದ್ರದ ತುಳು ಚಾವಡಿ ಸಭಾಗೃಹದಲ್ಲಿ ನಡೆಸಲ್ಪಟ್ಟ ಸಂಭ್ರಮದಲ್ಲಿ ಸಂಘದ ಬಾಲ ಪ್ರತಿಭೆಗಳಾದ ಕು| ದೀಕ್ಷಿತ್ ಶೆಟ್ಟಿ, ಕು| ವಿಶ್ಮಿತಾ ಪೂಜಾರಿ, ಕು| ಕಾವ್ಯ ಶೆಟ್ಟಿ ಅತಿಥಿಗಳಾಗಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಾವು ಭಾರತದ ಪುಣ್ಯಭೂಮಿಯಲ್ಲಿ ಹುಟ್ಟು ಪಡೆದಿರುವುದೇ ನಮ್ಮ ಸೌಭಾಗ್ಯವಾಗಿದೆ. ವಿಶ್ವದಲ್ಲೇ ಇಂತಹ ಪುಣ್ಯಭೂಮಿ ಮತ್ತೊಂದಿಲ್ಲ ಅನ್ನುವುದು ಪ್ರತೀಯೋರ್ವ ಭಾರತೀಯನಿಗೆ ಹೆಮ್ಮೆಯೆಣಿಸಬೇಕು. ಆದುದರಿಂದ ನಾವೆಲ್ಲರೂ ಭಾರತಾಂಭೆಯ ಪ್ರತಿಷ್ಠೆಯ ಮಕ್ಕಳಾಗಿ ಸಾಮರಸ್ಯ, ಸೌಹಾರ್ದತೆಯಿಂದ ಬಾಳಬೇಕು. ಅಸಂಖ್ಯಾತ…

Read More

ದಿನಾಂಕ 02-10-2023 ಗಾಂಧಿ ಜಯಂತಿ ಪ್ರಯುಕ್ತ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಶೇರ್-ಇ-ಕಾಶ್ಮೀರ್‌ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ದೆಹಲಿ ಘಟಕ, ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಸರ್ಕಾರದ ಕಲೆ, ಸಂಸ್ಕೃತಿ ಮತ್ತು ಭಾಷಾ ಇಲಾಖೆ ಆಯೋಜಿಸಿದ್ದ ಹಿಂದಿ ಯಕ್ಷಗಾನ ಮತ್ತು ಪಜ್ಜೆ-ಗೆಜ್ಜೆ ತುಳು-ಕನ್ನಡ ಶಾಸ್ತ್ರೀಯ, ಜಾನಪದ ನೃತ್ಯ ಪ್ರಕಾರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಮಾತನಾಡಿ “ಮಹಾಭಾರತ ಯುದ್ಧಕ್ಕೆ ಮುನ್ನ ಯಕ್ಷನು ಯುಧಿಷ್ಠಿರನ ಬಳಿ ಜಗತ್ತಿನಲ್ಲಿ ನಿನಗೆ ಅತ್ಯಂತ ಅಚ್ಚರಿಯ ವಿಷಯ ಯಾವುದು ಎಂಬ ಪ್ರಶ್ನೆ ಕೇಳುತ್ತಾನೆ. ಅದಕ್ಕೆ ಯುಧಿಷ್ಠಿರ, ಜಗತ್ತಿನಲ್ಲಿ ಇಷ್ಟೊಂದು ಸಾವು-ನೋವುಗಳಾಗುತ್ತಿದ್ದರೂ ಬದುಕಿನ ಬಗ್ಗೆ ಜನರಿಗೆ ಏಕಿಷ್ಟು ಆಸಕ್ತಿ ಎನ್ನುವುದೇ ಅಚ್ಚರಿ ಎಂದು ಉತ್ತರಿಸಿದ್ದ. ಯಕ್ಷನು ಈಗ ಜಮ್ಮು-ಕಾಶ್ಮೀರಕ್ಕೆ ಬಂದು ನನ್ನಲ್ಲಿ, ನಿನಗೆ ಮಹದಚ್ಚರಿಯ ವಿಷಯ ಯಾವುದು ಎಂದು ಕೇಳಿದರೆ, ಇಷ್ಟು ಮಂದಿ ಕರ್ನಾಟಕದಿಂದ ಬಂದು ಶ್ರೀನಗರದಲ್ಲಿ ವೈಭವಯುತವಾಗಿ…

Read More

ಗುರುಪುರ : ಸೇವಾ ಬ್ರಿಗೇಡ್(ರಿ) ಗುರುಪುರ ಇದರ ವತಿಯಿಂದ ಭಾನುವಾರ(ಆ. 14) ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಎದುರಿನ ಬಂಡಿ ಗದ್ದೆಯಲ್ಲಿ ಆಯೋಜಿಸಲಾದ `ಆಟಿದ್ ಕೆಸರ್‍ಡೊಂಜಿ ದಿನ’ ಕಾರ್ಯಕ್ರಮವನ್ನು ಶ್ರೀ ವೈದ್ಯನಾಥ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು ಅವರು ತುಳುನಾಡಿನ ಸಂಪ್ರದಾಯದಂತೆ ಕಳಸೆಯ ಮೇಲಿಟ್ಟ ತೆಂಗಿನ ಗೊನೆ ಅರಳಿಸಿ, ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ಚಂದ್ರಹಾಸ ಕೌಡೂರು ಮಾತನಾಡಿ, ಊರಿನ ದೈವಸ್ಥಾನದ ಗದ್ದೆಯಲ್ಲಿ ಆಟಿಡ್ ಕೆಸರ್‍ಡೊಂಜಿ ದಿನ ಕಾರ್ಯಕ್ರಮ ನಡೆಯುತ್ತಿರುವುದು ಎಲ್ಲರಿಗೂ ಖುಷಿಯ ವಿಷಯ. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದರೂ, ಸ್ಪರ್ಧಾಳುಗಳು ಅದನ್ನು ಸಮಾನವಾಗಿ ಅನುಭವಿಸುತ್ತ ತುಳುನಾಡಿನ ಹಿರಿತನ ಮೆರೆಯಬೇಕು ಎಂದರು. ದೈವಸ್ಥಾನದ ಧೂಮಾವತಿ ಪಾತ್ರಿ ತನಿಯಪ್ಪ ಪೂಜಾರಿ, ವಿಲಾಸ್ ಶೆಟ್ಟಿ ಮರಂಕರಿಯ, ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಚಂದ್ರಹಾಸ ಕಾವ, ಉಮೇಶ್ ಶೆಟ್ಟಿ, ಕೃಷ್ಣ ಸಾಲ್ಯಾನ್, ಸತೀಶ್ ಕಾವ, ವಿನಯ್ ಸುವರ್ಣ, ಜಗದೀಶ್ ಶೆಟ್ಟಿ ಕಾರಮೊಗರು, ಬ್ರಿಗೇಡ್‍ನ ಗೌರವಾಧ್ಯಕ್ಷರಾದ ಪುರಂದರ ಮಲ್ಲಿ ಹಾಗೂ ರಮಾನಂದ ಶೆಟ್ಟಿ, ಅಧ್ಯಕ್ಷ ಶ್ಯಾಮ ಆಚಾರ್ಯ, ಕಾರ್ಯದರ್ಶಿ…

Read More

ಬಂಟ್ಸ್ ಫೋರಮ್ ಮೀರಾ ಭಾಯಂದರ್ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಇತ್ತೀಚಿಗೆ ಬಹು ವಿಜೃಂಭಣೆಯಿಂದ ನಡೆದಿವೆ. ಇದರ ಯಶಸ್ಸಿಗೆ ಶ್ರಮಿಸಿದ ಸರ್ವ ಸದಸ್ಯರು ಹಾಗೂ ಮುಂದಾಳತ್ವ ವಹಿಸಿದ್ದ ಅಧ್ಯಕ್ಷರಾದ ಇನ್ನಾ ಚಂದ್ರಹಾಸ ಕೆ. ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಸಂಸ್ಥೆಯ ಪ್ರಗತಿಗೆ ಸದಸ್ಯರ ಒಮ್ಮತದ ಸಹಕಾರ ಅಗತ್ಯ. ಸಂಸ್ಥೆಯ ಉನ್ನತಿಗೆ ಸಹಕಾರವನ್ನು ನೀಡಿದ ಅಧ್ಯಕ್ಷರನ್ನು ಇಂದು ಸದಸ್ಯರ ಸಮ್ಮುಖದಲ್ಲಿ ಸನ್ಮಾನಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಂಟ್ಸ್ ಫೋರಮಿನ ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಹೇಳಿದರು. ಅವರು ಜು.1 ರಂದು ಸಂಸ್ಥೆಯು ಮೀರಾರೋಡ್ ರೈಲ್ವೆ ಸ್ಟೇಶನ್ ಬದಿಯಲ್ಲಿರುವ ಸುರಭಿ ಹೋಟೇಲಿನ ಸಭಾಗೃಹದಲ್ಲಿ ಆಯೋಜಿಸಿದ್ದ ಕೌಟಂಬಿಕ ಸ್ನೇಹಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಮಾತನಾಡುತ್ತಾ ಅಧ್ಯಕ್ಷನಾಗಿ ನನ್ನ ಕರ್ತವ್ಯವನ್ನು ಸರ್ವರ ಸಹಕಾರದಿಂದ ನಿಭಾಯಿಸಿದ್ದೇನೆಂಬ ಸಂತೃಪ್ತಿ ಇದೆ. ಎಲ್ಲಾದರೂ ಅಪ್ಪಿತಪ್ಪಿ ತಿಳಿಯದೆ ತಪ್ಪಾಗಿದ್ದರೆ ಕ್ಷಮಿಸಿ ಮುಂದಿಗೂ ತಮ್ಮ ಸಹಕಾರವಿರಲಿ ಎಂದು ಹೇಳಿದರು. ಆರಂಭದಲ್ಲಿ ಮಹಿಳಾ ವಿಭಾಗದ…

Read More