ಎಸ್.ಬಿ ಗ್ರೂಪ್ ಅರ್ಪಿಸುವ “ಶಿಯಾನ ಪ್ರೊಡಕ್ಷನ್ ಹೌಸ್” ಅವರ ಯುವ ನಿರ್ಮಾಪಕ ಪ್ರತೀಕ್ ಯು ಪೂಜಾರಿ ನಿರ್ಮಾಣದ, ನವ ನಿರ್ದೇಶಕ ಭರತ್ ಶೆಟ್ಟಿಯವರ ಕಥೆ ನಿರ್ದೇಶನದ “ಪಿಲಿಪಂಜ” ವಿಭಿನ್ನ ಶೈಲಿಯ ತಂತ್ರಜ್ಞಾನದಿಂದ ಕೂಡಿದ, ವಿಭಿನ್ನ ಕಥಾ ಹಂದರದ ತುಳು ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಕೊಕ್ಕಡ ಸುತ್ತಮುತ್ತ ನಡೆಯಿತು. ಒಟ್ಟು ಮೂವತ್ತು ದಿನದ ಚಿತ್ರೀಕರಣದ ಈ ಸಿನಿಮಾ ಎರಡು ಹಂತದಲ್ಲಿ ಚಿತ್ರೀಕರಿಸಲ್ಟಟ್ಟಿತ್ತು. ತುಳು ಸಿನಿಮಾ ರಂಗದಲ್ಲಿ ಪ್ರಪ್ರಥಮ ಬಾರಿಗೆ ವಿಭಿನ್ನ, ವಿಶೇಷ ತಂತ್ರಜ್ಞಾನವನ್ನು ಈ ಸಿನಿಮಾದ ಮೂಲಕ ಪರಿಚಯಿಸುತ್ತಿದೆ. ಉತ್ತಮ ಕಥಾವಸ್ತು ಇರುವ ಈ ಚಿತ್ರದಲ್ಲಿ ಹಾಸ್ಯಕ್ಕೂ ಅಷ್ಟೇ ಒತ್ತು ಕೊಟ್ಟಿದೆ. ಇರಾ, ಮುಡಿಪು, ವರ್ಕಾಡಿ, ಕೂಟತ್ತಾಜೆ, ಬೋಳಿಯಾರ್, ಕೊಕ್ಕಡ ಮುಂತಾದ ಕಡೆ ಚಿತ್ರೀಕರಿಸಲಾಗಿತ್ತು.
ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಶಿವಪ್ರಕಾಶ್ ಪೂಂಜ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ರಕ್ಷಣ್ ಮಾಡೂರು, ಪ್ರಕಾಶ್ ಶೆಟ್ಟಿ ಧರ್ಮನಗರ, ವಿಜಯಹರಿ ರೈ, ದಯಾನಂದ ರೈ ಬೆಟ್ಟಂಪಾಡಿ, ರೂಪಶ್ರೀ ವರ್ಕಾಡಿ, ಜಯಶೀಲ ಮಂಗಳೂರು, ರಾಧಿಕಾ ಭಟ್, ಭಾಸ್ಕರ್ ಮಣಿಪಾಲ ಹಾಗೂ ನಾಯಕಿಯಾಗಿ ದಿಶಾರಾಣಿ ತುಳು ಸಿನಿಮಾ ರಂಗಕ್ಕೆ ಪರಿಚಯವಾಗುತ್ತಿದ್ದಾಳೆ. ಕ್ಯಾಮೆರಾ ಉದಯ್ ಬಳ್ಳಾಲ್, ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ರಮೇಶ್ ರೈ ಕುಕ್ಕುವಳ್ಳಿ, ಸಂಗೀತ ಲಾಯ್ ವೆಲೆಂಟೈನ್ ಸಲ್ದಾನ, ಸಂಕಲನ ಶ್ರೀನಾಥ್ ಪವಾರ್, ಸಹನಿರ್ದೇಶನ ಅಕ್ಷತ್ ವಿಟ್ಲ, ಸಹಾಯಕ ನಿರ್ದೇಶನ ಸಜೇಶ್ ಪೂಜಾರಿ, ಚಿತ್ರಕಥೆ, ಸಂಭಾಷಣೆ ಸುರೇಶ್ ಬಲ್ಮಠ ಅವರದ್ದಾಗಿದೆ. ಹಾಡಿನ ಚಿತ್ರೀಕರಣ ಬಾಕಿ ಇದ್ದು, ಶೀಘ್ರದಲ್ಲಿ ಹಾಡಿನ ಚಿತ್ರೀಕರಣ ಮುಗಿಸಿ 2025ರಲ್ಲಿ ಚಿತ್ರ ತೆರೆ ಕಾಣಲಿದೆ.