ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ನೆಟ್ಲಮುಡ್ನೂರು ಗ್ರಾಮ ನೇರಳಕಟ್ಟೆ. ಈ ಶಾಲೆಯು ಸುಮಾರು 105 ವರ್ಷಗಳನ್ನು ಪೂರೈಸಿದ ಶಾಲೆಯಾಗಿದ್ದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ನೀಡಿದೆ. ಈ ಶಾಲೆಯ ಕಟ್ಟಡಗಳು ದುಸ್ಥಿರವಾಗಿದ್ದನ್ನು ಮನಗಂಡ ಊರಿನ ಶಿಕ್ಷಣ ಅಭಿಮಾನಿಗಳು, ಹಳೆ ವಿದ್ಯಾರ್ಥಿಗಳು ಸೇರಿ ಶತಮಾನೋತ್ಸವದ ಕನಸನ್ನು ಕಂಡು ಒಂದು ಸಮಿತಿಯನ್ನು ರಚಿಸಿದ್ದರು. ಈ ಸಮಿತಿಯ ಮುಖಾಂತರ ಶಾಲೆಗೆ ನೂತನ ಕಟ್ಟಡದ ಅವಶ್ಯಕತೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯನ್ನು ಇಟ್ಟಿತು. ಮುಂದೆ ಎಂ.ಆರ್.ಪಿ.ಎಲ್, ಎನ್.ಎಂ.ಪಿ.ಟಿ, ಇನ್ನಿತರ ಸಂಸ್ಥೆಗಳಿಗೆ ತಮ್ಮ ಕಟ್ಟಡದ ಅವಶ್ಯಕತೆಯನ್ನು ಮನವಿ ಮೂಲಕ ತಿಳಿಸಿದಾಗ ಎಂ.ಆರ್.ಪಿ.ಎಲ್ ಮತ್ತು ಎನ್.ಎಂ.ಪಿ.ಟಿ ಸಂಸ್ಥೆ ತನ್ನ ಸಿಎಸ್ಆರ್ ಅನುದಾನದಿಂದ ಕ್ರಮವಾಗಿ 42 ಲಕ್ಷ ಮತ್ತು 20 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿತ್ತು. ಇದರಿಂದ ನೂತನ ಕೊಠಡಿಗಳ ನಿರ್ಮಿಸಲು ಶಂಕುಸ್ಥಾಪನೆಯು ಡಿಸೆಂಬರ್ 9 ರಂದು ಸೋಮವಾರ ಬೆಳಿಗ್ಗೆ ಶಾಲಾ ಆವರಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಲಕ್ಷ್ಮಿ ಕೆ ಹೆಗ್ಡೆ ಉರ್ದಿಲ ಗುತ್ತು, ಕಾರ್ಯಾಧ್ಯಕ್ಷರಾದ ನಿರಂಜನ್ ರೈ ಕುರ್ಲೆತ್ತಿಮಾರು, ಸ್ಥಳೀಯ ಪಂಚಾಯತ್ ಉಪಾಧ್ಯಕ್ಷರಾದ ಸಚ್ಚಿದಾನಂದ ಪೂಜಾರಿ, ಸದಸ್ಯರುಗಳಾದದ ಶ್ರೀಧರ್ ರೈ, ಅಬ್ದುಲ್ ಲತೀಫ್, ಅಶೋಕ್ ರೈ, ಧನಂಜಯ ಗೌಡ, ಶ್ರೀಮತಿ ಪ್ರೇಮ, ಶ್ರೀಮತಿ ಲಕ್ಷ್ಮಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರಶೀದ್ ಪಿಕೆ, ಉಪಾಧ್ಯಕ್ಷರಾದ ಶ್ರೀಮತಿ ಶಶಿಕಲಾ ಹಾಗೂ ಸರ್ವ ಸದಸ್ಯರು, ಮಾಜಿ ಅಧ್ಯಕ್ಷರಾದ ತನಿಯಪ್ಪ ಗೌಡ, ಉದ್ಯಮಿ ಫಾರೂಕ್ ಸುಲ್ತಾನ್, ಹಳೆ ವಿದ್ಯಾರ್ಥಿಗಳಾದ ಪ್ರಕಾಶ್ ರೈ ಕುರ್ಲೆತ್ತಿಮಾರು, ಉದ್ಯಮಿಗಳಾದ ರಫೀಕ್ ಶಮ್ಲ, ರಝಾಕ್ ಸಾಬ್, ಅಬ್ಬಾಸ್ ಪಿಕೆ ಹಾಗೂ ಇನ್ನಿತರರು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಅಕ್ಷರ ದಾಸೋಹ ಸಿಬ್ಬಂದಿಗಳು ಮತ್ತು ಮಕ್ಕಳು ಹಾಗೂ ಕಾಂಟ್ರಾಕ್ಟರ್ ಸಂದೀಪ್ ರೈ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.