ಸಮಾಜ ಸೇವೆಯನ್ನು ಪರಿಗಣಿಸಿ ಕಾರ್ಕಳ ತಾಲೂಕು ಮುಡಾರು ಗ್ರಾಮದ ಅಶೋಕ್ ಕೃಷ್ಣ ಶೆಟ್ಟಿ ಅವರಿಗೆ ಗೋವಾ ವಿಮೋಚನ ದಿನದ ಅಂಗವಾಗಿ ಡಿಸೆಂಬರ್ 19ರಂದು ಉತ್ತಮ ಸಮಾಜ ಸೇವಕ ಪ್ರಶಸ್ತಿಯನ್ನು ಪಡೆದುಕೊಂಡರು. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಮುಡಾರು ಗ್ರಾಮದ ಅನಂತಬೆಟ್ಟುವಿನ ಅಶೋಕ್ ಶೆಟ್ಟಿಯವರು 1987ರಲ್ಲಿ ಉದ್ಯೋಗ ಅರಸಿ ಗೋವಾ ತೆರಳಿದರು. ಆರ್.ಎಸ್.ಎಸ್.ಎಸ್ ಮುಖಂಡರಾಗಿರುವ ಅಶೋಕ್ ಶೆಟ್ಟಿ ಅವರು ಉದ್ಯಮ, ರಾಜಕೀಯ, ಸಾಮಾಜಿಕ ರಂಗದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪಟ್ಲ ಫೌಂಡೇಶನ್ ಗೋವಾ ಹಾಗೂ ತುಳುಕೂಟ ಗೋವಾ ಇದರ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿ ಶೈಲಜಾ ಶೆಟ್ಟಿ, ಪುತ್ರರಾದ ಅಶ್ವಿತ್ ಶೆಟ್ಟಿ ಹಾಗೂ ಅನ್ವಿತ್ ಶೆಟ್ಟಿ ಅವರೊಂದಿಗೆ ಅಶೋಕ್ ಶೆಟ್ಟಿ ಅವರು ಪಣಜಿಯಲ್ಲಿ ಪೊರ್ವೋರಿಮ್ ವಾಸವಾಗಿದ್ದಾರೆ