Author: admin

ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘ ಇದರ ಸಹಯೋಗದೊಂದಿಗೆ ದಶಮಾನೋತ್ಸವ ಸಂಭ್ರಮದ ಪೂರ್ವಭಾವಿ ಸಮಾಲೋಚನಾ ಸಭೆಯು ಬಂಟರ ಯಾನೆ ನಾಡವರ ಮಾತೃ ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಶೆಡ್ಡೆ ಹೊಸಲಕ್ಕೆ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಧಕರಿಗೆ ಸಮ್ಮಾನ, ವಾರ್ಷಿಕ ಮಹಾಸಭೆ, ಯುವ ಸಂಭ್ರಮ, ವಿದ್ಯಾರ್ಥಿ ವೇತನ ವಿತರಣೆ, ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮವು ಜು.16ರಂದು ಬೆಳಗ್ಗೆ 9.30ರಿಂದ ವಾಮಂಜೂರು ಚರ್ಚ್ ಸಭಾಭವನದಲ್ಲಿ ನಡೆಯಲಿದೆ. ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಸುಮಾರು 25ಕ್ಕೂ ಮಿಕ್ಕಿ ಬಂಟರ ಸಂಘದ ಕಲಾವಿದರಿಂದ ನೃತ್ಯ ಸ್ಪರ್ಧಾ ಸಮ್ಮಿಲನ ಯುವ ಸಂಭ್ರಮ – 2023 ಕಾರ್ಯಕ್ರಮ ಜರಗಲಿದೆ ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು. ವಿವಿಧ ಬಂಟರ ಸಂಘದ ಅಧ್ಯಕ್ಷರಿಂದ ಕಾರ್ಯಕ್ರಮದ ರೂಪು ರೇಷೆಯನ್ನು…

Read More

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವುದಕ್ಕೆ ಪೂರಕವಾಗಿ ರಾಜ್ಯ ಭಾಷೆಯನ್ನಾಗಿ ಘೋಷಿಸಬೇಕು ಎಂಬ ತುಳುನಾಡಿಗರ ಬೇಡಿಕೆ ಇನ್ನೂ ಈಡೇರಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ರಚಿಸಿದ ಸಮಿತಿಯ ವರದಿಯೇ ಬಹಿರಂಗಗೊಂಡಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಕರಾವಳಿಗರೇ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಮೇಲೆ ತುಳುನಾಡಿಗರಿಗೆ ಅಪಾರ ನಿರೀಕ್ಷೆ ಇತ್ತು. ತುಳುವನ್ನು 2ನೇ ಅಧಿಕೃತ ಭಾಷೆಯಾಗಿ ಘೋಷಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಈಡೇರಲಿಲ್ಲ. ಇದೀಗ ಕಾಂಗ್ರೆಸ್‌ ನೂತನ ಸರಕಾರ ರಚನೆಯಾಗಿದ್ದು, ಮಂತ್ರಿಮಂಡಲವೂ ಅಸ್ತಿತ್ವಕ್ಕೆ ಬಂದಿದೆ. ಈಗ ಮತ್ತೆ ತುಳುನಾಡಿಗರ ಕೂಗು ಮುನ್ನೆಲೆಗೆ ಬಂದಿದೆ. ತುಳುವನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವುದಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಬಿಜೆಪಿ ಸರಕಾರವು ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಸಮಿತಿಯು ಅಧ್ಯಯನ ನಡೆಸಿ ವಿಸ್ಕೃತ ವರದಿಯನ್ನು ಕೆಲವು ತಿಂಗಳ ಹಿಂದೆಯೇ ಸಲ್ಲಿಸಿತ್ತು. ಬಳಿಕ ಚುನಾವಣೆ ವಿಚಾರ ಮುನ್ನೆಲೆಗೆ ಬಂದ ಕಾರಣ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು, ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ಕಾರ್ಕಳದ ಬೋಳ ಗ್ರಾಮದ ನಿವಾಸಿ ಶ್ರೀಮತಿ ರತ್ನಾ ಶೆಟ್ಟಿ ಇವರಿಗೆ ಮನೆ ರಿಪೇರಿಗೆ ಮಂಜೂರಾದ ಪ್ರಥಮ ಕಂತಿನ ಧನಸಹಾಯದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಒಕ್ಕೂಟದ ಆಹ್ವಾನಿತ ಸದಸ್ಯರಾದ ಶ್ರೀ ರವಿ ಶೆಟ್ಟಿ ಹಾಗೂ ಫಲಾನುಭವಿಯ ಕುಟುಂಬಸ್ಥರು ಉಪಸ್ಥಿತರಿದ್ದರು.

Read More

ದಕ್ಷಿಣ ಮುಂಬಯಿಯ ವರ್ಲಿ ಪರಿಸರದಲ್ಲಿ ಧಾರ್ಮಿಕ ಶ್ರದ್ಧಾಳುಗಳಾದ ಪಡುಬಿದ್ರಿ ಬೆಂಗರೆ ರಮೇಶ್ ಗುರುಸ್ವಾಮಿಗಳಿಂದ ಸ್ಥಾಪಿತಗೊಂಡ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆ ಶ್ರೀ ಅಪ್ಪಾಜಿ ಬೀಡು ಫೌಂಡೇಶನ್ (ರಿ), ವರ್ಲಿ ಸಂಸ್ಥೆಯು ನಿರಂತರವಾಗಿ ಕಲಿಯುಗ ವರದ ಶ್ರೀ ಅಯ್ಯಪ್ಪನ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದು, ಇದರ ನೂತನ ಅಧ್ಯಕ್ಷರಾಗಿ ಹೋಟೆಲ್ ಉದ್ಯಮಿ ಬಂಟರ ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಪದ್ಮನಾಭ ಯಸ್ ಶೆಟ್ಟಿ ಪಡ್ಡಾಯಿಬೆಟ್ಟು ಸರಪಾಡಿ ಆಯ್ಕೆಯಾಗಿದ್ದಾರೆ. ಆಗಸ್ಟ್ 26ರ ಶನಿವಾರದಂದು ನಡೆದ ಸಭೆಯಲ್ಲಿ ಅಪ್ಪಾಜೀ ಬೀಡು ಫೌಂಡೇಷನ್ ಸಂಸ್ಥೆಯ ಸ್ಥಾಪಕರಾದ ರಮೇಶ ಗುರುಸ್ವಾಮಿ ಹಾಗೂ ಟ್ರಸ್ಟಿನ ಆಡಳಿತ ಟ್ರಸ್ಟಿ ಶಾಂಭವಿ ಗುರುಸ್ವಾಮಿ, ರೇ ರೋಡ್ ಅಯ್ಯಪ್ಪ ಭಕ್ತವೃಂದದ ಸಂಸ್ಥಾಪಕ ಸತೀಶ್ ಗುರುಸ್ವಾಮಿ, ಹಿರಿಯ ಟ್ರಸ್ಟೀಗಳು ರತ್ನಾಕರ್ ಶೆಟ್ಟಿ, ರಘುನಾಥ್ ಎನ್ ಶೆಟ್ಟಿ ಹಾಗೂ ರತ್ನಾಕರ್ ಶೆಟ್ಟಿ ಶಿವ್ ಸಾಗರ್ ಇವರ ಮಾರ್ಗದರ್ಶನದಿಂದ ಹಾಗೂ ಉಪಸ್ಥಿತರಿದ್ದ ಗಣ್ಯರ ಸಮ್ಮುಖದಲ್ಲಿ 2023-2026 ಕಾರ್ಯಕಾರಿ ಸಮಿತಿ ರಚನೆಯ ಪ್ರಕ್ರಿಯೆ ನಡೆಯಿತು. ಪದ್ಮನಾಭ್ ಶೆಟ್ಟಿಯವರನ್ನು ಸಂಸ್ಥೆಯ ನೂತನ ಅಧ್ಯಕ್ಷರನ್ನಾಗಿ…

Read More

ಜನನ-ಮರಣ ನೋಂದಣಿ ಪ್ರಕರಣಗಳನ್ನು ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಉಪವಿಭಾಗಾಧಿಕಾರಿ ಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವ ರಾಜ್ಯ ಸರಕಾರದ “ಅಧಿಸೂಚನೆ” ಯ ವಿರುದ್ದ ಕುಂದಾಪುರ ಬಾರ್ ಅಸೋಸಿಯೇಷನ್ ನ ಎದುರುಗಡೆ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಬನ್ನಾಡಿ ಸೋಮನಾಥ್ ಹೆಗ್ಡೆಯವರ ನೇತೃತ್ವದಲ್ಲಿ “ಪ್ರತಿಭಟನೆ” ಮಾಡಲಾಯಿತು. ಈ “ಪ್ರತಿಭಟನೆ” ಯಲ್ಲಿ ವಕೀಲರ ಸಂಘದ ಹಿರಿಯ-ಕಿರಿಯ-ಮಹಿಳಾ ವಕೀಲರು ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವೀ ಗೊಳಿಸಿದರು. ಈ ಸಂದರ್ಭ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಉಪಾಧ್ಯಕ್ಷರಾದ ಶ್ರೀಮತಿ ಬೀನಾ ಜೊಸೆಫ್, ಕೋಶಾಧಿಕಾರಿ ಹಾಲಾಡಿ ದಿನಕರ್ ಕುಲಾಲ್ ಮತ್ತು ಜತೆ ಕಾರ್ಯದರ್ಶಿ ರಿತೇಶ್ ಬಿ. ಉಪಸ್ಥಿತರಿದ್ದರು.

Read More

ಕನ್ನಡ ಸೇವಾ ಸಂಘ ಪೊವಾಯಿ ಇದರ ಸದಸ್ಯರು, ಅಧ್ಯಕ್ಷ ನ್ಯಾಯವಾದಿ ಆರ್ ಜಿ ಶೆಟ್ಟಿ, ಶ್ರೀಮತಿ ಪ್ರಶಾಂತಿ ಡಿ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ ರಮೇಶ್ ರೈ ಇವರ ನೇತೃತ್ವದ ನಿಯೋಗವು ”ಸಲಾಂ ಬಾಲ ಆಶ್ರಮ”ಕ್ಕೆ ಸಂಘದ ರಜತ ಮಹೋತ್ಸವ ನಿಮಿತ್ತ ಭೇಟಿ ನೀಡಿ ಆಶ್ರಮದ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ನೋಟ್ ಬುಕ್ ಹಾಗೂ ಇನ್ನಿತರ ಪಠ್ಯ ಪರಿಕರಗಳನ್ನು ನೀಡಿದರು. ಪೊವಾಯಿ ಕನ್ನಡ ಸೇವಾ ಸಂಘವು ಇನ್ನೂ ಹತ್ತು ಹಲವಾರು ಯೋಜನೆಗಳನ್ನು ಕೈಗೊಂಡಿದ್ದು ತುಳು ಕನ್ನಡ ಭಾಷೆ, ಸಂಸ್ಕೃತಿಯನ್ನು ಮಹಾರಾಷ್ಟ್ರದಲ್ಲಿ ಉಳಿಸಿ ಬೆಳೆಸುವಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದೆ.

Read More

ದೆಹಲಿ ಕರ್ನಾಟಕ ಸಂಘದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ದೆಹಲಿ ಘಟಕ ಮತ್ತು ಸುಳ್ಯದ ಬೆಳ್ಳಾರೆಯ ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ ‘ಯಕ್ಷಧ್ರುವ ಪಟ್ಲ ಸಂಭ್ರಮ-2023’ನ್ನು ದಿನಾಂಕ 30-09-2023ರಂದು ಹಿರಿಯ ಕಲಾವಿದ, ಚಲನಚಿತ್ರ ನಿರ್ದೇಶಕ ಟಿ.ಎಸ್.‌ ನಾಗಾಭರಣ ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಸಂಪೂರ್ಣ ಕಲೆಗಾರಿಕೆಯನ್ನು ಯಕ್ಷಗಾನದಲ್ಲಿ ಮಾತ್ರ ಕಾಣಲು ಸಾಧ್ಯ. ಅದೊಂದು ಅದ್ಭುತ ಲೋಕ. ಇಂದು ಯಕ್ಷಗಾನ ಕೇವಲ ದೇಶ ಮಾತ್ರವಲ್ಲ, ಜಾಗತಿಕವಾಗಿ ತನ್ನ ಹೆಜ್ಜೆಗುರುತನ್ನು ಮೂಡಿಸಿದೆ. ಭಾಗವತ ಪಟ್ಲ ಸತೀಶ್‌ ಶೆಟ್ಟಿಯವರು ತಾವು ಮಾತ್ರ ಬೆಳೆಯದೆ ತಮ್ಮೊಂದಿಗಿರುವವರನ್ನೂ ಬೆಳೆಸಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮೂಲಕ ಹತ್ತಾರು ಪ್ರತಿಭೆಗಳು ಹೊರಬರುವಂತೆ ಮಾಡಿದ್ದಾರೆ” ಎಂದು ಹೇಳಿದರು. ವಿಶೇಷ ಅತಿಥಿಯಾಗಿ ಪಾಲ್ಗೊಂಡ ಜಮ್ಮು-ಕಾಶ್ಮೀರ ಸರ್ಕಾರದ ಪ್ರಿನ್ಸಿಪಲ್‌ ಸೆಕ್ರೆಟರಿ ರಾಜೇಶ್‌ ಪ್ರಸಾದ್‌ ಹಿರಿಯಡ್ಕ, “ಇಂದಿನ ಮಕ್ಕಳಿಗೆ ನಾವು ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಕಲಿಸಬೇಕು. ಪಟ್ಲ ಸತೀಶ್‌ ಶೆಟ್ಟಿ ಅವರಿಗೆ ಹಾಡುಗಾರಿಕೆಯ ದೈವಿಕ ಶಕ್ತಿ ಒಲಿದಿದೆ. ಒಂದು ಜನಸಮೂಹವನ್ನೇ ಸೆಳೆಯುವಂತಹ ಅದ್ಭುತ ಸಾಮರ್ಥ್ಯವನ್ನು ಅವರಿಗೆ ದೇವರು ಕಲ್ಪಿಸಿದ್ದಾನೆ.…

Read More

ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಮೂಡಿ ಮರೆಯಾಗುವ ಅಣಬೆಯ ವೈವಿಧ್ಯತೆಗೆ ಲೆಕ್ಕವಿಟ್ಟವರಿಲ್ಲ. ಕೆಲವರಿಗೆ ಇದು ಸ್ವಾದಿಷ್ಟ ಖಾದ್ಯ ಮೂಲ. ಇನ್ನು ಕೆಲವರಿಗೆ ಆಹಾರವಾಗಿ ಬಳಕೆಯಲ್ಲಿಲ್ಲ, ಬಹುದೂರ. ನನ್ನ ಅಕ್ಕನ ಮಗ ಹರೀಶ್ ರೈ ಎರಡು ವಿಶಿಷ್ಟ ಅಣಬೆಗಳನ್ನು ಪರಿಚಯಿಸಿದ. ಒಂದು ; ಅಡಿಕೆ ಅಣಬೆ. ಅಡಿಕೆ ಸಿಪ್ಪೆಯನ್ನು ಅಂಗಳದಲ್ಲೂ ತೆಂಗು, ಅಡಿಕೆಯ ಬುಡದಲ್ಲೋ ರಾಶಿ ಹಾಕಿದರೆ ಅದು ಅಲ್ಲೇ ಕುಮೆದು ಸ್ವಲ್ಪ ಕಪ್ಪಾದ ಮೇಲೆ ಮಲ್ಲಿಗೆ ಮೊಗ್ಗಿನಂತಹ ಪುಟ್ಟ ಅಣಬೆ ಬಿಡುತ್ತದೆ . ಸಂಜೆ ಐದರ ಹೊತ್ತಿಗೆ ಇಂಥ ಸಿಪ್ಪೆ ರಾಶಿಯನ್ನು ಸ್ವಲ್ಪ ಬಿಡಿಸಿ ನೋಡಿ .ಆಗ ತಾನೇ ಮೂಡಿದ ಮೊಗ್ಗು ಅಣಬೆ ಯತೇಚ್ಛವಾಗಿ ಸಿಗುತ್ತೆದೆ. ಇಂಥ ಅಣಬೆಯ ಆಯುಷ್ಯ ಬಹಳ ಕಡಿಮೆ. ಎರಡು ಗಂಟೆಯ ಒಳಗಡೆ ಅದು ವ್ಯಂಜನವಾಗಿ ಮಾರ್ಪಡಬೇಕು. ಸ್ವಾದಿಷ್ಟ ರುಚಿ. ಮತ್ತೆ ಮತ್ತೆ ಬೆಳೆದು ಬಳಸಬಹುದಾದ ಒಂದು ರೀತಿ ಅಣಬೆ ಕೃಷಿ ಎಂದೇ ಪರಿಗಣಿಸಿ ಬಳಸಬಹುದಾದ ಮೂಲವಿದು. ಮಲೆನಾಡಿನಲ್ಲಿ ಸಾಮಾನ್ಯವಾಗಿ ಮಳೆಗಾಲ ಪೂರ್ವದಲ್ಲಿ ಅಡಿಕೆ ಸುಲಿದು ಅಂಗಳಕ್ಕೆ ಹುಲ್ಲು ಬರದ…

Read More

ಸಹಕಾರಿ ಸಂಘಗಳ ಕ್ಷೇತ್ರದ ಧುರೀಣ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರ ಹುಟ್ಟು ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ಭಾಗವಹಿಸಿ ಶ್ರೀ ಎಂ ಎನ್ ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿದರು. ಐಕಳ ಹರೀಶ್ ಶೆಟ್ಟಿಯವರ ಸಮಾಜಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ನೆರವು ನೀಡಿದರು. ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಶ್ರೀ ಇಂದ್ರಾಳಿ ಜಯಕರ ಶೆಟ್ಟಿ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಉಡುಪಿಯ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷರಾದ ನಾಡೋಜ ಡಾ. ಜಿ ಶಂಕರ್, ಮೀನುಗಾರಿಕಾ ಮಹಾಮಂಡಲದ ಶ್ರೀ ಯಷ್ಪಾಲ್ ಸುವರ್ಣ, ಖ್ಯಾತ ಪತ್ರಕರ್ತ ಶ್ರೀ ಮನೋಹರ ಪ್ರಸಾದ್ ಅವರುಗಳು ಉಪಸ್ಥಿತರಿದ್ದರು. For more Kannada News refer Karnataka Times

Read More

ಬಡವರಿಗೆ ಹಾಗೂ ಅವಕಾಶ ವಂಚಿತರಿಗೆ ಸುಸ್ಥಿರ ಹಾಗೂ ಗೌರವಯುತ ಜೀವನಾಧಾರವನ್ನು ಒದಗಿಸುವ ಜವಾಬ್ದಾರಿ ಇರುವ ಎಲ್ಲ ರಾಷ್ಟ್ರಗಳಲ್ಲಿ ಸಹಜವಾಗಿ ಸಾಮಾಜಿಕ ರಕ್ಷಣೆ ಮತ್ತು ಕಲ್ಯಾಣ ಕ್ರಮಗಳ ಆವಶ್ಯಕತೆಯನ್ನು ಕಂಡುಕೊಳ್ಳಲಾಗಿದೆ. ಹಸಿದವನಿಗೆ ಬದುಕು ಕಟ್ಟಕೊಳ್ಳಲು ಪೂರಕ ಕ್ರಮಗಳನ್ನು ಯೋಚಿಸಿ, ಯೋಜನೆಗಳನ್ನು ಕೈಗೊಳ್ಳಬೇಕಾ ದುದು ಕಲ್ಯಾಣ ರಾಜ್ಯದ ಪರಿಕಲ್ಪನೆಯ ಪ್ರಜಾಪ್ರಭುತ್ವದ ಜವಾಬ್ದಾರಿಯೂ ಹೌದು. ಹಸಿದವನಿಗೆ ಮೀನು ನೀಡಿದರೆ ಒಂದು ದಿನದ ಹಸಿವನ್ನು ತಣಿಸಿದಂತೆ. ಅವನಿಗೆ ಮೀನು ಹಿಡಿಯುವ ಕಲೆಯನ್ನು ಕಲಿಸಿಕೊಟ್ಟರೆ ಅವನಿಗೆ ಬದುಕು ಕೊಟ್ಟಂತೆ ಎಂಬ ಪ್ರಾಜ್ಞರ ನುಡಿ ನಮಗೆ ದಾರಿದೀಪವಾಗಬೇಕು. ಹಸಿದವನಿಗೆ ಬದುಕು ಕಟ್ಟಿಕೊಳ್ಳುವ ಕಲೆಯನ್ನು ಕಲಿಸಬೇಕಾಗಿದೆ ಮತ್ತು ಅದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಬೇಕಾಗಿದೆ. ಬಡವರಾದರೂ ಸ್ವಾವಲಂಬಿಗಳಾಗಿ, ಸ್ವಾಭಿಮಾನಿಗಳಾಗಿ ಬೆಳೆಯುವಂತೆ ಮಾಡಿದಾಗ ಸೇರ್ಪಡೆಯುಳ್ಳ ಸುಸ್ಥಿರ ಅಭಿವೃದ್ಧಿ ಸಾಧ್ಯ. ಇತಿಹಾಸದಿಂದ ಪಾಠ ಕಲಿಯಬೇಕು ಅತ್ಯಂತ ಸುಂದರ ಮತ್ತು ರಮಣೀಯವಾದ ಪ್ರಕೃತಿ ತಾಣಗಳಿಗೆ ಮತ್ತು ವಿಶ್ವ ಸುಂದರಿಯರ ತಾಣವಾದ ವೆನೆಜುವೆಲಾ ಏಕಾಏಕಿ 1970ರಲ್ಲಿ ಪ್ರಪಂಚದ ಅತ್ಯಂತ 20 ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿತ್ತು. ಸುಲಭವಾಗಿ ಅಧಿಕಾರಕ್ಕೆ ಬರಬೇಕೆಂಬ…

Read More