ವಿದ್ಯಾಗಿರಿ (ಮೂಡುಬಿದಿರೆ): ಗುರುವಾರ ಬಿದಿರೆಯ ಆಗಸದಲ್ಲಿ ಹೊಂಗಿರಣ ಮೂಡಿದ್ದರೆ, ‘ಆಳ್ವಾಸ್ ವಿರಾಸತ್’ನ ವೇದಿಕೆಯಲ್ಲಿ ‘ಸಬ್ ಕಾ ಶುಕ್ರಿಯಾ’ ಎಂದು ವಿನಮ್ರತೆ ವ್ಯಕ್ತಪಡಿಸಿ ಒಸ್ಮಾನ್ ಮೀರ್ ಧನ್ಯರಾದರು, ‘ತುಜ್ ಸೇ ಮೇರಾ ಜೀನಾ ರ್ನಾ… ಮೈ ಮುಸಾಫಿರ್ ತು ಮುಸಾಫಿರ್’ ಎಂದು ಅವರ ಪುತ್ರ ಅಮೀರ್ ಮೀರ್ ವೈರಲ್ ಆದ ತಮ್ಮ ಆಲ್ಬಂನ ಗಾನದ ಹೊನಲು ಹರಿಸಿದರು. ‘ತೇರೆ ಬಿನಾ ಸೋನ ಹೀ ಸಕ್ತೇ….’ ಎಂದಾಗ ಸಭಾಂಗಣ ಕಿಕ್ಕಿರಿದ ವಿದ್ಯರ್ಥಿಗಳ ಉದ್ಘಾರ ನಿದ್ದೆಗೆಡಿಸಿತು. ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ೩೦ನೇ ರ್ಷದ ಆಳ್ವಾಸ್ ವಿರಾಸತ್ನ ಮೂರನೇ ದಿನದ ಕರ್ಯಕ್ರಮದ ಗೋದೂಳಿ ಸೊಬಗು. ಅದು ಸೌಹರ್ದತೆಯ ಮೆರುಗು. ಬಳಿಕ ಅಮೀರ್ ಮೀರ್ ಅವರು ‘ಸಂತ್ … ಸಜ್ ನಾ ತೇರೆ ಬಿನಾ…’ ಎಂದು ಹಾಡಿದಾಗ ತಂದೆ ಒಸ್ಮಾನ್ ಗಾಯನದಲ್ಲಿ ಜೊತೆಯಾದರು. ಪಾರತಿ ವ್ಯಾಸಿ ಸಾಥ್ ನೀಡಿದರು. ದರ್ಘ ಅಗಲುವಿಕೆಯ ‘ಮೌತ್ ನಾ ಆಯಿ.. ಲಂಬೀ ಜುದಾಯಿ…’ ಎಂಬ ನಟಿ ರೇಖಾ ನೆಚ್ಚಿನ ಹಾಡನ್ನು ಅಮೀರ್ ಉಲಿದಾಗ, ಎಲ್ಲ ಜನಸ್ತೋಮ ‘ ಲಂಬೀ ಜುದಾಯಿ’ ಎಂದು ಕೋರಸ್ ನೀಡಿದರು. ‘ಹೀರೋ’ ಸಿನಿಮಾದ ನೆನಪಿಗೆ ಜನರನ್ನು ಕೊಂಡೊಯ್ಯಿತು. ಹಿರಿಯರಿಗೆ ಜಾಕಿ- ಮೀನಾಕ್ಷಿ ನೆನಪು.
‘ಸಜ್ ದಾ ತೆರಾ ಸಜ್ ದಾ’ ಸಾಲಿನ ‘ಮೈ ನೇಮ್ ಈಸ್ ಖಾನ್’ ಸಿನಿಮಾದ ಗಾನಕ್ಕೆ ವಿದ್ಯರ್ಥಿಗಳೂ ಜೊತೆ ಹಾಡಿದರು. ತಕ್ಷಣವೇ ‘ಮಿಥುವಾ…’ ಗಾನಸುಧೆ. ‘ ಚಾಂದ್ ನಜರ್ ಆಯಾ..ಆಯಾ ಆಯಾ… ‘ತೇರಿ ಯಾದ್ ಸಾಥ್ ಹೇ’ ಹಾಡಿನ ಮೂಲಕ ಗಜಲ್ ಗಾಯಕ ನಸ್ರುತ್ ಫತೇ ಆಲಿಖಾನ್ ಹಾಗೂ ‘ನಮಸ್ತೇ ಲಂಡನ್’ ನೆನಪಿಸಿದರು. ‘ವಿರಾಸತ್ ಪ್ರೇಕ್ಷಕರು, ಪ್ಯಾರಾ(ಪ್ರೀತಿ), ಸಂಯಮ್ (ತಾಳ್ಮೆ)ಯಿಂದ ಆಲಿಸುತ್ತಿದ್ದೀರಿ. ನಿಮ್ಮ ಮುಸ್ಸಂಜೆಯ ಭಾವಕ್ಕೆ ನಿಮ್ಮನ್ನು ನಾನು ‘ರ್ಭಾರಿ’ ರಾಗದಲ್ಲಿ ಸ್ವಾಗತಿಸುತ್ತೇನೆ’ ಎಂದು ‘ತೇರೆ ಸಖೀ’ ಹಾಡಿದರು. ‘ನನ್ನ ಜೊತೆ ಹಾಡ್ತೀರಾ’ ಎಂದ ಒಸ್ಮಾನ್ ‘ತೆರೆ ನಾಮ್ ಸೇ ಜೀಲೂ .. ‘ ಹಾಡಿದಾಗ ‘ತೇರೀ ದೀವಾನಿ’ ಎಂದು ಪ್ರೇಕ್ಷಕರು ಸ್ವರ ನೀಡಿದರು. ಕೈಲಾಶ್ ಖೇರ್ ನೆನಪು… ಇಷ್ಕ್ ಜುನೂನ್ ಜಬ್ ಹಾತ್ ಸೇ ಬಡ್ ಜಾಯೇ…ಶೇರ್ ಹೇಳಿದಾಗ ಎಲ್ಲೆಲ್ಲೂ ‘ವ್ಹಾ ವ್ಹಾ ವ್ಹಾ’. ಇನ್ನಷ್ಟು ಶೇರ್ ಹೇಳಿ ಹುರಿದುಂಬಿಸಿದರು. ‘ಇಷ್ಕ್ ಸಚ್ಚಾ ಹೋ ತೋ ಖುದಾ ಮಿಲ್ ತಾ ಹೇ’ ಎಂದಾಗ ಪ್ರೀತಿಯ ಭಕ್ತಿ ಅಲೆ ಸಭಾಂಗಣದಲ್ಲಿ ಉಕ್ಕೇರಿತು.
‘ಮರ್ ಮನ್ ಮೋಹಿ ಘರ್’ ಎಂದು ಪಾರತಿ ವ್ಯಾಸ್ ಗುಜರಾತಿ ಹಾಡನ್ನು ಢೋಲಕ್ ನಿನಾದದ ಜೊತೆ ಹಾಡಿದಾಗ ಅಮೀರ್ಯು ಗಳ ಹಾಡಿದರು. ಪಾರತಿ ವ್ಯಾಸ್ ಅವರು ಗರ್ಭಾದ ಹಾಡನ್ನು ‘ಮನಿಯಾರೋ’ ಎಂದಾಗ ‘ ಹೋವೇ ಹೋವೇ’ ಎಂದು ಶ್ರೋತ್ರುಗಳು ದನಿಯಾದರು. ಅಮೀರ್, ‘ಜೋಗಾಡಾ ತಾರಾ…ರಂಗೀಲಾ ತಾರಾ… ಹೇ…’ ಹಾಡಿ ಉದ್ಘಾರ ಹೆಚ್ಚಿಸಿದರು. ‘ನೀವು ಖುಷಿಯಾಗಿದ್ದೀರಿ’ ಎಂದ ಒಸ್ಮಾನ್ ಮೀರ್, ಕರಾವಳಿಯ ಬೆಡಗಿ ದೀಪಿಕಾ ಪಡುಕೋಣೆ ‘ಗೋಲಿಯೋಂಕಿ ರಾಸಲೀಲಾ ರಾಮ್ಲೀಲಾ’ ಸಿನಿಮಾದಲ್ಲಿ ರಣವೀರ್ ಜತೆ ಹೆಜ್ಜೆ ಹಾಕಿದ ‘ಮನ್ ಮೋರ್ ಬನಿ ತಾಂಗಟ್ಕರೇ’ ಹಾಡನ್ನು ಹಾಡಿದರು. ೨೦೧೩ರಲ್ಲಿ ಈ ಹಾಡಿನ ಮೂಲಕ ಹಿನ್ನೆಲೆ ಗಾಯಕರಾಗಿ ಒಸ್ಮಾನ್ ಮೀರ್ ಬಾಲಿವುಡ್ ಪ್ರವೇಶಿಸಿದ್ದರು. ಹೇಮು ಗಾಢ್ವಿ ಈ ಹಾಡನ್ನು ಸಂಯೋಜಿಸಿದ್ದರು. ‘ನಾಲ್ಕೂ ದಿಕ್ಕಿನಲ್ಲಿ ಸುರಿವ ಮಳೆ ಕಂಡಾಗ ನನ್ನ ಹೃದಯ ಅಚ್ಚರಿ ಪಡುತ್ತಿದೆ. ನನ್ನ ಹೃದಯ ನವಿಲಿನಂತೆ ರ್ತಿಸುತ್ತಿದೆ’ ಎಂಬ ಭಾವರ್ಥದ ‘ಮನ್ ಮೋರ್ ಬನಿ ತಾಂಗಟ್ಕರೇ…’ ಸಾಲುಗಳನ್ನು ಹಾಡಿದಾಗ ವಿರಾಸತ್ ನ ವಿದ್ಯುದ್ದೀಪಗಳಿಂದ ಅಲಂಕೃತ ಗೊಂಡ ಸಭಾಂಗಣದಲ್ಲಿ ನೆರೆದ ಜನರೇ ಕುಳಿತಲ್ಲೇ ನವಿಲಿನಂತೆ ಸಂಭ್ರಮಿಸಿದರು. ಆಗಸದಲ್ಲಿ ಮೋಡ ಕವಿದಿದ್ದು, ಇನ್ನೇನು ಮಳೆ ಸಿಂಚನ ಸುರಿಸುವಂತಿತ್ತು ನೀಲನಭ. ಪ್ರೇಕ್ಷಕರೆಲ್ಲ ಕೈ ಎತ್ತಿ ಚಪ್ಪಾಳೆ ಹೊಡೆದರು.
ಬಾಲಿವುಡ್ ನರ್ದೇಶಕ ಸಂಜಯ ಲೀಲಾ ಭನ್ಸಾಲಿ ಅವರು ಒಸ್ಮಾನ್ ಅವರನ್ನು ಈ ಹಾಡಿಗೆ ಮೆಚ್ಚಿಕೊಂಡಿದ್ದರು. ನಂತರ ದೇವದಾಸ್ ಸಿನಿಮಾದ ‘ಡೋಲ್ ಬಾಜೆ…’ ಸಡಗರ. ‘ಬಂ ಬಂ ಬಂ’ ಎಂಬ ರಾಗಕ್ಕೆ ಅಬ್ದುಲ್ ಮೀರ್ ಮತ್ತು ಅಯ್ಯುಬ್ ಮೀರ್ ಮೊಣಕೈ ಬಳಸಿ ತಬಲಾ ನುಡಿಸಿದರು.ಅವರ ತಬಲಾ ಚಳಕಕ್ಕೆ ಉದ್ಘಾರದ ಅಲೆ. ವಾಡಿಯಾ ಸಹೋದರರ ಖ್ಯಾತಿಯ ‘ಓ ತೂ ಮಾನೆ ಯ ಮಾನೆ ದಿಲ್ ದಾರಾ…ಆಸಾನ್ ತೇನು ರಬ್ ಮಾನಿಯಾ…’ ಹಾಡಿದಾಗ ವಯೋಲಿನ್ ನಲ್ಲಿ ಪಿಂಟೂಭಾಯಿ ಮಂತ್ರಮುಗ್ಧಗೊಳಿಸಿದರು.’ಖಾಲಿ ಖಾಲಿ ಜುಲ್ಫೋಂಕಿ ಫಂದೇ ನಾ ಡಾಲೋ….ತುಮಾರಿ ಜವಾನಿ ತುಮ್ ಕೋ ಮುಬಾರಕ್’ ಎಂದು ಹಾಡಿದ ಮೀರ್ ತಂದೆ- ಮಗ, ಮತ್ತೆ ನಸ್ರುತ್ ಫತೇ ಆಲಿಖಾನ್ ಘಜಲ್ ಅನುರಣಿಸಿದರು. ‘ಹಮೇ ಜಿಂದ ರೆಹೆನೋ ದೋ ಹೇ ಹುಸ್ ನ್ ವಾಲೋ…’೧೯೬೫ರಲ್ಲಿ ಲತಾ ಮಂಗೇಶ್ಕರ್ ಹಾಡಿದ ‘ವೋ ಕೌನ್ ತಿ’ ಸಿನಿಮಾದ ‘ಲಗ್ ಜಾ ಗಲೇ ..’ ಪಾರತಿ ಹಾಡಿದರು. ಆಗ ಅಮೀರ್, ‘ ತುಹಿರೇ ತುಹಿರೇ.. ತೇರೆ ಬಿನಾ ಮೈ ಕೈಸೇ ಜೀವೂ’ ಮೂಲಕ ಹರಿಹರನ್ ಹಾಡಿದ ‘ಬಾಂಬೆ’ ಕಾಲ ನೆನಪಿಸಿದರು. ಅರವಿಂದ ಸ್ವಾಮಿ -ಮನಿಷಾ ಕೊಯಿರಾ ನಟನೆಯ ಮೆಲುಕು.ಸೂಫಿ ಪರಂಪರೆಯ ಜ್ಞಾನದ ಅತ್ಯುನತ ಸಂತ ಖಲಂದರ್ (ಆಧ್ಯಾತ್ಮಿಕ ಪ್ರೀತಿ) ಅವರನ್ನು ಭಜಿಸಿ ಘಜಲ್ ಪಿತಾಮಹ ಅಮೀರ್ ಖುಸ್ರೋ ಬರೆದ ಘಜಲ್, ‘ಮಸ್ತ್ ಖಲಂದರ್… ಲಾಲ್ ಖಲಂದರ್.. ‘ ಹೊಮ್ಮಿಸಿದಾಗ ಭಾಂಗಣದಲ್ಲಿ ಸಂಚಲನ ಮೂಡಿಸಿತು. ‘ಪ್ರತಿ ಉಸಿರಿನ ಭಾವಪರವಶತೆ…’ ಸಾಲುಗಳನ್ನು ಜನ ಒಂದೇ ಉಸಿರಿನಲ್ಲಿ ಆಲಿಸಿದಂತೆ ಪರವಶರಾದರು.
ಬಳಿಕ, ‘ಅಖಿಯಾ ಉಜಿಯಾ ದಿಯಾ ವಜಾ ಮಾರ್ ದಾ’ ಹಾಡಿದರು.ಎ.ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆಯನ್ನು ಆರಾಧಿಸುವ ಒಸ್ಮಾನ್ ಮೀರ್ ಅವರಿಗೆ ಗಜಲ್ ಖ್ಯಾತಿಯ ನಸ್ರುತ್ ಫತೇ ಆಲಿಖಾನ್, ಜಗ್ಜಿತ್ ಸಿಂಗ್., ಮೆಹಂದಿ ಹಸನ್, ಗುಲಾಂ ಆಲಿ ಖಾನ್ ಗಾನಗಳು ಬಲು ಇಷ್ಟ. ಹೀಗಾಗಿ ಅವರು ‘ ಮಾ ತುಜೇ ಸಲಾಂ, ವಂದೇ ಮಾತರಂ’ ಹಾಡಿದಾಗ ಪ್ರೇಕ್ಷಕರೆಲ್ಲ ಮೊಬೈಲ್ ಬೆಳಗಿ ಬೀಸಿದರು. ‘ತೆರೀ ಮಿಠೀ ಮೇ ಮಿಲ್ ಜಾವಾ..’ ಸಾಲನ್ನು ಮಧ್ಯೆ ಸಂಯೋಜಿಸಿದರು. ‘ವಿರಾಸತ್’ನಲ್ಲಿ ದೇಶಭಕ್ತಿಯ ಅಲೆ ಉಕ್ಕಿಸಿತು. ‘ಭಾರತ್ ಮಾತಾ ಕೀ ಜೈ ‘ ಘೋಷಣೆ ಕೂಗಿದರು.
ಶೇರ್ ಮೂಲಕ ‘ ನಿಮ್ಮೆಲ್ಲರ ಪ್ರೀತಿ ನಮ್ಮ ಜೊತೆ ಇರಲಿ’ ಎಂದು ಸಂದೇಶ ಸಾರಿದರು. ಮೇ ತೊ ಚುಂಡಾಡಿ ಒದಿ ತಾರಾ ನಾಮ್ ನಿ’ ಹಾಡಿನ ಮೂಲಕ “ಧೋಲಿವುಡ್’ (ಗುಜರಾತಿ ಸಿನಿಮಾ)ಗೆ ಕಾಲಿಟ್ಟ ಒಸ್ಮಾನ್ ಮೀರ್ ಹಾಡಿಗೆ ಸ್ಯಾಂಡಲ್ವುಡ್ ರಾಜ್ಯದ ಕೋಸ್ಟಲ್ವುಡ್ ಜನತೆ ತಲೆದೂಗಿದರು. ಧೋಲಿವುಡ್ ಹಾಗೂ ಬಾಲಿವುಡ್ ಹಿನ್ನೆಲೆ ಗಾಯಕರಾದ ಅವರು ೨೪ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಕಛೇರಿ ನೀಡಿದ್ದಾರೆ. ಅವರನ್ನು ‘ಸೌಹರ್ದತೆಯ ಸಂಕೇತ’ ಎಂದು ಉಲ್ಲೇಖಿಸಲಾಗುತ್ತದೆ. ಅರೇಬಿಯಾದಲ್ಲಿ ಹುಟ್ಟಿದ ಪ್ರಗಾಥ ಅಥವಾ ಮೇಳಗೀತೆಯಾದ ‘ಗಜಲ್’, ಹಿಂದೂ ಭಕ್ತಿರಸದ ‘ಭಜನ್’, ದೇಶದ ನೆಲದ ಸೊಗಡಿನ ‘ಜಾನಪದ’ ಹಾಗೂ ಭಾರತದ ‘ಶಾಸ್ತ್ರೀಯ ’ ಗಾಯನದಲ್ಲೂ ಒಸ್ಮಾನ್ ಮೀರ್ ಸ್ವರಮಾಧರ್ಯ ಹರಿಸಿದ್ದಾರೆ. ತಬಲಾದಲ್ಲಿ ಅಬ್ದುಲ್ ಮೀರ್ ಮತ್ತು ಅಯ್ಯುಬ್ ಮೀರ್, ಡೋಲಕ್ ನಲ್ಲಿ ಹಾರೂನ್ ಮೀರ್, ಒಕ್ಟೊವಾದಲ್ಲಿ ಸಾಫಿಲ್ ಮೀರ್, ಬಂಜೋದಲ್ಲಿ ನಜೀರ್ ಮೀರ್, ವಯೋಲಿನ್ ಪಿಂಟು ಭಾಯಿ, ಗಿಟಾರ್ ನಲ್ಲಿ ಉತ್ರ್ಷ್, ಕೀ ಬರ್ಡ್ ನಲ್ಲಿ ಚಂದನ್ ವಘೇಲಾ ಸಾಥ್ ನೀಡಿದರು. ಹೀರಂ ಖಾನ್ ಕರ್ಯಕ್ರಮ ನಿರೂಪಿಸಿದರು.