ಅಭಯ ಸೇವಾ ಫೌಂಡೇಶನ್ ವತಿಯಿಂದ ಡಿಸೆಂಬರ್ 19, 20 ಮತ್ತು 21 ರಂದು ನಡೆಯಲಿರುವ ಸೇವಾ ಸಂಕಲ್ಪ ಕಾರ್ಯಕ್ರಮದ ಪೋಸ್ಟರ್ ಅನಾವರಣ ಕಾರ್ಯಕ್ರಮ ನವೆಂಬರ್ 08 ರಂದು ನಡೆಯಿತು. ಉದ್ಯಮಿ ಇರ್ಮಾಡಿ ಜಯಪ್ರಸಾದ್ ಶೆಟ್ಟಿ, ಅಭಯ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಎಂ. ಬಿ. ಉಮೇಶ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಡಿ. ಚಂದ್ರಹಾಸ್ ರೈ ನಿಕಟಪೂರ್ವ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಕೆ. ಉಮೇಶ್ ಶೆಟ್ಟಿ, ಬಿಜೆಪಿ ಮುಖಂಡರಾದ ಬೇಳೂರು ರಾಘವೇಂದ್ರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷರಾದ ಸಂತೋಷ್ ಶೆಟ್ಟಿ, ಬಿಜೆಪಿ ಮಹಿಳಾ ಮುಖಂಡರಾದ ಕಾಂತಿ ಶೆಟ್ಟಿ, ಕನ್ನಡಪರ ಹೋರಾಟಗಾರ ಶಿವಾನಂದ ಶೆಟ್ಟಿ, ಆರ್.ಎಸ್.ಎಸ್ ಮುಖಂಡರಾದ ಸುರೇಶ್ ರವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಭಯ ಸೇವಾ ಫೌಂಡೇಶನ್ ಬಡವರ, ನೊಂದವರ ಸೇವೆ ಮಾಡಲು ಮತ್ತು ಸಂಸ್ಕೃತಿಯನ್ನು ಉಳಿಸಲು ಕಂಕಣಬದ್ಧವಾಗಿದ್ದು, ಕಳೆದ ವರ್ಷ ಸೇವಾ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾವಿರಾರು ಜನರಿಗೆ ಉಪಯೋಗವಾಗಿದೆ. ಈ ಸಲ ಕೂಡಾ ಶ್ರೀರಾಮ ಮಂದಿರ ಆಟದ ಮೈದಾನ ರಾಜಾಜಿನಗರದಲ್ಲಿ ಡಿಸೆಂಬರ್ 19, 20, 21 ರ 3 ದಿನಗಳ ಕಾಲ ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂಧಮುಕ್ತ ಸಮಾಜ ನಿರ್ಮಾಣ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪ್ರತಿಯೊಬ್ಬರಿಗೂ ಕಣ್ಣಿನ ತಪಾಸನೆ ಮಾಡಲಾಗುತ್ತಿದೆ. ಮಾದಕ ವಸ್ತುಗಳ ವಿರುದ್ಧ ಮತ್ತು ದುಶ್ಚಟಗಳಿಂದ ದೂರವಿರಲು ಯುವ ಜಾಗೃತಿ ಅಭಿಯಾನ, ನವದುರ್ಗಾ ದೀಪ ನಮಸ್ಕಾರ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಲಿದ್ದಾರೆ. 108 ಕಳಶ ಪೂಜೆ, ಹೋಮ, ಹವನ ನವದುರ್ಗೆಯ ಮಹತ್ವ ತಿಳಿಸುವ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಬ್ಯಾಗ್ ಹಾಗೂ ಕಣ್ಣಿನ ದೋಷ ಇರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುತ್ತದೆ. ಮೂರು ದಿನಗಳ ಕಾಲ ಭರತನಾಟ್ಯ, ಹುಲಿವೇಷ, ಭಜನೆ, ಯಕ್ಷಗಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ಅಭಯ ಸೇವಾ ಫೌಂಡೇಶನ್ ಸಂಸ್ಥೆಯು ಸ್ವಯಂ ಉದ್ಯೋಗಕ್ಕೆ ಯುವಕರಿಗೆ ಅವಕಾಶ ನೀಡುವುದು ಮತ್ತು ಬಡವರಿಗೆ ಆಸರೆಯಾಗುವುದು ಈ ಎಲ್ಲಾ ಸಾಮಾಜಿಕ ಕಾರ್ಯಗಳಿಗೆ ತಾವು ಸಹಕಾರ ಬೆಂಬಲ ನೀಡಿ ಕೈಜೋಡಿಸಬೇಕೆಂದು ಎಂ.ಬಿ ಉಮೇಶ್ ಶೆಟ್ಟಿಯವರು ಹೇಳಿದರು.








































































































