Author: admin
ಬನ್ನಾಡಿ ಗ್ರಾಮದ ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ 2022-25ರ ಸಾಲಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಇವರು ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿಯಾಗಿ ಪ್ರಭಾಕರ ಪೂಜಾರಿ ಉಪ್ಲಾಡಿ ಬಡಾಬೆಟ್ಟು, ಕೋಶಾಧಿಕಾರಿಯಾಗಿ ಉಪ್ಲಾಡಿ ಶ್ರೀಧರ್ ಆರ್ ಶೆಟ್ಟಿ ಹಾಗೂ ಸದಸ್ಯರಾಗಿ ಉಪ್ಲಾಡಿ ಗೋಪಾಲಕೃಷ್ಣ ಭಟ್, ಉಪ್ಲಾಡಿ ವೆಂಕಟರಮಣ ಭಟ್, ಶಿವಾನಂದ ನಾೈರಿ ಬಡಾಬೆಟ್ಟು, ದಿನೇಶ ತೆಂಕಬೆಟ್ಟು, ಚೈತ್ರಾ ಬಡಾಬೆಟ್ಟು ಮತ್ತು ಪಲ್ಲವಿ ಬಡಾಬೆಟ್ಟು ಇವರನ್ನು ಮುಂದಿನ 3 ವರ್ಷಗಳ ಅವಧಿಗೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ, ಸಹಾಯಕ ಆಯುಕ್ತರು (ಪ್ರಭಾರ), ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಉಡುಪಿ ಜಿಲ್ಲೆ ಇವರು ಆದೇಶಿಸಿರುತ್ತಾರೆ.
ಪೊವಾಯಿ ಕನ್ನಡ ಸೇವಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಆರ್ ಜಿ ಶೆಟ್ಟಿಯವರು ಮೂಲತಃ ಉಡುಪಿ ಜಿಲ್ಲೆಯ ಕಳತ್ತೂರು ಕೋರಂಟ್ ಗುತ್ತು ದಿ. ಗೋಪಾಲ ಎನ್ ಶೆಟ್ಟಿ ಹಾಗೂ ಕುತ್ಯಾರು ಪಣಿಮಾರು ಗುತ್ತು ದಿ. ದೇವಕಿ ಶೆಟ್ಟಿ ದಂಪತಿಗಳ ಸುಪುತ್ರರು. ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಎಳ್ಳೂರು ಕಸಬಾ ಇರಂದಾಡಿಯಲ್ಲಿ ಮುಗಿಸಿ ಪದವಿ ಶಿಕ್ಷಣವನ್ನು ಸಂತ ಮೇರಿ ಕಾಲೇಜು ಶಿರ್ವದಲ್ಲಿ ಮುಗಿಸಿದರು. ಕಾನೂನು ಪದವಿಯನ್ನು ಜೆ.ಸಿ ಲಾ ಕಾಲೇಜು ವಿಲೇಪಾರ್ಲೆ ಇಲ್ಲಿ ಪೂರೈಸಿದರು. ಕಾಲೇಜು ಜೀವನದಲ್ಲೇ ತನ್ನಲ್ಲಿರುವ ಪ್ರತಿಭೆಯನ್ನು ತೋರ್ಪಡಿಸಿದ ಇವರು ಸಂತ ಮೇರಿ ಹೈಸ್ಕೂಲ್ ಎನ್.ಎಸ್.ಎಸ್ ಗ್ರೂಫ್ ನಾಯಕರಾಗಿ, ಜೆ.ಸಿ ಲಾ ಕಾಲೇಜು ವಿಲೇಪಾರ್ಲೆ ಮುಂಬಯಿ ಇಲ್ಲಿ ಕ್ರೀಡಾ ಕಾರ್ಯದರ್ಶಿಯಾಗಿ ಅಂದೇರಿ ಕೋರ್ಟು ನ್ಯಾಯವಾದಿ ಬಾರ್ ಅಸೋಸಿಯೇಶನ್ ನ 2 ವರ್ಷ ಜತೆ ಕಾರ್ಯದರ್ಶಿಯಾಗಿ, 2 ವರ್ಷ ಪ್ರದಾನ ಕಾರ್ಯದರ್ಶಿಯಾಗಿ, 5 ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ ಅನುಭವವನ್ನು ಹೊಂದಿದ್ದಾರೆ. ಕನ್ನಡ ಸೇವಾ ಸಂಘ ಪೊವಾಯಿ ಯ ಉಪಾಧ್ಯಕ್ಷರಾಗಿ ಸ್ಮರಣ…
ಭಾರತ ಸರಕಾರದ ಮಾನ್ಯತೆ ಪಡೆದಿರುವ ಸ್ವರ್ದಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆ ಭಾಗ್ಯೆಶ್ ರೈ ಸಾರಥ್ಯದ ವಿದ್ಯಾಮಾತಾ ಅಕಾಡೆಮಿ ಇದರ ಚೊಚ್ಚಲ ಶಾಖೆ ಸೆ. 28 ರಂದು ಸುಳ್ಯ ರಥಬೀದಿಯಲ್ಲಿನ ಟಿ.ಎ.ಪಿ.ಸಿ.ಎಂ.ಎಸ್. ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲ್ಲಿದೆ. ವಿದ್ಯಾಮಾತಾ ಇದರ ಮಾತೃ ಸಂಸ್ಥೆ ವಿದ್ಯಾಮಾತ ಫೌಂಡೇಶನ್ ಈಗಾಗಲೇ 3 ರಾಜ್ಯಮಟ್ಟದ ಉದ್ಯೋಗ ಮೇಳ, ಸುಮಾರು 500 ಕ್ಕೂ ಹೆಚ್ಚು ನೇರ ಉದ್ಯೋಗ ಸಂದರ್ಶನಗಳ ಮೂಲಕ 5000 ಕ್ಕೂ ಮಿಕ್ಕಿದ್ದ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವಲ್ಲಿ ಸಫಲತೆ ಕಂಡಿದೆ. ಕರಾವಳಿಯಲ್ಲಿ ಸ್ವರ್ದಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ತರಬೇತಿ ನೀಡಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲೂ ಸಂಸ್ಥೆಯ ಶ್ರಮದ ಜೊತೆಗೆ ವಿದ್ಯಾರ್ಥಿಗಳ ಪ್ರಯತ್ನ ಸಾಕಾಷ್ಟಿದೆ. ಅಕಾಡೆಮಿಯ ವೈಶಿಷ್ಟತೆಗಳು : 20 ಕ್ಕೂ ಹೆಚ್ಚು ವಿವಿಧ ಸ್ವರ್ದಾತ್ಮಕ ಪರೀಕ್ಷೆಗಳಿಗೆ 6 ತಿಂಗಳ ಅವಧಿಯಲ್ಲಿ ಏಕಕಾಲದಲ್ಲಿ ತರಬೇತಿ ಪಡೆಯುವ…
ಪ್ರಕೃತಿಯನ್ನು ಮಾತೆಯನ್ನಾಗಿ ಆರಾಧಿಸುತ್ತಾ ಬಂದಿರುವ ಪರಂಪರೆ ನಮ್ಮದು. ಪ್ರಕೃತಿಯಲ್ಲೇ ಹುಟ್ಟಿ ಪ್ರಕೃತಿಯಲ್ಲೇ ಲೀನವಾಗುವ ಎಂಬತ್ತ ನಾಲ್ಕು ಲಕ್ಷ ಜೀವರಾಶಿಯ ಬಾಳು ಅವ್ಯಕ್ತವಾದುದು. ಪಂಚಭೂತಗಳಿಂದ ಆವೃತವಾಗಿರುವ ಪ್ರಕೃತಿಯ ಹಂಗು-ಋಣದಲ್ಲಿ ಮತ್ತು ಪ್ರಕೃತಿ ಮಾತೆಗೆ ಕೃತಜ್ಞರಾಗಿರಬೇಕಾಗಿರುವುದು ಇಲ್ಲಿನ ಜೀವಿಗಳ ಪರಮ ಕರ್ತವ್ಯ. ನಿಸರ್ಗದ ಎಲ್ಲಾ ಜೀವಿಗಳಲ್ಲಿ ತನ್ನ ಬುದ್ಧಿಮತ್ತೆ, ವಿವೇಚನೆಯಿಂದ ಉಳಿದ ಜೀವಿಗಳಿಗಿಂತ ವಿಶಿಷ್ಟ ಮತ್ತು ಭಿನ್ನನಾಗಿರುವ ಮಾನವನ ಪ್ರಕೃತಿಯೊಂದಿಗಿನ ಒಡನಾಟ ಪ್ರಸ್ತುತ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ಪ್ರಶ್ನಿಸುವ ಹಂತಕ್ಕೆ ಬಂದು ನಾವಿಂದು ನಿಂತಿದ್ದೇವೆ. ಪ್ರಕೃತಿಯ ವೈಚಿತ್ರ್ಯ, ಕೊಡುಗೆ ವರ್ಣನೆಗೆ ಸಿಗುವಂತಹುದಲ್ಲ, ಉಪಮೆಗೂ ನಿಲುಕುವಂತಹುದಲ್ಲ. ಪ್ರಕೃತಿ ಏನು ತಾನೇ ಕೊಟ್ಟಿಲ್ಲ. ವಾಸಿಸಲು ನಿರ್ಮಲ ಭೂಮಿ, ಉಸಿರಾಡಲು ಪರಿಶುದ್ಧ ಗಾಳಿ, ಕುಡಿಯಲು ಶುದ್ಧ ನೀರು, ನಿಸರ್ಗದತ್ತ ಆಹಾರ ವೆೃವಿಧ್ಯ… ಹೀಗೆ ನಾವೆಲ್ಲರೂ ಸಮಗ್ರವಾಗಿ ಬದುಕಲು ಪೂರಕ, ಪ್ರೇರಕವಾದ ಸುಂದರ ವ್ಯವಸ್ಥೆಯನ್ನು ಈ ಪ್ರಕೃತಿ ರೂಪಿಸಿಕೊಟ್ಟಿದೆ. ಇಂಥ ಪ್ರಕೃತಿ ನಮಗೆಲ್ಲರಿಗೂ ಮಾತೃ ಸಮಾನ. ಹಾಗೆಂದು ನಾವು ನಮ್ಮ ನಿಸರ್ಗವನ್ನು ಹಬ್ಬಹರಿದಿನಗಳ ಆಚರಣೆ ಸಂದರ್ಭದಲ್ಲೋ ಪೂಜಿಸುತ್ತೇವೆ ಮತ್ತು…
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಮಾಚ್೯ 7 ರಂದು ಸೋಮವಾರ ಮಧ್ಯಾಹ್ನ 11 ಗಂಟೆಗೆ ಬಂಟ್ಸ್ ಹಾಸ್ಟೇಲ್ ಬಳಿಯ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಲಿದೆ. ಈ ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ವಹಿಸಲಿದ್ದಾರೆ. ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಚೆಕ್ ಗಳನ್ನು ವಿತರಿಸಲಾಗುವುದು. ಮುಖ್ಯ ಅತಿಥಿಗಳಾಗಿ ಮಂಗಳೂರು ಪೊಲೀಸ್ ಆಯುಕ್ತರಾದ ಎನ್. ಶಶಿ ಕುಮಾರ್, ಗೌರವಾನ್ವಿತ ಅತಿಥಿಯಾಗಿ ಮುಂಬಯಿ ವಿ.ಕೆ.ಗ್ರೂಪ್ ನ ಚೆಯರ್ ಮೆನ್ ಕೆ.ಎಂ. ಶೆಟ್ಟಿ ಮಧ್ಯಗುತ್ತು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ, ರಾಷ್ಟ್ರಪತಿಗಳ ಸೇವಾ ಪದಕ ಪುರಸ್ಕೃತ ವಿಜಯ ಕಾಂಚನ್ ಬೈಕಂಪಾಡಿ, ಸಂಸ್ಕಾರ ಭಾರತಿ ಮಂಗಳೂರು ಇದರ ಅಧ್ಯಕ್ಷ ಕೆ ಪುರುಷೋತ್ತಮ ಭಂಡಾರಿ ಅಡ್ಯಾರ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್…
ಚಂದ್ರನ ಅಂಗಳ ನೋಡಿದ್ದಾಯ್ತು. ಈಗ ಸೂರ್ಯನತ್ತ ಇಸ್ರೋ ಕಣ್ಣುನೆಟ್ಟಿದೆ! ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ನೆಲೆ ನಿಂತಿದೆ. ಈಗಾಗಲೇ ಅದು ತನ್ನ ಕಾರ್ಯಾಚರಣೆಯನ್ನೂ ಶುರುಮಾಡಿದೆ. ಈ ಸಾಧನೆಯು ಈಗ ಭಾರತದ ನಿರೀಕ್ಷೆಗಳನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇದಾದ ನಂತರ ಭಾರತದ ಮೊದಲ ಸೋಲಾರ್ ಮಿಷನ್ ‘ಆದಿತ್ಯ ಎಲ್ 1’ ಅನ್ನು ಇಸ್ರೋ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಈ ಮೂಲಕ ಸೂರ್ಯನ ಸಂಶೋಧನೆಗೆ ಮುಂದಾಗುತ್ತಿದೆ. ಸೂರ್ಯನ ಮೇಲೆ ಮಾತ್ರವಲ್ಲ; ಶುಕ್ರ, ಮತ್ತೂಮ್ಮೆ ಮಂಗಳ, ಗಗನಯಾತ್ರಿಗಳೊಂದಿಗೆ ಬಾಹ್ಯಾಕಾಶಕ್ಕೆ ಪಯಣ ಬೆಳೆಸುವುದು ಹೀಗೆ ಹಲವು ಯೋಜನೆಗಳನ್ನು ಮುಂದೊಂದು ದಶಕದಲ್ಲಿ ಕಾರ್ಯರೂಪಕ್ಕೆ ತರುವ ಗುರಿಯನ್ನು ಭಾರತದ ವಿಜ್ಞಾನಿಗಳು ಹೊಂದಿದ್ದಾರೆ. ಇದಕ್ಕಾಗಿ ಸಿದ್ಧತೆಗಳು ಈಗಿನಿಂದಲೇ ನಡೆದಿದೆ. ಚಂದ್ರನ ಮೇಲೆ ಬೀಡುಬಿಟ್ಟ ‘ವಿಕ್ರಂ’ ಮತ್ತು ‘ಪ್ರಗ್ಯಾನ್’ ನೀಡುವ ಮಾಹಿತಿಗಳನ್ನು ಕಲೆಹಾಕಿ, ಅವುಗಳ ವಿಶ್ಲೇಷಣೆ ಮಾಡಬೇಕಿದೆ. ಅಗತ್ಯಬಿದ್ದರೆ ಚಂದ್ರಯಾನ-4 ಕೈಗೆತ್ತಿಕೊಳ್ಳಬೇಕಾಗುತ್ತದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮೇಲೆ ಜವಾಬ್ದಾರಿಗಳನ್ನೂ ಹೆಚ್ಚಿಸಿದೆ. ಅದನ್ನು ಇಷ್ಟೇ ಚಾಕಚಕ್ಯತೆಯಿಂದ ನಿಭಾಯಿಸುವ ಹೊಣೆ ವಿಜ್ಞಾನಿಗಳ…
ಯುವ ಬಂಟರ ಸಂಘ ಗ್ರಾಮ ಸಮಿತಿ ದರೆಗುಡ್ಡೆ ಇದರ 12ನೇ ಮಾಸಿಕ ಸಭೆಯು ದರೆಗುಡ್ಡೆ ಮಿತ್ತ ಬೆಟ್ಟು ಪ್ರೇಮ ಶೆಟ್ಟಿ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯುವ ಬಂಟರ ಸಂಘ ಮೂಡುಬಿದರೆ ಇದರ ಅಧ್ಯಕ್ಷರಾದ ಜಯಕುಮಾರ್ ಶೆಟ್ಟಿ, ಯುವ ಬಂಟರ ಸಂಘ ಗ್ರಾಮ ಸಮಿತಿ ದರೆಗುಡ್ಡೆ ಇದರ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ಶೆಟ್ಟಿ, ಶೃತಿ ಶೆಟ್ಟಿ, ಸುಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ, ರಾಜೇಶ್ ಶೆಟ್ಟಿ, ರಘುನಾಥ್ ಶೆಟ್ಟಿ, ಮೋಹನ್ ಶೆಟ್ಟಿ, ಪ್ರತಿಕ್ಷ ಶೆಟ್ಟಿ, ಶ್ರೀಯಾ ಶೆಟ್ಟಿ, ದೀಕ್ಷಾ ಶೆಟ್ಟಿ, ಸುನಿಲ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ವಿಶೇಷ ಮನವಿ ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಲಸೋಪರ ಗ್ಯಾಲಕ್ಸಿ ಅಂಡ್ ರೀಜೆನ್ಸಿ ಗ್ರೂಪ್ ಆಫ್ ಹೋಟೆಲ್ಸ್ ಇದರ ಆಡಳಿತ ನಿರ್ದೇಶಕ ಶ್ರೀ ಶಶಿಧರ ಕೆ. ಶೆಟ್ಟಿ ಇನ್ನಂಜೆ ಅವರನ್ನು ಒಕ್ಕೂಟದ ಮಹಾ ಪೋಷಕರಾಗಿ ಸೇರ್ಪಡೆ ಗೊಂಡಿದ್ದಾರೆ. ನಮ್ಮ ಹೆಮ್ಮೆಯ ಬಂಟ ಸಮಾಜದ ಸುಪುತ್ರ ಶ್ರೀ ಶಶಿಧರ ಕೆ. ಶೆಟ್ಟಿಯವರು ಇತ್ತೀಚೆಗೆ ತಮ್ಮ 25ನೆ ವರ್ಷದ ವೈವಾಹಿಕ ಜೀವನದ ಸಂಭ್ರಮ ಆಚರಿಸಿದ್ದರು. ಮುಂಬಯಿ ಬಂಟರ ಸಂಘದಲ್ಲೂ ಸಕ್ರಿಯರಾಗಿರುವ ಶ್ರೀಯುತರು ಬಂಟ ಸಮಾಜದ ಏಳಿಗೆಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ.
ಹೌದು ಧರೆಯಲ್ಲಿ ಮಿಂಚಬೇಕಿದ್ದ ನಕ್ಷತ್ರವೊಂದು ಸ್ವರ್ಗದ ಪಾಲಾಗಿದೆ. ಸೂರ್ಯನು ಬೇಸರದಿ ಮೋಡದ ಮರೆಗೆ ಸರಿದು ಹೋಗಿದ್ದಾನೆ. ಹೊರಗಡೆ ದೋ ಎನ್ನುವ ಮಳೆಯ ನಡುವೆ “ಪ್ರಕಾಶ” ಕೂಡ ಮರೆಯಾಗಿದ್ದಾನೆ. ನಿಜ.. ಆಕಾಶವೂ ಕೂಡ ಇಂದು ಬಿಕ್ಕಿ ಬಿಕ್ಕಿ ಅಳುತ್ತಿದೆ. ಮರಣವನ್ನು ಯಾರೂ ನೋಡಿಲ್ಲ. ಬಹುಶಃ ಅದು ಸುಂದರವಾಗಿರಬಹುದು.. ಏಕೆಂದರೆ, ಒಮ್ಮೆ ಅದನ್ನು ಭೇಟಿಯಾಗಲು ಹೋದವರು ಮತ್ತೆ ಜೀವಿಸಲು ಮರೆತುಬಿಡುತ್ತಾರೆ. ನಿನಗೆ ಅದನ್ನು ನೋಡುವ ಆಸೆಯಾಯಿತೆ ? ಆದರೆ ನೀ ಹೋಗುವಾಗ ನಿನ್ನ ಮುದ್ದಿನ ಮಗಳು ಕುಶಿಯ ಮುಖ ನಿನ್ನ ಎದುರು ಬರಲಿಲ್ಲವೇ? ಆಕೆ ಕರೆಯುವ ಪಪ್ಪ ಎಂಬ ಮುದ್ದಿನ ಧ್ವನಿ ಕೂಡ ಕೇಳಿಸಲಿಲ್ಲವೇ? ತುಂಬಿದ ಸಂಸಾರದ ಹೊಣೆಗಾರಿಕೆಯ ಅರಿವಿರಲಿಲ್ಲವೇ? ನಿನ್ನ ಹಿಂದೆ ನಿನ್ನ ಹೆಗಲಾಗಿ ನಿಂತಿರುವ ಸಿಬ್ಬಂದಿಗಳ ಅಣ್ಣ ಎಂಬ ಕರೆ ಕೇಳಲಿಲ್ಲವೇ? ನಿನ್ನ ಒಡಹುಟ್ಟಿದವರ ಮಮತೆ ನಿನ್ನನ್ನು ಕಟ್ಟಿ ಹಾಕಲಿಲ್ಲವೇ? ಜೀವಕ್ಕೆ ಜೀವ ನೀಡುವ ನಿನ್ನ ಗೆಳೆಯರ ನಗು ನಿನಗೆ ಕೇಳಿಸಲಿಲ್ಲವೇ? ನಿನ್ನ ಇಷ್ಟದ ಬಿರಿಯಾನಿಯ ಸ್ವಾದದ ನೆನಪು ಬರಲಿಲ್ಲವೇ? ನೀನೇ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸಮಾಜ ಕಲ್ಯಾಣ ಕಾರ್ಯಕ್ರಮ ಮೂಲ್ಕಿ ಬಳಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಪ್ರವೀಣ ಭೋಜ ಶೆಟ್ಟಿ ಆಡಳಿತ ಕಚೇರಿಯ ಆವರಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಸಭಾಪತಿ ಯು.ಟಿ. ಖಾದರ್ ಅವರು, “ನಮ್ಮ ದೇಶ ಬಲಿಷ್ಠವಾಗಲು ನಾವು ಶಾಸಕರು, ಮಂತ್ರಿಗಳು ಬಲಿಷ್ಠರಾದರೆ ಸಾಲದು, ಎಸಿ ರೂಮ್ ನಲ್ಲಿ ಕೂತ ಅಧಿಕಾರಿಗಳು ಬಲಿಷ್ಠರಾದರೆ ಸಾಲದು, ಕ್ಲಾಸ್ ರೂಮಲ್ಲಿ ಕೂತಿರುವ ವಿದ್ಯಾರ್ಥಿಗಳು ಜ್ಞಾನದಲ್ಲಿ ಬಲಿಷ್ಠರಾದರೆ ಮಾತ್ರ ದೇಶ ಬಲಿಷ್ಠವಾದಂತೆ. ಮಕ್ಕಳು ಬಡತನದಲ್ಲಿ ಹುಟ್ಟಿ ಬೆಳೆಯಬಹುದು, ಆದರೆ ಇಂತಹ ಸಂಘಟನೆಗಳು ಹಮ್ಮಿಕೊಳ್ಳುವ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡು ಸಮಾಜಕ್ಕೆ ನಿಮ್ಮಿಂದಾದ ಸೇವೆ ಸಲ್ಲಿಸಬೇಕು. ಬಂಟ ಸಮಾಜ ಎಲ್ಲಾ ಜಾತಿ, ಧರ್ಮದ ಜನರನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವ ಸಮಾಜ. ಭೂ ಮಸೂದೆಯಲ್ಲಿ ಆಸ್ತಿ ಪಾಸ್ತಿ ನಷ್ಟವಾದರೂ ವಿಚಲಿತರಾಗದೆ ಎದ್ದು ನಿಂತವರು ಬಂಟರು” ಎಂದರು. ಬಳಿಕ ಮಾತಾಡಿದ ಒಕ್ಕೂಟದ ಮಹಾದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ…