Author: admin

ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 24, 25 ಹಾಗೂ 26ರಂದು ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ನಮ್ಮ ಕಂಬಳ ಕಾರ್ಯಕ್ರಮದ ಪೂರ್ವಭಾವಿ ಸಭೆ ಪುತ್ತೂರಿನ ಶಾಸಕ ಶ್ರೀ ಅಶೋಕ್ ರೈ ರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಅಶೋಕ್ ರೈ ಅವರು ಮಾತನಾಡಿ, ಕರಾವಳಿ ಭಾಗದಲ್ಲಿ ಮಾತ್ರ ನಡೆಯುತ್ತಿದ್ದ ನಮ್ಮ ಕಂಬಳವನ್ನು ಪ್ರಪ್ರಥಮ ಬಾರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆಯೋಜನೆ ಮಾಡಿದ್ದೇವೆ. ಕಂಬಳವನ್ನು ಯಶಸ್ವಿಗೊಳಿಸೋಣ. ಸರ್ವರ ಸಹಕಾರ ಅತ್ಯಗತ್ಯ ಎಂದರು. ಈ ಸಂಧರ್ಭದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಶ್ರೀ ಎಂ ಮುರಳೀಧರ್ ಹೆಗ್ಡೆ, ಜಯಕರ್ನಾಟಕ ಸಂಘಟನೆಯ ಶ್ರೀ ಗುಣರಂಜನ್ ಶೆಟ್ಟಿ, ಬೆಂಗಳೂರು ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಹಾಗೂ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಗುರುಕಿರಣ್ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯರು ಹಾಗೂ ಕಂಬಳದ ಅಭಿಮಾನಿಗಳು ಉಪಸ್ಥಿತರಿದ್ದರು.

Read More

ವಿಶ್ವ ಬಂಟರ ಸಮ್ಮೇಳನದ ಕಾರ್ಯಕ್ರಮಗಳ ಕುರಿತ ಐದನೇ ಪೂರ್ವಭಾವಿ ಸಭೆಯು ದಿನಾಂಕ 24/09/2023 ರಂದು ಬಂಟವಾಳದ ಬಂಟರ ಭವನದ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಕಾರ್ಯಕ್ರಮದ ಕರಪತ್ರವನ್ನು ಅನಾವರಣಗೊಳಿಸಲಾಯಿತು. ಸಭೆಯಲ್ಲಿ ತುಳುನಾಡಿನ ಪ್ರತಿಷ್ಠಿತ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಇವರನ್ನು ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ನೂತನ ಪೋಷಕರಾಗಿ ಸೇರ್ಪಡೆಯಾದ ಶ್ರೀ ಸುಧಾಕರ್ ಪೂಂಜ, ಶ್ರೀ ಜಗನ್ನಾಥ್ ಚೌಟ, ಶ್ರೀ ಲೋಕೇಶ್ ಶೆಟ್ಟಿ ಮತ್ತು ಶ್ರೀ ಸುರೇಶ್ ರೈ ಮಕರಜ್ಯೋತಿ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿಯವರನ್ನು ಬಂಟರ ಸಂಘ ಬಂಟ್ವಾಳ ತಾಲೂಕಿನ ಅಧ್ಯಕ್ಷ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಶ್ರೀ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ ಹಾಗೂ ಕಾರ್ಯದರ್ಶಿ ಶ್ರೀ ಜಗನ್ನಾಥ್ ಚೌಟರು ಪ್ರಿತಿಪೂರ್ವಕವಾಗಿ ಸನ್ಮಾನಿಸಿದರು.…

Read More

ಕೆಲ ತಿಂಗಳುಗಳ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ)ದ ಸಭಾ ಕಾರ‍್ಯಕ್ರಮದ ವೇದಿಕೆಯಲ್ಲಿದ್ದ ದೇಶದ ಪ್ರತಿಷ್ಠಿತ ಬಂಟ ಉದ್ಯಮಿಯೊಬ್ಬರು ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ನಿಸ್ವಾರ್ಥ ಸಮಾಜ ಸೇವೆಯನ್ನು ಶ್ಲಾಘಿಸಿ ಒಕ್ಕೂಟದ ಸಮಾಜಸೇವೆಗೆ 50 ಲಕ್ಷ ರೂ. ದೇಣಿಗೆ ನೀಡುವುದಾಗಿ ನೆರೆದ ಜನಸ್ತೋಮದ ಮುಂದೆ ಘೋಷಿಸಿ ನುಡಿದಂತೆ ನಡೆದಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿ ವರ್ಷವೂ ಒಕ್ಕೂಟಕ್ಕೆ 50 ಲಕ್ಷ ರೂಪಾಯಿಯನ್ನು ನೀಡುವುದಾಗಿ ಹೃದಯ ತುಂಬಿ ಹೇಳಿದರು. ಮುಂದೆ, ಒಕ್ಕೂಟವು ಸ್ವಂತ ಜಾಗ ಖರೀದಿಸಿ ಬಹುಮಹಡಿ ಕಾಂಪ್ಲೆಕ್ಸ್ ಕಟ್ಟಿಸಿ ಲಾಭ ಗಳಿಕೆ ಮಾಡಿ ಬಂದ ಹಣದಲ್ಲಿ ಸಮಾಜಸೇವೆ ಮಾಡಬೇಕೆಂದು ಹೇಳಿದರು. ಅದಕ್ಕೆ ಕೂಡಾ ತಾನು ಗರಿಷ್ಠ ಮಟ್ಟದಲ್ಲಿ ಆರ್ಥಿಕ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅವರೇ ಪ್ರಸಿದ್ಧ ಉದ್ಯಮಿ ದೇಶದ ಪ್ರತಿಷ್ಠಿತ ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್‌ನ ಚೇರ್‌ಮೆನ್ ಮಂಜೇಶ್ವರ ಮೂಲದ ಸದಾಶಿವ ಕೆ. ಶೆಟ್ಟಿ. ನಿಸ್ವಾರ್ಥ ಸಮಾಜಸೇವಕರಾಗಿರುವ ಸದಾಶಿವ ಕೆ. ಶೆಟ್ಟಿ ಅವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬಳಿಯ ಕನ್ಯಾನದ ಕೂಳೂರಿನ ಫಕೀರ ಶೆಟ್ಟಿ…

Read More

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ಅವರನ್ನು ಮಂಗಳೂರಿನ ಡಾ. ಎ. ಸದಾನಂದ ಶೆಟ್ಟಿ ಅಭಿನಂದನಾ ಸಮಿತಿ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿಯವರು ಅಭಿನಂದನೆಯ ನುಡಿಗಳನ್ನಾಡಿ, ಸದಾನಂದ ಶೆಟ್ಟಿ ಅವರ ಯಶಸ್ಸಿನ ಹಿಂದೆ ಕಠಿನ ಪರಿಶ್ರಮ ಪ್ರಾಮಾಣಿಕತೆ ಇದೆ. ಆ ಮೂಲಕ ಅರ್ಹವಾಗಿಯೇ ಕುವೆಂಪು ವಿ.ವಿ. ಗೌರವ ಡಾಕ್ಟರೆಟ್ ನೀಡಿ ಗೌರವಿದೆ. ಶ್ರೀದೇವಿ ಶಿಕ್ಷಣ ಟ್ರಸ್ಟ್‌ನ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಎಲ್ಲಾ ವಿಧದ ಕ್ರೀಡೆಗಳಿಗೆ ಪ್ರೋತ್ಸಾಹಕರಾಗಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಘಟನಾ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಾತಿ, ಮತಗಳ ಭೇದವಿಲ್ಲದೆ ಎಲ್ಲರಿಗೂ ಸ್ಪಂದಿಸುವ ಮೂಲಕ ಆದರ್ಶಪ್ರಾಯರಾಗಿದ್ದು, ತುಳುನಾಡಿನ ನಾಯಕನ ಸ್ಥಾನದಲ್ಲಿ ಸದಾನಂದ ಶೆಟ್ಟಿಯವರನ್ನು ಗುರುತಿಸಬಹುದಾಗಿದೆ ಎಂದರು. ಡಾ. ಎ. ಸದಾನಂದ ಶೆಟ್ಟಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಈ ಅಭಿನಂದನೆಯಿಂದ ಮನಸ್ಸು ಹೆಚ್ಚಿದ…

Read More

ನಮ್ಮ ಹಿಂದೂ ಧರ್ಮದಲ್ಲಿ ಹಬ್ಬಗಳಿಗೆ ಮತ್ತು ದೇವಿ ದೇವತೆಗಳಿಗೆ ಹೆಚ್ಚಿನ ಮಹತ್ವವಿದ್ದು ಹಬ್ಬದ ಸಂಭ್ರಮದಲ್ಲಿ ದೇವತಾ ಆರಾಧನೆ ಮುಖ್ಯವಾಗಿರುತ್ತದೆ. ಆಗಸ್ಟ್ ತಿಂಗಳಲ್ಲಿ ಬರುವ ಪ್ರಮುಖ ಹಬ್ಬವೆಂದರೆ ವರಮಹಾಲಕ್ಷ್ಮೀ ಹಬ್ಬವಾಗಿದ್ದು ಧನ ಪ್ರಾಪ್ತಿಗೆ ಸಂಪತ್ತಿನ ಅದಿಧೇವತೆಯಾದ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಆ ಮನೆಯಲ್ಲಿ ಲಕ್ಷ್ಮೀ ನೆಲೆ ನಿಲ್ಲಲಿ ಮತ್ತು ಅವರ ಆಶೀರ್ವಾದ ಮನೆಯವರ ಮೇಲಿರಲಿ ಎಂಬುದೇ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ.ಇಂದಿನ ಜೀವನದಲ್ಲಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದೇ ಇದೆ. ಜೀವನದಲ್ಲಿ ಹಣವೊಂದೇ ಮುಖ್ಯವಲ್ಲದೇ ಇದ್ದರೂ ನಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಾವು ಹಣವನ್ನು ಅವಲಂಬಿಸಿದ್ದೇವೆ. ಆದ್ದರಿಂದ ಧನ ಕನಕಕ್ಕೆ ಪ್ರಮುಖ ದೇವತೆಯಾಗಿರುವ ಲಕ್ಷ್ಮೀಯ ಆರಾಧನೆಯನ್ನು ಮಾಡುವುದರಿಂದ ಲಕ್ಷ್ಮೀ ಕೃಪಾಕಟಾಕ್ಷಕ್ಕೆ ನಾವು ಪಾತ್ರರಾಗಬಹುದು ಮತ್ತು ಧಾರ್ಮಿಕ ವಿಧಿ ವಿಧಾನಗಳನ್ನು ಕೂಡ ಮನೆಯಲ್ಲಿ ಅನುಷ್ಠಾನಗೊಳಿಸಬಹುದು ಎಂಬುದು ಹಬ್ಬದ ಹಿಂದಿರುವ ಮುಖ್ಯ ಉದ್ದೇಶವಾಗಿದೆ.ಲಕ್ಷ್ಮೀ ಹಬ್ಬವನ್ನು ಮಾಡುವಾಗ ಮನೆಯಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆಯನ್ನು ನೀಡಬೇಕು. ಮನೆಯಲ್ಲಿ ಕಸ ತುಂಬಿದ್ದು ನೀವು ಲಕ್ಷ್ಮೀಯನ್ನು ಸ್ವಾಗತಿಸಿದರೆ ಆಕೆ ಖಂಡಿತ ನಿಮ್ಮ ಮನೆಯನ್ನು…

Read More

ಬದುಕಿಗೆ ಅರ್ಥವನ್ನು ಹುಡುಕುತ್ತಾ ಹೋದಾಗ ಪರವೂರಿನಲ್ಲಿ ನೆಲೆಸಿ ಊರಿಗೂ ಉಪಕಾರಿಯಾಗಿ ಸಾರ್ಥಕತೆ ಪಡೆದ ವ್ಯಕ್ತಿಗೆ ಹುಟ್ಟೂರಿನಲ್ಲಿಯೇ ಅಭಿನಂದಿಸುವ ಈ‌ ಕಾರ್ಯಕ್ರಮ ಶ್ಲಾಘನೀಯ. ಉಸಿರಾಡುವಿಕೆಯೇ, ಸುಖಾನುಭವ ಬದುಕಲ್ಲ. ತನ್ನ ಸಾಮಾಜಿಕ, ಆದ್ಯಾತ್ಮಿಕತೆಯೇ ಬದುಕು. ಜೀವನದಲ್ಲಿ ಅತ್ಯಂತ ಎತ್ತರದಲ್ಲಿರುವುದು ಭಗವಂತ.‌ ತನ್ನ ಜೊತೆ ಇತರರು ಉತ್ತಮವಾಗಿರಬೇಕೆಂದು ಬಯಸುವುದು ಸಾರ್ಥಕತೆ. ಜೀವನದ ನೆಮ್ಮದಿಯ ತಾಣ ಹುಟ್ಟೂರು. ಜೀವನದ ಎಲ್ಲಾ ಸೌಲಭ್ಯ ಊರಿಗೂ ವಿಸ್ತರಿಸಿದ ಸಾಮಾಜಿಕ ಚಿಂತನೆಯುಳ್ಳವರು. ಅಸಾಧಾರಣ ಸಾಧನೆ ಮಾಡಿದವರಿಗೆ ಸನ್ಮಾನ ನೀಡಲೇಬೇಕಾಗಿರುವುದು ಅಗತ್ಯ. ಸಾವಿರಾರು ಮಂದಿ ಬದುಕನ್ನು ಏಳಿಗೆಯತ್ತ ಕೊಂಡೊಯ್ದ ಪ್ರವೀಣ ಶೆಟ್ಟಿಯವರ ಕೀರ್ತಿ ಜಗದುದ್ದಗಲಕ್ಕೂ ಹೊರಹೊಮ್ಮಿದೆ ಎಂದು ಶ್ರೀ ಸುಬ್ರಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.ವಕ್ವಾಡಿ ಪ್ರವೀಣ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ವತಿಯಿಂದ ವಕ್ವಾಡಿ ಫಾರ್ಚೂನ್ ವಿಲೇಜ್ ಹೊಟೇಲ್ ಬಳಿ ಅದ್ಧೂರಿ ವೇದಿಕೆಯಲ್ಲಿ ಭಾನುವಾರ ಸಂಜೆ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಹುಟ್ಟೂರಿನ ಅಭಿನಂದನಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.…

Read More

ರಸ್ತೆ ಸುರಕ್ಷತೆ ಎಂಬುದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದ್ದು, ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಕಡಿವಾಣ ಹಾಕುವುದು ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಬಲುದೊಡ್ಡ ಸವಾಲಾಗಿದೆ. ಈ ಸಂಬಂಧ ಜಾಗತಿಕ ರಸ್ತೆ ಸುರಕ್ಷತೆಗಾಗಿನ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿರುವ ಜೀನ್‌ ಟಾಡ್‌ ಅವರೂ ಆತಂಕ ವ್ಯಕ್ತಪಡಿಸಿದ್ದು, ಪ್ರತಿನಿತ್ಯ ವಿಶ್ವಾದ್ಯಂತ ಸಂಭವಿಸುತ್ತಿರುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಕೈಗೊಳ್ಳುತ್ತಿರುವ ಕ್ರಮಗಳು ಪರ್ಯಾಪ್ತವಾಗಿಲ್ಲ ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಪ್ರತೀ ವರ್ಷ ವಿಶ್ವಾದ್ಯಂತ 13 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವ ಪ್ರತೀ ಹತ್ತು ಮಂದಿಯಲ್ಲಿ 9 ಮಂದಿಯ ಜೀವವನ್ನು ಉಳಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೆ, ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಪೈಕಿ ಮಕ್ಕಳು ಮತ್ತು 5-29 ವರ್ಷದೊಳಗಿನವರ ಸಂಖ್ಯೆಯೇ ಅಧಿಕ ಎಂಬುದು ಅತ್ಯಂತ ದುರದೃಷ್ಟಕರ ಸಂಗತಿ. ಇದೇ ವೇಳೆ ಭಾರತದಲ್ಲಿ ಪ್ರತೀ…

Read More

ಇಂಡಿಯನ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌ ಆಹಾರ್‌ ತನ್ನ ಬಹು ನಿರೀಕ್ಷೆಯ ಶೂನ್ಯ ಕಮಿಷನ್‌ ಆಧಾರಿತ ಫುಡ್‌ ಡೆಲಿವರಿ ಆ್ಯಪ್‌ “ವಾಯು’ ವನ್ನು ಅಂಧೇರಿ ಪೂರ್ವದ ಫೈವ್‌ ಸ್ಟಾರ್‌ ಹೊಟೇಲ್‌ ಲೀಲಾದಲ್ಲಿ ಬಿಡುಗಡೆಗೊಳಿಸಿತು. ಆಹಾರ್‌ ಮತ್ತು ಹೊಟೇಲ್‌ ಉದ್ಯಮದ ಇತರ ಪ್ರಮುಖ ಸಂಘಗಳ ಬೆಂಬಲದೊಂದಿಗೆ ಪುಣೆಯ ಪ್ರಮುಖ ತಂತ್ರಜ್ಞಾನ ಕಂಪೆನಿಯಾದ ಡೆಸ್ಟೆಕ್‌ ಹೊರೇ ಕಾದಿಂದ ನುರಿತ ಸೀರಿಯಲ್‌ ಟೆಕ್‌ ಉದ್ಯಮಿಗಳಾದ ಅನಿರುದ್ಧ ಕೋಟ್ಗಿರೆ ಮತ್ತು ಮಂದರ್‌ ಲಾಂಡೆ ಅವರು ವಾಯು ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದ್ದು, ನಟ, ಅನುಭವಿ ಹೊಟೇಲ್‌ ಉದ್ಯಮಿ ಸುನೀಲ್‌ ಶೆಟ್ಟಿ ಅವರನ್ನು ಆ್ಯಪ್‌ನ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ನೇಮಿಸಲಾಗಿದೆ. ಆಹಾರ್‌ ಅಧ್ಯಕ್ಷ ಸುಕೇಶ್‌ ಶೆಟ್ಟಿ ಮಾತಾನಾಡಿ, ಸಾಂಪ್ರದಾಯಿಕವಾಗಿ ನಮ್ಮ ಪೂರ್ವಜರು ತಮ್ಮದೇ ಆದ ರೀತಿಯಲ್ಲಿ ವ್ಯವಹಾರವನ್ನು ಮಾಡಿದರು. ತಮ್ಮ ಸಂಸ್ಥೆಗಳ ಖ್ಯಾತಿಯನ್ನು ಸಂಪೂರ್ಣ ಕಠಿನ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ನಿರ್ಮಿಸಿದರು. ಅದೇ ರೀತಿ ಕಿರಿಯ ತಲೆಮಾರುಗಳು ಸಹ ಅನೇಕ ನವೀನತೆಗಳೊಂದಿಗೆ ಸಮಂಜಸವಾದ ಬೆಲೆಯಲ್ಲಿ ರುಚಿಕರವಾದ ಆರೋಗ್ಯಕರ ಆಹಾರವನ್ನು ಒದಗಿಸುವ…

Read More

ಕನ್ನಡ ಸೇವಾ ಸಂಘದ ಕಟ್ಟಡದ ಎದುರಿನ ಮಾರ್ಗದ ಚೌಕಕ್ಕೆ ಪೇಜಾವರ ಶ್ರೀಗಳ ಹೆಸರನ್ನು ಮುಂಬಯಿ ನಗರ ಪಾಲಿಕೆಯ ನಗರ ಸೇವಕಿ ಶ್ರೀಮತಿ ಅಶ್ವಿನಿ ಆಶೋಕ್ ಮಾಟೆಕರ್ ಇವರ ಶಿಫಾರಸ್ಸಿನಂತೆ ಅನಾವರಣ ಗೊಳಿಸಿತು. ಚೌಕ ಉದ್ಘಾಟನೆಯನ್ನು ಕನ್ನಡ ಸೇವಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಆರ್ ಜಿ ಶೆಟ್ಟಿಯವರು ತೆಂಗಿನ ಕಾಯಿ ಹೊಡೆದು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಗರ ಸೇವಕಿಯ ಪತಿ ಅಶೋಕ್ ಮಾಟೆಕರ್ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ನಾಣಯರ ಗರಡಿ ಪ್ರಭಾಕರ ಶೆಟ್ಟಿ, ಕಯ್ಯಾರ ಗುತ್ತು ರಮೇಶ್ ಡಿ ರೈ, ಸುಧಾಕರ ಜಿ ಪೂಜಾರಿ, ಕಾರ್ಯದರ್ಶಿ ನಾಗರಾಜ ಗುರುಪುರ, ಕೋಶಾಧಿಕಾರಿ ಸಂದೇಶ ಶೆಟ್ಟಿ ಬೆಳ್ಳೆ, ರಾಜೇಶ್ ಆರ್ ಪೂಜಾರಿ, ಮಹಿಳಾ ಕಾರ್ಯಧ್ಯಕ್ಷೆ ಶ್ರೀಮತಿ ಶೋಭಾ ರಮೇಶ್ ರೈ, ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷೆ ಪ್ರಶಾಂತಿ ಡಿ ಶೆಟ್ಟಿ, ಮಹಿಳಾ ವಿಭಾಗದ ಸಲಹೆಗರಾದ ಶ್ರೀಮತಿ ಶೈಲ ಎಸ್ ಶೆಟ್ಟಿ. ಶ್ರೀಮತಿ ಜ್ಯೋತಿ ಆರ್ ಜಿ ಶೆಟ್ಟಿ, ಮಹಿಳಾ ಕಾರ್ಯದರ್ಶಿ ಶ್ರೀಮತಿ ರೇಖಾ…

Read More

ಹಬ್ಬಗಳ ಆಚರಣೆ ಕೇವಲ ಧಾರ್ಮಿಕತೆಗಳಿಗಷ್ಟೇ ಸೀಮಿತವಾಗಿರದೆ ಜೀವನದ ಸ್ವಾರಸ್ಯ ಹಾಗೂ ಪ್ರೀತಿ – ಬಾಂಧವ್ಯದ ಸಂಕೇತವೂ ಹೌದು. ಸಮೂಹ ಹಾಗೂ ಕುಟುಂಬದ ಹಿತ ಚಿಂತನೆಯು ಹಬ್ಬಗಳ ಮುಖ್ಯ ಆಶಯ. ಕುಟುಂಬ ಸಾಮರಸ್ಯದ ‌ಪ್ರತೀಕವಾಗಿ‌ ಬೆಳೆದು‌ ಬಂದ ಹಬ್ಬ ರಕ್ಷಾಬಂಧನ. ಶ್ರಾವಣ ಮಾಸ ಪ್ರಾರಂಭವಾಗುತ್ತಲೇ ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಶ್ರಾವಣ ಹುಣ್ಣುಮೆಯ ದಿನ ಆಚರಿಸುವ ಸೋದರ – ಸೋದರಿಯರ ಪವಿತ್ರ ಸಂಬಂಧವನ್ನು ಬೆಸೆಯುವ ಸಾಂಪ್ರದಾಯಿಕ ಹಬ್ಬ ರಕ್ಷಾಬಂಧನ ಅಥವಾ ರಾಖಿ ಹಬ್ಬ. ಪರಂಪರಾಗತವಾಗಿ ಆಚರಿಸಿಕೊಂಡು ಬರುವ ಹಬ್ಬ ಹರಿ ದಿನಗಳಲ್ಲಿ ಹಿರಿಯರು ಕೌಟುಂಬಿಕ ಬಾಂಧವ್ಯದ ಬೆಸುಗೆಗೆ ಕಂಡುಕೊಂಡ ಸಂಪ್ರದಾಯಗಳ ಆಚರಣೆಯ ಸಂಬಂಧಗಳನ್ನು ಗಟ್ಟಿಗೊಳಿಸಿವೆ. ಆತ್ಮೀಯ ಭ್ರಾತೃ ಸಂಬಂಧವನ್ನು ಭಾವ ಬಂಧದ ಮೂಲಕ ಬಂದಿಸುವ ಹಬ್ಬವೇ ರಕ್ಷಾ ಬಂಧನ. ಸಹೋದರರ ಯೋಗ ಕ್ಷೇಮ ಹಾರೈಸಿ, ತಮ್ಮ ರಕ್ಷಣೆಯ ಭಾರವನ್ನು ನೆನಪಿಸುವ ಹಬ್ಬವಿದು. ಅಣ್ಣ – ತಂಗಿಯರ ಬಾಂಧವ್ಯದ ಅನುಪಮ ಸಂಕೇತವಾಗಿರುವ ರಕ್ಷಾ ಬಂಧನದಂದು ಸಹೋದರಿಯರು ಸಹೋದರರ ಕೈಗೆ ರಾಖಿ ಕಟ್ಟುವುದೇ ಈ ಹಬ್ಬದ‌…

Read More