Author: admin
ಪ್ರಸಂಗ ಮುಹೂರ್ತ ಪೂಜೆ, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಕನ್ನಡ ಸಂಘ ಬಹರೈನ್ ಸಭಾಂಗಣದಲ್ಲಿ ನೆರವೇರಿತು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮ ಕೆ.ಭಂಡಾರಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭಕೋರಿದರು. ಅರ್ಚಕರಾದ ಶ್ರೀಕೃಷ್ಣ ಅಡಿಗ ಕದ್ರಿ, ಶ್ರೀ ಸತ್ಯ ಶಂಕರ ಬರೆ ಆಶೀರ್ವಚನ ನೀಡಿದರು. ಪಟ್ಲ ಸಂಭ್ರಮ 2023 ಮುಂಬರುವ ಅಕ್ಟೋಬರ್ 20 ಕ್ಕೆ ಅದ್ದೂರಿಯಾಗಿ ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಜರುಗಲಿದೆ. ಈ ವರ್ಷದ ಯಕ್ಷಗಾನ ಅಭ್ಯಾಸಕ್ಕೆ ಪ್ರಸಂಗ ಮುಹೂರ್ತವು ನೆರವೇರಿತು. ಬಹರೈನ್ ಸೌದಿಯ ಯಕ್ಷಗಾನ ಕಲಾವಿದರು, ಅತಿಥಿಕಲಾವಿದರನ್ನೊಳಗೊಂಡು ಅಭಿನವ ವಾಲ್ಮೀಕಿ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಯಕ್ಷಗಾನ ನಾಟ್ಯಗುರು ಶ್ರೀ ದೀಪಕ್ ರಾವ್ ಪೇಜಾವರ ನಿರ್ದೇಶನದಲ್ಲಿ ಪ್ರದರ್ಶನ ಕಾಣಲಿದೆ. ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರ ಸಿರಿಕಂಠದ ಭಾಗವತಿಕೆಯೊಂದಿಗೆ ತಾಯ್ನಾಡ ತೆಂಕುಬಡಗಿನ ಸುಪ್ರಸಿದ್ಧ ಕಲಾವಿದ ಶಶಿಕಾಂತ ಶೆಟ್ಟಿ ಕಾರ್ಕಳ , ಖ್ಯಾತ ಹಿರಿಯ ಕಲಾವಿದ ಶೇಖರ್ ಡಿ.ಶೆಟ್ಟಿಗಾರ್ ದುಬೈ, ಹಿಮ್ಮೇಳವಾದಕ ರೋಹಿತ್ ಉಚ್ಚಿಲ ಅತಿಥಿ ಕಲಾವಿದರಾಗಿ…
ಅಮೇರಿಕಾದ ಪ್ರತಿಷ್ಠಿತ ತುಳು ಸಂಸ್ಥೆ ಆಲ್ ಅಮೇರಿಕಾ ತುಳು ಅಸೋಸಿಯೇಷನ್ (ರಿ) AATA ದ ನೂತನ ಅಧ್ಯಕ್ಷರಾಗಿ ಫ್ಲೋರಿಡಾದ ಶ್ರೀಮತಿ ಶ್ರೀವಲ್ಲಿ ರೈ ಮಾರ್ಟೆಲ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. AATA ಸಂಸ್ಥೆಯ ವಾರ್ಷಿಕ ಬಿಸು ಪರ್ಬದ-2023 ಸಂದರ್ಭಕ್ಕೂ ಮುನ್ನ ಈ ಆಯ್ಕೆ ಪ್ರಕ್ರಿಯೆಯನ್ನು ಪ್ರತಿಜ್ಞಾ ವಿಧಿ ಸ್ವೀಕರಿಸುವುದರೊಂದಿಗೆ ಅಂತಿಮಗೊಳಿಸಲಾಯಿತು. ಅಂತರ್ಜಾಲ ತಾಣ ವೇದಿಕೆಯಲ್ಲಿ ನಡೆದ ಬಿಸು ಪರ್ಬ-2023 ಆಚರಣೆಯ ನೆನಪಲ್ಲಿ ಗೌರವ ಅತಿಥಿಯಾಗಿ ನಿಟ್ಟೆ ವಿಶ್ವವಿದ್ಯಾಲಯದ ತುಳು ಅಧ್ಯಯನ ಪೀಠದ ಮುಖ್ಯಸ್ಥೆ ಡಾ. ಸಾಯೀಗೀತ ಅವರು ಅಬ್ಬಕ್ಕ ಗೇನದ ಚಾವಡಿ ಹೆಸರಿನಲ್ಲಿ ತುಳು ಅಂತರ್ಜಾಲ ಗ್ರಂಥಾಲಯವನ್ನು ಉದ್ಘಾಟಿಸಿ ”ಜ್ಞಾನಸುಧೆಯು ದಶದಿಕ್ಕುಗಳಿಂದ ಹರಿದು ಬರಲಿ , ತುಳುವಿನ ಶ್ರೇಷ್ಠ ಜ್ಞಾನವು ವಿಶ್ವದೆಲ್ಲೆಡೆ ಪಸರಿಸಲಿ” ಎಂದು ಹಾರೈಸಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ಸಾಫ್ಟ್ವೇರ್ ಉದ್ಯಮಿ, ಎಂ ರಿಸಲ್ಟ್ ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಶೇಖರ್ ನಾಯ್ಕ್ ಮಾತನಾಡಿ, ”ಕಠಿಣ ಶ್ರಮ ಹಾಗೂ ಧ್ರಡ ನಿರ್ಧಾರ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ” ಎಂದರು. ಪ್ರಖ್ಯಾತ ಸಂಶೋಧಕ ಹಾಗೂ…
ವಕೀಲ ವೃತ್ತಿಯ ಜತೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ವಿಶೇಷ ವ್ಯಕ್ತಿಯೋರ್ವರನ್ನು ನಾವು ಪರಿಚಯಿಸುತ್ತಿದ್ದೇವೆ. ಸಾಮಾಜಿಕ ಸಂಘಟಕ, ಯಕ್ಷಸಾಧಕ, ಸತತ ಎರಡು ಬಾರಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಹಾಗೂ ಸದ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಮಜಿಬೈಲ್ ನ ಹಿರಿಮೆಯ ಗರಿ ನ್ಯಾಯವಾದಿ ಯಂ. ದಾಮೋದರ ಶೆಟ್ಟಿಯವರು ಮಂಜೇಶ್ವರದ ಮೂಡಂಬೈಲು ದಿ. ಲಕ್ಷಣ ಮತ್ತು ದಿ.ತಿಮ್ಮಕ್ಕ ದಂಪತಿಗಳ ಸುಪುತ್ರನಾಗಿ ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಮೂಡಂಬೈಲ್ ಶಾಲೆ, ಪ್ರೌಡ ಶಿಕ್ಷಣವನ್ನು ಮೀಯಪದವು ಶಾಲೆ ಮತ್ತು ಪದವಿಪೂರ್ವ ಶಿಕ್ಷಣವನ್ನು ಕೆನರಾ ಕಾಲೇಜು ಉರ್ವ ಹಾಗೂ ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜಿನಲ್ಲಿ ಪೂರೈಸಿದರು. ಜೀವನ ನಿರ್ವಹಣೆಗಾಗಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ದುಡಿದು ನಂತರ ಕಲಿತಂತಹ ಕಾನೂನು ಪದವಿಯನ್ನು ಸದುಪಯೋಗಪಡಿಸುವ ಉದ್ದೇಶದಿಂದ ವಕೀಲ ವೃತ್ತಿಯನ್ನು ತೊಡಗಿಸಿಕೊಂಡು ಓರ್ವ ಆದರ್ಶ ಕಾನೂನು ತಜ್ಞರಾಗಿ ಸೇವಾಕೈಂಕರ್ಯವನ್ನು ಮುಂದುವರಿಸುತ್ತಿದ್ದಾರೆ. ಯಕ್ಷ ಸಾಧನೆ : ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ಕಾಲೇಜು…
ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತಿದಿನ ಸಂಜೆ ರೋಗಿಗಳ ಜೊತೆಗಾರರಿಗೆ ಊಟ ನೀಡುವ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಪ್ರತೀ ವರ್ಷ ಒಂದು ತಿಂಗಳ 2,25,000 ರೂ. ದೇಣಿಗೆ ನೀಡುತ್ತಿದ್ದು, 2021ನೇ ಸಾಲಿನ ದೇಣಿಗೆಯ ಎರಡನೇ ಕಂತಿನ 1,75,000/- ರೂ. ಮೊತ್ತದ ಚೆಕ್ಕನ್ನು ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ನಡೆದ ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಸಮಾರಂಭದಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಹಸ್ತಾಂತರಿಸಿದರು. ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಆರ್ ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಮುಂಬೈ ಉದ್ಯಮಿಗಳಾದ ಕರುಣಾಕರ್ ಶೆಟ್ಟಿ ಮಧ್ಯಗುತ್ತು, ಆದರ್ಶ್ ಶೆಟ್ಟಿ, ಅಶೋಕ್ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಇಂದ್ರಾಳಿ ಜಯಕರ್ ಶೆಟ್ಟಿ ಮತ್ತು ಗಣ್ಯರು ಉಪಸ್ಥಿತರಿದ್ದರು. ಮೊಹಮ್ಮದ್ ಆರಿಫ್ ಮತ್ತು ಹಮೀದ್ ಅತ್ತೂರು ಚೆಕ್ ಸ್ವೀಕರಿಸಿದರು.
ನವರಾತ್ರಿ,ದಸರಾ, ಮಹಾನವಮಿ, ನಾಡಹಬ್ಬ, ವಿಜಯದಶಮಿ ಎಂದೆಲ್ಲಾ ಕರೆಯುವ ನವೋಲ್ಲಾಸದ ನವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯ ಸಂಭ್ರಮದೊಂದಿಗೆ ದೇಶದ ಹೆಚ್ಚಿನ ಕಡೆಗಳಲ್ಲಿ ಆಚರಿಸಲಾಗುತ್ತದೆ. ಅಶ್ವಯುಜ ಶುದ್ದ ಪ್ರತಿಪದೆಯಂದು ದೇವಿ ಆರಾಧನೆಯ ಕಲಶ ಸ್ಥಾಪನೆಯಾಗುತ್ತದೆ. ಜಗದ ಉದ್ದಾರಕ್ಕೆ ಕಾರಣೀಭೂತಳಾದ ಆದಿಶಕ್ತಿ, ಆದಿಮಾಯೆಯನ್ನು ಭಕ್ತಿಯಿಂದ ಪೂಜಿಸಿ ಮಾತೆಗೆ ದಿನಕ್ಕೊಂದು ಅಲಂಕಾರ ಮಾಡಿ ನೈವೇದ್ಯ ಅರ್ಪಿಸಿ, ಒಂಬತ್ತು ದಿನ ಆರಾಧಿಸಲ್ಪಡುವ ದುರ್ಗೆ ಇಚ್ಚಾಶಕ್ತಿ, ಕ್ರಿಯಾಶಕ್ತಿ, ಪ್ರೇರಕ ಶಕ್ತಿಯಾಗಿದ್ದಾಳೆ. ಪ್ರಥಮ ದಿನ ಶೈಲಾ ಪುತ್ರಿಯನ್ನು, ಎರಡನೆಯ ದಿನ ಬ್ರಹ್ಮಚಾರೀಣಿ ಪೂಜೆ, ತೃತೀಯ ದಿನ ಚಂದ್ರಘಂಟಾ, ಚತುರ್ಥ ದಿನ ಕೂಪ್ಮಾಂಡಾ ಸ್ವರೂಪವನ್ನು, ಪಂಚಮದಂದು ಸ್ಕಂದ ಮಾತಾ, ಆರನೆ ದಿನ ಷಷ್ಠಿ ಕಾತ್ಯಾಯಿನಿ, ಏಳನೆ ದಿನ ಸಪ್ತಮಿ ಕಾಳರಾತ್ರಿ, ಅಷ್ಟಮಿ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಯುದ್ಧದಲ್ಲಿ ವಿಜಯಿಯಾದುದರ ನೆನಪಿಗಾಗಿ ಗಜ, ಅಶ್ವಗಳ ಪೂಜೆ ನಡೆಸಲಾಗುತ್ತದೆ. ನವರಾತ್ರಿಯ ಆಚರಣೆಯಲ್ಲಿ ದಸರಾ ಉತ್ಸವದ ಸೊಬಗನ್ನು, ಸಾಂಸ್ಕೃತಿಕ ಮೆರುಗನ್ನು ಇನ್ನಷ್ಟು ಸಂಭ್ರಮದಿಂದ ಆಸ್ವಾದಿಸಲು ವೈಶಿಷ್ಟ್ಯ ರೀತಿಯಲ್ಲಿ ಶಕ್ತಿ ದೇವತೆಗಳ ಪೂಜೆ ಈ ದಿನಗಳಲ್ಲಿ ನಡೆಯುವುದು. ದುರ್ಗೆಯ ಪ್ರಾರ್ಥನೆ…
ಹೊಸತನ್ನು ಕಲಿಯುವ, ಸಾಧಿಸುವ ಹಂಬಲವಿರುವವರಿಗೆ ಕೃತಕ ಬುದ್ಧಿಮತ್ತೆ ಹೊಸ ಹೊಸ ಉದ್ಯೋಗಾವಕಾಶ ನೀಡಬಲ್ಲುದು ಎಂದು ನಿಟ್ಟೆ ಜಸ್ಟಿಸ್ ಕೆ. ಎಸ್. ಹೆಗ್ಡೆ ಮ್ಯಾನೇಜ್ ಮೆಂಟ್ ಸಂಸ್ಥೆಯ ಪ್ಲೇಸ್ ಮೆಂಟ್ ಮತ್ತು ಅಡ್ಮಿಷನ್ ಮುಖ್ಯಸ್ಥ ಗುರುಪ್ರಶಾಂತ್ ಭಟ್ ಹೇಳಿದರು. ಕುಂತಳನಗರ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸಂಘದ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ನಡೆಯುತ್ತಿರುವ ಕಂಪ್ಯೂಟರ್ ಸಾಕ್ಷಾತ್ಕಾರ ತರಬೇತಿ ಕಾರ್ಯಕ್ರಮದ 11ನೇ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ 12ನೇ ಬ್ಯಾಚಿನ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಂಬಯಿ ಉದ್ಯಮಿ ಮಧುಕರ ಶೆಟ್ಟಿ, ಬೆಳ್ಮಣ್ ಹ್ಯುಮ್ಯಾನಿಟಿ ಸಂಸ್ಥೆಯ ನವೀನ್, ಮೈಸ್ ಸಂಸ್ಥೆಯ ಆಡಳಿತಾಧಿಕಾರಿ ಗಾಯತ್ರಿ…
ಬಂಟ ಸಮಾಜದಲ್ಲಿ ಹುಟ್ಟಿ ಬಡತನದ ಬೇಗುದಿಯಲ್ಲಿ ದಿನ ಕಳೆಯುತ್ತಿರುವ ಬಡಕುಟುಂಬ ಪ್ರಸ್ತುತ ಕಟಪಾಡಿ ಏಣಗುಡ್ಡೆ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶ್ರೀ ಚಂದ್ರಶೇಖರ ಶೆಟ್ಟಿ ಮತ್ತು ಶ್ರೀಮತಿ ಮೂಕಾಂಬಿಕಾ ಶೆಟ್ಟಿ ದಂಪತಿಗಳು ಬದುಕಿನ ಕ್ಷಣಕ್ಷಣವೂ ಕಷ್ಟದಲ್ಲಿ ಕಾಲ ಕಳೆಯುತ್ತಿತ್ತು. ಈ ಕುಟುಂಬ ಪರಿಸರದ ಮನೆಗಳಲ್ಲಿ ಕೂಲಿ ನಾಲಿ ಮಾಡಿಕೊಂಡು ಕಷ್ಟದ ಬದುಕನ್ನು ಕಟ್ಟಿಕಕೊಂಡಿದ್ದರು. ಹೀಗಿರುವಾಗ ಚಂದ್ರಶೇಖರ ಶೆಟ್ಟಿ ಅವರು ಬೇರೆಯವರ ಮನೆಯಲ್ಲಿ ಕೆಲಸ ಮಾಡುವ ಸಂಧರ್ಭದಲ್ಲಿ ಬಿದ್ದು ಮೊಣಕಾಲಿನ ಮೂಳೆ ಮುರಿತಕ್ಕೆ ಒಳಗಾಗಿ ಬಲುದೊಡ್ಡ ಶಸ್ತ್ರಚಿಕಿತ್ಸೆ ಮಾಡಬೇಕಾದ ಸಂದರ್ಭ ಒದಗಿ ಬಂತು. ಅಂತೂ ಇಂತೂ ಇದ್ದವರನ್ನು ಕಾಡಿ-ಬೇಡಿ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿರುವ ಕುಟುಂಬದ ಪರಿಸ್ಥಿತಿಯನ್ನು ಕಂಡವರು ಈ ವಿಷಯ ಮತ್ತು ಪರಿಸ್ಥಿತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟರ ಗಮನಕ್ಕೆ ತಂದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಹರೀಶ್ ಶೆಟ್ಟರು ಮನೋಹರ ಶೆಟ್ಟಿ ತೋನ್ಸೆ ಇವರನ್ನು ಸಂಪರ್ಕಿಸಿ ಸಂತ್ರಸ್ತರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವಂತೆ ತಿಳಿಸಿದರು. ಮನೋಹರ್ ಶೆಟ್ಟಿಯವರು…
ಮಲಾಡ್ ಪೂರ್ವದ ತುಳು ಕನ್ನಡಿಗರು ಒಗ್ಗಟ್ಟಾಗಿ ಬೆಳೆದು ನಿಲ್ಲುವುದಕ್ಕೆ ಶ್ರೀ ವರಮಹಾಲಕ್ಷ್ಮಿ ಸಮಿತಿ ಪೂರಕ ಶಕ್ತಿಯಾಗಿದೆ. ಪರಿಸರದ ತುಳು ಕನ್ನಡಿಗರಲ್ಲಿ ಸಮಾಜ ಸೇವೆಯೊಂದಿಗೆ ಧಾರ್ಮಿಕ ಜಾಗೃತಿಯನ್ನು ಮೂಡಿಸಿ, ಒಗ್ಗಟ್ಟಿನಿಂದ ಜಾತಿ, ಭಾಷೆಯನ್ನು ಬದಿಗೊತ್ತಿ ಶಿಸ್ತು ಬದ್ದವಾಗಿ ಎಲ್ಲಾ ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಇದು ಪೂಜಾ ಸಮಿತಿಯ 14 ವರ್ಷಗಳ ಸೇವಾ ಕಾರ್ಯಗಳ ಸಾಧನೆಯಾಗಿದೆ. ಪರಿಸರದ ಜನ ಸಾಮಾನ್ಯರೊಡನೆ ಪ್ರೀತಿ ವಿಶ್ವಾಸ ಗಳಿಸಿ ಅವರನ್ನೂ ಒಗ್ಗೂಡಿಸುವುದೇ ಒಂದು ಸಾಧನೆ. ಪ್ರತಿಯೊಬ್ಬನ ಬದುಕು ಧರ್ಮದ ಹಾದಿಯಲ್ಲಿ ನಡೆಯಲು ಪೂಜಾ ಕಾರ್ಯಗಳು ಪ್ರೇರಣಾ ಶಕ್ತಿಯಾಗಿದೆ ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಶೆಟ್ಟಿ ಅವರು ನುಡಿದರು. ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಪೂರ್ವ ಇದರ ೧೪ ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯು ತಾ. ಅ. ೨೭ ರಂದು ಉತ್ಕರ್ಷ ವಿದ್ಯಾಮಂದಿರದ ಸಭಾಗ್ರಹ ದಪ್ತರಿ ರೋಡ್ ಮಲಾಡ್ ಪೂರ್ವ ಮುಂಬಯಿ ಇಲ್ಲಿ ಜರಗಿದ್ದು ಈ ಸಂಧರ್ಭದಲ್ಲಿ ನಡೆದ ಸಭಾ…
ದಿನಾಂಕ 10/09/2022 ರ ಶನಿವಾರ ಅಪರಾಹ್ನ 2 ಗಂಟೆಯಿಂದ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಲೋಕಾರ್ಪಣೆಗೊಳ್ಳಲಿರುವ ಶ್ರೇಷ್ಠ ಸಂಘಟಕರೂ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ “ಸಾರ್ವಭೌಮ ಗ್ರಂಥ” ಬಿಡುಗಡೆ ಸಮಾರಂಭದ ಪೂರ್ವಭಾವಿ ಸಭೆ, ಬಂಟರ ಸಂಘ ಮುಂಬಯಿಯ ಸಮಾಜ ಕಲ್ಯಾಣ ಎನೆಕ್ಸ್ ಕಟ್ಟಡದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಐಕಳ ಹರೀಶ್ ಶೆಟ್ಟಿ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಗುರು ಜಿ ಎನ್ ಉಪಾಧ್ಯ, ಕರ್ನಾಟಕ ಮಲ್ಲದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ, ಡಾ.ಪೂರ್ಣಿಮ ಶೆಟ್ಟಿ, ಅಶೋಕ್ ಪಕ್ಕಳ, ಕರ್ನೂರು ಮೋಹನ್ ರೈ ಮತ್ತು ಪತ್ರಕರ್ತರಾದ ದಿನೇಶ್ ಕುಲಾಲ್ ರವರು ಉಪಸ್ಥಿತರಿದ್ದರು.
ಇನ್ನಾ ಬಂಟರ ಸಂಘದ ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಮೂಡಬಿದಿರೆ ಯುವ ಬಂಟರ ಸಂಘದ ಮಹಿಳೆಯರ ತ್ರೋಬಾಲ್ ಹಾಗೂ ಪುರುಷರ ವಾಲಿಬಾಲ್ ತಂಡವು ಭಾಗವಹಿಸಿ, ವಾಲಿಬಾಲ್ ತಂಡವು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಕ್ರೀಡಾಕೂಟದಲ್ಲಿ ಮೂಡಬಿದರೆ ಯುವ ಬಂಟರ ಸಂಘದ ಅಧ್ಯಕ್ಷರಾದ ಜಯಕುಮಾರ್ ಶೆಟ್ಟಿ, ಗೌರವ ಸಲಹೆಗಾರರಾದ ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಡಾ. ವಿನಯ್ ಆಳ್ವ, ಉಪಾಧ್ಯಕ್ಷರಾದ ಭರತ್ ಶೆಟ್ಟಿ, ರಮೇಶ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾದ ಆದರ್ಶ ಶೆಟ್ಟಿ, ಸುಕುಮಾರ್ ಶೆಟ್ಟಿ, ಅತಿಥ್ ಶೆಟ್ಟಿ, ದೀಪಕ್ ಶೆಟ್ಟಿ, ಸುಕೇಶ್ ಶೆಟ್ಟಿ ಕೇಮಾರು, ರಾಜೇಶ್ ಶೆಟ್ಟಿ, ನವೀನ್ ಶೆಟ್ಟಿ ಉಪಸ್ಥಿತರಿದ್ದರು.