ಮೂಡುಬಿದಿರೆ: ೩೦ನೇ ಆಳ್ವಾಸ್ ವಿರಾಸತ್ ೫ ದಿನಗಳ ಸಾಂಸ್ಕೃತಿಕ ಉತ್ಸವ ಹಾಗೂ ೬ ದಿನವೂ ನಡೆದ ಮಹಾಮೇಳ ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯ ಮೂಲಕ ಆಯೋಜಕರು ಹಾಗೂ ಸಾರ್ವಜನಿಕರಲ್ಲಿ ಸರ್ವ ಶ್ರೇಷ್ಠ ವಿರಾಸತ್ ಎಂಬ ಭಾವ ಮೂಡಿಸಿ ಸಮಾಪನವಾಯಿತು. ವಿರಾಸತ್ನ ಮುಖ್ಯ ರೂವಾರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಹರ್ಷ ವ್ಯಕ್ತಪಡಿಸುತ್ತಾ ಅಭಿವ್ಯಕ್ತ ಪಡಿಸಿದ ಅಂಶಗಳು. ಪ್ರತಿ ವರ್ಷದಂತೆ ಈ ವರ್ಷದ ವಿರಾಸತ್ ಕೂಡ ಸರ್ವ ಶ್ರೇಷ್ಠ ಸಾಂಸ್ಕೃತಿಕ ಉತ್ಸವವಾಗಿ ಮೂಡಿಬಂದಿದ್ದು, ದೇವರ ಹಾಗೂ ಪ್ರಕೃತಿಯ ಸಂಪೂರ್ಣ ಅನುಗ್ರಹ ಕರ್ಯಕ್ರಮ ಯಶಸ್ಸಿಗೆ ಕಾರಣ. ಈ ಉತ್ಸವ ಎಲ್ಲಾ ವರ್ಗದ ಜನರು – ಮಕ್ಕಳು, ಯುವಕ ಯುವತಿಯರು, ಪ್ರಬುದ್ಧರು, ವಯೋವೃದ್ಧರಾಧಿಯಾಗಿ ಸರ್ವರನ್ನು ಆಕರ್ಷಿಸಿ, ಪಾಲ್ಗೊಳ್ಳುವಂತೆ ಮಾಡಿದೆ. ಭಾಗವಹಿಸಿದ ಎಲ್ಲರೂ ಮುಕ್ತ ಕಂಠದಿAದ ಶ್ಲಾಘಿಸಿದ್ದು, ಅಧ್ಬುತ ಎಂಬ ಉದ್ಘಾರದ ಭಾವ ಮೂಡಿಸಿರುವುದು ಸಂಘಕರಾದ ನಮಗೆ ಸಂಪೂರ್ಣ ತೃಪ್ತಿ ನೀಡಿದೆ. ಈ ಕರ್ಯಕ್ರಮ ಯಾವುದೇ ಒಂದು ಸಮುದಾಯದ ಕರ್ಯಕ್ರಮವಾಗದೇ ಎಲ್ಲಾ ವರ್ಗಗಳ, ಎಲ್ಲಾ ಸಮುದಾಯದ ಜನರನ್ನು ಕರ್ಯಕ್ರಮದತ್ತಾ ಸೆಳೆದದ್ದು, ಇದರ ಇನ್ನೊಂದು ವಿಶೇಷತೆ. ಆರು ದಿನದ ಕರ್ಯಕ್ರಮದಲ್ಲಿ ಪ್ರತಿ ದಿನ ಸುಮಾರು ಒಂದು ಲಕ್ಷದಂತೆ ಜನ ಭಾಗವಹಿಸಿದರೆ, ಶನಿವಾರ ಹಾಗೂ ಭಾನುವಾರ ಜನಸ್ತೋಮ ಲಕ್ಷಕ್ಕೂ ಮೀರಿತ್ತು. ಒಟ್ಟು ಕರ್ಯಕ್ರಮ ೪೦೦೦ಕ್ಕೂ ಅಧಿಕ ಕಲಾವಿದರಿಗೆ ವೇದಿಕೆಯಾಗಿ, ಪ್ರತೀ ದಿನ ಸರಾಸರಿ ೧೫೦೦ ದಷ್ಟು ಕಲಾವಿದರು ತಮ್ಮ ಪ್ರತಿಭೆ ವ್ಯಕ್ತ ಪಡಿಸಲು ವೇದಿಕೆಯಾಗಿ ಮೂಡಿ ಬಂತು.
ಜಾತಿ ಧರ್ಮ ಮತ ಹಾಗೂ ರಾಜಕೀಯ ಹಿನ್ನಲೆ ಹಾಗೂ ಮೋಜಿನ ಕರ್ಯಕ್ರಮಗಳಿಗೆ ಜನ ಸೇರುವುದು ಮಾಮೂಲಿ. ಆದರೆ ಸಾಂಸ್ಕೃತಿಕ ಹಿನ್ನಲೆಯಲ್ಲಿ ಈ ಪರಿಯ ಜನ ಸೇರುವುದು, ಹರ್ಷ ವ್ಯಕ್ತಪಡಿಸುವುದು ವಿರಾಳತಿ ವಿರಳ. ಈ ಹಿನ್ನಲೆಯಲ್ಲಿ ಸಂಘರಾದ ನಮಗೆ ಮುಂದಿನ ವರ್ಷದ ಕರ್ಯಕ್ರಮವನ್ನು ಇನ್ನೂ ಹೆಚ್ಚಿನ ನಿರೀಕ್ಷೆಯನ್ನು ಈಡೇರಿಸುವಂತೆ ಮಾಡಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿ ಕರ್ಯಕ್ರಮದಲ್ಲೂ ಸ್ವಚ್ಛತೆಗೆ ಅತೀ ಹೆಚ್ಚಿನ ಒತ್ತನ್ನ ನೀಡಲಾಗುತ್ತದೆ. ಅಂತೆಯೇ ಈ ಭಾರಿಯ ವಿರಾಸತ್ನಲ್ಲೂ ಸ್ಚಚ್ಛತಾ ಸೇನಾನಿಗಳು ರಾತ್ರಿ ಹಗಲುಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದು, ಕರ್ಯಕ್ರಮ ಮುಗಿದ ೧೫ರಂದೆ ಇಡೀ ಆಳ್ವಾಸ್ ಆವರಣವನ್ನು ಸ್ವಚ್ಚಗೊಳಿಸಲಾಗಿದ್ದು, ಆರು ದಿನದ ಕರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರಿದ್ದ ಜಾಗವೆಂದು ಊಹಿಸಲಾಗದಷ್ಟು ಪರಿಸರವನ್ನು ಸ್ವಸ್ಥಿತಿಗೆ ತರಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯ ವಿರಾಸತ್ ಸಾವಿರಾರು ಸಂದೇಶವನ್ನು ಜಗತ್ತಿಗೆ ನೀಡಿದ್ದು, ಪ್ರತಿಯೊಬ್ಬರ ಮುಖದಲ್ಲೂ ಆತ್ಮ ತೃಪ್ತಿಯ ಭಾವ ಮೂಡಿಸಿದೆ. ಕರ್ನಾಟಕ ರಾಜ್ಯಕ್ಕೆ ಶ್ರೇಷ್ಠವೆಂಬAತೆ ನಡೆದ ಕರ್ಯಕ್ರಮ ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿದ್ದು, ಕರ್ಯಕ್ರಮಕ್ಕೆ ಆಗಮಿಸಿದ ಸರ್ವರಲ್ಲೂ ವ್ಹಾವ್ ಎನ್ನುವಂತ ಉದ್ಗಾರ ಮೂಡಿಸಿದೆ. ಇಲ್ಲಿವರೆಗೆ ನಡೆದೆ ಎಲ್ಲಾ ವಿರಾಸತ್ನಲ್ಲೂ ಪಾಲು ಪಡೆದ ಸಾವಿರಾರು ಜನರು ೩೦ನೇ ಆಳ್ವಾಸ್ ವಿರಾಸತ್ನಲ್ಲೂ ಸಂತೋಷದಿAದ ತಮ್ಮ ಮನೆಯ ಕರ್ಯಕ್ರಮದಂತೆ ಪಾಲ್ಗೊಂಡರು. ಇಷ್ಟು ದೊಡ್ಡ ಸಂಖ್ಯೆಯ ಜನಸಮೂಹ ಸೇರಿದರು ಯಾರೊಬ್ಬರಿಗೂ ಕಿಂಚಿತ್ತು ತೊಂದರೆಯಾಗದAತೆ ಸಾಂಗವಾಗಿ ನಡೆದದ್ದು ಖುಷಿ ಕೊಟ್ಟಿದೆ. ಈ ಭಾರಿ, ವಿರಾಸತ್ಗಾಗಿ ವಿದ್ಯಾಗಿರಿ ಹಾಗೂ ಪುತ್ತಿಗೆ ಪ್ರವೇಶಿಸಲಿರುವ ೮ ಮಾರ್ಗಗಳನ್ನು ಡಾಂಬರೀಕರಣ ಹಾಗೂ ಅಗಲೀಕರಣಗೊಳಿಸಿ, ಬರುವ ಪ್ರತಿಯೊಬ್ಬರಿಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸರಿಸುಮಾರು ೨೦೦೦ಕ್ಕೂ ಅಧಿಕ ಜನರು ವಿರಾಸತ್ಗಾಗಿ ದುಡಿದಿದ್ದು, ಎಲ್ಲವೂ ಸೂಸುತ್ರವಾಗಿ ನೆರೆವೇರಲು ಸಹಕರಿಸಿದ್ದಾರೆ. ಇದರ ಜೊತೆಗೆ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ ಮತ್ತು ರೇಂರ್ಸ್ ರಾಜ್ಯ ಮಟ್ಟ÷ದ ಸಾಂಸ್ಕೃತಿಕ ಉತ್ಸವವು ೧೫೦೦ ವಿದ್ಯಾರ್ಥಿಗಳು ಪಾಲ್ಗೊಂಡು ಸ್ಕೌರ್ಸ್ಗಳ ಹೊಸ ಹುಮ್ಮಸ್ಸನ್ನು ಮೂಡಿಸಿತು.