ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವ ಆಚರಣೆ ಪ್ರಯುಕ್ತ 2025 ರ ಜನವರಿ 5 ರಂದು ನಡೆಯಲಿರುವ ಕೆ.ಎಚ್.ಎಸ್ ಟ್ರೋಫಿ ಅಂತರಾಷ್ಟ್ರೀಯ ಬಂಟರ ಕ್ರೀಡಾ ಕೂಟದ ತಯಾರಿ ನಡೆಯುತ್ತಿದ್ದು, ಈ ಕ್ರೀಡಾಕೂಟದಲ್ಲಿ ದೇಶ ವಿದೇಶದಲ್ಲಿರುವ ಬಂಟರಿಗಾಗಿ ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಥ್ರೋಬಾಲ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗಿದೆ. ಪುರುಷರಿಗಾಗಿ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ ಸ್ಪರ್ಧೆಗಳು ಹಾಗೂ ಮಹಿಳೆಯರಿಗಾಗಿ ಥ್ರೋಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ.
ಕ್ರೀಡಾ ಕೂಟವು ಪುಣೆಯ ಬಾಲೆವಾಡಿಯ ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಗಾಗಲೇ ಕ್ರೀಡಾಕೂಟದ ಸುತ್ತೋಲೆಯನ್ನು ನೀಡಲಾಗಿದೆ. ಸಂಘದ ಸುವರ್ಣ ಮಹೋತ್ಸವಕ್ಕೆ ಪೂರಕವಾಗಿ ನಡೆಯಲಿರುವ ಈ ಕ್ರೀಡಾಕೂಟವು ಅದ್ದೂರಿಯಾಗಿ ಆಯೋಜಿಸುವ ಬಗ್ಗೆ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕುಶಲ್ ಹೆಗ್ಡೆ, ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಕಾರ್ಯಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿಯ ಕ್ರೀಡಾ ಕಾರ್ಯಾಧ್ಯಕ್ಷರಾದ ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಜಯಂತಿ ಶೆಟ್ಟಿ, ಕಾರ್ಯಾಧ್ಯಕ್ಷೆ ದೇವಿಕಾ ಯು ಶೆಟ್ಟಿ, ಸಂಘದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಮತ್ತು ಸುವರ್ಣ ಮಹೋತ್ಸವ ಸಮಿತಿ ಸದಸ್ಯರು ನಿರ್ಣಯ ಕೈಗೊಂಡಿರುತ್ತಾರೆ. ಕ್ರೀಡಾಕೂಟದ ನಿಯಮಾವಳಿಯ ಪ್ರಕಾರವಾಗಿ ಕ್ರೀಡಾಕೂಟ ನಡೆಯಲಿದೆ. ಭಾಗವಹಿಸುವ ಎಲ್ಲಾ ಸಂಘಗಳು ಪಥ ಸಂಚಲನದಲ್ಲಿ ಭಾಗವಹಿಸಲು ಅರ್ಹವಾಗಿರುತ್ತವೆ. ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ನೀಡಲಾಗುತ್ತದೆ. ವಿಜೇತ ತಂಡವು ಪ್ರತಿಷ್ಠಿತ KSH ಟ್ರೋಫಿ ಮತ್ತು ವಿಶೇಷ ನಗದು ಬಹುಮಾನವನ್ನು ಪಡೆಯುತ್ತದೆ.
ಭಾಗವಹಿಸುವ ತಂಡಗಳು ತಮ್ಮ ಭಾಗವಹಿಸುವಿಕೆಯನ್ನು ಡಿಸೆಂಬರ್ 20, 2024 ರೊಳಗೆ ನೋಂದಾಯಿಸಿಕೊಂಡು ದೃಢೀಕರಿಸಬೇಕು. ಎಲ್ಲಾ ತಂಡಗಳು ತಮ್ಮದೇ ಆದ ಧ್ವಜಗಳನ್ನು ಮತ್ತು ಪಥ ಸಂಚಲನಕ್ಕೆ ಬೇಕಾದ ಅಗತ್ಯ ಪರಿಕರಗಳು ಅಥವಾ ಸಾಧನಗಳನ್ನು ತರತಕ್ಕದ್ದು. ತಂಡದ ಸಮನ್ವಯತೆ, ಉಡುಪು ಮತ್ತು ಮೆರವಣಿಗೆಯ ತಂಡದ ಸದಸ್ಯರ ಸಂಖ್ಯೆಯು ಸಮಿತಿಯು ನಿರ್ಣಯಿಸುವ ಮತ್ತು ತೀರ್ಪುಗಳು ಒಳಗೊಂಡಿರುತ್ತದೆ. ತೀರ್ಪುಗಾರರ ತಿರ್ಮಾನವೇ ಅಂತಿಮವಾಗಿರುತ್ತದೆ ಮತ್ತು ಬದ್ಧವಾಗಿರುತ್ತದೆ.
ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಉನ್ನತಮಟ್ಟದ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಲು ತಂಡಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರೆಲ್ಲರೂ ಜನವರಿ 5, 2025 ರಂದು ಬೆಳಿಗ್ಗೆ 7:30 ಗಂಟೆಗೆ ವರದಿ ಸಲ್ಲಿಸಬೇಕು. ಪಂದ್ಯಾವಳಿಯು ಬೆಳಿಗ್ಗೆ 8:00 ಗಂಟೆಗೆ ಸರಿಯಾಗಿ ಪ್ರಾರಂಭವಾಗಲಿದೆ. ಪಥ ಸಂಚಲನವು ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನ ಮುಖ್ಯ ಗೇಟ್ ನಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇವರುಗಳನ್ನು ಸಂಪರ್ಕಿಸಬಹುದು. ಸುನಿಲ್ ಶೆಟ್ಟಿ – 9923108482, ಅಭಿನಂದನ್ ಶೆಟ್ಟಿ – 7768988065, ಪ್ರಸನ್ನ ಶೆಟ್ಟಿ – 8806913331