ಸಾಹಿತ್ಯ ಎಂದರೆ ಬದುಕು. ಸಾಹಿತ್ಯವು ಬದುಕಿಗೆ ಬುತ್ತಿ ಕಟ್ಟಿ ಕೊಡುವ ಕೆಲಸ ಮಾಡುತ್ತದೆ ಎಂದು ಅಜೆಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ಹೇಳಿದರು. ಶಿರ್ಲಾಲು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಕಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭ ಆರ್. ರಮೇಶ್ ಪ್ರಭು ಅವರ ‘ಹೊಂಗನಸು’, ಎಚ್. ವಿಧಾತ್ರಿ ರವಿಶಂಕರ್ ಅವರ ನಕ್ಷತ್ರ ಪಟಲ, ಶೈಲಜಾ ಹೆಗ್ಡೆ ಅವರ ಭಾವ ಲಹರಿ ಎಂಬ ಮೂರು ಕೃತಿಗಳನ್ನು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆಗೊಳಿಸಿದರು. ಕಂಬಳ ಕ್ಷೇತ್ರದ ಸಾಧಕ ಶ್ರೀಕಾಂತ್ ಭಟ್ ನಂದಳಿಕೆ ಹಾಗೂ ಕಂಬಳದ ಕೋಣ ಪಾಂಡು, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿನಾಯಕ ನಾಯ್ಕ್, ಜಾಗತಿಕ ದಾಖಲೆಯ ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಕೋಣಗಳ ಯಜಮಾನ ಮಿಜಾರು ಶಕ್ತಿಪ್ರಸಾದ್ ಶೆಟ್ಟಿ, ವರ್ಣಚಿತ್ರ ಕಲಾವಿದ ಗಂಜೀಫಾ ರಘುಪತಿ ಭಟ್, ಶೈಕ್ಷಣಿಕ ಕ್ಷೇತ್ರದ ಸಾಧಕಿ ವಿನಮ್ರ ಆಚಾರ್ಯ, ಸಮಾಜಸೇವಕ ಉದ್ಯಮಿ ಅವಿನಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.