Author: admin

ಮುಂಬಯಿ (ಆರ್ ಬಿ ಐ), ಸೆ.08: `ಮನಸ್ಸಿಗೆ ವಯಸ್ಸಾಗಬಾರದು, ದೇಹಕ್ಕೆ ವಯಸ್ಸಾಗೋದು ಸಹಜ, ಚಿಂತನ ಮಂಥನದಿಂದ ಮನಸ್ಸನ್ನು ಸದಾ ಯೌವನವಾಗಿಡಲು ಸಾದ್ಯವಿದೆ. ಕವನಗಳು, ಸುಲಭ ತುತ್ತಿನಲ್ಲಿ ಜೀರ್ಣವಾಗಬೇಕೆಂದೇನಿಲ್ಲ, ಕವನವನ್ನು ಅರ್ಥೈಸಿ ಕೊಳ್ಳುವುದಕೊಸ್ಕರ, ಅದನ್ನ ಮತ್ತೆಮತ್ತೆ ಓದಬೇಕೆನ್ನುವ ಮನೋಭಿಲಾಷೆ ಹುಟ್ಟು ಹಾಕಿದರೆ, ಕವನದ ಮಂಥನ ಸಾಧ್ಯವಾಗುತ್ತದೆ. ಕಾವ್ಯ ಬರೇ ಕನ್ನಡಿಯಲ್ಲಿರುವ ಪ್ರತಿಬಿಂಬವಷ್ಟೆ ಆಗದೆ, ಅದು ಸಮಾಜಕ್ಕೆ ಬೆಳಕನ್ನು ಚೆಲ್ಲುವ ಸಾಧನವಾದರೆ ಅದೇ ಕಾವ್ಯದ ಸಾರ್ಥಕತೆ’ ಎಂದು ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ನಾಡಿನ ಶ್ರೇಷ್ಠ ಕವಿ ಸುಬ್ರಾಯ ಚೊಕ್ಕಾಡಿ ನುಡಿದರು. ಐಲೇಸಾ-ದಿ ವಾಯ್ಸ್ ಆಫ್ ಓಷನ್ (ರಿ). ಡಿಜಿಟಲ್ ಸಂಸ್ಥೆ ತನ್ನ ಎರಡನೇ ಹುಟ್ಟುಹಬ್ಬದ ಶುಭಾವಸರದಲ್ಲಿ ಕಳೆದ ಭಾನುವಾರ ಸುಳ್ಯ ಹಳೇ ಗೇಟು ಅಲ್ಲಿನ ಚೊಕ್ಕಾಡಿ ಅವರ `ಪ್ರಕೃತಿ’ ನಿವಾಸ, ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆ ಇಲ್ಲಿ ಆಯೋಜಿಸಿದ್ದ `ವಯೋ ಸಮ್ಮಾನ್’ ವಿಶಿಷ್ಟ ಗೌರವ ಸ್ವೀಕರಿಸಿ ಚೊಕ್ಕಾಡಿ ಮಾತನಾಡಿದರು. ಐಲೇಸಾ ತಂಡವು ಸುಬ್ರಾಯ ಚೊಕ್ಕಾಡಿ ಅವರ 83ನೆ ವಯೋನಡಿಗೆಯ ಸ್ಮರಣಾರ್ಥ, ಕಾವ್ಯ…

Read More

ಸುಂದರ ಬದುಕು ಪ್ರತಿಯೊಬ್ಬರ ಕನಸಾಗಿದೆ. ಅದನ್ನು ಸಾರ್ಥಕಗೊಳಿಸುವುದು ಅವರವರ ಕೈಯಲ್ಲಿದೆ. ಆ ಕನಸು ನನಸಾಗಬೇಕಾದರೆ ನಮ್ಮನ್ನು ಚಿಂತೆ, ಖೇದ, ದುಗುಡದಂತಹ ಋಣಾತ್ಮಕ ಭಾವಗಳು ಬಾಧಿಸಬಾರದು. ಪ್ರತಿಯೊಬ್ಬರಿಗೂ ಅವರದೇ ಆದ ಭಾವನಾ ಲೋಕವಿರುವುದರಿಂದ ಆಸೆಗಳು, ಆಚಾರ- ವಿಚಾರಗಳು, ಕಾರ್ಯ ವೈಖರಿಗಳು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತವೆ. ನಮ್ಮ ಖುಷಿ, ನೆಮ್ಮದಿ, ದುಃಖಗಳೆಲ್ಲವೂ ಸುತ್ತಲಿನ ಜನರು, ಪರಿಸ್ಥಿತಿಗಳನ್ನು ಅವಲಂಬಿಸಿರುತ್ತವೆ. ಹೀಗಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಕುಟುಂಬದ ಸದಸ್ಯರು, ಸಹಪಾಠಿಗಳು, ಸಹೋದ್ಯೋಗಿಗಳು ಮತ್ತು ನೆರೆಕರೆಯವರ ಜತೆ ಉತ್ತಮ ಒಡನಾಟ ಹೊಂದುವುದರಿಂದ ನಾವು ಸಂತೋಷವಾಗಿ ರುತ್ತೇವೆ. ಇವರೆಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದಿದ್ದರೆ ಮನಸ್ಸು ನೆಮ್ಮದಿಯಿಂದ ಇರುವುದಿಲ್ಲ. ಪರಸ್ಪರರಲ್ಲಿ ಸಮಾನ ಹಿತಾಸಕ್ತಿಗಳು, ಆಲೋಚನೆಗಳು, ಭಾವನೆಗಳು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಹಾಗಾಗಬೇಕಾದರೆ ಇನ್ನೊಬ್ಬರ ಭಾವನೆಗಳಿಗೆ ಬೆಲೆ ನೀಡಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಬಾಂಧವ್ಯ ಗಟ್ಟಿಯಾದಂತೆ ಅವರ ಬಗ್ಗೆ ನಮ್ಮಲ್ಲಿ ನಂಬಿಕೆ ಮೂಡಿ ವಿಶ್ವಾಸ ಹೆಚ್ಚುತ್ತದೆ. ಇದರಿಂದ ನಮ್ಮಲ್ಲಿ ಸಹಜವಾಗಿ ಧೈರ್ಯದ ಮನೋಭಾವ ಮೂಡಿ ಎಂಥ ಪರಿಸ್ಥಿತಿಯನ್ನು ಎದುರಿಸಬಲ್ಲೆವು ಎಂಬ ಛಾತಿ…

Read More

ಸೋಲಿನ ಮೂಲಕವೇ ಗೆಲುವಿನ ಮೆಟ್ಟಿಲು ಸುಲಭವಾಗುತ್ತದೆ. ನಾನು ಕೂಡ ಬಹಳಷ್ಟು ಸ್ಪರ್ಧೆಗಳಲ್ಲಿ ಸೋಲು ಕಂಡಿದ್ದೇನೆ. ಆದರೆ ಸೋಲಿಗೆ ಹೆದರಿ ನನ್ನ ಕನಸನ್ನು ಸಾಕಾರ ಮಾಡುವ ಬಗ್ಗೆಯೇ ಯೋಚಿಸುತ್ತಿದ್ದೆ. ಇದರ ಪರಿಣಾಮವೇ ಇಂದಿನ ಫಲಿತಾಂಶ ಎನ್ನುತ್ತಾರೆ ಮಿಸ್ ಇಂಡಿಯಾ ಯುನಿವರ್ಸ್ – 2022 ಆಗಿ ಆಯ್ಕೆಗೊಂಡ ಮಂಗಳೂರು ಮೂಲದ ದಿವಿತಾ ರೈ. ಮಿಸ್ ಯಿನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ದಿವಿತಾ ರೈ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ವಸತಿ ನಿಲಯದ ಅಮೃತೋತ್ಸವ ಸಮಿತಿ ವತಿಯಿಂದ ಬಂಟ್ಸ್ ಹಾಸ್ಟೆಲ್ ನ ಗೀತಾ ಎಸ್. ಎಂ ಶೆಟ್ಟಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಹುಟ್ಟೂರ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸೋಲು ಸಾಮಾನ್ಯ. ಇದಕ್ಕಾಗಿ ಭಯ ಬೇಡ. ಹಿಂದೆ ಸರಿಯಲೂ ಬಾರದು. ಕನಸುಗಳ ಸಾಕಾರಕ್ಕಾಗಿ ಧೈರ್ಯದಿಂದ ಮುನ್ನುಗ್ಗುವ ಹಾಗೂ ವಿಶ್ವಾಸದಿಂದ ಗುರಿ ಮುಟ್ಟುವ ಮನೋಭಾವ ಬೇಕು. ಬಂಟರ ಸಮಾಜ ಹೋರಾಟದ ಮನೋಭಾವವನ್ನು ಮೈಗೂಡಿಸಿದೆ, ಇದೇ ಸಮುದಾಯದಲ್ಲಿ ಹುಟ್ಟಿದ ನಾನು…

Read More

ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲೊಂದಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯು, 2023-24ನೇ ಸಾಲಿನ ಅರ್ಧ ವಾರ್ಷಿಕ ಅವಧಿ ದಿನಾಂಕ 30.09.2023ಕ್ಕೆ ರೂ. 900 ಕೋಟಿ ಮೀರಿದ ಒಟ್ಟು ವ್ಯವಹಾರವನ್ನು ದಾಖಲಿಸಿ ಪ್ರಗತಿ ಪಥದಲ್ಲಿ ಯಶಸ್ಸಿನ ಹೊಸ ಮೈಲಿಗಲ್ಲನ್ನು ದಾಟಿದ ಸಾಧನೆ ಮಾಡಿದೆ. ದಿನಾಂಕ30.09.2023ಕ್ಕೆಠೇವಣಾತಿಯು ರೂ.484 ಕೋಟಿ,ಹೊರಬಾಕಿ ಸಾಲ ರೂ.417 ಕೋಟಿ,ಒಟ್ಟು ವ್ಯವಹಾರ ರೂ.901 ಕೋಟಿಯನ್ನು ಮೀರಿದ್ದು ತನ್ನ “Vision 2025”ರರೂ. 1,000 ಕೋಟಿ ಒಟ್ಟು ವ್ಯವಹಾರದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿದೆ. ಹಿಂದಿನ ಸಾಲಿನ30.09.2022ಕ್ಕೆಹೋಲಿಸಿದಾಗ, ಠೇವಣಾತಿಯು ರೂ. 72 ಕೋಟಿ ಹೆಚ್ಚಳಗೊ0ಡು ಶೇ.18 ರಷ್ಟು ವೃದ್ಧಿಗೊ0ಡಿರುವುದು, ಹೊರಬಾಕಿ ಸಾಲವು ರೂ.75 ಕೋಟಿ ಹೆಚ್ಚಳಗೊ0ಡು ಶೇ.22ರಷ್ಟು ವೃದ್ಧಿಗೊ0ಡಿರುವುದು, ಒಟ್ಟು ವ್ಯವಹಾರವು ರೂ.148 ಕೋಟಿ ಹೆಚ್ಚಳಗೊ0ಡು ಶೇ.20 ರಷ್ಟು ವೃದ್ಧಿಯಾಗಿರುವುದು.ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 16 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿರುವುದು.ಸ್ಥಾಪನೆಯಾದಾಗಿನಿಂದಲೂ ಡಿವಿಡೆಂಡ್ ನೀಡುತ್ತಿರುವ ಸಂಸ್ಥೆ, ಕಳೆದ 5ವರ್ಷಗಳಿಂದ ಸದಸ್ಯರಿಗೆ ನಿರಂತರವಾಗಿ ಶೇ. 25 ಡಿವಿಡೆಂಡ್ ನೀಡುತ್ತಿರುವುದು.…

Read More

ಬಂಟ ಸಮಾಜದ ಹೆಮ್ಮೆಯ ಸುಪುತ್ರ ಸರ್ವ ಸಮಾಜದ ಏಳಿಗೆಗೆ ಮಹಾನ್ ಕೊಡುಗೆ ನೀಡಿ ಪ್ರಾತಃ ಸ್ಮರಣೀಯರು ಆಗಿರುವ ಶ್ರೀ ಸುಂದರರಾಮ್ ಶೆಟ್ಟಿಯವರ ನೆನಪಿನಲ್ಲಿ ಸುಂದರ್ ರಾಮ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಮತ್ತು ಮುಲ್ಕಿ ಬಂಟರ ಸಂಘ ಜಂಟಿಯಾಗಿ ನೀಡುವ ಸುಂದರರಾಮ್ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಈ ಸಮಾರಂಭವು ಮುಲ್ಕಿ ಬಂಟರ ಸಭಾ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ, ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿ ಯ ನಿಕಟ ಪೂರ್ವ ಅಧ್ಯಕ್ಷರಾದ ಮುಡ್ಕುರು ಶ್ರೀ ರತ್ನಾಕರ ಶೆಟ್ಟಿ,ಶ್ರೀ ಸುಚರಿತ ಶೆಟ್ಟಿ, ಮುಲ್ಕಿ ಬಪ್ಪನಾಡು ದೇವಸ್ಥಾನದ ಮೊಕ್ತೇಸರ ಶ್ರೀ ಮನೋಹರ್ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷರು ಶ್ರೀಪುರುಷೋತ್ತಮ ಶೆಟ್ಟಿ, ಗೌರವ ಅಧ್ಯಕ್ಷರು ಶ್ರೀ ಸಂತೋಷ್ ಕುಮಾರ್ ಹೆಗ್ಡೆ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಶುಭಾಶಂಸನೆ ಶ್ರೀ ಕುದಿ…

Read More

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಮತ್ತು ಶಾಸಕಾಂಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಂಟ ಸಮಾಜದ ಉದಯ ಕುಮಾರ್ ಶೆಟ್ಟಿ ಅವರನ್ನು ಕೇಂದ್ರ ಸರಕಾರ ನೇಮಕ ಮಾಡಿದೆ. ಉದಯ ಕುಮಾರ್ ಶೆಟ್ಟಿ ಈ ಹಿಂದೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ, ಶಾಸಕಾಂಗ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈಗ ಹೆಚ್ಚುವರಿ ಕಾರ್ಯದರ್ಶಿಯಾಗಿ ಭಡ್ತಿ ಪಡೆದಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕರ್ನಾಟಕದ ಅಧಿಕಾರಿಯೊಬ್ಬರು ಕಾನೂನು ಸಚಿವಾಲಯದ ಉನ್ನತ ಹುದ್ದೆಗೇರಿದಂತಾಯಿತು. ಪ್ರಸ್ತುತ ಅವರು ಗುಜರಾತ್ ನ ರಾಷ್ಟೀಯ ರಕ್ಷಾ ವಿವಿ ಆಡಳಿತ ಮಂಡಳಿಯ ಎಕ್ಸ್ – ಆಫಿಷಿಯೋ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 2003 ಬ್ಯಾಚ್ ನ ಭಾರತೀಯ ಕಾನೂನು ಸೇವೆಗೆ ಸೇರಿದ ಶೆಟ್ಟಿಯವರು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಗ್ರಾಮದವರು. ಉದಯ ಕುಮಾರ್ ಶೆಟ್ಟಿ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಎಲ್ಎಲ್ ಬಿ ಮಾಡಿ ನಂತರ ಬೆಂಗಳೂರು ವಿವಿಯಿಂದ ಕಾರ್ಮಿಕ ಕಾನೂನುಗಳಲ್ಲಿ ಎಲ್ ಎಲ್…

Read More

“ಕೊಡುವುದನ್ನು ಮುಕ್ತ ಹೃದಯದಿಂದ ಕೊಡುತ್ತಿರೋಣ, ಬರುವುದು ತಾನಾಗಿಯೇ ಬರುತ್ತದೆ. ಅದು ಪ್ರೀತಿಯಾಗಲಿ, ಸಂಪತ್ತಾಗಲಿ, ಗೌರವವಾಗಲಿ” ಕೆ.ಎಂ. ಶೆಟ್ಟಿ ಎಂದೇ ಖ್ಯಾತರಾಗಿರುವ ಶ್ರೀಯುತ ಕರುಣಾಕರ ಎಂ. ಶೆಟ್ಟಿ ಉದ್ಯಮ ರಂಗದಲ್ಲಿ ದೇಶದಲ್ಲೇ ಚಿರಪರಿಚಿತರಾದವರು. 1975 ರಲ್ಲಿ ‘ವಿ.ಕೆ. ಇಂಜಿನಿಯರ್’ ಎಂಬ ಹೆಸರಿನಿಂದ ಉದ್ಯಮರಂಗಕ್ಕೆ ಪಾದರ್ಪಣೆ ಮಾಡಿದ ಕೆ.ಎಂ. ಶೆಟ್ಟಿಯವರು ಟೂಲ್ ರೂಂ ವರ್ಕ್ ಶಾಪ್ ಯಂತ್ರೋಪಕರಣಗಳ ಮೂಲಕ ತಮ್ಮ ಕಾರ್ಯಗಾರವನ್ನು ಪ್ರಾರಂಭಿಸಿದರು. ಉದ್ಯಮ ರಂಗದಲ್ಲಿ ಉತ್ತಮ ಗುಣಮಟ್ಟದ ಇಂಜೆಕ್ಷನ್ ಮೌಲ್ಡಿಂಗ್ ಉಪಕರಣಗಳನ್ನು ಉತ್ಪಾದಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡರು. ಉದ್ಯಮ ರಂಗದ ಈ ಯಶಸ್ಸು ಅವರು ವಿ.ಕೆ. ಗ್ರೂಪ್ ಆಫ್ ಕಂಪೆನೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಇದನ್ನು ದೇಶ ವಿದೇಶಗಳಲ್ಲಿ ಈ ಕಾರ್ಯಗಾರಗಳ ಶಾಖೆ ಸ್ಥಾಪನೆ ಮಾಡಿ ವಿಸ್ತರಿಸಲು ಸಾಧ್ಯವಾಯಿತು. ಕೆ.ಎಂ. ಶೆಟ್ಟಿಯವರು ಈ ಸಂಸ್ಥೆಗಳ ಕಾರ್ಯಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ಈ ಸಂಸ್ಥೆಗಳನ್ನು ಪ್ರಗತಿಯತ್ತ ಮುನ್ನಡೆಸಿದರು. ಈಗ ಈ ಕಂಪೆನಿಯಲ್ಲಿ ಗೃಹೋಪಯೋಗಿ ಇಲೆಕ್ಟ್ರಿಕಲ್ ವಸ್ತುಗಳಾದ ಮಿಕ್ಸರ್ಸ್, ಗ್ರೈಂಡರ್ಸ್, ಆಹಾರ ಸಂಸ್ಕರಣ ಉಪಕರಣ,…

Read More

ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಸಿಬಿಎಸ್‍ಸಿ ಬೋರ್ಡ್ ಪ್ರಾಯೋಜಕತ್ವದಲ್ಲಿ ಅ.10 ರಂದು ಶಿಕ್ಷಕರಿಗೆ ಸೈಬರ್ ಸುರಕ್ಷತೆ ಮತ್ತು ಭದ್ರತೆಯ ಕುರಿತು ‘ಸಾಮರ್ಥ್ಯ ಅಭಿವೃದ್ಧಿ’ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಪೆÇೀದಾರ್ ಇಂಟರ್‍ನ್ಯಾಷನಲ್ ಸ್ಕೂಲ್‍ನ ಪ್ರಾಂಶುಪಾಲರಾದ ಗಿರೀಶ್ ಕುಮಾರ್ ಹಾಗೂ ಗಂಜಿಮಠದ ರಾಜ್ ಅಕಾಡೆಮಿ ಹೈಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಪ್ರವೀಣಾ ಶೆಟ್ಟಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ಸೈಬರ್ ಭದ್ರತೆ , ಬ್ಯಾಂಕ್ ವಂಚನೆ, ಸೈಬರ್ ಕ್ರೈಮ್, ಕಂಪ್ಯೂಟರ್ಫೋರೆನಿಕ್ಸ್, ಸೈಬರ್ ಜಾಗೃತಿ, ಸೈಬರ್ ಕಾನೂನು ಮತ್ತು ಕಾಯ್ದೆ ಮುಂತಾದ ವಿಷಯಗಳ ಕುರಿತು ಪರಿಪೂರ್ಣ ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ನಾವೆಲ್ಲರೂ ಇಂದು ಕೇವಲ ಒಂದು ದೇಶದ ಪ್ರಜೆಗಳಲ್ಲ, ಜೊತೆಗೆ ಸೈಬರ್ ಪ್ರಪಂಚದ ಸದಸ್ಯರಾಗಿದ್ದೇವೆ ಹಾಗಾಗಿ ಅದರ ಅನುಕೂಲ ಹಾಗೂ ಅನಾನುಕೂಲಗಳ ಅರಿವು ಇರಬೇಕು ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಅಂತರ್ಜಾಲದ ಯುಗದಲ್ಲಿ ಬದುಕುತ್ತಿರುವ ನಮಗೆ ಸಾಮಾಜಿಕ ಮಾಧ್ಯಮಗಳ…

Read More

ಪುಣೆಯ ಪ್ರತಿಷ್ಠಿತ ರೋಯಲ್ ಕಾನೊಟ್ ಬೋಟ್ ಕ್ಲಬ್ “ನ ಅಧ್ಯಕ್ಷ , ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ, ಯಶಸ್ವಿ ಉದ್ಯಮಿ, ಸಮಾಜ ಸೇವಕ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ನಿಧನರಾಗಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ದೊಡ್ಡಬೀಡು ಗಣಪಯ್ಯ ಹೆಗ್ಡೆ ಹಾಗೂ ಮೊಳಹಳ್ಳಿ ಶ್ರೀಮತಿ ಮುತ್ತಕ್ಕ ಹೆಗ್ಡೆ ದಂಪತಿಗಳ ಸುಪುತ್ರನಾಗಿ ಜನಿಸಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದು ನಂತರ ಮಹಾರಾಷ್ಟ್ರದ ಪುಣೆಗೆ ಆಗಮಿಸಿ ಪುಣೆಯ ಐ ಎಲ್ ಎಸ್ ಲಾ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದರು. ಜೀವನದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದ ಇವರ ದೂರದರ್ಶಿತ್ವದ ಗುಣದಿಂದ ಕೆಮಿಕಲ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಕಾರ್ಯಪ್ರವೃತ್ತರಾಗಿ ಸತತ ಪರಿಶ್ರಮ ಹಾಗೂ ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆದು ಬಿ ಕೆ ಬೆಂಝಿಲ್ ಪ್ರೈವೆಟ್ ಲಿಮಿಟೆಡ್ ಹಾಗೂ ಅಕ್ಷಯ್ ಆರ್ಗಾನಿಕ್ ಪ್ರ . ಲಿ ಎನ್ನುವ ಕಂಪೆನಿಗಳ ಮೂಲಕ ಉದ್ಯಮ ಕ್ಷೇತ್ರದಲ್ಲಿ ಯಶಸ್ಸಿನ್ನು ಪಡೆದುಕೊಂಡು ಪ್ರಸಿದ್ಧಿಯನ್ನು ಗಳಿಸಿದ್ದರು. ಉದ್ಯಮದ ಪ್ರಗತಿಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಯಾವುದೇ ಪ್ರಸಿದ್ಧಿಯನ್ನು…

Read More

ಮಾನವನಾಗಿ ಹುಟ್ಟಿದ ಮೇಲೆ ಯಾವುದೇ ಕಷ್ಟಗಳು ಬಂದರೂ ಅದನ್ನು ಎದುರಿಸಿ ಬದುಕಬೇಕು. ಸಾಯುವವರೆಗೆ ಬದುಕಬೇಕಾದುದು ಧರ್ಮ. ಯಾರ ಬಳಿಯಲ್ಲಿ ದೇವರು ಕರುಣಿಸಿದ ಎರಡು ಕೈಗಳಿವೆಯೇ ಅವರೇ ಪುಣ್ಯಾತ್ಮರು. ಅಂಥವರು ಏನನ್ನೂ ಸಾಧಿಸಬಹುದು. ಕೈಗಳಿಂದ ದುಡಿದು ಬದುಕಬಹುದು. ಕೈಗಳನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ದುಡಿಯಲು ಬಳಸಬೇಕು. ಯಾರೂ ದೀನರೂ ಅಲ್ಲ, ದುರ್ಬಲರೂ ಅಲ್ಲ. ಇಂದ್ರಿಯಗಳೇ ಎಲ್ಲ ಬಯಕೆಗಳಿಗೂ ಕರ್ಮ ಗಳಿಗೂ ಮೂಲವಾಗಿದೆ. ಆದರೆ ಮನಸನ್ನು ಹತೋಟಿಗೆ ತಂದು ಧರ್ಮದಲ್ಲಿ ನಡೆದರೆ ನಮ್ಮನ್ನು ಜುಗುಪ್ಸೆ ಕಾಡಲಾರದು. ಯಾವುದೇ ಸಮಸ್ಯೆ, ಜಂಜಾಟಗಳಿಗೆ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ. ನಮ್ಮ ಜೀವನದ ಯಾವುದಾದರೊಂದು ಕಾಲಘಟ್ಟದಲ್ಲಿ ನಿರಾಸೆ ಕಾಡಿದಾಗ ದೇವರನ್ನು ಧ್ಯಾನಿಸಿ. ಕಷ್ಟಗಳು ಮನುಷ್ಯರಿಗೆ ಬಾರದೆ ಇನ್ಯಾರಿಗೆ ಬರುತ್ತದೆ. ನಮ್ಮ ಜೀವನ ಸಂಜೀವನವಾದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ. ಸಂಜೀವನ ಆಗಬೇಕಾದರೆ ಜೀವನವನ್ನು ಸರಿಯಾದ ರೀತಿಯಲ್ಲಿ ನೋಡಬೇಕು. “ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆ ಸುಳ್ಳಲ್ಲ. ಹೆಚ್ಚು ಸಂಪಾದನೆ ಮಾಡಿದರೆ ಸ್ವಲ್ಪ ಕೂಡಿಸಿಡಿ. ಮುಂದೆ ಕಷ್ಟ ಕಾಲಕ್ಕೆ ಅದು ನೆರವಾಗಬಹುದು.…

Read More