ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಡಿಸೆಂಬರ್ 31 ಜನವರಿ 03 ರವರೆಗೆ ಪ್ರತಿದಿನ ಸಂಜೆ 6.45 ಕ್ಕೆ ಮೂಡುಬಿದ್ರೆ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನೀನಾಸಂ ತಿರುಗಾಟ ತಂಡದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ. ಡಿ.31 ಮತ್ತು ಜ.01 ರಂದು ಮೂಲ ಭವಭೂತಿಯ, ಅಕ್ಷರ ಕೆ.ವಿ.ಇವರು ನಿರ್ದೇಶಿಸಿದ ಮಾಲತಿ ಮಾಧವ ಹಾಗೂ ಜ.02 ಮತ್ತು 03 ರಂದು ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ, ಮೂಲ ಅಭಿರಾಮ್ ಭಡ್ಕಮ್ಕರ್ ರಚಿಸಿದ, ವಿದ್ಯಾನಿಧಿ ವನಾರಸ್ ನಿರ್ದೇಶಿಸಿದ ಅಂಕದ ಪರದೆ ನಾಟಕಗಳ ಪ್ರದರ್ಶನ ನಡೆಯಲಿದೆ.

ಈ ವರ್ಷದ ಅತ್ಯುತ್ತಮ ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾದ ನೀನಾಸಂ ತಿರುಗಾಟದ ನಾಟಕಗಳ್ನು ಹೆಚ್ಚು ಜನರು ನೋಡಬೇಕೆಂಬ ಕಾರಣಕ್ಕೆ ಎರಡೆರಡು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಯಾವುದೇ ಸಭಾ ಕಾರ್ಯಕ್ರಮ ಇಲ್ಲದೆ ಪ್ರತಿದಿನ ನಾಟಕವು ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು ಪ್ರವೇಶ ಉಚಿತವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವರು ತಿಳಿಸಿದ್ದಾರೆ.

















































































































