ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ‘ಲೈಫ್ ಸ್ಕಿಲ್ ಡೆ’ ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಶಿಕ್ಷಣವೆಂದರೆ ಕೇವಲ ವಿದ್ಯಾಭ್ಯಾಸ ಮಾತ್ರವಲ್ಲ, ಜೀವನ ಕೌಶಲಗಳೊಂದಿಗೆ ಜ್ಞಾನಾರ್ಜನೆ ನಿಜವಾದ ಕಲಿಕೆ ಎಂದರು. ಕೌಶಲ್ಯಗಳು ಯಾವಾಗಲೂ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ 21ನೇ ಶತಮಾನದ ಲೈಫ್ ಸ್ಕಿಲ್ನ ಕುರಿತು ಮಾಹಿತಿಯನ್ನು ನೀಡಿದರು. ಕೋಟ ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಹೇಮಾರವರು ಮಕ್ಕಳ ಸುರಕ್ಷತೆ ಹಾಗೂ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು.
ಉತ್ತಮ ನಾಯಕತ್ವ, ಸಮಸ್ಯೆ ಪರಿಹಾರದ ಕುರಿತು ಕಿರು ನಾಟಕ, ಒತ್ತಡ ನಿರ್ವಹಣೆಯ ಕಿರು ಚಿತ್ರ, ಸೃಜನ ಶೀಲತೆ ವಿಮರ್ಶಾತ್ಮಕ ಚಿಂತನೆಯ ನೀತಿ ಕಥೆಗಳು, ಸಹಾನುಭೂತಿ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಗೀತೆ, ನೃತ್ಯಗಳು ವಿದ್ಯಾರ್ಥಿಗಳಿಂದ ಅದ್ಭುತವಾಗಿ ಮೂಡಿ ಬಂದವು. ಬೆಂಕಿ ಉಪಯೋಗವಿಲ್ಲದೆ ಆಹಾರ ತಯಾರಿಕೆ, ವೆಜಿಟೇಬಲ್ ಆರ್ಟ್, ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಕಾರಿನ ಚಕ್ರವನ್ನು ಬದಲಾಯಿಸುವುದು, ಬಳೆ ಹಾಗೂ ಕಿವಿ ಓಲೆ ತಯಾರಿಕೆ, ಬಟ್ಟೆ ಹೊಲಿಗೆ, ಚಿತ್ರ ಹಾಗೂ ಕರಕುಶಲ ವಸ್ತುಗಳು, ಕಸದಿಂದ ರಸವನ್ನು ತಯಾರಿಸುವ ಮೂಲಕ ಜೀವನ ಕೌಶಲ್ಯದ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕ ಅನುಭವವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಪೆÇೀಷಕರು, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.