ಪಡುಬಿದ್ರಿ ಆಸ್ಪೆನ್ ವಿಶೇಷ ವಿತ್ತ ವಲಯ ಇದರ ಸೀನಿಯರ್ ಜನರಲ್ ಮ್ಯಾನೇಜರ್ ಮತ್ತು ಮುಖ್ಯಸ್ಥರು ಹಾಗೂ ಮಣಿಪುರ ಕುಂತಳ ನಗರದ ಭಾರತಿ ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಶಾಲಾ ಶತಮಾನೋತ್ಸವ ಸಂಭ್ರಮದ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿ ವೃಂದ, ವಿದ್ಯಾರ್ಥಿಗಳು, ಶಿಕ್ಷಕ ವೃಂದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿಗಳಾದ ರಾಜೇಂದ್ರ ವಿ. ಶೆಟ್ಟಿ ಹುಬ್ಬಳ್ಳಿ, ಮಧುಕರ್ ಶೆಟ್ಟಿ ಮುಂಬಯಿ, ಅಶೋಕ್ ಶೆಟ್ಟಿ ಮುಂಬಯಿ, ಸುಭಾಸ್ ಸಾಲಿಯಾನ್, ಬೆಂಗಳೂರು ಉದ್ಯಮಿ ಸಂದೀಪ್ ಶೆಟ್ಟಿ, ಉದ್ಯಮಿ ಸತೀಶ್ ಶೆಟ್ಟಿ ಮಣಿಪುರ, ಸಮಾಜ ಸೇವಕಿ ಬಿಂದು ಶೆಟ್ಟಿ ಬಡಗು ಮನೆ, ರಘು ಪೂಜಾರಿ ಕಲ್ಮಂಜೆ, ಮಣಿಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜೋನ್ ಸಿಕ್ವೇರಾ, ಗ್ರಾ. ಪಂ. ಸದಸ್ಯ ಸಂತೋಷ್ ಶೆಟ್ಟಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವೈ, ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಶಾ ಶೇಖರ್, ಗೌ. ಸಲಹೆಗಾರ ಭುವರಾಯ ಆಚಾರ್ಯ, ಕಾರ್ಯದರ್ಶಿ ಪ್ರದೀಪ್ ಪೂಜಾರಿ, ಉಪಾಧ್ಯಕ್ಷ ಅಶೋಕ್ ಪೂಜಾರಿ, ಖಾಜಾಂಚಿ ಪ್ರವೀಣ್ ಪೂಜಾರಿ, ಶಾಲೆಯ ಆರ್ಥಿಕ ಸಮಿತಿಯ ಸಂಚಾಲಕ ಗುರುರಾಜ್ ಭಟ್ ಉಪಸ್ಥಿತರಿದ್ದರು.