Author: admin
ಇಂದು ವ್ಯವಹಾರಿಕ ಅಗತ್ಯಕ್ಕೆ ಇತರ ಭಾಷೆಗಳ ಕಲಿಕೆ ಅನಿವಾರ್ಯವಾದರೂ, ಮಾತೃಭಾಷೆ ಮೇಲಿನ ಅಭಿಮಾನ ಎಂದಿಗೂ ಮರೆಯಾಗಬಾರದು. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಮಾತೃಭಾಷೆಯಲ್ಲಿದೆ ಎಂದು ಹಿರಿಯ ಸಾಹಿತಿ ಸದಾನಂದ ನಾರಾವಿ ಹೇಳಿದರು. ನಗರದ ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದಲ್ಲಿ ಜರುಗಿದ ‘ತುಲುವೆರೆ ಕಲ ವರ್ಸೊಚ್ಚಯ’ದಲ್ಲಿ ಸಮಾರೋಪ ಭಾಷಣ ಮಾಡಿದರು. ಶೈಕ್ಷಣಿಕ ದೃಷ್ಟಿಯಿಂದಲೂ ಭಾಷೆಯ ಕಲಿಕೆ ಹೆಚ್ಚಿದಷ್ಟೂ ಜ್ಞಾನದ ಮಟ್ಟ ವೃದ್ಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ ಸಕಾರಾತ್ಮಕ ಚಿಂತನೆ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಬಹುಭಾಷಾ ಕಲಿಕೆ ಮಹತ್ವದ ಪಾತ್ರ ವಹಿಸುತ್ತದೆ. ಭಾಷೆಯನ್ನು ದ್ವೇಷಿಸುವ ಮನೋಭಾವ ಸಲ್ಲದು. ವರ್ಷದ ಅವಧಿಯಲ್ಲಿ ಸಂಘಟನೆ ಪದಾಧಿಕಾರಿಗಳು ಅಭಿನಂದನಾರ್ಹರು. ಸಾಹಿತಿ, ಕವಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟನೆ ಕಾರ್ಯ ನಿರಂತರವಾಗಿರಲಿ, ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಆಶಿಸಿದರು. ಶಾರದಾ ವಿದ್ಯಾಲಯ ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನೆ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಯೂಟ್ಯೂಬ್ ಚಾನೆಲನ್ನು ನಿರೂಪಕ ಕದ್ರಿ ನವನೀತ ಶೆಟ್ಟಿ ಲೋಕಾರ್ಪಣೆಗೊಳಿಸಿದರು. ಸಾಹಿತಿ, ಸಂಘಟಕ…
ಆಯ್ದ ಕೊಬ್ಬರಿ ಉಪಯೋಗಿಸಿ ಸಾಂಪ್ರದಾಯಿಕವಾಗಿ ಗಾಣದಿಂದ ತೆಗೆದ ರಾಸಾಯನಿಕ ಕಲಬೆರಕೆಯಿಲ್ಲದ ಪರಿಶುದ್ಧ ಎಣ್ಣೆ ಹಾಗೂ ಇತರ ನೈಸರ್ಗಿಕ ಉತ್ಪನ್ನಗಳ ಮಿಲ್ ‘ಶುದ್ಧಂ ಗಾಣ’ ಮೇ 2 ರಂದು ಸರ್ವೆ ಗೋಪಿಕಾ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಅವರು ನೂತನ ಮಿಲ್ ನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರಶಾಂತ್ ರೈ ಮನವಳಿಕೆ, ಎ ಜನಾರ್ದನ ರೈ ಸೊರಕೆ, ಆನಂದ ಭಂಡಾರ್ಕರ್ ಹಾಗೂ ಗಂಗಾಧರ ಹೆಗ್ಡೆಯವರು ದೀಪ ಪ್ರಜ್ವಲನಗೊಳಿಸಿದರು. ಮುಂಡೂರು ಗ್ರಾ. ಪಂ ಅಧ್ಯಕ್ಷ ಚಂದ್ರಶೇಖರ್ ಎನ್ ಎಸ್ ಡಿ, ಸದಸ್ಯ ಕಮಲೇಶ್ ಸರ್ವೆದೋಳಗುತ್ತು, ಮುಂಡೂರು ಸಿಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಅಮರನಾಥ ರೈ ಸೊರಕೆ, ಪ್ರವೀಣ್ ರೈ ಪಂಜೊಟ್ಟು, ಶಾಂತರಾಮ ಶೆಟ್ಟಿ, ಅಭಿಲಾಶ್, ಜಿ.ಕೆ ಪ್ರಸನ್ನ ಭಟ್, ಮಹಾಬಲ ರೈ ಮೇಗಿನಗುತ್ತು, ಪ್ರಶಾಂತ್ ರೈ, ಧನ್ಯ ಪಿ ರೈ, ಹರೀಶ್ ಭಂಡಾರಿ, ಮನೋಹರ್ ಅಡ್ಯಂತಾಯ ಬೋಳಂತೂರು, ಆನಂದ್ ಸೂರಂಬೈಲು, ಆಶಾ…
ವಿದ್ಯಾಗಿರಿ: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಹಾದಿಯಲ್ಲಿ, ಪ್ರತಿ ಹಂತದ ಬೆಳವಣಿಗೆಯನ್ನು ದಾಖಲಿಸಿಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ, ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹೊರತಂದ ‘ಆಳ್ವಾಸ್ ವೈಭವ’ ಅರ್ಪಣಾ ಗೀತೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂದಿನ ದಿನಗಳಲ್ಲಿ ದಾಖಲೆಗಳು ಇಲ್ಲದೆ ಇದ್ದರೆ ಯಾರು ನಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಸಾಧನೆಗಳನ್ನು ಮೌಖಿಕವಾಗಿ ಹೇಳಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ವಿದ್ಯಾರ್ಥಿಗಳು ತಮ್ಮ ದಿನ ನಿತ್ಯದ ಚಟುವಟಿಕೆಗಳನ್ನು ದಾಖಲೀಕರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ, ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ ಎಂದರು. ನಂತರ ತಾವು ದೇಶ- ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಅನುಭವವನ್ನು ಹಂಚಿಕೊಂಡರು. ಆಳ್ವಾಸ್ ವೈಭವ ಅರ್ಪಣಾ ಗೀತೆ ತಂಡವನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮಿಂದ ಲಭಿಸಿದ ಚಿಕ್ಕ ಸಹಕಾರದ ಹೊರತಾಗಿಯೂ, ವಿದ್ಯಾರ್ಥಿಗಳ ಶ್ರಮದಿಂದ ಉತ್ತಮ ವೀಡಿಯೋ ಮೂಡಿಬಂದಿದೆ. ಈ ವೀಡಿಯೋ ಆಳ್ವಾಸ್‍ನ ಚಟುವಟಿಕೆಗಳನ್ನು ಸಣ್ಣ ತುಣುಕಿನ ಮೂಲಕ ತೋರಿಸುವ ಪ್ರಯತ್ನ ಶ್ಲಾಘನೀಯ…
“ಉದ್ಯೋಗನಂ ಪುರುಷ ಸಿಂಗಂ ಉಪೈತಿ ಲಕ್ಷ್ಮೀ” ಉದ್ಯೋಗಿಯಾದ ಪುರುಷ ಶ್ರೇಷ್ಠನಲ್ಲಿ ಸಂಪತ್ತು ತಾನಾಗಿ ಬಂದು ನೆಲೆಸುತ್ತದೆ ಎಂಬುದು ಈ ಮಾತಿನ ಅರ್ಥವಾಗಿದೆ. ಇದು ದುಡಿಮೆಯ ಮಹತ್ವವನ್ನು ತಿಳಿಸುವ ಹಿಂದಿನ ಮಾತಾಗಿದೆ. ಯಾವುದೇ ಕಾರ್ಯಗಳು ತಮ್ಮ ಉದ್ಯೋಗದಿಂದ ಸಿದ್ಧಿಸುತ್ತವೇ ಹೊರತು ಕುಳಿತು ಸಂಕಲ್ಪ ಮಾಡುವುದರಿಂದಲ್ಲ. ಇದನ್ನೇ ಜಗಜ್ಯೋತಿ ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದರು. ಕಾಯಕವೆಂದರೆ ದುಡಿಮೆ. ದುಡಿಯದವನಿಗೆ ಉಣ್ಣುವ ಅಧಿಕಾರವಿಲ್ಲ. ಮೈ ಬಗ್ಗಿಸಿ ದುಡಿಯದೇ ದೇಹವನ್ನು ಯಾವುದಾದರೊಂದು ಉದ್ಯೋಗದಲ್ಲಿ ತೊಡಗಿಸದೆ ಇದ್ದಲ್ಲಿ ಜೀವನ ಸಾರ್ಥಕ್ಯ ಹೊಂದಲು ಸಾಧ್ಯವಿಲ್ಲ. ಉದ್ಯೋಗದಲ್ಲಿ ಮೇಲು ಕೀಳು ಎಂಬುವುದಿಲ್ಲ. ಯಾವುದೇ ಉದ್ಯೋಗವಾಗಲಿ ಅದನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದರೆ ಬದುಕಿನಲ್ಲಿ ಯಶಸ್ಸು ಸಾಧ್ಯ. ಅಲ್ಲದೇ ಆ ಉದ್ಯೋಗದಿಂದಲೇ ಮನುಷ್ಯನ ಜೀವನ ಉಜ್ಜೀವನಗೊಳ್ಳಬಹುದು. “ಉದ್ಯೋಗಂ ಪುರುಷ ಲಕ್ಷಣಂ” ಎಂಬ ಮಾತಿನಂತೆ ಮನುಷ್ಯನು ಯಾವುದಾದರೊಂದು ಉದ್ಯೋಗದಲ್ಲಿ ತನ್ನನು ತೊಡಗಿಸಿಕೊಳ್ಳಬೇಕು. ಉದ್ಯೋಗ ಇರುವ ಮನುಷ್ಯ ತನ್ನ ದೈನಂದಿನ ಜೀವನವನ್ನು ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತಾನೆ. ಅಲ್ಲದೇ ಆತನ ಜೀವನದ ಸಮಯವು ವ್ಯರ್ಥವಾಗದೆ ಸದ್ವಿನಿಯೋಗವಾಗುತ್ತದೆ. ಆತನ ಮನಸ್ಸಿಗೆ…
ವಿದ್ಯಾಗಿರಿ: ಸಂಶೋಧನೆಯ ಆರಂಭದಲ್ಲಿ ಬರಹಗಾರನ ಪಾತ್ರವನ್ನು ಮುಗಿಸಿ, ಓದುಗನ ಪಾತ್ರವನ್ನು ಮುಂದುವರಿಸಬೇಕು ಎಂದು ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ- ಕರ್ನಾಟಕ (ಎನ್‍ಐಟಿಕೆ ) ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೋ. ಅರುಣ್ ಎಂ ಇಸ್ಲೂರ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆದ ಪೋಸ್ಟರ್ ತಯಾರಿಕೆ ಮತ್ತು ಪ್ರಸ್ತುತಿ ಹಾಗೂ ಸಂಶೋಧನಾ ವಿಧಾನ ಮತ್ತು ವೈಜ್ಞಾನಿಕ ಬರವಣಿಗೆ ಕೌಶಲ್ಯ ಎಂಬ ವಿಷಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಂಶೋಧನೆಯು ಪ್ರಾಧ್ಯಾಪಕರಿಗೆ ಮಾತ್ರ ಸೀಮಿತವಲ್ಲ ವಿದ್ಯಾರ್ಥಿಗಳಿಗೂ ಅವಶ್ಯಕ. ಒಂದು ಸಂಶೋಧನಾ ಗುಂಪಿನ ಕಾರ್ಯವನ್ನು ನೋಡಿ ನಾವು ಕಲಿಯಬೇಕು ಎಂದರು. ಓದುಗರಾಗಿ ದಿನಕ್ಕೆ ಹದಿನೈದು ಲೇಖನಗಳನ್ನು ಓದುವಷ್ಟು ತಾಳ್ಮೆ ಇಂದು ನಮ್ಮಲ್ಲಿಲ್ಲ, ಬರಹದೊಂದಿಗೆ , ಓದುವವರಾಗಿರುವುದು ಕೂಡ ಮುಖ್ಯ. ಓದುವುದನ್ನು ರೂಡಿಸಿಕೊಳ್ಳಬೇಕು ಎಂದರು. ಸಂಶೋಧನೆ, ನಾವೀನ್ಯತೆ ಮತ್ತು ಪ್ರಾರಂಭದ ಪ್ರಾಮುಖ್ಯತೆ ಕುರಿತು ಮಾತನಾಡಿದ ಮತ್ತು ತಂತ್ರಜ್ಞಾನ ಕಾಲೇಜಿನ ಸಂಶೋಧನಾ ಪ್ರಾಧ್ಯಾಪಕ ಪ್ರೋ. ರಿಚರ್ಡ್ ಪಿಂಟೊ, ಸಂಶೋಧನೆ…
ಆಧುನಿಕ ಸಮಾಜದ ಇಂದಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಾವು ಗಮನಿಸಬಹುದಾದ ಬಹುಮುಖ್ಯ ವಿಚಾರ, ‘ಸಾಮಾಜಿಕ ಶಾಂತಿ’ ಅಂದರೆ ನಮಗಿಂದು ಸುಖ ಜೀವನಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ದೊರೆಯುತ್ತದೆ. ಆದರೆ ಮಾನಸಿಕ ನೆಮ್ಮದಿ ದೊರೆಯುತ್ತಿಲ್ಲ. ಮನುಷ್ಯನ ಬದುಕಿನಲ್ಲಿ ವಿಜೃಂಭಿಸುತ್ತಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇತ್ಯಾದಿ, ರಾಕ್ಷಸೀ ಗುಣಗಳು ಇದಕ್ಕೆ ಕಾರಣವಾಗಿರುತ್ತದೆ. ಆದುದರಿಂದ ಇಂದು ನಾವು ಸಾಮಾಜಿಕ ಬದುಕಿನಲ್ಲಿ ಬೇರೆ ಬೇರೆ ರೂಪದ ಹಿಂಸಾ ಕೃತ್ಯಗಳನ್ನು ನೋಡುತ್ತಿದ್ದೇವೆ. ಪ್ರಾಪಂಚಿಕ ಪರಿಜ್ಞಾನವಿಲ್ಲದ ಮುಗ್ಧ ಜನಗಳನ್ನು ಅಮಾನುಷ ರೀತಿಯಲ್ಲಿ ಗುಂಡಿಕ್ಕಿ ಕೊಲ್ಲುವುದು, ಕಳ್ಳತನ, ದರೋಡೆಗಳನ್ನು ನಡೆಸುವುದು ಒಂದು ರೀತಿಯ ಹಿಂಸಾ ಕೃತ್ಯವಾದರೆ, ಹೆಂಡತಿಯೊಡನೆ ಕಠೋರವಾಗಿ ನಡೆಯುವುದು, ಮಕ್ಕಳ ಆರೋಗ್ಯ, ಶಿಕ್ಷಣ, ನೈತಿಕತೆಯ ಬಗ್ಗೆ ನಿರ್ಲಕ್ಷ ತೋರುವುದು, ತನ್ನಿಂದ ಕೆಳ ಮಟ್ಟದವರನ್ನು ಹೀನಾಯಿಸುವುದು, ನೆರೆಕರೆಯವರನ್ನು ಪೀಡಿಸುವುದು, ಸ್ನೇಹಿತರಿಗೆ ಮೋಸ ಮಾಡುವುದು, ಬಡವರನ್ನು ನಿರ್ಲಕ್ಷಿಸುವುದು, ರೋಗಿಗಳು ಮತ್ತು ವೈದ್ಯರ ಸೇವೆ ಮಾಡದಿರುವಿದು, ಪ್ರಾಣಿಗಳನ್ನು ಸರಿಯಾಗಿ ಸಾಕದಿರುವುದು, ಸಸ್ಯಗಳನ್ನು ನಾಶಪಡಿಸುವುದು ಕೂಡಾ ಹಿಂಸಾ ಕಾರ್ಯಗಳಾಗಿವೆಯೆಂದು ಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.…
ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ಗಬ್ಬರ್ ಸಿಂಗ್ ತುಳು ಚಲನಚಿತ್ರ ಮೇ 3 ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರಗಳಲ್ಲಿ “ಗಬ್ಬರ್ ಸಿಂಗ್” ಸಿನಿಮಾ ತೆರೆ ಕಾಣಲಿದೆ. ಗಬ್ಬರ್ ಸಿಂಗ್ ತುಳು ಸಿನಿಮಾ ವಿಭಿನ್ನ ಕಥೆಯನ್ನು ಒಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಉತ್ತಮ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ,…
ವಿದ್ಯಾಗಿರಿ: ‘ಅನುಭವಿಗಳು ಅಪನಂಬಿಕೆಯನ್ನು ಹೋಗಲಾಡಿಸಬೇಕು’’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸತ್ರೆ ಹಾಗೂ ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮೂಡುಬಿದಿರೆ ಜಿ.ಎಸ್.ಬಿ ಸಮಾಜ, ಭಾರತೀಯ ಜೈನ್ ಮಿಲನ್, ಬ್ರಾಹ್ಮಣ ಸಭಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಮೂಢನಂಬಿಕೆ ಎಂಬುದು ನಮ್ಮ ಸಮಾಜದಲ್ಲಿ ತಾಂಡವವಾಡುತ್ತಿದೆ. ಇದರಿಂದ ಹೊರಬರಲು ನಾವು ಮೊದಲು ಭಯ ಹಾಗೂ ನಿರ್ಲಕ್ಷ್ಯವನ್ನು ಬಿಡಬೇಕು. ನಾನು ಈ ವೃತ್ತಿಗೆ ಬಂದಾಗ ಇದ್ದ ಚಿಕಿತ್ಸೆಗಳಿಗೂ, ಈಗಿನ ಚಿಕಿತ್ಸೆಗಳಿಗಳು ಬಹಳಷ್ಟು ವ್ಯತ್ಯಾಸ ಇವೆ. ಕ್ರಾಂತಿಕಾರಿ ಬದಲಾವಣೆಗಳು ನಡೆದಿವೆ. ಆದರೂ ನಮ್ಮ ಸಮಾಜದಲ್ಲಿ ಕಟ್ಟಕಡೆಯ ಜನ ಹಾಗೂ ಸಮುದಾಯಗಳಿಗೆ ಆರೋಗ್ಯ ಕುರಿತು ಮಾಹಿತಿಯೂ ಇರುವುದಿಲ್ಲ. ಅನುಭವದ ಕೊರತೆ ಇರುತ್ತದೆ ಎಂದರು. ನಾವು ಈ ಆರೋಗ್ಯ ತಪಾಸಣೆಯನ್ನು ಯಾವುದೇ…
ಮೂಡುಬಿದಿರೆ: ‘ಕೃತಕ ಬುದ್ಧಿಮತ್ತೆ(ಎ.ಐ.) ತಂತ್ರಜ್ಞಾನದೊಂದಿಗೆ ನಾವು ನಡೆಯಬಹುದು. ಅದರ ಮೇಲೆ ಕೂತು ಸಾಗಬಹುದು. ಆದರೆ ಅದನ್ನು ಮಲಗಿಸಲು ಸಾಧ್ಯವಿಲ್ಲ. ಜೊತೆ ಸಾಗುವುದು ಅನಿವಾರ್ಯ ಎಂದು ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ.ಗಣೇಶ್ ಕೆ ಹೇಳಿದರು. ಇಲ್ಲಿನ ಮಿಜಾರು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕಂಪ್ಯೂಟರ್ ಪ್ರಯೋಗಾಲಯದಲ್ಲಿ ಸೋಮವಾರ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆ ಹಮ್ಮಿಕೊಂಡ ನೆಕ್ಸ್ಟ್-ಜೆನ್ ಜರ್ನಲಿಸಂ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ತಂತ್ರಜ್ಞಾನದ ಕಲಿಕೆಯೊಂದಿಗೆ, ಕಲಿತವರೊಂದಿಗೆ ನಮ್ಮ ಒಡನಾಟವೂ ಮುಖ್ಯ ಎಂದ ಅವರು, ಹದಿನೈದು ವರ್ಷಗಳ ಹಿಂದೆ ಬ್ರಾಂಡ್ ಎನಿಸಿಕೊಂಡಿದ್ದ ನೋಕಿಯಾ ಫೆÇೀನ್‍ನ ಬಳಕೆ ಇಂದು ಕಡಿಮೆಯಾಗಿದೆ. 2014 ರಲ್ಲಿ ಮೈಕ್ರೋಸಾಫ್ಟ್ ಗಳ ಒಡನಾಟದ ನಂತರ ವಿವೊ, ಸ್ಯಾಮ್ ಸಾಂಗ್ ಗಳ ಬಳಕೆ ಹೆಚ್ಚಾದವು ಎಂದರು. ಹೊಸದಾಗಿ ಬಂದ ಕೃತಕಬುದ್ಧಿಮತ್ತೆ (ಎ.ಐ.)ಯು ಪತ್ರಿಕಾರಂಗಕ್ಕೆ ಸವಾಲು. ಐದು ವರ್ಷಗಳ…
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಎಪ್ರಿಲ್ 30 ರಂದು ಬೆಳಗ್ಗೆ 11 ಕ್ಕೆ ನಗರದ ಪ್ರತಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಅಧ್ಯಕ್ಷ, ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸಿ ಗೌರವ ಸ್ವೀಕರಿಸಲಿದ್ದಾರೆ. ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.