ಬಂಟರ ಸಂಘ ಕಡಂದಲೆ – ಪಾಲಡ್ಕ (ರಿ) ಮೂಡಬಿದರೆ ತಾಲೂಕು ದಕ್ಷಿಣ ಕನ್ನಡ ಆಶ್ರಯದಲ್ಲಿ ಬೆಂಗಳೂರು ಬಂಟರ ಸಂಘ ಇವರ ಸಹಭಾಗಿತ್ವದಲ್ಲಿ ಜನವರಿ 12 ರಂದು ಗಣೇಶ ದರ್ಶನ ಪಲ್ಕೆ ಸಭಾಭವನದಲ್ಲಿ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಂದಲೆ ಬಂಟರ ಸಂಘದ ಅಧ್ಯಕ್ಷ ಸುದರ್ಶನ್ ಶೆಟ್ಟಿಯವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ, ಗೌರವ ಕಾರ್ಯದರ್ಶಿ ಹಾಲಾಡಿ ವಿಜಯ್ ಶೆಟ್ಟಿ, ವಿದ್ಯಾರ್ಥಿವೇತನ ಸಮಿತಿಯ ಛೇರ್ಮನ್ ಉಮೇಶ್ ಕುಮಾರ್ ಶೆಟ್ಟಿಯವರು ಉಪಸ್ಥಿತರಿದ್ದು, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಸಿಎ ಅಶೋಕ್ ಶೆಟ್ಟಿ ಹಾಗೂ ಉಮೇಶ್ ಕುಮಾರ್ ಶೆಟ್ಟಿಯವರನ್ನು ಅಧ್ಯಕ್ಷ ಸುದರ್ಶನ್ ಶೆಟ್ಟಿಯವರು ಗೌರವಿಸಿದರು.

		




































































































