Author: admin
ಟೈಟಲ್, ಪೋಸ್ಟರ್ ನಿಂದಲೇ ಕುತೂಹಲ ಕೆರಳಿಸಿರೋ “ಗಬ್ಬರ್ ಸಿಂಗ್” ತುಳು ಚಲನಚಿತ್ರದ ಪ್ರೇಮಗೀತೆ ಮತ್ತು ಪೋಸ್ಟರನ್ನು ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಬಿಡುಗಡೆಗೊಳಿಸಿದರು. ದೇವದಾಸ್ ಕಾಪಿಕಾಡ್ ಅವರ ಮನೆಗೆ ತೆರಳಿದ ಗಬ್ಬರ್ ಸಿಂಗ್ ತಂಡ ಕಾಪಿಕಾಡ್ ಅವರಿಂದ ಪೋಸ್ಟರ್ ಮತ್ತು ಪ್ರೇಮಗೀತೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತಾಡಿದ ದೇವದಾಸ್ ಕಾಪಿಕಾಡ್ ಡೊಲ್ಪಿನ್ ಕೊಳಲಗಿರಿ ಅವರ ಸಂಗೀತದಲ್ಲಿ ಅರುಣ್ ಲೂಯಿಸ್ ಬರೆದಿರುವ ಸಾಹಿತ್ಯ ಅರ್ಥಪೂರ್ಣವಾಗಿದೆ. ಮಧು ಸುರತ್ಕಲ್ ಸಂಭಾಷಣೆ ಬರೆದಿದ್ದಾರೆ. ನಿರ್ಮಾಪಕ ಸತೀಶ್ ಪೂಜಾರಿ ಅವರು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಗಿರೀಶ್ ಶೆಟ್ಟಿ ಕಟೀಲು, ಶಿಲ್ಪಾ ಶೆಟ್ಟಿ ಮೊದಲಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು. ಪೋಸ್ಟರ್ ಬಿಡುಗಡೆಯ ಸಂದರ್ಭದಲ್ಲಿ ನಿರ್ಮಾಪಕ ಸತೀಶ್ ಪೂಜಾರಿ, ಮಧು ಸುರತ್ಕಲ್, ಉದಯ ಆಳ್ವ, ಅಥರ್ವ ಪ್ರಕಾಶ್, ನಾಯಕ ನಟ ಶರಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಾರ್ಚ್ 22 ರಂದು ಕರಾವಳಿ ಜಿಲ್ಲೆಯಾದ್ಯಂತ ಗಬ್ಬರ್…
ನಮ್ಮ ಹಿಂದೂ ಸಂಸ್ಕ್ರತಿ ಮತ್ತು ನಮ್ಮ ಭಾರತೀಯ ಹಿಂದೂ ಆಚರಣೆಗಳು ಅದೆಷ್ಟೋ ರೀತಿಯಲ್ಲಿ ಆಚರಣೆಗೊಳ್ಳುತ್ತಿವೆ. ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಆಚರಣೆಗೊಳ್ಳುವ ಧಾರ್ಮಿಕ ಕಾರ್ಯಕ್ರಮಗಳು ತನ್ನದೇ ಆದಂತಹ ವೈಶಿಷ್ಟ್ಯಗಳನ್ನೂ ಹೊಂದಿವೆ ಮತ್ತು ಇವುಗಳಲ್ಲಿ ಹಲವಾರು ವಿವಿಧತೆಯನ್ನು ಕಾಣುತ್ತೇವೆ. ಆದರೆ ಎಲ್ಲಾ ವಿಶೇಷ ಪರ್ವಗಳು ನಮ್ಮ ಸನಾತನ ಧರ್ಮದ ಮೂಲದಿಂದ ಬಂದವುಗಳು. ಇದನ್ನು ಇಂದು ಕೂಡಾ ವಿವಿದೆಡೆ ಆಚರಿಸುತ್ತಾರೆ. ಆದರೆ ಹಲವಾರು ರೀತಿಯ ಬದಲಾವಣೆಗಳನ್ನು ಕಾಣುತ್ತೇವೆ. ಅದೇ ರೀತಿ ಅರಶಿನ ಕುಂಕುಮ ಕಾರ್ಯಕ್ರಮ ನಮ್ಮ ಕರ್ಮಭೂಮಿ ಮಹಾರಾಷ್ಟ್ರದ ಆಚರಣೆಯಂತೆ ನಮ್ಮ ಹಿಂದೂ ಸಂಸ್ಕ್ರತಿಯಂತೆ ಆಚರಿಸಿಕೊಂಡು ಬರುವ ಕಾರ್ಯಕ್ರಮ. ನಮ್ಮ ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಕಾರ್ಯ ನಮ್ಮಿಂದಾಗಬೇಕು. ಪ್ರತೀ ವರ್ಷ ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗುವ ಅರಶಿನ ಕುಂಕುಮದ ಒಂದು ಪವಿತ್ರ ಸಂಪ್ರದಾಯ. ಮಹಿಳೆಯರು ಒಂದೆಡೆ ಸೇರಿ ತಮ್ಮ ಸಾಂಸಾರಿಕ ಜೀವನದ ಒಳಿತಿಗಾಗಿ ಪರಸ್ಪರ ಹಾರೈಸಿಕೊಂಡು ಸಂಭ್ರಮಿಸುವ ಪರ್ವವಿದು. ಈ ಪರ್ವ ಕಾಲದಲ್ಲಿ ಮುತ್ತೈದೆಯರು ತಮ್ಮ ಕಷ್ಟ ದುಃಖಗಳು ದೂರಾವಾಗಿ ಸುಖ ಶಾಂತಿ ನೆಮ್ಮದಿ ಬದುಕು ನಮ್ಮದಾಗಲಿ…
ಜನ ಮರುಳೋ ಜಾತ್ರೆ ಮರುಳೋ, ಎಲ್ಲಿ ನೋಡಿದರು ನಾ ಮುಂದು ತಾ ಮುಂದು ಎನ್ನುವ ಹಾಗೆ ಆಧುನಿಕತೆಗೆ ಮರುಳಾಗಿರುವ ಈ ಕಾಲದಲ್ಲಿ ನಾವು ಕಳೆದ ಆ ಬಾಲ್ಯದ ದಿನಗಳ ನೆನಪುಗಳು ಮಾತ್ರ ಅಮರ. ಇತ್ತೀಚಿನ ದಿನಗಳಲ್ಲಿ ನಾವೆಲ್ಲ ಕೈಗೊಂಬೆಯಂತೆ ಆಡುತ್ತಿದ್ದೇವೆ ಎಂದರೆ ತಪ್ಪಿಲ್ಲ. ಹೇಗೆ ಅನ್ನುತ್ತೀರ! ಅಷ್ಟೆಲ್ಲಾ ಯೋಚಿಸಬೇಡಿ ಅದುವೇ ಜಂಗಮ (ಮೊಬೈಲ್). ಈ ಬೊಂಬೆಯಾಟಕ್ಕೆ ಬೀಳದವರಾರೂ ಇಲ್ಲ. ಸಣ್ಣ ಮಕ್ಕಳಿಂದ ಹಿಡಿದು ಹಿರಿ ವಯಸ್ಸಿನವರೂ ಈ ಗೊಂಬೆಯ ಆಟದಿಂದ ತಪ್ಪಿಸಿಕೊಂಡಿಲ್ಲ. ಪ್ರಸ್ತುತ ಎಷ್ಟೋ ಮಕ್ಕಳ ಬಾಲ್ಯದ ಕ್ಷಣಗಳು ಈ ಉಪಕರಣದಿಂದ ಮಾಸಿ ಹೋಗುತ್ತಿವೆ ಎಂದರೆ ತಪ್ಪಿಲ್ಲ. ಮುಂಜಾವಿನಿಂದ ಇಳಿ ಸಂಜೆವರೆಗೂ, ನಿದ್ದೆಯಲ್ಲೂ ಈ ಕೈಗೊಂಬೆಯದ್ದೇ ಕನವರಿಕೆ. ಅಷ್ಟರ ಮಟ್ಟಿಗೆ ಅವಲಂಬಿತವಾಗಿದೆ. ಸ್ವಲ್ಪ ಹಿಂದಕ್ಕೆ ಹೋದರೆ ಸಾಕು ನಾವು ಕಳೆದ ಆ ದಿನಗಳು ಇನ್ನು ಎಂದಾದರು ಮರುಕಳಿಸಿತೇ? ಬೆಳಗ್ಗೆ ಎದ್ದು ದೈನಂದಿನ ದಿನಚರಿ ಮುಗಿಸಿ ಅಮ್ಮ ಪ್ರೀತಿಯಿಂದ ಮಾಡಿಟ್ಟ ತಿಂಡಿ ತಿಂದು ಹೊರಟರೆ ಮತ್ತೆ ಹಸಿವಿನ ನೆನಪೇ ಆಗದು. ಇಡೀ ದಿನ…
ಪುತ್ತೂರು ತಾಲೂಕು ಯುವ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಡಾ. ಹರ್ಷಕುಮಾರ್ ರೈ ಮಾಡಾವು, ಪ್ರಧಾನ ಕಾರ್ಯದರ್ಶಿಯಾಗಿ ರಂಜಿನಿ ಶೆಟ್ಟಿ ಮತ್ತು ಪ್ರಜ್ವಲ್ ರೈ ಸೊರಕೆ
ಪುತ್ತೂರು ತಾಲೂಕು ಯುವ ಬಂಟರ ಸಂಘದ ಮುಂದಿನ ಎರಡು ವರ್ಷದ ಅವಧಿಗೆ ಡಾ. ಹರ್ಷಕುಮಾರ್ ರೈ ಮಾಡಾವು ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಗಳಾಗಿ ರಂಜಿನಿ ಶೆಟ್ಟಿ ಮತ್ತು ಪ್ರಜ್ವಲ್ ರೈ ಸೊರಕೆ, ಕೋಶಾಧಿಕಾರಿಯಾಗಿ ಶಿವಶ್ರೀ ರಂಜನ್ ರೈ ದೇರ್ಲ ಆಯ್ಕೆಗೊಂಡಿದ್ದಾರೆ. ಫೆ.15 ರಂದು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಂತೆ ಈ ಆಯ್ಕೆಯನ್ನು ಸಂಘದ ಸಲಹೆಗಾರ ಚುನಾವಣಾಧಿಕಾರಿ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಚುನಾವಣಾಧಿಕಾರಿಯವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ಹಸ್ತಾಂತರಿಸಿದರು. ಜೊತೆ ಕಾರ್ಯದರ್ಶಿಯಾಗಿ ಶುಭಾ ರೈ, ಸಂಘಟನಾ ಸಂಚಾಲಕರಾಗಿ ಸಂದೇಶ್ ರೈ ಡಿ, ಧಾರ್ಮಿಕ ಸಂಚಾಲಕರಾಗಿ ಮನ್ಮಥ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಪುತ್ತೂರು ನಗರ ವಲಯದ ನಿಹಾಲ್ ಪಿ ಶೆಟ್ಟಿ, ಉಪ್ಪಿನಂಗಡಿ ವಲಯದ ಸತೀಶ್ ಎನ್ ಶೆಟ್ಟಿ, ಪಾಣಾಜೆ ವಲಯದ ಜಿ.ಕೆ. ಕಾರ್ತಿಕ್ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ನೆಟ್ಟಣಿಗೆ ಮುಡ್ನೂರು, ಕಡಬ, ಬೆಳಂದೂರು, ನೆಲ್ಯಾಡಿ ವಲಯಕ್ಕೆ ಹಾಗೂ 9…
ಪುಣೆಯಲ್ಲಿ ಫೆಬ್ರವರಿ 16 ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ, ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ ರಾಜೇಂದ್ರ ವಿ ಶೆಟ್ಟಿ ಇವರ ನೂತನ ಹೋಟೆಲ್ ‘ವಿಶ್ವನಾಥ್ ಪ್ಯಾಲೇಸ್‘ ಶುಭಾರಂಭಗೊಂಡಿತು. ಈ ಸಂಧರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹಾಗೂ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಯವರು ಪಾಲ್ಗೊಂಡು ಅಭಿನಂದಿಸಿದರು.
ಪ್ರತೀ ವರ್ಷ ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಕ್ರೆಡಿಟ್ ಸೊಸೈಟಿಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ ‘ಬ್ಯಾಂಕೋ ಬ್ಲೂ ರಿಬ್ಬನ್‘ ಪ್ರಶಸ್ತಿಯು ಮುಂಬಯಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ್ನು ಗುರುತಿಸಿ 2022-23 ರ ಸಾಲಿನ ಠೇವಣಿ ವರ್ಗದ ಅಡಿಯಲ್ಲಿ ಈ ಪ್ರಶಸ್ತಿ ಲಭಿಸಿದೆ. ಬ್ಯಾಂಕೋ 1990 ರಲ್ಲಿ ಸ್ಥಾಪಿಸಲಾದ ಏವಿಎಸ್ ಪಬ್ಲಿಕೇಷನ್ ನ ಅತ್ಯಂತ ಪ್ರಸಿದ್ದ ಮತ್ತು ವಿಶ್ವಾಸಾರ್ಹ ಬಿಎಫ್ ಎಸ್ ಬಿ (ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯ) ಪ್ರಕಾಶನ ಬ್ರಾಂಡ್ ಆಗಿದೆ. ಬ್ಯಾಂಕೋ ಬ್ಲೂ ರಿಬ್ಬನ್ ಎಲ್ಲಾ ಸಹಕಾರಿ ಬ್ಯಾಂಕ್ ಗಳು ಮತ್ತು ಕ್ರೆಡಿಟ್ ಸೊಸೈಟಿಗಳಿಗೆ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಇಂತಹ ವೇದಿಕೆಯಲ್ಲಿ ಬಂಟ ಸಮಾಜದ ಪ್ರತಿಷ್ಠಿತ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಆರ್ಥಿಕ ಸೇವಾ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದೆ. ಈ ಹಿಂದೆಯೂ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಗೆ 4 ಬಾರಿ ಈ ಪ್ರಶಸ್ತಿಯು ಲಭ್ಯವಾಗಿರುವುದಲ್ಲದೇ, ಈ…
ವಿದ್ಯಾಗಿರಿ (ಮೂಡುಬಿದಿರೆ): ‘ಯಾವುದೇ ಸೃಜನಶೀಲ ಕೆಲಸ ಸಾಕಾರಗೊಳ್ಳಲು ಬರಹವೇ ಬುನಾದಿ’ ಎಂದು ಜೀ ಕನ್ನಡ ವಾಹಿನಿಯ ನಿರ್ದೇಶಕ (ಫಿಕ್ಶನ್ ಪ್ರೋಗ್ರಾಮಿಂಗ್) ಸುಧೀಂದ್ರ ಭಾರದ್ವಾಜ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಳ್ವಾಸ್ ಫಿಲಂ ಸೊಸೈಟಿ ಹಮ್ಮಿಕೊಂಡ ‘ಸೃಜನಶೀಲತೆಯ ಸಂಕಿರಣ- ಜೀ ಕನ್ನಡ ವಾಹಿನಿ ಜೊತೆ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು. ಒಂದು ಉತ್ತಮ ಸಿನಿಮಾ, ವಿಡಿಯೊ, ಫಿಕ್ಶನ್, ರಿಯಾಲಿಟಿ ಷೋ ಯಾವುದೇ ಇದ್ದರೂ, ಅದರ ಚಿತ್ರಕತೆ ಬರೆದು ರೂಪಿಸಿದಾಗ ಮಾತ್ರ ಗುಣಮಟ್ಟದಲ್ಲಿ ನಿರ್ಮಾಣಗೊಳ್ಳಲು ಸಾಧ್ಯ. ಉತ್ತಮ ಬರಹದ ಮೂಲಕ ಉತ್ತಮವಾಗಿ ಸೃಜಿಸಬಹುದು ಎಂದರು. ಮನೋರಂಜನಾ ಮಾಧ್ಯಮದಲ್ಲಿ ಕೆಲಸ ಮಾಡುವವರು ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಹೆಚ್ಚು ಇಷ್ಟಪಡುತ್ತೇವೆ. ಏಕೆಂದರೆ, ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ನಮ್ಮ ಓಟವನ್ನು ನಾವು ನಿಮಗೆ ಒಪ್ಪಿಸಬೇಕಾಗಿದೆ ಎಂದರು. ಸೃಜನಶೀಲ ಮಾಧ್ಯಮದಲ್ಲಿ ಕೆಲಸ ಮಾಡುವವರೆಲ್ಲ ಹುಚ್ಚರಂತೆ. ಹೊಸತನಕ್ಕಾಗಿ ಹಂಬಲಿಸುತ್ತಾ, ಕೆಲಸದಲ್ಲೇ ತನ್ಮಯ, ತಲ್ಲಿನ ಎಲ್ಲವೂ ಆಗಬೇಕು. ಆಗಲೇ ಯಶಸ್ಸು ಅರಸಿ ಬರಲು ಸಾಧ್ಯ. ನೀವೆಲ್ಲ ಬರಹದಲ್ಲಿ…
ಉಡುಪಿ ಅಜ್ಜರಕಾಡು ಸಾಯಿ ಹರ್ಷ ಪರ್ಲ್ ಔರಾ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಮಹಾಗಣಪತಿ ಸೌಹಾರ್ದ ಸೇವಾ ಸಹಕಾರಿ ಸಂಘ ಇದರ ಉದ್ಘಾಟನೆ ಫೆ.12ರಂದು ನಡೆಯಿತು. ಸಂಘದ ಅಧ್ಯಕ್ಷ ಪ್ರಸಾದ್ ರೈ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಎಳ್ಳಾರೆ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಅರ್ಚಕ ಪುಟ್ಟಣ್ಣ ಅಡಿಗ, ಶ್ರೀಕ್ಷೇತ್ರ ಮೂಡುಸಗ್ರಿ ಇಲ್ಲಿನ ಧರ್ಮದರ್ಶಿ ಭಾಸ್ಕರ್ ಗುಂಡಿಬೈಲು, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಕೊಡವೂರು ಯುವ ಬಂಟರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಉಡುಪಿ ದೈವರಾಧಕರ ಸಂಘದ ಅಧ್ಯಕ್ಷ, ಸಂಘದ ನಿರ್ದೇಶಕ ವಿನೋದ್ ಶೆಟ್ಟಿ ಸ್ವಾಗತಿಸಿ, ನವ್ಯ ಪುತ್ತೂರು ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಸಚಿನ್ ವಂದಿಸಿದರು.
ಭಾರತವು ಕೃಷಿ ಪ್ರಧಾನವಾದ ದೇಶವಾಗಿದ್ದು ಇಂದಿನ ಯುವ ಜನತೆ ಕೃಷಿಯತ್ತ ಒಲವು ತೋರಿಸುವ ಅಗತ್ಯವಿದೆ ಎಂದು ನಿವೃತ್ತ ಸುರತ್ಕಲ್ ಕೃಷಿ ಅಧಿಕಾರ ಅಬ್ದುಲ್ ಬಶೀರ್ ನುಡಿದರು. ಅವರು ಬಂಟರ ಸಂಘ ಸುರತ್ಕಲ್ ಲಯನ್ಸ್ ಕ್ಲಬ್ ಸುರತ್ಕಲ್ ಮತ್ತು ಜೇಸಿಐ ಸುರತ್ಕಲ್ ಸಹಯೋಗದಲ್ಲಿ ಬಂಟರ ಭವನ ಸುರತ್ಕಲ್ ನಲ್ಲಿ ನಡೆದ ಸಾವಯವ ಕೃಷಿಕರ ಮತ್ತು ಗ್ರಾಹಕರ ಮುಖಾಮುಖಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಈಗೀನ ಕಾಲಘಟ್ಟದಲ್ಲಿ ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಸಾವಯವ ಕೃಷಿಯ ಅಗತ್ಯವಿದೆ. ಗ್ರಾಹಕರು ನೇರವಾಗಿ ಕೃಷಿಕರಿಂದ ಆಹಾರದ ಪದಾರ್ಥಗಳನ್ನು ಖರೀದಿ ಮಾಡಿದಲ್ಲಿ ಕೃಷಿಕರಿಗೆ ಪ್ರಯೋಜನವಾಗಲಿದೆ ಎಂದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೃಷಿಕರಾದ ಎಕ್ಕಾರು ಸದಾಶಿವ ಶೆಟ್ಟಿ, ಸುರತ್ಕಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಜಯಂತ ಶೆಟ್ಟಿ ತಡಂಬೈಲ್, ಜೇಸಿಐ ಸುರತ್ಕಲ್ ಅಧ್ಯಕ್ಷೆ ಜ್ಯೋತಿ ಪಿ.ಶೆಟ್ಟಿ, ಬಂಟರ ಸಂಘ ಸುರತ್ಕಲ್ ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಪೂಂಜಾ, ಕೃಷಿ ಸಮಿತಿ ಸಂಚಾಲಕ ಮೆಬೈಲ್…
ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾಗಿ ಉದ್ಯಮಿ, ಸಮಾಜಸೇವಕ ಡಾ. ಹರ್ಷ ಕುಮಾರ್ ರೈ ಮಾಡವು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳು :- ನಿಕಟಪೂರ್ವ ಅಧ್ಯಕ್ಷರು: ಶಶಿರಾಜ್ ರೈ, ಅಧ್ಯಕ್ಷರು: ಡಾ. ಹರ್ಷಕುಮಾರ್ ರೈ ಮಾಡಾವು, ಪ್ರಧಾನ ಕಾರ್ಯದರ್ಶಿ (ಆಡಳಿತ) : ರಂಜಿನಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ (ಸೇವೆ ಮತ್ತು ಕಾರ್ಯಕ್ರಮ) : ಪ್ರಜ್ವಲ್ ರೈ ಸರ್ವೆ, ಕೋಶಾಧಿಕಾರಿ : ಶಿವಶ್ರೀ ರಂಜನ್ ರೈ, ಜೊತೆ ಕಾರ್ಯದರ್ಶಿ : ಶುಭ ರೈ ನಿಮ್ಮ ಮುಂದಿನ ಬಂಟರ ಸಂಘದ ಸಂಘಟನಾ ಪ್ರಯಾಣ ಸುಸೂತ್ರವಾಗಿ ನಡೆಯಲಿ ಹಾಗೂ ಯಶಸ್ಸು ನಿಮ್ಮದಾಗಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.