Author: admin
ಕಾವೂರು ಬಂಟರ ಭವನಕ್ಕೆ ಶಿಲಾನ್ಯಾಸ, ಸಂಘದ ಆಡಳಿತ ಕಚೇರಿ ಮತ್ತು ಬಯಲು ರಂಗ ಮಂದಿರದ ಉದ್ಘಾಟನೆ ಫೆಬ್ರವರಿ 21 ರಂದು ಪೂರ್ವಹ್ನ 11 ಗಂಟೆಗೆ ಕೂಳೂರು ಕಾವೂರು ರಸ್ತೆಯ ಮಾಲಾಡಿ ಕೋರ್ಟ್ ಮುಖ್ಯ ರಸ್ತೆಯಲ್ಲಿರುವ ಕಾವೂರು ಬಂಟರ ಸಂಘದ ನಿವೇಶನದಲ್ಲಿ ಜರಗಲಿದೆ ಎಂದು ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಂಟರ ಭವನವು ಒಟ್ಟು 33,000 ಚದರ ವಿಸ್ತೀರ್ಣದ ಸುಮಾರು 1,000 ಆಸನಗಳ ಸಭಾಭವನ, ಭೋಜನಾಲಯ, 100 ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಹಾಸ್ಟೆಲ್ ಹಾಗೂ ನಿತ್ಯಾನಂದ ಗುರುಗಳ ಪ್ರತಿಮೆಯನ್ನು ಒಳಗೊಂಡಿರುತ್ತದೆ ಎಂದರು. ಪ್ರತಿಕಾಗೋಷ್ಠಿಯಲ್ಲಿ ಕಟ್ಟಡ ಸಮಿತಿಯ ಅಧ್ಯಕ್ಷ ಡಿ.ಸುಧಾಕರ ಶೆಟ್ಟಿ ಮುಗ್ರೋಡಿ, ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಕಾವೂರು, ಸಂಚಾಲಕ ಎಂ.ಎಸ್. ಶೆಟ್ಟಿ ಸರಪಾಡಿ, ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ರಾಜ್ಯದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದವರು ಎನ್ನುತ್ತಾರೆ. ಅದು ನಿಜ ಎಂದಾದಲ್ಲಿ ನೀವು ಬಂಟರ ಸಮ್ಮೇಳನದಲ್ಲಿ ನೀಡಿದ ಭರವಸೆಯಂತೆ ಬಂಟರ ನಿಗಮ ಸ್ಥಾಪಿಸಿ ನುಡಿದಂತೆ ನಡೆಯಿರಿ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟರ ಸಂಘಕ್ಕೆ ಇದುವರೆಗೆ ಯಾವ ಸರಕಾರದಿಂದಲೂ ಸಹಕಾರ ಸಿಕ್ಕಿಲ್ಲ. ಬಂಟ ಸಮುದಾಯ ನೋಡಲು ಬಲಿಷ್ಠ ಸಮಾಜ. ಆದರೆ ನಮ್ಮಲ್ಲೂ ಶೇಕಡ 50ಕ್ಕಿಂತ ಅಧಿಕ ಕಡು ಬಡವರಿದ್ದಾರೆ. ದೊಡ್ಡವರಿಗೆ ಸಮುದಾಯದಲ್ಲಿ ಕಷ್ಟದಲ್ಲಿರುವವರ ಬಗ್ಗೆ ಗೊತ್ತಿಲ್ಲ. ಆದರೆ ನಮಗೆ ಗೊತ್ತಿದೆ. ಜಾಗತಿಕ ಬಂಟರ ಸಂಘಕ್ಕೆ ಯಾವುದೇ ಆದಾಯವಿಲ್ಲ. ಇತರರಲ್ಲಿ ಹಣ ಸಂಗ್ರಹಿಸಿ ಸಹಾಯ ಮಾಡುತ್ತಿದ್ದೇವೆ. ಈ ಕಾರಣದಿಂದ ನಮಗೂ ನಿಗಮ, ಮೀಸಲಾತಿ ಬೇಕು ಎಂದು ತಿಳಿಸಿದರು. ನಮಗೆ ಬಿಜೆಪಿ, ಕಾಂಗ್ರೆಸ್ ಎಲ್ಲವೂ ಸಮಾನ. ಬಂಟ ಜನಪ್ರತಿನಿಧಿಗಳು ರಾಜಕೀಯವಾಗಿ ಹೇಳಿಕೆ ನೀಡುವ ಬದಲು ನಿಮಗೂ ಜವಾಬ್ದಾರಿ ಇದೆ. ಅವರು ನಮ್ಮ ಬೇಡಿಕೆ ಈಡೇರಿಸಲು ಯಾವ ರೀತಿ ಸ್ಪಂದಿಸಿದ್ದೀರಿ…
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಸೈಬರ್ ತರಬೇತಿ ‘ಸೈಬರ್ ದಾಳಿಯನ್ನು ಮುಚ್ಚಿಟ್ಟರೆ ಅಪಾಯ’
ಮೂಡುಬಿದಿರೆ: ಸೈಬರ್ ದಾಳಿಯ ತೀವ್ರತೆಯನ್ನು ಅರಿಯದೇ ಮುಚ್ಚಿಡಬೇಡಿ. ವೈಯಕ್ತಿಕ ಬದುಕಿಗೆ ಅಪಾಯ ಎಂದು ಮಂಗಳೂರಿನ ಕೋಡ್‍ಕ್ರಾಫ್ಟ್ ಟೆಕ್ನಾಲಜಿ ಸಹ ಸಂಸ್ಥಾಪಕ ಹಾಗೂ ಸಿಟಿಒ ಪ್ರವೀಣ್ ಕ್ಯಾಸ್ಟೆಲಿನೊ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ರಾಜ್ಯ ಸರ್ಕಾರದ ಸೈಸೆಕ್(ಸೈಬರ್ ಸೆಕ್ಯುರಿಟಿ ಕರ್ನಾಟಕ) ಮತ್ತು ಚೆನ್ನೈ ತ್ರಿಶಾಕ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡ ಕರ್ನಾಟಕದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ 35 ದಿನಗಳ(ಫೆಬ್ರುವರಿ 19ರಿಂದ ಮಾರ್ಚ್22) ತರಬೇತಿ (ಸಿಎಸ್‍ಎಫ್‍ಎಸ್ ತರಬೇತಿ)ಯ ಉದ್ಘಾಟನಾ ಕಾರ್ಯಕ್ರಮ ‘ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್ (ಸಿಎಸ್‍ಎಫ್‍ಎಸ್)’ನಲ್ಲಿ ಸೋಮವಾರ ಅವರು ಮಾತನಾಡಿದರು. ‘ಹೆಚ್ಚಿನ ಜನರು ಪ್ರತಿಷ್ಠೆಯ ಕಾರಣಕ್ಕಾಗಿ ತಮ್ಮ ವಿರುದ್ಧ ನಡೆದ ದಾಳಿಯನ್ನೇ ಮುಚ್ಚಿಡುತ್ತಾರೆ. ಇದು ಜೀವಕ್ಕೂ ಅಪಾಯ ತಂದ ನಿದರ್ಶನಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಾಗ ಎಚ್ಚರ ವಹಿಸಿ’ ಎಂದರು. ಸೈಸೆಕ್ ಕೇಂದ್ರದ ಮುಖ್ಯಸ್ಥ ಕಾರ್ತಿಕ್ ರಾವ್ ಬಿ. ಮಾತನಾಡಿ, ‘ನಾವು ಫಿನಿಶಿಂಗ್ ಸ್ಕೂಲ್ ಕಾರ್ಯಕ್ರಮವನ್ನು ಮಾದರಿಯಾಗಿ ಆರಂಭಿಸಿದ್ದೇವೆ. ಭವಿಷ್ಯದಲ್ಲಿ ವ್ಯಾಪಕವಾಗಿ ಮಾಡುವ ಆಶಯ ಇದೆ. ಆಳ್ವಾಸ್…
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಭಾರತ ಸರ್ಕಾರ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಬಂಟರ ಸಂಘ (ರಿ) ಸುರತ್ಕಲ್ ಇದರ ಸಹಯೋಗದೊಂದಿಗೆ ಸುರತ್ಕಲ್ ವ್ಯಾಪ್ತಿಯ 17 ಗ್ರಾಮಗಳನ್ನೊಳಗೊಂಡ ಸಾರ್ವಜನಿಕರಿಗೆ ಅಯುಷ್ಮಾನ್ ಭಾರತ ಕಾರ್ಡ್ ಮತ್ತು ಇ ಶ್ರಮ ಕಾರ್ಡ್ ಗಳ ವಿತರಣಾ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮನಪಾ ಸದಸ್ಯೆ ನಯನಾ ಕೋಟ್ಯಾನ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮನಪಾ ಸದಸ್ಯೆ ಶ್ವೇತಾ ಪೂಜಾರಿ ಮಾತನಾಡಿ, ಸುರತ್ಕಲ್ ಬಂಟರ ಸಂಘವು ಸುಮಾರು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವುದು ಶ್ಲಾಘನೀಯ. ಸಂಘವು ಕ್ರೀಡೆ ಮತ್ತು ಸಾಂಸ್ಕತಿಕ ಕ್ಷೇತ್ರದಲ್ಲಿ ಹೆಚ್ಚು ಜನಮನ್ನಣೆ ಪಡೆಯುತ್ತಿರುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಉತ್ತಮ ಕಾರ್ಯ ಮಾಡುತ್ತಿರುವುದು ಇತರ ಸಂಘಗಳಿಗೆ ಮಾದರಿಯಾಗಿದೆ. ಮುಂದೆಯೂ ಸಂಘದಿಂದ ಇಂತಹ ಹತ್ತು ಹಲವು ಕಾರ್ಯಕ್ರಮ ನಡೆಯಲಿ ಎಂದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ…
ತುಳುನಾಡ್ ಸಂಸ್ಕೃತಿದ ವಿಶೇಷತೆ ಉಪ್ಪುನೇ ಮುಲ್ಪದ ಭೂತಾರಾಧನೆಡ್. ವೈದಿಕ ಆಚರಣೆಲು, ಪೌರಾಣಿಕ ದೇವತೆಲೆನ ಪೂಜೆ ಈ ಊರುಗು ಬರ್ಪಿನೆಕ್ ದುಂಬೇ ಮುಲ್ಪದ ಜನೊಕುಲು ದೈವೊಲೆನ್ ಸತ್ಯೊಲು ಪನ್ಪಿನ ಪುದರ್‌ಡ್ ಆರಾಧನೆ ಮಲ್ತೊಂದಿತ್ತೆರ್. ಅಯಿತ ಆಚರಣೆಗ್ ತನ್ಕುಲೆನನೇ ಆಯಿನ ಒಂದು ವಿಶಿಷ್ಟ ಆಚರಣಾ ಪದ್ಧತಿನ್ ನಾಡ್ ಪತ್ತ್ಯೆರ್. ಅವೆನ್ ಇತ್ತೆ ನಮ ಭೂತಾರಾಧನೆ ಪನ್ಪ. ಈ ಆರಾಧನೆದ ಉಲಯಿಡ್ ಅಗೆಲ್, ತಂಬಿಲ, ಕೋಲ-ನೇಮ, ದೊಂಪದ ಬಲಿ, ನಡಾರಿ, ಕಂಚಿಲ್, ಮಾನ್ಯೆಚ್ಚಿ ಇಂಚಿತ್ತಿನ ವಿಭಾಗೊಲು ಬರ್ಪ. ಈ ಆರಾಧನೆನ್ ಇಲ್‌ಲ್ ಇಲ್‌ಲ್ಡ್, ಊರುಡು, ಕುಟುಮೊದ ಮೂಲಸ್ಥಾನ/ತರವಾಡ್‌ಡ್, ಗರಡಿ, ಸಾನ, ಆಲಡೆ, ಮಾಡ, ಬದಿನ ಇಂಚಿತ್ತಿನ ಜಾಗೆಲೆಡ್ ನಡಪಾವೊಂದು ಬತ್ತಿನಕುಲು ನಮ್ಮ ಹಿರಿಯೆರ್. ಈ ಕ್ರಮೊ ಇತ್ತೆಲಾ ಅಂಚನೇ ಒರಿದ್‌ಂಡ್. ಇಂಜಿ ಮಲ್ಲ ಮಟ್ಟ್ ದ ವ್ಯವಸ್ಥೆನೇ ಉಂದೆತ ಪಿರವುಡು ಉಂಡು. ಸಮಾಜೊದ ಮಾತಾ ಜಾತಿದಕುಲುಲಾ ಒಟ್ಟು ಸೇರಿಗಡ್ ಮಲ್ಪುಲೆಕ ಹಿರಿಯೆರ್ ವ್ಯವಸ್ಥೆ ಮಲ್ತ್ ಕೊರ್ತೆರ್. ಕುಟುಮೊದ ಕೂಡುಕಟ್ಟ್‌ಗ್, ಊರುದ ಒಗ್ಗಟ್ಟ್‌ಗ್, ಧರ್ಮೊ-ಸತ್ಯೊದ ಮಿತ್ತ್‌ದ ಗೌರವೊಗು,…
ಪ್ರತಿ ವರ್ಷದಂತೆ ಈ ವರ್ಷವೂ ಕಂಬಳ ಪ್ರಿಯರು ಕಾತರದಿಂದ ನಿರೀಕ್ಷಿಸುವ ಕಟಪಾಡಿ ಬೀಡು ಪಡುಕರೆ ಮೂಡುಕರೆ ಜೋಡು ಕರೆ ಕಂಬಳವು ಇದೇ ಬರುವ 24.2.2024 ರಂದು ಕಟಪಾಡಿ ಬೀಡು ಕಂಬಳ ಗದ್ದೆಯಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭಗೊಂಡು ಜಿಲ್ಲೆಯ ಪ್ರತಿಷ್ಠಿತ ಮನೆತನಗಳ ಹಾಗೂ ಬಲು ಪ್ರಸಿದ್ಧಿ ಪಡೆದ ಓಟದ ಕೋಣಗಳ ಯಜಮಾನರ ಭಾಗವಹಿಸುವಿಕೆಯಲ್ಲಿ ವಿಜೃಂಭಣೆಯಿಂದ ಜರಗಲಿದೆ. ಇದರ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯದ ಗಣ್ಯಾತಿಗಣ್ಯರು ಭಾಗವಹಿಸಲಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಲಿದ್ದಾರೆ. ಅಂದು ಬೆಳಿಗ್ಗೆ 10.30ಕ್ಕೆ ಕಟಪಾಡಿ ಬೀಡು ಗೋವಿಂದ ದಾಸ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ಜರುಗಲಿದ್ದು ಜಿಲ್ಲಾ ಲಯನ್ ಗವರ್ನರ್ ಡಾ. ಎ. ರವೀಂದ್ರನಾಥ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು ಉಳಿದಂತೆ ಡಾ.ಕೆ ವಿದ್ಯಾ ಕುಮಾರಿ IAS ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ, ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ ಕರ್ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ, ಕೋಟ ಶ್ರೀನಿವಾಸ ಪೂಜಾರಿ ಕರ್ನಾಟಕ ಸರಕಾರ…
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿ ಸುರೇಖಾ ಹರಿಪ್ರಸಾದ್ ಶೆಟ್ಟಿ ಅವರ ಎಂ.ಎ. ಶೋಧ ‘ಮುಂಬಯಿಯಲ್ಲಿ ಕನ್ನಡದ ಕಂಪು ಸೂಸುವ ಗೋರೆಗಾಂವ್ ಕರ್ನಾಟಕ ಸಂಘ’ ಕೃತಿ ಬಿಡುಗಡೆ ಕಾರ್ಯಕ್ರಮವು ಫೆ.25 ರಂದು ಬೆಳಗ್ಗೆ 10.30 ರಿಂದ ಗೋರೆಗಾಂವ್ ಪೂರ್ವದ ಜಯಪ್ರಕಾಶ್ ನಗರದ ನಂದಾದೀಪ ಹೈಸ್ಕೂಲ್ ಸಭಾಗೃಹದಲ್ಲಿ ನಡೆಯಲಿದೆ. ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಘದ ನಾಡಹಬ್ಬ ಸಮಾರಂಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎಸ್ ಉಪಾಧ್ಯ ಅವರು ಕೃತಿ ಬಿಡುಗಡೆಗೊಳಿಸಲಿದ್ದಾರೆ. ಗೋರೆಗಾಂವ್ ಕರ್ನಾಟಕ ಸಂಘ ಪ್ರಕಟಿಸಿರುವ ಈ ಕೃತಿಯನ್ನು ರಂಗಕಲಾವಿದೆ, ಲೇಖಕಿ, ಸಂಶೋಧನ ವಿದ್ಯಾರ್ಥಿ ನಳಿನಾ ಪ್ರಸಾದ್ ಅವರು ಪರಿಚಯಿಸಲಿದ್ದಾರೆ. ಸುರೇಖಾ ಹರಿಪ್ರಸಾದ್ ಶೆಟ್ಟಿ ಅವರು ಮೂಲತಃ ಉಡುಪಿಯ ಕೊಡವೂರಿನವರು. ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಅವರು ಸಾಹಿತ್ಯಾಸಕ್ತರು. ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದಿರುವ ಸುರೇಖಾ ಅವರ ಕವಿತೆ,…
ಕೇಂದ್ರದ ಒಂದು ದಶಕದ ಬಜೆಟ್ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಚರ್ಚಾಕೂಟ ಆಳ್ವಾಸ್ ಎಂಬಿಎ ವಿಭಾಗ: ದಶಕದ ಬಜೆಟ್ನ ಆರು ಕ್ಷೇತ್ರಗಳ ವಿಶ್ಲೇಷಣೆ
ಮೂಡುಬಿದಿರೆ: ಬಜೆಟ್ ನಾವಿನ್ಯತೆಯನ್ನು ಸಾಧಿಸಿ, ತೆರಿಗೆಯನ್ನು ಸರಳಗೊಳಿಸಿ, ಜೀವನದ ಗುಣಮಟ್ಟವನ್ನು ಹಾಗೂ ಸ್ವಚ್ಚ ಭಾರತವನ್ನು ನಿರ್ಮಿಸಿ, ಕಾರ್ಪೊರೇಟ್ ತೆರಿಗೆ ಮತ್ತು ಹಣಕಾಸಿನ ಕೊರತೆಯನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ಒಳಗೊಂಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮುಖ್ಯಕಾರ್ಯ ನಿರ್ವಾಣಧಿಕಾರಿ ಡಾ ಅಶೋಕ್ ದಳವಾಯಿ ಹೇಳಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಭಾರತೀಯ ಉದ್ಯಮಗಳ ಒಕ್ಕೂಟ, ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ, ಯಂಗ್ ಇಂಡಿಯನ್ಸ್ , ದಿ ಇಂಡಸ್ ಎಂಟ್ರೆಪ್ರೆನರ್ಸ್ ಸಂಸ್ಥೆಗಳ ಸಹಯೋಗದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಕೇಂದ್ರದ ಒಂದು ದಶಕದ ಬಜೆಟ್ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಚರ್ಚಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರದ ಬಜೆಟ್ ಒಂದು ಪ್ರಮುಖ ನೀತಿ ನಿರೂಪಣೆಯ ಹೇಳಿಕೆಯಾಗಿದೆ. ಬಜೆಟ್ ಕೃಷಿ, ರಸ್ತೆ ಕಾಮಗಾರಿ, ಸಂಪನ್ಮೂಲಗಳ ಪ್ರಮುಖ ಸವಾಲುಗಳನ್ನು ಒಳಗೊಂಡಿದೆ. ಜೊತೆಗೆ ಕಪ್ಪು ಹಣ, ತೆರಿಗೆಯನ್ನು ಸರಳೀಕರಿಸುವುದು, ಜೀವನದ ಗುಣಮಟ್ಟವನ್ನು…
ಯಕ್ಷಗಾನ ಬಯಲಾಟವನ್ನು ದೇವರ ಸೇವಾ ರೂಪವಾಗಿ ಆಡಿಸುವ ಸಂಪ್ರದಾಯ ಕರಾವಳಿಯಲ್ಲಿ ಬೆಳೆದು ಬಂದಿದೆ. ಇದರಿಂದ ನಮ್ಮ ಸಂಸ್ಕೃತಿಯ ಪುನರುತ್ಥಾನ ಸಾಧ್ಯ. ಅಲ್ಲದೇ ಈ ಸಂದರ್ಭದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಸಮಾಜದ ಶ್ರೇಷ್ಠ ಕಾರ್ಯ ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ ಭೋಜ ಶೆಟ್ಟಿ ನುಡಿದರು. ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಸುವರ್ಣ ಸಂಭ್ರಮ ಪ್ರಯುಕ್ತ ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾಲಿಗ್ರಾಮ ಸೇರಿದಂತೆ ಬಹು ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರಿಗೆ ಸುವರ್ಣೋತ್ಸವ ಗೌರವ ಪ್ರಶಸ್ತಿ ನೀಡಲಾಯಿತು. ಅಲ್ಲದೇ ಕಟೀಲು ಮೇಳದ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಅವರಿಗೆ 2024 ನೇ ಸಾಲಿನ ‘ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಯಿತು. ಯಕ್ಷಗಾನ…
ಹುಬ್ಬಳ್ಳಿ ಮೂಲದ ಪ್ರಸ್ತುತ ಕರ್ನಾಟಕದಾದ್ಯಂತ ಶುಚಿ ರುಚಿಗೆ ಹೆಸರಾದ, ಶ್ರೀ ರಾಜೇಂದ್ರ ಶೆಟ್ಟಿ ಮಾಲಿಕತ್ವದ ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ನೂತನ ಶಾಖೆ ಹೋಟೆಲ್ ವಿಶ್ವನಾಥ್ ಪ್ಯಾಲೇಸ್ ಶುದ್ದ ಶಾಖಾಹಾರಿ ಹೋಟೆಲ್ ಮುಂಬಯಿ – ಬೆಂಗಳೂರು ಹೆದ್ದಾರಿ ಪುಣೆಯ ವಾಕಡ್ ನಲ್ಲಿ ಫೆಬ್ರವರಿ 15 ರಂದು ಹುಬ್ಬಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಆನಂದ ಗುರುಸ್ವಾಮಿಯವರ ಆಶೀರ್ವಾದದೊಂದಿಗೆ ಶುಭಾರಂಭಗೊಂಡಿತು. ವಾಸ್ತುಪೂಜೆ, ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ದೇವತಾ ಕಾರ್ಯಗಳು ನಡೆದ ನಂತರ, ಬಂಟ ಸಮಾಜದ ಗಣ್ಯರಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಹೇರಂಬ ಗ್ರೂಪ್ ಆಫ್ ಕಂಪನಿಯ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ, ಪುಣೆ ಪಿಂಪ್ರಿ ಪರಿಸರದ ರಾಜಕೀಯ ನಾಯಕರಾದ ಮಾವಲ್ ಸಂಸದ ಶ್ರೀರಂಗ್ ಬಾರ್ನೆ, ಪಿಂಪ್ರಿ ಚಿಂಚ್ವಾಡ್ ನಗರ ಪಾಲಿಕೆ ಮಾಜಿ ಕಾರ್ಪೋರೇಟರ್ ಗಳಾದ ರಾಹುಲ್ ಕಲಟೆ, ಮಯೂರ್ ಕಲಟೆ, ಬಾವು ಸಾಹೇಬ್ ಬೋಯಿರ್, ನಾನಾ ಕಾಟೆ, ಪ್ರಸಾದ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ…