Author: admin

ಕಾಂತಾರ…ಕಾಂತಾರ…ಕಾಂತಾರ…ಎಲ್ಲರ ಬಾಯಲ್ಲೂ ಈಗ ಈ ಸಿನಿಮಾದ್ದೇ ಸುದ್ದಿ. ‘ಹೊಂಬಾಳೆ ಫಿಲ್ಮ್ಸ್’ ನಿರ್ಮಿಸಿ, ರಿಷಬ್ ಶೆಟ್ಟಿ ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ಆಭಿನಯಿಸಿರುವ ಈ ಕನ್ನಡ ಚಲನಚಿತ್ರ ಇತ್ತೀಚೆಗೆ ಬೆಳ್ಳಿ ತೆರೆಗೆ ಅಪ್ಪಳಿಸಿದ ವೇಗಕ್ಕೆ ಗಲ್ಲಾಪೆಟ್ಟಿಗೆ ಅಕ್ಷರಶಃ ಉಡಾಯಿಸಲ್ಪಟ್ಟಿದೆ! ವಿಶ್ವದೆಲ್ಲೆಡೆ ಭರ್ಜರಿ ಪ್ರದರ್ಶನಗಳನ್ನು ಕಂಡು ಕೋಟಿ-ಕೋಟಿ ರೂ.ಬಾಚುತ್ತಿರುವ ಈ ಚಿತ್ರದ ಯಶಸ್ಸು ಕಂಡು ಇಡೀ ಸ್ಯಾಂಡಲ್ವುಡ್ ಬೆಕ್ಕಸ ಬೆರಗಾಗಿದೆ! ಕರ್ನಾಟಕದ ಕರಾವಳಿಯ ಅತ್ಯಂತ ಶ್ರೀಮಂತ ಸಂಸ್ಕೃತಿ ಎನಿಸಿರುವ ದೈವಾರಾಧನೆಯ ಜೊತೆಗೆ ಜಮೀನ್ದಾರಿ ವ್ಯವಸ್ಥೆ, ಅರಣ್ಯ ಒತ್ತುವರಿ ಇತ್ಯಾದಿ ಸೂಕ್ಷ್ಮ ವಿಷಯಗಳನ್ನು ಆಧರಿಸಿ ನಿರ್ಮಿಸಲಾದ ವಿಭಿನ್ನ ಕಥಾವಸ್ತುವುಳ್ಳ ಈ ಚಲನಚಿತ್ರ ವೀಕ್ಷಕರನ್ನು ಮೋಡಿ ಮಾಡುತ್ತಿದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಆಪ್ತ ಸಂಬಂಧ ಚಿತ್ರದುದ್ದಕ್ಕೂ ಅನಾವರಣಗೊಂಡಿದೆ. ಆಸ್ತಿಕರು ಶ್ರದ್ಧಾ-ಭಕ್ತಿಯಿಂದ ಆರಾಧಿಸಿಕೊಂಡು ಬಂದಿರುವ ದೈವದ ಕಾರಣಿಕವನ್ನು ಜಗದಗಲ ಪಸರಿಸುತ್ತಿರುವ ಈ ಚಲನಚಿತ್ರ ನಾಸ್ತಿಕರನ್ನೂ ಒಮ್ಮೆಗೆ ನಿಬ್ಬೆರಗಾಗಿಸುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಕಂಬಳ ಓಟಗಾರನಾಗಿ ಹಾಗೂ ದೈವ ನರ್ತಕನಾಗಿ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ತನ್ನ ಪಾತ್ರದೊಳಗೆ…

Read More

ಯಕ್ಷಗಾನವು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಹುಟ್ಟಿಕೊಂಡ ಸಾಂಪ್ರದಾಯಿಕ ನೃತ್ಯ ನಾಟಕ ರೂಪವಾಗಿದೆ. ಪ್ರಾಚೀನ ಕಾಲದಿಂದಲೂ ಯಕ್ಷಗಾನವು ಶ್ರೀಮಂತ ಮತ್ತು ರೋಮಾಂಚಕ ಕಲಾ ಪ್ರಕಾರವಾಗಿ ವಿಕಸನಗೊಂಡಿದೆ. ಅದು ತನ್ನ ವರ್ಣರಂಜಿತ ವೇಷಭೂಷಣಗಳು, ಲಯಬದ್ಧ ಸಂಗೀತ ಮತ್ತು ಕ್ರಿಯಾತ್ಮಕ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಹೀಗೆ ಈ ಶ್ರೀಮಂತ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ನೀಡುತ್ತಿರುವ ಹಿರಿಯ ಕಲಾವಿದರು ಪೆರ್ಲ ಜಗನ್ನಾಥ ಶೆಟ್ಟಿ. ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಯ ಪಟ್ಲದಲ್ಲಿ 21.10.1966 ರಂದು ಮಂಜಪ್ಪ ಶೆಟ್ಟಿ ಹಾಗೂ ಕಮಲಾ ಎಂ ಶೆಟ್ಟಿ ಇವರ ಮಗನಾಗಿ ಜನನ. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯಾಭ್ಯಾಸವನ್ನು ನಾಟ್ಯ ಗುರುಗಳು ಕುಂಞರಾಮ ಮಣಿಯಾಣಿ (ಪ್ರಥಮ ಗುರುಗಳು)ಯವರಿಂದ ಕಲಿತು ನಂತರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್, ಕೆ.ಗೋವಿಂದ ಭಟ್ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿರುತ್ತಾರೆ. ಒಡನಾಡಿ ಹಿರಿಯರು ಗುರು ಸ್ವರೂಪರೆನಿಸಿದವರು ತೆಕ್ಕಟ್ಟೆ ಆನಂದ ಮಾಸ್ತರರು. ಯಕ್ಷಗಾನ ರಂಗದಲ್ಲಿ ಸರ್ವ ಸಾಧಾರಣ ಎಲ್ಲಾ ವೇಷಗಳು ಮಾಡಿರುವ ಅನುಭವ ಪೆರ್ಲ ಜಗನ್ನಾಥ…

Read More

ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಮಾತಿನಂತೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ತತ್ವದಡಿ ಕಳೆದ 40 ವರ್ಷಗಳಿಂದ ಸರ್ವ ಕ್ಷೇತ್ರಗಳಲ್ಲಿ ತೊಡಗಿ ಸಮಾಜ ಸೇವೆಯಲ್ಲಿ ಎ.ಹೇಮನಾಥ ಶೆಟ್ಟಿ ಕಾವುರವರು ನಿರತರಾಗಿದ್ದಾರೆ. ಸುದೀರ್ಘ ಕಾಲದಿಂದ ಕೃಷಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣ, ಉದ್ಯಮ, ಧಾರ್ಮಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಹೇಮನಾಥ ಶೆಟ್ಟಿ ಅವರು ಬಂಟ ಸಮುದಾಯದ ಜತೆಗೆ ಸರ್ವ ಸಮುದಾಯದ ಪ್ರೀತಿ ಗಳಿಸಿದ ವ್ಯಕ್ತಿ. ನೊಂದವರಿಗೆ, ಅಶಕ್ತರ ಆಶಾಕಿರಣರಾಗಿರುವ ಇವರು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ನಿರೀಕ್ಷೆಗಳಿಗೆ ಸ್ವಂದಿಸುವ ಧಣಿವರಿಯದ ನಾಯಕ ಅನ್ನುವ ಅಭಿಮಾನಕ್ಕೆ ಪಾತ್ರರಾದವರು. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಬನ್ನೂರು ಗುತ್ತು ಮನೆಯಲ್ಲಿ ಡಿಸೆಂಬರ್ 21-1964 ರಲ್ಲಿ ಕಾವು ಅಂತಪ್ಪ ಶೆಟ್ಟಿ ಮತ್ತು ಬನ್ನೂರು ಗುತ್ತು ತಾರಾ ಅಂತಪ್ಪ ಶೆಟ್ಟಿ ದಂಪತಿಗಳ ತೃತೀಯ ಪುತ್ರನಾಗಿ ಜನಿಸಿದರು. ಮಡಿಕೇರಿ ಸೈಂಟ್ ಮೈಕೆಲ್, ಮಾಡ್ನೂರು ಕಾವು ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪೆರ್ನಾಜೆ ಸೀತಾ ರಾಘವ ಪ್ರೌಢಶಾಲೆ ಮತ್ತು ಕಾವು ಸರಕಾರಿ ಪ್ರಾಥಮಿಕ…

Read More

ಬೆಳ್ತಂಗಡಿ ತಾಲೂಕಿನ ಸವಣಾಲು ಡಿ.ದೇವಪ್ಪ ಶೆಟ್ಟಿ ಮತ್ತು ಲಕ್ಷ್ಮೀ ಶೆಟ್ಟಿ ದಂಪತಿಗೆ 01-06-1948 ರಂದು ಜನಿಸಿದ ದಯಾನಂದ ಶೆಟ್ಟರು ಕಲಿತದ್ದು ಎರಡನೇ ತರಗತಿ. ಯಕ್ಷಗಾನದ ಸಾಮಾನು ಸರಂಜಾಮುಗಳನ್ನು ಎತ್ತಿನ ಗಾಡಿಯಲ್ಲಿ ಸಾಗಿಸುತ್ತಿದ್ದ ಕಾಲದಲ್ಲಿ 12 ನೇ ವರ್ಷ ಪ್ರಾಯದ ದಯಾನಂದ ಕುಮಾರ ವೇಣೂರು ದೇಲಂಪುರಿ ಮೇಳದಲ್ಲಿ ಬಾಲ ಕಲಾವಿದರಾಗಿ ಸೇರಿಕೊಂಡರು. ದಶಾವತಾರಿ ಸೂರಿಕುಮೇರು ಗೋವಿಂದ ಭಟ್ಟರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತ ಅವರು ಮುಂದೆ ತಮ್ಮ ನೃತ್ಯಾಭಿನಯವನ್ನು ವಿಸ್ತರಿಸಿಕೊಂಡದ್ದು ಇತರರನ್ನು ನೋಡಿಯೇ. ಕುಂಡಾವು ಮೇಳದಲ್ಲಿ ಅರುವ ಕೊರಗಪ್ಪ ಶೆಟ್ಟರ ಸಾಂಗತ್ಯದಲ್ಲಿ ಅದು ಸ್ಪುಟಗೊಂಡಿತು. ಮುಂದೆ ಕರ್ನಾಟಕ ಮೇಳವೊಂದರಲ್ಲೇ 36 ವರ್ಷ ವ್ಯವಸಾಯ ಮಾಡಿದ ಹಿರಿಮೆ ಅವರದು. ದಾಮೋದರ ಮಂಡೆಚ್ಚ, ಅಳಿಕೆ, ಬೋಳಾರ, ಮಂಕುಡೆ, ಸಾಮಗ, ಕ್ರಿಶ್ಚನ್ ಬಾಬು, ಮಿಜಾರು, ಕೋಳೂರು ಮೊದಲಾದ ದಿಗ್ಗಜರ ಒಡನಾಟದಲ್ಲಿ ಕಲ್ಲಾಡಿ ಮನೆತನದ ಮೂವರು ಯಜಮಾನರನ್ನು ಕಂಡ ದಯಾನಂದ, ಕಲ್ಲಾಡಿ ಕೊರಗ ಶೆಟ್ಟರಿಂದಾಗಿ ಮಂಗಳೂರಿನ ಜಪ್ಪಿನ ಮೊಗರಿನಲ್ಲಿ ನೆಲೆಸಿ ಜಪ್ಪು ದಯಾನಂದ ಶೆಟ್ಟಿ ಎಂದಾದರು. ಖಚಿತ ಲಯ…

Read More

ರಾಜಕೀಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿ, ಕಾನೂನು ರಂಗದಲ್ಲೂ ಗಮನ ಸೆಳೆಯುವ ಹಿರಿಯ ನಾಯಕ ಕೆ. ಮೋನಪ್ಪ ಭಂಡಾರಿ. ಇವರ ಬಗ್ಗೆ ಒಂದು ಕಿರು ಪರಿಚಯ ಇಲ್ಲಿದೆ. ಕೆಲ್ಲೆಕಾರುಗುತ್ತು ಮೋನಪ್ಪ ಭಂಡಾರಿ ಅವರು ಕೆ. ದೂಮಣ್ಣ ಶೆಟ್ಟಿ ಹಾಗೂ ಶ್ರೀಮತಿ ಲಕ್ಷ್ಮೀ ಅವರ ಪುತ್ರರಾಗಿ 1952 ರ ಜನವರಿ 3ರಂದು ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಕೋಡಿಬೈಲಿನ ಕರವೂರು ಎಂಬಲ್ಲಿ ಜನಿಸಿದವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಕೋಡಿಬೈಲು ಐಡೆಡ್ ಲೋವರ್ ಫ್ರೈಮರಿ ಶಾಲೆಯಲ್ಲಿ ಮುಗಿಸಿ, ಬಳಿಕ ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನಲ್ಲಿ, ಕನ್ಯಾನದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ ಮಂಗಳೂರಿನ ಸೈಂಟ್ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಕಲಿತು ಬಿ.ಎ. ಪದವಿ ಪಡೆದರು. ಆ ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಮಂಗಳೂರಿನ ಎಸ್ ಡಿ ಎಂ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಪಡೆದು ನ್ಯಾಯವಾದಿಯಾದರು. ಪ್ರಸ್ತುತ ಇವರು ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜತೆಗೆ ನೋಟರಿಯೂ ಆಗಿದ್ದಾರೆ.…

Read More

ಸಣ್ಣ ಪ್ರಾಯದಲ್ಲೇ ಉದ್ಯಮ ಆರಂಭಿಸಿ ಯಶಸ್ಸಿನ ಪಥದಲ್ಲಿ ಸಾಗುತ್ತಿರುವ, ಕಠಿಣ ಪರಿಶ್ರಮಿಯಾಗಿರುವ ಕುಂದಾಪುರದ ಪ್ರಸಿದ್ಧ ಕೈಗಾರಿಕೋದ್ಯಮಿ ಶ್ರೀ ಜಯಕರ ಶೆಟ್ಟಿಯವರು 1960 ರಲ್ಲಿ ದಿವಂಗತ ಚಾರ್ಮಾಕ್ಕಿ ಸಂಜೀವ ಶೆಟ್ಟಿ ಮತ್ತು ದಿವಂಗತ ಗಿರಿಜಾ ಶೆಟ್ಟಿಯವರ ಸುಪತ್ರರಾಗಿ ಜನಿಸಿದರು. ಜಯಕರ ಶೆಟ್ಟಿಯವರು ತನ್ನ ಶಿಕ್ಷಣವನ್ನು ಬೆಂಗಳೂರಿನ ಬಾಲ್ಡ್ವಿನ್ ಶಾಲೆಯಲ್ಲಿ ಪ್ರಾರಂಭಿಸಿ, ಭಂಡಾರ್ ಕರ್ಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿ, ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ ತನ್ನ ವೃತ್ತಿ ಜೀವನವನ್ನು ಬೆಂಗಳೂರಿನಲ್ಲಿ ಪ್ರಾರಂಭ ಮಾಡಿದರು. ಉದ್ಯೋಗ ಕ್ಷೇತ್ರದಲ್ಲಿ ಬೇರೆ ಬೇರೆ ರಂಗದಲ್ಲಿ ದುಡಿದರೂ ಅವರಿಗೆ ಪೂರ್ತಿ ತೃಪ್ತಿ ಸಿಗಲಿಲ್ಲ. ಅವರಲ್ಲಿರುವ ಸಾಧನೆಯ ತುಡಿತ ಹೆಚ್ಚುತ್ತಲೇ ಹೋಯಿತು. ಯಾವುದಾದರೂ ಸ್ವಂತ ಉದ್ಯಮ ಆರಂಭಿಸಿ ಹಲವರಿಗೆ ಉದ್ಯೋಗದಾತರಾಗುವ ಕನಸು ಕಂಡರು. ಇದರ ಫಲವಾಗಿ 1987 ರಲ್ಲಿ ಗಿರಿಜಾ ಟೈಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಯಶಸ್ವೀ ಉದ್ಯಮಿ ಎಂದು ಗುರುತಿಸಿಕೊಂಡ ಜಯಕರ ಶೆಟ್ಟಿಯವರು ತನ್ನ ಉದ್ಯಮವನ್ನು…

Read More

ಸುರತ್ಕಲ್ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿದ ಮೇಯರ್ ಸುಧೀರ್ ಶೆಟ್ಟಿ ಅವರನ್ನು ಸುಭಾಷಿತ ನಗರ ರೆಸಿಡೆನ್ಸಿ ವೆಲ್ಫೇರ್ ಎಸೋಸಿಯೇಶನ್ (ರಿ) ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಎಸೋಸಿಯೇಶನ್ ನ ಅಧ್ಯಕ್ಷ ರಮೇಶ್ ಶೆಟ್ಟಿ ಅವರು ಸುಭಾಷಿತನಗರದ ಅಭಿವೃದ್ದಿಯ ಕುರಿತು ಚರ್ಚಿಸಿದರು. ಎಸೋಸಿಯೇಶನ್ ಪದಾಧಿಕಾರಿಗಳಾದ ಪುಷ್ಪರಾಜ ಶೆಟ್ಟಿ ಕುಡುಂಬೂರು, ಚಂದ್ರಶೇಖರ ಶೆಟ್ಟಿ, ನರಸಿಂಹ ಸುವರ್ಣ, ಚರಣ್ ಜೆ ಶೆಟ್ಟಿ ಕುಳಾಯಿಗುತ್ತು, ಲಕ್ಷ್ಮೀ ಚಂದ್ರಶೇಖರ್ ಆಚಾರ್ಯ, ತನುಜಾ, ಪ್ರೇಮನಾಥ ಹೆಗ್ಡೆ, ತಾರಾನಾಥ ಸಾಲ್ಯಾನ್, ಶಂಕರ ಶೆಟ್ಟಿ, ರಾಘವೇಂದ್ರ ರಾವ್ ಹಾಗೂ ಸುರತ್ಕಲ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಕಾರ್ಯದರ್ಶಿ ಲೀಲಾಧರ ಶೆಟ್ಟಿ, ರತ್ನಾಕರ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಕಾರ್ಪೋರೇಟರ್ ನಯನ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು. ಸುರತ್ಕಲ್ ಪ್ರದೇಶದ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದಾಗಿ ಮೇಯರ್ ತಿಳಿಸಿದರು. ಮೂಲ ಸೌಕರ್ಯ ಅಭಿವೃದ್ದಿ, ಕುಂಠಿತಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಒಳಚರಂಡಿ, ದಾರಿದೀಪ, ರಸ್ತೆ, ಪ್ರತಿಯೊಂದು ಸಮಸ್ಯೆಗಳ ಬಗ್ಗೆಯೂ ಗಮನಹರಿಸಿ, ಸೇವಕನಾಗಿ ಕೆಲಸ ಮಾಡುವುದಾಗಿ ಮೇಯರ್…

Read More

ವಿದ್ಯಾಗಿರಿ: ‘ಪಿಯುಸಿ ಶಿಕ್ಷಣವು ಬದುಕಿನ ಮಹತ್ವದ ಅಡಿಪಾಯ. ಈ ಹಂತದಲ್ಲಿ ಸಮರ್ಪಕ ಮಾರ್ಗದರ್ಶನದಿಂದ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ’ ಎಂದು ವಾಗ್ಮಿ, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಪಿ.ಪುತ್ತೂರಾಯ ಹೇಳಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರೇರಣಾತ್ಮಕ ಕಾರ್ಯಕ್ರಮ- ‘ಸ್ಪೂರ್ತಿ’ಯಲ್ಲಿ ಅವರು ಮಾತನಾಡಿದರು. ಪೋಷಕರ ಕನಸನ್ನು ಈಡೇರಿಸುವುದೂ ವಿದ್ಯಾರ್ಥಿಗಳ ಕನಸಾಗಬೇಕು. ಪಠ್ಯದ ಜೊತೆ ಅನುಭವವೂ ನಮಗೆ ಶಿಕ್ಷಣ ನೀಡುತ್ತದೆ. ಅನುಭವವೂ ಒಳ್ಳೆಯ ಗುರು. ವಿದ್ಯಾರ್ಥಿ ಜೀವನವು ನಮ್ಮನ್ನು ಮಾನವನಾಗಿ ಪರಿವರ್ತಿಸುತ್ತದೆ ಎಂದರು. ‘ಯಶಸ್ಸಿಗೆ ಬೌದ್ಧಿಕ ಪ್ರಗತಿ ಅವಶ್ಯ. ಶಿಕ್ಷಣಕ್ಕೆ ಜಾತಿ ಇಲ್ಲ. ಜಾತಿಗೂ ಜ್ಞಾನಕ್ಕೂ ಸಂಬಂಧವಿಲ್ಲ. ಎಲ್ಲರೂ ಜ್ಞಾನ ಪಡೆಯಲು ಅರ್ಹರು. ಆದರೆ, ಕಲಿಕೆಯ ಹಸಿವು ಇರಬೇಕು. ಅದು ವ್ಯಕ್ತಿತ್ವ ವಿಕಸನಕ್ಕೂ ರಹದಾರಿಯಾಗುತ್ತದೆ’ ಎಂದರು. ಪ್ರಾಂಶುಪಾಲ ಪ್ರೋ ಎಂ ಸದಾಕತ್, ಉಪ ಪ್ರಾಂಶುಪಾಲೆ ಜಾನ್ಸಿ, ವಿವಿಧ ವಿಭಾಗಗಳ ಸಂಯೋಜಕರು ಹಾಗೂ ಡೀನ್‍ಗಳು ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.

Read More

ಗುರಿ ಎನ್ನುವುದು ಒಂದು ಯೋಚನೆಯಲ್ಲ, ಅದು ಒಂದು ಪ್ರಯತ್ನ. ಸುಮ್ಮನೆ ಯೋಚಿಸಿಕೊಂಡು ಕೂರುವ ಬದಲು ಸತತ ಪ್ರಯತ್ನ ಪಡಬೇಕು ಆಗ ಗುರಿ ತಲುಪಲು ಸಾಧ್ಯವಾಗುತ್ತದೆ. ಶಿವ ಛತ್ರಪತಿ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಉದಯ ಶೆಟ್ಟಿ ಅವರು ಅಂತರಾಷ್ಟ್ರೀಯ ಮಟ್ಟದ ಅಪ್ರತಿಮ ಪ್ರತಿಭಾವಂತ ಕ್ರೀಡಾಪಟು. ಜುಲೈ ಒಂದರಂದು 60ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಇವರು ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯ ಸಮೀಪದ ಮಣಿಪುರ ಗ್ರಾಮದವರು. ಬೆಳಿಯೂರು ಬಂಟಕಲ್ಲು ಕೋಡಿಬೆಟ್ಟು ಸದಾಶಿವ ಶೆಟ್ಟಿ ಮತ್ತು ಗಿರಿಜಾ ಶೆಟ್ಟಿ ದಂಪತಿಗಳ ಪುತ್ರರಾದ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಣಿಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಅಲೆವೂರು ನೆಹರೂ ಹೈಸ್ಕೂಲಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಕೆ.ಎಲ್. ಇ. ನಲ್ಲಿ ಪೂರೈಸಿದರು. ಮುಂಬೈಯ ಕೆ.ಪಿ.ಬಿ. ಹಿಂದುಜಾ ಕಾಲೇಜಿನಲ್ಲಿ 1983ರಲ್ಲಿ  ತಮ್ಮ ಬಿಕಾಂ ಪದವಿಯನ್ನು ಪಡೆದರು. ಬಾಲ್ಯದಿಂದಲೂ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶ್ರೀ ಉದಯ ಶೆಟ್ಟಿಯವರು ತಮ್ಮ ಶಾಲಾ ಶಿಕ್ಷಣದಲ್ಲಿ ಕ್ರಿಕೆಟ್, ವಾಲಿಬಾಲ್, ಅಥ್ಲೆಟಿಕ್ಸ್…

Read More

‘ಸಂತೋಷವಾಗಿರುವುದು ತುಂಬಾ ಸರಳ ಆದರೆ ಸರಳವಾಗಿರುವುದು ಮಾತ್ರ ತುಂಬಾ ಕಷ್ಟ.’ ಹೀಗೆಂದವರು ಗುರುದೇವ ರವೀಂದ್ರನಾಥ ಠಾಗೋರ್. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪ್ರತಿಷ್ಠಿತ ಮನೆತನ ಕುಳಾಲು. ಇಲ್ಲಿ ಕೆ ವಿಶ್ವನಾಥ ರೈ ಹಾಗೂ ಚಂದ್ರಾವತಿ ರೈ ದಂಪತಿಗಳ ಮೂರನೇ ಮಗುವಾಗಿ ಸುರೇಶ್ ರೈ ಅವರು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕುಳಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಕನ್ಯಾನದಲ್ಲೂ, ಪದವಿ ಪೂರ್ವ ಶಿಕ್ಷಣವನ್ನು ಪದವಿ ಪೂರ್ವ ಕಾಲೇಜು ವಿಟ್ಲದಲ್ಲಿ ಪೂರೈಸಿದರು. ಬಿ ಎ ಪದವಿಯನ್ನು ಸಂತ ಅಲೋಶಿಯಸ್ ಕಾಲೇಜ್ ಮಂಗಳೂರು, ಸ್ನಾತಕೋತ್ತರ  ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದಲ್ಲಿ ದ್ವಿತೀಯ ಶ್ರೇಣಿಯೊಂದಿಗೆ ಮುಗಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಮೂಲಕ “ಜ್ಯುಡಿಶಿಯಲ್ ಸಿಸ್ಟಮ್ ಇನ್ ದ ಸೋಶಿಯಲ್ ಟ್ರೆಡಿಷನ್ ಇನ್ ತುಳುನಾಡು” ವಿಷಯದ ಬಗ್ಗೆ ಪಿ. ಎಚ್. ಡಿ ಪದವಿಯನ್ನು ಪಡೆದರು. ಸುರೇಶ್ ರೈ ಅವರು ತಮ್ಮ ವೃತ್ತಿ ಜೀವನವನ್ನು ಭಂಡಾರ್ ರ್ಕರ್ ಕಾಲೇಜ್ ಕುಂದಾಪುರ ಇಲ್ಲಿ…

Read More