ಕ್ರಿಕೆಟ್ ಪಂದ್ಯಕೂಟಗಳನ್ನು ಆಯೋಜನೆ ಮಾಡುವುದರಿಂದ ಯುವ ಮನಸ್ಸುಗಳು ಒಂದೆಡೆ ಸೇರುವಂತೆ ಮಾಡಲು ಅವಕಾಶವನ್ನು ಮಾಡಿಕೊಟ್ಟಂತೆ ಆಗುತ್ತದೆ. ಜತೆಯಲ್ಲಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಕೆಲಸ ಮಾಡಲು ಒಳ್ಳೆಯ ವೇದಿಕೆಯಾಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.
ಅಂಬಾ ಕ್ರಿಕೆಟರ್ಸ್ ಮುಳ್ಳಿಕಟ್ಟೆ ಹೊಸಾಡು ವತಿಯಿಂದ ಸೀತಾರಾಮ ಶೆಟ್ಟಿ ಕೇರಿಕೊಡ್ಲು ಅವರ ಸ್ಮರಣಾರ್ಥವಾಗಿ ಮುಳ್ಳಿಕಟ್ಟೆಯಲ್ಲಿ ನಡೆದ ರಾಘು ಟ್ರೋಪಿ-2025 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಉದ್ಘಾಟಿಸಿದರು. ಅಭಿನಂದನ್ ಶೆಟ್ಟಿ, ಮಂಜು ಪೂಜಾರಿ ಸೇನಾಪುರ, ಪಾತ್ರಿ ಮಂಜಯ್ಯ ಶೆಟ್ಟಿ, ರಘುರಾಮ ಶೆಟ್ಟಿ, ನವೀನ್ ಶೆಟ್ಟಿ ನಾರ್ಕಳಿ, ಕುಶಲ ಶೆಟ್ಟಿ ಬೆಳ್ಳಾಡಿ, ಚಂದ್ರಶೇಖರ್ ಪೂಜಾರಿ ಅರಾಟೆ, ಹರ್ಷವರ್ಧನ್ ಶೆಟ್ಟಿ ಕಾಳವಾರ, ಪ್ರದೀಪ್ ಕುಮಾರ್ ಶೆಟ್ಟಿ, ಕ್ರಿಕೆಟ್ ತಂಡದ ನಾಯಕರುಗಳಾದ ಸತೀಶ ಶೆಟ್ಟಿ, ರಾಘು ಶೆಟ್ಟಿ ಜಾಜಿಮಕ್ಕಿ, ಪ್ರವೀಣ್ ಪೂಜಾರಿ, ಶಶಿಕುಮಾರ್ ಶೆಟ್ಟಿ, ನರಸಿಂಹ ಶೆಟ್ಟಿ, ಸತೀಶ್ ದೇವಾಡಿಗ, ಸುತನ ಕುಮಾರ್ ಶೆಟ್ಟಿ, ಅಮರನಾಥ ಶೆಟ್ಟಿ, ಅಜಿತ್ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ರಾಜೇಶ ಸ್ವಾಗತಿಸಿ, ನಿರೂಪಿಸಿದರು. ಸತೀಶ್ ಶೆಟ್ಟಿ ಯಳೂರು ಪ್ರಾಸ್ತಾವಿಕ ಮಾತನಾಡಿದರು.