Author: admin

ಡಾ. ವಿರೇನ್ ಶೆಟ್ಟಿ ಮತ್ತು ಡಾ. ಸನ್ಯಾ ರೂಪನಿ ಅವರು ಹೋಮಿಯೋಪತಿಯಲ್ಲಿ ಸ್ಪರ್ಧಾತ್ಮಕ ಆನ್ ಲೈನ್ ಪರೀಕ್ಷೆ ಬರೆಯುವ ಮಾನ್ಯತೆ ಪಡೆದ MAGNUM OPUS HOMOEOPATHY ರಾಷ್ಟ್ರೀಯ ತರಬೇತಿ ಸಂಸ್ಥೆ ಇದರ ಸಹ ಸಂಸ್ಥಾಪಕರಾಗಿದ್ದಾರೆ. ಡಾ. ವಿರೇನ್ ಶೆಟ್ಟಿಯವರು ಪುಣೆಯ ಮಕ್ಕಳ ತಜ್ಞ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕರ್ ಶೆಟ್ಟಿಯವರ ಸುಪುತ್ರರಾಗಿದ್ದಾರೆ. AIAPGET ವೆಂಬುವುದು ಎಂ.ಡಿ. ವೈದ್ಯಕೀಯ ಹೋಮಿಯೋಪತಿಗಾಗಿ ಇರುವ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. ಇದರಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರವೇಶ ಪರೀಕ್ಷೆ ಬರೆಯುತ್ತಾರೆ. 1 ರಿಂದ 100 ರ ತನಕ ರ‍್ಯಾಂಕ್‌ ಗಳಿರುತ್ತವೆ. MAGNUM OPUS ಮೂಲಕ ತರಬೇತಿ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು AIAPET ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ನಿಂದ 100 ರ‍್ಯಾಂಕ್‌ ಗಳಲ್ಲಿ ಒಟ್ಟು 20 ರ‍್ಯಾಂಕ್‌ಗಳನ್ನು ಪಡೆದಿದ್ದು, MAGNUM OPUS ನ ಬಹು ದೊಡ್ಡ ಸಾಧನೆಯಾಗಿದೆ. ಡಾ. ಫಝಲ್ ಅಖ್ತರ್ ಮೊದಲ ರ‍್ಯಾಂಕ್‌, ಡಾ. ವೈಷ್ಣವಿ ಬೈರಾಗಿ 18ನೇ…

Read More

2023- 24 ಸಾಲಿನಲ್ಲಿ ಸರ್ವಿಸ್ ಆಕ್ಟಿವಿಟಿ ನಿಮಿತ್ತ ಸುಮಾರು 20 ಲಕ್ಷಕ್ಕಿಂತಲೂ ಅಧಿಕ ಮೊತ್ತವನ್ನು ಅಸಹಾಯಕರಿಗೆ ಹಾಗೂ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲು ಕಾಳವಾರ ವರದರಾಜ್ ಶೆಟ್ಟಿ ಅವರ ಫೌಂಡೇಶನ್ ನಿಂದ ಲಯನ್ಸ್ ಕ್ಲಬ್ ಕೋಟೇಶ್ವರಕ್ಕೆ ತರಿಸಿಕೊಟ್ಟಿರುವ ಲಯನ್ ಜಯಪ್ರಕಾಶ್ ಶೆಟ್ಟಿ ಕಟ್ಕೇರಿ ಇವರನ್ನು ಕೋಟೇಶ್ವರದ ಲಯನ್ಸ್ ಪದಗ್ರಹಣ ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಲ| ಜಯಕರ್ ಶೆಟ್ಟಿ ಇಂದ್ರಾಳಿ ಅವರು ಪದಗ್ರಹಣ ಮಾಡುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. 2024 25 ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಬಿ ಎಸ್ ವಿಶ್ವನಾಥ್, ಕೋಶಾಧಿಕಾರಿಯಾಗಿ ಲಯನ್ ಸೌಮ್ಯ ನಿತ್ಯಾನಂದ, ಖಜಾಂಚಿಯಾಗಿ ವೆಂಕಟೇಶ್ ಬೆಟ್ಟಿನ್ ಅವರು ಪದಗ್ರಹಣ ಸ್ವೀಕರಿಸಿದರು.

Read More

ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರಿಂದ ಪುಣೆ ಕಂಟೋನ್ಮೆಂಟ್ ಪರಿಸರದಲ್ಲಿ ರಾಷ್ಟ್ರೀಯ ಶಾಲಾ ಆರೋಗ್ಯ ತಪಾಸಣಾ ಶಿಬಿರ ಆಗಸ್ಟ್ 1ರಂದು ಆರಂಭಗೊಂಡಿತು. ಈ ಶಿಬಿರವು ಪುಣೆ ಕಂಟೋನ್ಮೆಂಟ್ ಪರಿಸರದ ಎಲ್ಲಾ ಶಾಲೆಗಳಲ್ಲಿ ನಡೆಯಲಿದೆ. ಡಾ.ಉಷಾ ತಪಾಸೆ (ಪುಣೆ ಕಂಟೋನ್ಮೆಂಟ್ ಹಾಸ್ಪಿಟಲ್ ನ ಆರ್ ಎಂ ಓ), ಡಾ.ಸುಧಾಕರ್ ಶೆಟ್ಟಿ (ಮಕ್ಕಳ ತಜ್ಞರು, ಪುಣೆ ಕಂಟೋನ್ಮೆಂಟ್ ಹಾಸ್ಪಿಟಲ್), ಡಾ. ಭುಜಬಲ್ (ಎಎಂಓ) ಮತ್ತು ಮಟ್ರೋನ್ ಮೊದಲಾದ ಗಣ್ಯರು ಜುಲೈ 31ರಂದು ನಡೆದ ರಾಷ್ಟ್ರೀಯ ಶಾಲಾ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಪಸ್ಥಿತರಿದ್ದರು. ಆಗಸ್ಟ್ 1 ರಂದು ಬೆಳಿಗ್ಗೆ 8 ಗಂಟೆಗೆ ಪುಣೆಯ ಗಣೇಶ್ ಪೇಟೆಯ ಗುರುನಾನಕ್ ಪ್ರೈಮರಿ ಸ್ಕೂಲ್ ನಲ್ಲಿ ಮತ್ತು ಬೆಳ್ಳಿಗೆ 9.30ಕ್ಕೆ ರಬಿಂದ್ರನಾಥ್ ಪ್ರೈಮರಿ ಸ್ಕೂಲ್ ಕ್ಯಾಂಪ್ ಪುಣೆಯಲ್ಲಿ ರಾಷ್ಟ್ರೀಯ ಶಾಲಾ ಆರೋಗ್ಯ ತಪಾಸಣಾ ಶಿಬಿರವನ್ನು ಡಾ. ಸುಧಾಕರ್ ಶೆಟ್ಟಿಯವರು ಯಶಸ್ವಿಯಾಗಿ ನಡೆಸಿಕೊಟ್ಟರು.

Read More

ಲಯನ್ಸ್ ಇಂಟರ್ನ್ಯಾಷನಲ್ (ಜಿಲ್ಲೆ -317C), ವಲಯ 2, ಪ್ರಾಂತ್ಯ 5 ಲಯನ್ಸ್ ಕ್ಲಬ್ ತಲ್ಲೂರು ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಲಯನ್ ಪ್ರವೀಣ್ ಕುಮಾರ್ ಶೆಟ್ಟಿ ಕೊಡ್ಲಾಡಿ, ಕಾರ್ಯದರ್ಶಿಯಾಗಿ ಲಯನ್ಸ್ ಚಂದ್ರಶೇಖರ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಆಗಸ್ಟ್ 07 ರ ಬುಧವಾರ ಸಂಜೆ 7 ಘಂಟೆಗೆ ತಲ್ಲೂರಿನ ಪ್ರವಾಸಿ ಹೋಟೆಲ್ ನ ಸಭಾಂಗಣದಲ್ಲಿ ಜರುಗಲಿರುವುದು. ಪದ ಪ್ರದಾನ ಅಧಿಕಾರಿಯಾಗಿ ಲಯನ್ ಜಯಕರ ಶೆಟ್ಟಿ ಇಂದ್ರಾಳಿಯವರು ಆಗಮಿಸಲಿದ್ದಾರೆ.

Read More

ತುಳು-ಕನ್ನಡಿಗರು ಮುಂಬಯಿ ಮಹಾನಗರಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂದ ವಲಸೆ ಬಂದು ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಮೆಚ್ಚಿನ ತಾಣವಾಗಿರುವ ಮುಂಬಯಿಗೆ ಬೇರೆ ಬೇರೆ ಕಾರಣಗಳಿಂದ ಬಂದವರು. ಕೇವಲ ಹೊಟ್ಟೆಪಾಡಿಗಾಗಿ ದುಡಿಯುತ್ತಾ, ಹಣಗಳಿಕೆಯೊಂದೇ ತಮ್ಮ ಉದ್ದೇಶವೆಂದು ತಿಳಿಯದೆ ನಾಡು, ನುಡಿ ಸಂಸ್ಕೃತೀಯ ಉಳಿವಿಗಾಗಿ ಶ್ರಮಿಸಿದರು. ಈ ನಗರದಲ್ಲಿರುವ ತುಳು-ಕನ್ನಡಿಗರು ಅದಮ್ಯ ಜೀವನೋತ್ಸಾಹವನ್ನು ಹೊಂದಿದವರು. ಅವರ ಕ್ರಿಯಾಶೀಲತೆ, ಕಾರ್ಯಕ್ಷಮತೆ, ನಿಷ್ಠೆ, ಪರಸ್ಪರ ಸಹಕರಿಸುವ, ಪ್ರೋತ್ಸಾಹಿಸುವ ಗುಣಕ್ಕೆ ಬೆರಗಾಗಲೇ ಬೇಕು. ಇಲ್ಲಿ ನಮ್ಮವರು ಬೇರೆ ಬೇರೆ ಕ್ಷೇತ್ರದಲ್ಲಿ ಮಿಂಚಲು ಅವರ ಶ್ರಮ ಸಂಸ್ಕ್ರತಿಯೇ ಕಾರಣ. ಮುಂಬಯಿ ಮಹಾನಗರದಲ್ಲಿ ತುಳು ಕನ್ನಡಿಗರು ಸಾಂಘಕಿವಾಗಿ ಮಾಡಿದ ಸಾಧನೆ ಅಪಾರವಾದುದು. ಸಮಾನ ಮನಸ್ಕರು ಸೇರಿ ಅಂದು ಹುಟ್ಟು ಹಾಕಿದ ಸಂಘ ಸಂಸ್ಥೆಗಳ ಮುಖ್ಯ ಉದ್ದೇಶ ಪರಿಚಯ, ಸ್ನೇಹ ಸೌಹಾರ್ದತೆಗಳು ಬೆಳೆಯುವುದೇ ಆಗಿತ್ತು. ಜಾತಿ ಮತಕ್ಕಿಂತ ಮೊದಲು ಭಾಷೆ, ನಮ್ಮ ನೆಲದ ಅಭಿಮಾನ ಮನುಷ್ಯರನ್ನು ಹತ್ತಿರ ತರಿಸುತ್ತದೆ. ನಂತರದ ದಿನಗಳಲ್ಲಿ ಈ ಸಂಸ್ಥೆಗಳ ಉದ್ದೇಶ, ವ್ಯಾಪ್ತಿ ವಿಸ್ತರಿಸುತ್ತಾ ಹೋಯಿತು. ಹೀಗೆ…

Read More

ಬಂಟರ ಸಂಘ ಮುಂಬಯಿಯ ಸಿಟಿ ಪ್ರಾದೇಶಿಕ ಸಮಿತಿಯು 2024 ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ದತ್ತು ಸ್ವೀಕಾರ ಕಾರ್ಯಕ್ರಮವು ಆಗಸ್ಟ್ 4, ರವಿವಾರ ಬೆಳಿಗ್ಗೆ 10 ಗಂಟೆಗೆ ಬಂಟರ ಸಂಘದ ಶ್ರೀಮತಿ ರಂಜಿನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಎನೆಕ್ಸ್ ಕಟ್ಟಡದ ಎರಡನೇ ಮಹಡಿಯಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಶೋಕ್ ಪಕ್ಕಳ ಅವರ ನೇತೃತ್ವದಲ್ಲಿ ನಡೆಯಲಿದೆ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಮಹಿಳಾ ವಿಭಾಗದ ಎಲ್ಲಾ ಪದಾಧಿಕಾರಿಗಳು ಜೊತೆಗೆ ಯುವ ವಿಭಾಗ ಕೈ ಜೋಡಿಸಲಿದೆ. ಶಿಕ್ಷಣ ಮತ್ತು ಸಮಾಜ ಕಲ್ಯಾಣ ದತ್ತು ಸ್ವೀಕಾರ, ತುಳುನಾಡ ಆಟಿ ಆನಿ – ಇನಿ ಮತ್ತು ಸಂಜೀವಿನಿ ಲೋಕಾರ್ಪಣೆ ಇದೇ ವೇದಿಕೆಯಲ್ಲಿ ತ್ರಿವಳಿ ಸಂಭ್ರಮ ಕಾರ್ಯಕ್ರಮಗಳು ನಡೆಯಲಿದೆ. ಡಾ| ಆರ್.ಕೆ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಎಲ್ಲರಿಗೂ ವಿದ್ಯೆ ಮತ್ತು ವೈದ್ಯಕೀಯ ನೆರವು ಸಿಗುವಂತಹ ಸೇವೆಯ ಹೊಸ ಯೋಚನೆ ಮತ್ತು ಯೋಜನೆಯಾದ ಸಂಜೀವಿನಿ ಉದ್ಘಾಟನೆಗೊಳ್ಳಲಿದೆ. ಬಂಟರ…

Read More

ಹಿಂದಿನ ಕಷ್ಟ ಕಾಲದ ಸಮಯ ಹಾಗೂ ವಿಪರೀತ ಮಳೆಯ ಕಾರಣದಿಂದ ಜನರಿಗೆ ಆಟಿ ತಿಂಗಳ ಜೀವನ ಸುಖಕರವಾಗಿರಲಿಲ್ಲ. ಆ ಸಮಯದಲ್ಲಿ ಜನರು ಪ್ರಾಕೃತಿಕವಾಗಿ ಲಭಿಸುವ ತಿಂಡಿ ತಿನಿಸುಗಳನ್ನು ಉಪಯೋಗಿಸುತ್ತಿದ್ದರು. ಆಗ ಇಂದಿನ ಯಾವುದೇ ಸೌಲಭ್ಯ ಇರಲಿಲ್ಲ. ಇಂದು ನಾವು ಆ ದಿನವನ್ನು ನೆನೆಪಿಸುವ ಹಾಗೂ ಇಂದಿನ ಪೀಳಿಗೆಗೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಹೊಟ್ಟೆಪಾಡಿಗಾಗಿ ಜನ್ಮಭೂಮಿಯಿಂದ ಕರ್ಮಭೂಮಿಯಾದ ಮುಂಬಯಿಗೆ ಬಂದು ತುಳುನಾಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ಮುಂಬಯಿಗರ ಕಾರ್ಯ ಶ್ಲಾಘನೀಯ ಎಂದು ಬಂಟ್ಸ್ ಫೋರಮ್ ಮೀರಾ ಭಾಯಂದರ್ ಇದರ ಅದ್ಯಕ್ಷ ಉದಯ್ ಎಮ್ ಶೆಟ್ಟಿ ಮಲಾರಬೀಡು ಹೇಳಿದರು. ಅವರು ಜುಲೈ 27ರಂದು ಭಾಯಂದರ್ ಪೂರ್ವದ ಕ್ರೌನ್ ಬಿಜಿನೆಸ್ ಹೋಟೇಲಿನ ಅಶ್ವಿನಿ ಬ್ಯಾಂಕ್ವೆಟ್ ಸಭಾಗೃಹದಲ್ಲಿ ಬಂಟ್ಸ್ ಫೋರಮ್ ಮೀರಾ ಭಾಯಂದರ್ ವತಿಯಿಂದ ಆಯೋಜಿಸಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸುನಿತಾ ಶೆಟ್ಟಿಯವರು ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಮಾತನಾಡಿ, ಯುದ್ದದಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ನುಡಿ ನಮನ ಸಲ್ಲಿಸಿದರು. ಅತಿಥಿಯಾಗಿ…

Read More

ಕತಾರ್ ಬಂಟರ ಸಂಘದ ಅಧ್ಯಕ್ಷರಾದ ನವೀನ್ ಶೆಟ್ಟಿ ಇರುವೈಲ್ ಹಾಗೂ ಆಡಳಿತ ಮಂಡಳಿ ಸದಸ್ಯ ನವೀನ್ ಶೆಟ್ಟಿ ಮಡಂತ್ಯಾರ್ ರವರು ಜುಲೈ 31 ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಗೆ ಆಗಮಿಸಿದ್ದು, ಅವರನ್ನು ಒಕ್ಕೂಟದ ಪರವಾಗಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪುತ್ತೂರು ಬಂಟರ ಸಂಘದಿಂದ ಆಯೋಜಿಸಲ್ಪಡುವ “ಆಟಿಡೊಂಜಿ ಬಂಟೆರೆ ಸೇರಿಗೆ” ಕಾರ್ಯಕ್ರಮಕ್ಕೆ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿಯವರು ಕತಾರ್ ಬಂಟರ ಸಂಘದ ಅಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿದರು. ಈ ಸಂದರ್ಭದಲ್ಲಿ ದುರ್ಗಾಪ್ರಸಾದ್ ರೈ ಕುಂಬ್ರ, ರವಿ ಪ್ರಸಾದ್ ಶೆಟ್ಟಿ, ಗುರುಪುರ ಬಂಟರ ಸಂಘದ ಸುದರ್ಶನ್ ಶೆಟ್ಟಿ, ಬಜ್ಪೆ ವಲಯ ಬಂಟರ ಸಂಘದ ಹರೀಶ್ ಶೆಟ್ಟಿ, ಸುಕೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಸತ್ಯಪ್ರಸಾದ್ ಶೆಟ್ಟಿ, ಬಂಟರ ಸಂಘ ನೀರುಮಾರ್ಗ ವಲಯದ ಗೋಕುಲ್ ದಾಸ್ ಶೆಟ್ಟಿ, ಬಂಟರ ಸಂಘ ಕೊಟ್ಟಾರ ಕೋಡಿಕಲ್ ನ…

Read More

ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಅಗಸ್ಟ್ 10 ರಂದು ಪುತ್ತೂರಿನಲ್ಲಿ ವಿಜೃಂಭಣೆಯಿಂದ ನಡೆಯಲಿರುವ ಆಟಿಡೊಂಜಿ ಬಂಟೆರೆ ಸೇರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘಕ್ಕೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಎ ಹೇಮನಾಥ್ ಶೆಟ್ಟಿ ಕಾವುರವರು ಗೌರವಪೂರ್ವಕವಾಗಿ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಕುಂಬ್ರ ದುರ್ಗಾಪ್ರಸಾದ್ ರೈ, ಸಾಜ ರಾಧಾಕೃಷ್ಣ ಆಳ್ವ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ರವಿಪ್ರಸಾದ್ ಶೆಟ್ಟಿ, ವಿಶೇಷ ಆಹ್ವಾನಿತರಾದ ಕೃಷ್ಣಪ್ರಸಾದ್ ಆಳ್ವ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಮಹಿಳಾ ಬಂಟರ ಸಂಘದ ಕೋಶಾಧಿಕಾರಿ ಅರುಣಾ ದಿನಕರ್ ರೈ, ಅನಿತಾ ಹೇಮನಾಥ್ ಶೆಟ್ಟಿ, ಯುವ ಬಂಟರ ಸಂಘದ ಜೊತೆ ಕಾರ್ಯದರ್ಶಿ ಶುಭ ರೈ ಉಪಸ್ಥಿತರಿದ್ದರು.

Read More

ಬಂಟರ ಸಂಘ ಪುತ್ತೂರು ತಾಲೂಕು ಇದರ ವತಿಯಿಂದ ಆಗಸ್ಟ್ 10 ರಂದು ಜರಗಲಿರುವ “ಆಟಿಡೊಂಜಿ ಬಂಟೆರೆ ಸೇರಿಗೆ” ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಹೇಮನಾಥ್ ಶೆಟ್ಟಿ ಕಾವು, ದುರ್ಗಾಪ್ರಸಾದ್ ರೈ ಕುಂಬ್ರ ಹಾಗೂ ರವಿಪ್ರಸಾದ್ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರನ್ನು ಗೌರವಪೂರ್ವಕವಾಗಿ ಆಮಂತ್ರಿಸಿದರು. ಈ ಸಂದರ್ಭದಲ್ಲಿ ಗುರುಪುರ ಬಂಟರ ಸಂಘದ ಸುದರ್ಶನ್ ಶೆಟ್ಟಿ, ಬಜ್ಪೆ ವಲಯ ಬಂಟರ ಸಂಘದ ಹರೀಶ್ ಶೆಟ್ಟಿ, ಸುಕೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಸತ್ಯಪ್ರಸಾದ್ ಶೆಟ್ಟಿ, ಬಂಟರ ಸಂಘ ನೀರುಮಾರ್ಗ ವಲಯದ ಗೋಕುಲ್ ದಾಸ್ ಶೆಟ್ಟಿ, ಬಂಟರ ಸಂಘ ಕೊಟ್ಟಾರ ಕೋಡಿಕಲ್ ನ ಲಕ್ಷಣ್ ಶೆಟ್ಟಿ, ಉಮೇಶ್ ಶೆಟ್ಟಿ, ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ಮತ್ತು ಆಹ್ವಾನಿತ ಸದಸ್ಯರಾದ ಶ್ರೀ ಯಶು ಪಕ್ಕಳ ಇವರುಗಳು ಉಪಸ್ಥಿತರಿದ್ದರು.

Read More