Author: admin
ಬಂಟರ ಚಾವಡಿ ಪರ್ಕಳ ಇದರ ವ್ಯಾಪ್ತಿಗೆ ಬರುವ ಹೆರ್ಗ, ಶೆಟ್ಟಿ ಬೆಟ್ಟು, ಪರ್ಕಳ, 80 ಬಡಗಬೆಟ್ಟು, ಹಿರೇಬೆಟ್ಟು ಹಾಗೂ ಆತ್ರಾಡಿ ಪರೀಕ ಗ್ರಾಮಗಳ ಬಂಟ ಕುಟುಂಬಗಳ ಸ್ನೇಹ ಸಮ್ಮಿಲನ ಸಂಭ್ರಮ ಹಾಗೂ ಸನ್ಮಾನ ಸಮಾರಂಭವು ಇದೇ ಬರುವ ಮಾರ್ಚ್ 10 ರಂದು ಸಂಜೆ ಘಂಟೆ 4 ರಿಂದ ಪರ್ಕಳ ಪ್ರೌಢಶಾಲಾ ಸುವರ್ಣ ಮಹೋತ್ಸವ ಸಭಾಭವನದಲ್ಲಿ ವಿಜೃಂಭಣೆಯಿಂದ ಜರಗಲಿರುವುದು. ಅಂದು ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ತಾರಾನಾಥ್ ಹೆಗ್ಡೆಯವರು ವಹಿಸಲಿದ್ದು, ಶ್ರೀ ಬಿ ಜಯರಾಜ್ ಹೆಗ್ಡೆ ಹಾಗೂ ಆಹ್ವಾನಿತ ಅತಿಥಿಗಳು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಆಹ್ವಾನಿತ ಅತಿಥಿಗಳಾಗಿ ಶ್ರೀಗಳಾದ ಅಪ್ಪಣ್ಣ ಹೆಗ್ಡೆ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಪುಣ್ಚೂರು ಗಣೇಶ್ ಹೆಗ್ಡೆ, ಉಡುಪಿ ಬಂಟರ ಸಂಘದ ಸಂಚಾಲಕ ಶ್ರೀ ಶಿವಪ್ರಸಾದ್ ಹೆಗ್ಡೆ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಡಾ.ಸುಬ್ಬಣ್ಣ ಶೆಟ್ಟಿ ಹೆಸರಾಂತ ನೇತ್ರ ತಜ್ಞರು ಮತ್ತು…
ಮಾರ್ಚ್ 10 ರಿಂದ 15 ರ ತನಕ ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನದ ಪುನಃಪ್ರತಿಷ್ಠಾಪನೆ ಸಂಭ್ರಭವಿದ್ದು, 13ರಂದು ವಿಜೃಂಭಣೆಯ ಬ್ರಹ್ಮಕಲಶಾದಿ ಧಾರ್ಮಿಕ ಕಾರ್ಯಕ್ರಮಗಳು, ಸಾರ್ವಜನಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಅಂದು ಕದ್ರಿ ಶ್ರೀಶ್ರೀ ಶ್ರೀ ಯೋಗಿನಾಥೇಶ್ವರ ಮಹಾರಾಜ್ ಜೀ ಅವರ ಪರಮಾನುಗ್ರಹದಿಂದ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ಉಪಸ್ಥಿತಿಯಲ್ಲಿ ಇತರ ಪೂಜನೀಯ ಧಾರ್ಮಿಕ ಮಾರ್ಗದರ್ಶಕರ ನಿರ್ದೇಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೀಯ ರೀತಿಯಲ್ಲಿ ಜರಗಲಿದ್ದು, ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಣಿಲ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದು ಅನುಗ್ರಹ ನುಡಿಗಳನ್ನಾಡಲಿದ್ದಾರೆ. ಅದೇ ರೀತಿ ಮಾರ್ಚ್ 10 ರಂದು ಭಾನುವಾರ ಹಸಿರು ಹೊರೆ ಕಾಣಿಕೆ ಮೆರವಣಿಗೆ ಇದ್ದು, ಮಾರ್ಚ್ 10 ರಿಂದ 15 ರವರೆಗೂ ದಿನಪೂರ್ತಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೈವ ದೇವರ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಬಡಿಲಗುತ್ತು, ಜೀರ್ಣೋದ್ಧಾರ ಸಮಿತಿ…
ಸದಾಶಿವ ಶೆಟ್ಟರಿಗೆ ಬಾರೀ ಸಂಭ್ರಮ. ಅಂದು ಬಹಳ ಖುಷಿಯಲ್ಲಿದ್ದರು. ಮಗ 2 ಕೋಟಿಯ ಬಂಗಲೆ ಕಟ್ಟಿ ಅದಕ್ಕೆ “ಅಪ್ಪನ ಕನಸು” ಎಂದು ಹೆಸರಿಟ್ಟಿದ್ದ. ನಿಜಕ್ಕೂ ಇದು ಅವರ ಕನಸೇ ಆಗಿತ್ತು. ಅವರ ಜೀವಮಾನವಿಡೀ ಕನಸಾಗೇ ಉಳಿದ ಕನಸು ಇಂದು ನನಸಾಗುತ್ತಿದ್ದು ಇಡೀ ಮನೆಯನ್ನೊಮ್ಮೆ ಸುತ್ತಾಡಿ ಬಂದರು. ಅದ್ಭುತ ಅರಮನೆಯoತಿತ್ತು ಮನೆ. ಜೀವಮಾನವಿಡೀ ಹೆಂಡತಿ ಮಗನೊಂದಿಗೆ ಬಾಡಿಗೆ ಮನೆಯಲ್ಲೇ ಕಳೆದಿದ್ದರು ಅವರು. ಅಧ್ಯಾಪಕ ವೃತ್ತಿಯಿಂದ ಬಂದ ಲಾಭವನ್ನೆಲ್ಲಾ ಒಟ್ಟು ಮಾಡಿ ಒಂದಷ್ಟು ಸಾಲ ಮಾಡಿ ಸ್ವಂತ ವ್ಯಾಪಾರ ಮಾಡಲೆಂದು ಕೈ ಹಾಕಿ ಕೈ ಸುಟ್ಟುಕೊಂಡು ಜೀವಮಾನವಿಡೀ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟುವುದರಲ್ಲೇ ಕಳೆದಿದ್ದರೂ, ಜೊತೆಗೆ ಇದ್ದ ಒಬ್ಬ ಮಗನ ವಿದ್ಯಾಭ್ಯಾಸ, ಮದುವೆ ಎಂದು ಇನ್ನಷ್ಟು ಸಾಲ ಮಾಡಿ ಇದ್ದ ಮನೆ ಮಾರಿ ಸಾಲ ತೀರಿಸುವಾಗ ತಲೆಯಲ್ಲಿ ಕೂದಲು ಬೆಳ್ಳಗಾಗಿತ್ತು. ದೊಡ್ಡ ಬಂಗಲೆ ಕಟ್ಟುತ್ತೇನೆ ನೋಡುತ್ತಿರು ಎಂದು ಹೆಂಡತಿ ಮಗನಿಗೆ ಹೇಳುತ್ತಾ ಹೇಳುತ್ತಾ ವಯಸ್ಸು 70 ಕಳೆಯುವಾಗ ಅವರಾಸೆ ಅವರ ಕನಸಾಗಿಯೇ ಉಳಿದುಬಿಟ್ಟಿತ್ತು. ಎಲ್ಲದರಲ್ಲೂ…
ಸಾಮೆತ್ತಡ್ಕ ಹಿ.ಪ್ರಾ ಶಾಲೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಾಗಾರವು ಫೆಬ್ರವರಿ 28 ರಂದು ಸಾಮೆತ್ತಡ್ಕ ಶಾಲೆಯಲ್ಲಿ ನಡೆಯಿತು. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿ, ಜೆ.ಸಿ.ಐ ಪುತ್ತೂರು, ನಮ್ಮ ಶಾಲೆ ಸ.ಹಿ.ಪ್ರಾ. ಶಾಲೆ ಸಾಮೆತ್ತಡ್ಕ ಇದರ ಸಹಭಾಗಿತ್ವದಲ್ಲಿ ಕಾರ್ಯಾಗಾರ ನಡೆಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೆಸಿಐ ಅಧ್ಯಕ್ಷ ಮೋಹನ್ ಕೆ. ಶುಭ ಹಾರೈಸಿದರು. ಜೆಸಿಐ ತರಬೇತಿ ವಿಭಾಗದ ಉಪಾಧ್ಯಕ್ಷರು ಹಾಗೂ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈಯವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿ ಶಾಲಾಭಿವೃದ್ಧಿ ಸಮಿತಿಯ ಜವಾಬ್ದಾರಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಹಾಗೂ ಪೋಷಕರು ಪ್ರಾರ್ಥಮಿಕ ಹಂತದಲ್ಲಿ ತಮ್ಮ ಮಕ್ಕಳ ಬಗ್ಗೆ ಗಮನ ವಹಿಸಬೇಕು ಎಂಬುದರ ಬಗ್ಗೆ ತಿಳಿಸಿದರು. ಪೋಷಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ದಿನೇಶ್ ಕಾಮತ್ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪವಿತ್ರ,…
ತುಳುನಾಡ ಫೌಂಡೇಶನ್ ಪುಣೆ ವತಿಯಿಂದ ಬಾಕ್ಸ್ ಕ್ರಿಕೆಟ್ ಪಂದ್ಯಾಟವು ಮಾರ್ಚ್ 3ರಂದು ರವಿವಾರ ಕ್ರಾಸ್ ಬಾರ್ ಮಲ್ಟಿ ಸ್ಪೋರ್ಟ್ಸ್ ಮೈದಾನ, ಸಿಂಹಘಡ್ ರೋಡ್, ಪುಣೆ ಇಲ್ಲಿ ಬೆಳಗ್ಗೆ ಗಂಟೆ 7 ರಿಂದ ಸಂಘದ ಅಧ್ಯಕ್ಷ ನ್ಯಾಯವಾದಿ ರೋಹನ್ ಪುರುಷೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 28 ತಂಡಗಳು ಭಾಗವಹಿಸಲಿದ್ದು ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುವುದು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲಾಗುವುದು. ತುಳು ಕನ್ನಡಿಗರು, ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯಾಟವನ್ನು ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಅಡ್ಯಾರ್ ಅರ್ಕುಳ ಗ್ರಾಮ ಸಮಿತಿ ಉಪಾಧ್ಯಕ್ಷರಾಗಿ, ಅಡ್ಯಾರ್ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ, ಪ್ರಸ್ತುತ ಅಡ್ಯಾರ್ ಅರ್ಕುಳ, ನೀರುಮಾರ್ಗ ಬೊಂಡಂತಿಲ, ಮಲ್ಲೂರು ಉಳಾಯಿಬೆಟ್ಟು ಗ್ರಾಮಗಳನ್ನು ಒಳಗೊಂಡ ನೀರುಮಾರ್ಗ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ ಉದ್ಯಮಿ ಅಜಿತ್ ಶೆಟ್ಟಿ ಅಡ್ಯಾರ್ ಗುತ್ತು ಆಯ್ಕೆಯಾಗಿದ್ದಾರೆ. ಬಿಜೆಪಿ ಮಂಗಳೂರು ಉತ್ತರ ಮಂಡಲದ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಉದ್ಯಮಿ ಸಾಕ್ಷಾತ್ ಶೆಟ್ಟಿ ಕಾವೂರು ಆಯ್ಕೆಯಾಗಿದ್ದಾರೆ.
ಭಾರತೀಯ ಜನತಾ ಪಕ್ಷದ ಉಡುಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಯುವ ನಾಯಕ, ಉದ್ಯಮಿ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಜೀವನದಿಂದಲೇ ವಿದ್ಯಾರ್ಥಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಇವರು ಹಲವಾರು ಯಶಸ್ವಿ ವಿದ್ಯಾರ್ಥಿ ಹೋರಾಟಗಳನ್ನು ಸಂಘಟಿಸಿ, ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಅನಂತರ ರಾಜಕೀಯ ಪ್ರವೇಶಿಸಿ ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಗೋವಿಗಾಗಿ ಮೇವು ಎನ್ನುವ ಯಶಸ್ವಿ ಅಭಿಯಾನವನ್ನು ಸಂಘಟಿಸಿ, ಗೋ ಶಾಲೆಗಳಿಗೆ ವಿವಿಧ ಸಂಘಟನೆಗಳಿಂದ ಮೇವು ಒದಗಿಸುವುದರ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಕರಾವಳಿ ರೈಲ್ವೇ ಹೋರಾಟ ಸಮಿತಿಯ ಪ್ರಮುಖರಾಗಿ, ಬಿಲ್ಲಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷರಾಗಿ, ಪ್ರಸ್ತುತ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇತ್ತೀಚಿನ ದಿನದಲ್ಲಿ ಕ್ಷುಲಕ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಯಾವುದು ಸರಿ ಯಾವುದು ತಪ್ಪು ಎಂಬ ಯೋಚನೆ ಕೂಡ ಮಾಡದೆ ಎಲ್ಲದಕ್ಕೂ ಸಾವೊಂದೇ ಪರಿಹಾರ ಎಂಬ ಮಟ್ಟಿಗೆ ಸಮಾಜ ರೂಪುಗೊಳ್ಳುತ್ತದೆ. ಪರೀಕ್ಷೆ ಕಾಪಿ ಮಾಡಿದ್ದಾರೆ ಎಂಬ ಕಾರಣಕ್ಕೆ ಶಿಕ್ಷಕಿ ಬೈದರೆ, ಹೊರ ನಿಲ್ಲಿಸಿದರೆ ಅದನ್ನೇ ದೊಡ್ಡ ಅವಮಾನ ಎಂದು ಆತ್ಮಹತ್ಯೆ ನಿರ್ಧಾರ ಮಾಡುತ್ತಿದ್ದಾರೆ. ಆದರೆ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಮನೆಯೆಂಬ ಪಾಠ ಶಾಲೆಯಲ್ಲಿ ನೈತಿಕತೆಯ ಶಿಕ್ಷಣ ದೊರೆಯುತ್ತಿತ್ತು. ಆಗ ಮಕ್ಕಳು ಶಿಕ್ಷಕರ ಬಗ್ಗೆ ದೂರು ಹೇಳಲು ಬಂದರೆ ಮಕ್ಕಳಿಗೆ ತಿದ್ದಿ ಬುದ್ಧಿ ಹೇಳುತ್ತಿದ್ದರು. ಅಮ್ಮ ಮೊಬೈಲ್ ಮುಟ್ಟಬೇಡ ಎಂದಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗುವುದು, ಪ್ರೀತಿ ಪೇಮದ ವಿಚಾರಕ್ಕೆ ಒಪ್ಪಲಿಲ್ಲವೆಂದು, ಇಷ್ಟದ ವಸ್ತು ಕೊಡಿಸಿಲ್ಲವೆಂದು ಇನ್ನೂ ಅನೇಕ ಕಾರಣಕ್ಕೆ ಮಕ್ಕಳು, ಯುವ ಸಮುದಾಯ ಆತ್ಮಹತ್ಯೆ ಮಾಡಿಕೊಳ್ಳುವುದು ವಿಪರ್ಯಾಸ ಎನ್ನಬಹುದು. ಅಧಿಕೃತ ವರದಿಯ ಪ್ರಕಾರ ಪ್ರತಿ 55 ನಿಮಿಷಕ್ಕೆ ಒಬ್ಬರು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣ ಕಳೆದ…
ಕಜೆ ಕುಕ್ಕುದಡಿ ಶ್ರೀ ಮಹಾಮ್ಮಾಯಿ ದೇವಸ್ಥಾನ ಹಾಗೂ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲ ಇನ್ನಾ ಮುಂಡ್ಕೂರು ಮುಲ್ಲಡ್ಕದ ಎರಡು ಕಣ್ಣುಗಳಂತಿದ್ದು, ಈಗ ಕಜೆ ದೇಗುಲ ಸಂಪೂರ್ಣ ಶಿಲಾಮಯಗೊಂಡು ತನ್ನ ಪಾವಿತ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಧಾರ್ಮಿಕ ವಿದ್ವಾಂಸ ಕಡಂದಲೆ ಸ್ಕಂದ ಪ್ರಸಾದ ಭಟ್ ಹೇಳಿದರು. ಅವರು ಸಚ್ಚೇರಿಪೇಟೆಯಲ್ಲಿ ಕಜೆ ಶ್ರೀ ಮಹಾಮ್ಮಾಯಿ ಸಾಂಸ್ಕೃತಿಕ ವೇದಿಕೆಯ ನೇತೃತ್ವದಲ್ಲಿ ಕುಕ್ಕುದಡಿ ಕ್ಷೇತ್ರವೆಂದೇ ಪ್ರಸಿದ್ಧಿ ಹೊಂದಿರುವ ಐತಿಹಾಸಿಕ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸತ್ಯಶಂಕರ ಶೆಟ್ಟಿ ಆಧ್ಯಕ್ಷತೆ ವಹಿಸಿದ್ದು, ಸಚ್ಚೇರಿಪೇಟೆಯ ಮಹಾಮ್ಮಾಯೀ ಕಟ್ಟೆಯ ನವೀಕರಣದ ರೂವಾರಿ ರವೀಂದ್ರ ಡಿ. ಪೂಂಜ ಹಾಗೂ ಅವರ ಪುತ್ರ ರೂಪಲ್ ಆರ್. ಪೂಂಜಾ ಅವರನ್ನು ಸಮ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವದ ಮುಂಬಯಿ ಸಮಿತಿಯ ಅಧ್ಯಕ್ಷ ಮುಲ್ಲಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ, ಮುಂಬಯಿಯ ಎಲ್.ವಿ. ಅಮೀನ್, ಕಡಂದಲೆ ಹರಿಶ್ಚಂದ್ರ ಶೆಟ್ಟಿ, ಪ್ರಕಾಶ್ ಸಪಳಿಗ, ಸಮಿತಿಯ ಅಧ್ಯಕ್ಷ ರಾಜಾರಾಮ ಶೆಟ್ಟಿ,…
ಅದೊಂದು ಮುಂಜಾನೆ ಚಳಿಯ ಹೊದಿಕೆಯನ್ನು ಮೆಲ್ಲಗೆ ಸರಿಸಿ ಸೂರ್ಯನ ಹೊಂಗಿರಣಗಳು ಸುತ್ತಲೂ ಆವರಿಸಿದ ಹಸುರ ಹಾಸುಗೆಯನ್ನು ಚುಂಬಿಸುತ್ತಿದ್ದವು. ಹಾಗೇ ವಾತಾವರಣವನ್ನು ಅನುಭವಿಸುತ್ತಾ ನಿಸರ್ಗದ ಮಡಿಲಲ್ಲಿ ಕುಳಿತಿದ್ದಾಗ ಒಂದು ಪುಟ್ಟ ಜೇನುನೊಣ ಹೂವಿನ ಮಕರಂದವನ್ನು ಸವಿಯುತ್ತಾ ಅತ್ತಿಂದಿತ್ತ ಓಡಾಡುತ್ತಿತ್ತು. ಪರೋಕ್ಷವಾಗಿ ವಿಮರ್ಶಿಸಿದರೆ ಜೇನುನೊಣ ಉಪಯೋಗವನ್ನು ಪಡೆಯುವುದರೊಂದಿಗೆ ಹೂವಿನ ಪರಾಗಸ್ಪರ್ಶ ಕ್ರಿಯೆಯ ಮುಖ್ಯ ರೂವಾರಿಯಾಗಿ ಕೆಲಸ ಮಾಡುತ್ತಿದೆ. ಎಲ್ಲಿಯೋ ಇದ್ದ ಜೇನುನೊಣ, ಮತ್ತೆಲ್ಲೋ ಇದ್ದ ಹೂವಿನ ನಡುವೆ ಅದೆಂತಹ ಸಹಜೀವನ, ಅದೇನು ಸಹಕಾರ! ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತು ಕೇವಲ ಮನುಷ್ಯನಿಗೆ ಮಾತ್ರವಲ್ಲ, ನಿಸರ್ಗದ ಪ್ರತೀ ಜೀವಿಗೂ ಅನ್ವಯಿಸುತ್ತದೆ. ಹೂವು-ಜೇನು, ಮನುಷ್ಯ-ಜಾನುವಾರು ಇವೆಲ್ಲದರ ನಡುವೆ ಅದ್ಭುತವಾದ ವಿನಿಮಯ ಪ್ರಕ್ರಿಯೆ ತಿಳಿಯದೆಯೇ ನಡೆದಿರುತ್ತವೆ. ಇಂತಹದೇ ಸಹಜೀವನ ಶಿಲೀಂಧ್ರ ಲೋಕದೊಳಗೂ ನಾವು ಕಾಣಲು ಸಾಧ್ಯ. ಸಹಜೀವನ ಎಂಬುದು ಎರಡು ವಿಭಿನ್ನ ಜಾತಿಗೆ ಸೇರಿದ ಜೀವಿಗಳ ನಡುವಿನ ದೀರ್ಘಕಾಲಿಕ ನಿಕಟವಾದ ಸಂಬಂಧ. ಈ ಜೈವಿಕ ಪ್ರಕ್ರಿಯೆಯಲ್ಲಿ ಎರಡು ಜೀವಿಗಳು ಪರಸ್ಪರ ಪ್ರಯೋಜನಗಳನ್ನು ಪಡೆಯುತ್ತವೆ. ಉದಾಹರಣೆಯೊಂದಿಗೆ ಹೇಳುವುದಾದರೆ…