Author: admin
ನಾಡ ಹಬ್ಬ ಮೈಸೂರು ದಸರಾ ಅಂದಾಕ್ಷಣ ಗಜಪಡೆಗಳು ನೆನಪಾಗುತ್ತದೆ. ಜಗತ್ತಿನ ಮೂಲೆ ಮೂಲೆಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುವ ಶ್ರೀಮಂತ ಸಂಸ್ಕೃತಿಯ ಪರಂಪರೆಯು ದಸರಾದ ವಿಶ್ವ ವಿಖ್ಯಾತ ಜಂಬೂ ಸವಾರಿ ಮೆರವಣಿಗೆಗೆ ಗಜಪಡೆಯನ್ನು ಸಜ್ಜುಗೊಳಿಸಲು ಅಭ್ಯಾಸ ಮಾಡಿಸುವ ಸಂಪ್ರದಾಯ ಇದೆ. ಇಲ್ಲಿ ಗಜ ಪಡೆಯ ಗಂಭೀರ ನಡಿಗೆಗೆ ತಾಲೀಮು ದಸರಾಗೆ ತಿಂಗಳು ಇರುವಾಗಲೇ ಪ್ರಾರಂಭವಾಗುತ್ತದೆ. ಅದ್ದೂರಿಯಾಗಿ ದಸರಾ ಜಂಬೂ ಸವಾರಿಗಾಗಿ ಕಾಡಿನಿಂದ ನಾಡಿಗೆ ತಂದಿರುವ ಆನೆಗಳಿಗೆ ಬೆಳಿಗ್ಗೆ ಹಾಗೂ ಸಂಜೆ ತಾಲೀಮು ನಡೆಯುತ್ತದೆ. ವಿಶ್ವ ವಿಖ್ಯಾತ ಮೈಸೂರು ದಸರಾ ನೋಡಲು ಎಷ್ಟು ಸುಂದರವೋ ಅಷ್ಟೇ ಸುಂದರ ನಾಡಹಬ್ಬಕ್ಕೆ ಮುನ್ನುಡಿಯಂತಿರುವ ಗಜ ಪಯಣ ದಸರಾದಲ್ಲಿ ಆನೆ ಅಂಬಾರಿ ಹೊರುವುದನ್ನು ಜನ ವಿಶೇಷವಾಗಿ ನೋಡಿರಬಹುದು. ಆದರೆ ಅದೇ ಆನೆಗಳು ಕಾಡಿನಿಂದ ನಾಡಿಗೆ ಬರುವ ದಿನ ಅಂದರೆ ದಸರಾಕ್ಕೆ ಒಂದು ತಿಂಗಳು ಮೊದಲು ಗಜ ಪಡೆಗಳನ್ನು ನಾಡಿಗೆ ಸ್ವಾಗತಿಸುವ ರೀತಿ ರಿವಾಜುಗಳು ಒಂದು ತರದ ಹಬ್ಬದ ವಾತಾವರಣವನ್ನು ನಿರ್ಮಾಣಗೊಳಿಸುತ್ತವೆ. ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನ…
ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು, ಇದರ ಬಹರೈನ್ ಸೌದಿ ಘಟಕದ ತೃತೀಯ ವಾರ್ಷಿಕೋತ್ಸವ “ಪಟ್ಲ ಸಂಭ್ರಮ – 2023” ಅಕ್ಟೋಬರ್ 20 ರಂದು ಸ್ಥಳೀಯ ಕನ್ನಡ ಭವನ ಸಭಾಂಗಣದಲ್ಲಿ ವಿಜೃಂಬಣೆಯಿಂದ ನೆರವೇರಿತು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್, ಕತಾರ್ ಘಟಕದ ಗೌರವಾಧ್ಯಕ್ಷರಾದ ಡಾ. ಮೂಡಂಬೈಲು ರವಿ ಶೆಟ್ಟಿ, ಅಭ್ಯಾಗತರಾಗಿ ಶ್ರೀಮತಿ ಶೋಭಾ ಪುರುಷೋತ್ತಮ ಪೂಂಜ, ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿ ಪಾಲ್ಗೊಂಡಿದ್ದರು. ಅತಿಥಿ ಗಣ್ಯರರಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಶುಭಾರಂಭಗೊಂಡಿತು. ಈ ಬಾರಿಯ ಪಟ್ಲ ಸಂಭ್ರಮದಲ್ಲಿ ಅಭಿನವ ವಾಲ್ಮೀಕಿ ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸಂಸ್ಮರಣೆಯನ್ನು ಹಮ್ಮಿಕೊಂಡಿದ್ದು, ತಾಯ್ನಾಡಿಂದ ಆಗಮಿಸಿದ್ದ ಪೂಂಜರ ಶಿಷ್ಯ ಶ್ರೀ ದೀವಿತ್ ಕೋಟ್ಯಾನ್ ರವರು ಪೂಂಜರಿಗೆ ನುಡಿನಮನ ಸಲ್ಲಿಸಿದರು. ಶ್ರೀಮತಿ ಶೋಭಾ ಪುರುಷೋತ್ತಮ ಪೂಂಜರನ್ನು ಶಾಲು ಸ್ಮರಣಿಕೆ, ಹಣ್ಣುಹಂಪಲು, ಸಮ್ಮಾನ ಪತ್ರದ ಮೂಲಕ ಗೌರವಿಸಲಾಯಿತು. ಮುಖ್ಯ ಅತಿಥಿ ಡಾ.ಮೂಡಂಬೈಲು ರವಿ ಶೆಟ್ಟಿಯವರನ್ನು…
ವಿಶ್ವ ಬಂಟ ಸಮ್ಮೇಳನದ ಹಿನ್ನೆಲೆಯಲ್ಲಿ “ಸ್ಥಿತ್ಯಂತರದಲ್ಲಿ ಬಂಟರು, ಶಿಕ್ಷಣ ಮತ್ತು ನಿರುದ್ಯೋಗ” ಕುರಿತ ವಿಚಾರ ಸಂಕಿರಣವು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರುಗಿತು. ಹೇರಂಬ ಇಂಡಸ್ಟ್ರೀಸ್ ಲಿ. ಮುಂಬೈ ಇದರ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ವಿಸ್ವತ್ ಕೆಮಿಕಲ್ಸ್ ಲಿ, ಮುಂಬೈ ಇದರ ಸಿಎಂಡಿ ಬಿ.ವಿವೇಕ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು. ಕರ್ನಾಟಕ ಜಾನಪದ ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ, ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರಸ್ತಾವನೆಗೈದು “ಇವತ್ತಿನ ಶಿಕ್ಷಣ ಎತ್ತ ಸಾಗುತ್ತಿದೆ, ನಿರುದ್ಯೋಗವನ್ನೇ ಸೃಷ್ಟಿ ಮಾಡುವ ಶಿಕ್ಷಣ ಸಂಸ್ಥೆಗಳು ಉದ್ಯೋಗ ಕಲ್ಪಿಸುವುದು ಹೇಗೆ? ಇಲ್ಲಿ ಕಲಿತ ಅರ್ಹ ಯುವಕರಿಗೆ ಉದ್ಯೋಗ ಸಿಗದೆ ವಿದೇಶಕ್ಕೆ ಹೋಗಬೇಕಾಗುತ್ತದೆ. ಇದನ್ನು ಪ್ರತಿಭಾ ಪಲಾಯನ ಎನ್ನುತ್ತಾರೆ. ಪ್ರತಿಭಾವಂತ ಬಂಟ ಸಮುದಾಯದ ಯುವಕರನ್ನು ನಮ್ಮ ಸಮಾಜದ ಅಭಿವೃದ್ಧಿಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ವಿಚಾರ ವಿನಿಮಯ ನಡೆಯಬೇಕು”…
ವಿಶ್ವ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಬಂಟ ಸಮ್ಮೇಳನ ಹಿನ್ನೆಲೆಯಲ್ಲಿ ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಉದ್ಘಾಟನಾ ಕಾರ್ಯಕ್ರಮ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಶೆಟ್ಟಿ ತೆರೆದ ಮೈದಾನದಲ್ಲಿನ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ಭಾನುವಾರ ಮುಂಜಾನೆ ನೆರವೇರಿತು. ಬಳಿಕ ಸಭೆಯನ್ನುದ್ದೇಶಿಸಿ ಮಾತಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು, “ಯಕ್ಷಗಾನಕ್ಕೆ ಬಂಟರು ಕೊಟ್ಟಿರುವ ಕೊಡುಗೆ ಅಪಾರ. ತೆಂಕುತಿಟ್ಟು, ಬಡಗುತಿಟ್ಟುಗಳಲ್ಲಿ ನಮ್ಮ ಅನೇಕ ಕಲಾವಿದರು ಇದ್ದಾರೆ. ಬಂಟ ಸಮುದಾಯ ಇಂದು ಕಲೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬೆನ್ನೆಲುಬಾಗಿ ನಿಂತಿದೆ. ಕ್ರೀಡೆ ಮತ್ತು ಸಂಸ್ಕೃತಿಯನ್ನು ಬಿಟ್ಟು ಬಂಟರ ಬದುಕೇ ಇಲ್ಲ. ಈ ಹಿನ್ನೆಲೆಯಲ್ಲಿ ಬಂಟರ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯುತ್ತಿದೆ. ಐಕಳ ಹರೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಬಹಳ ಒಳ್ಳೆಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಹೇರಂಬ ಇಂಡಸ್ಟ್ರಿಸ್ ಸಿಎಂಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ…
ಕಾಂತಾರ…ಕಾಂತಾರ…ಕಾಂತಾರ…ಎಲ್ಲರ ಬಾಯಲ್ಲೂ ಈಗ ಈ ಸಿನಿಮಾದ್ದೇ ಸುದ್ದಿ. ‘ಹೊಂಬಾಳೆ ಫಿಲ್ಮ್ಸ್’ ನಿರ್ಮಿಸಿ, ರಿಷಬ್ ಶೆಟ್ಟಿ ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ಆಭಿನಯಿಸಿರುವ ಈ ಕನ್ನಡ ಚಲನಚಿತ್ರ ಇತ್ತೀಚೆಗೆ ಬೆಳ್ಳಿ ತೆರೆಗೆ ಅಪ್ಪಳಿಸಿದ ವೇಗಕ್ಕೆ ಗಲ್ಲಾಪೆಟ್ಟಿಗೆ ಅಕ್ಷರಶಃ ಉಡಾಯಿಸಲ್ಪಟ್ಟಿದೆ! ವಿಶ್ವದೆಲ್ಲೆಡೆ ಭರ್ಜರಿ ಪ್ರದರ್ಶನಗಳನ್ನು ಕಂಡು ಕೋಟಿ-ಕೋಟಿ ರೂ.ಬಾಚುತ್ತಿರುವ ಈ ಚಿತ್ರದ ಯಶಸ್ಸು ಕಂಡು ಇಡೀ ಸ್ಯಾಂಡಲ್ವುಡ್ ಬೆಕ್ಕಸ ಬೆರಗಾಗಿದೆ! ಕರ್ನಾಟಕದ ಕರಾವಳಿಯ ಅತ್ಯಂತ ಶ್ರೀಮಂತ ಸಂಸ್ಕೃತಿ ಎನಿಸಿರುವ ದೈವಾರಾಧನೆಯ ಜೊತೆಗೆ ಜಮೀನ್ದಾರಿ ವ್ಯವಸ್ಥೆ, ಅರಣ್ಯ ಒತ್ತುವರಿ ಇತ್ಯಾದಿ ಸೂಕ್ಷ್ಮ ವಿಷಯಗಳನ್ನು ಆಧರಿಸಿ ನಿರ್ಮಿಸಲಾದ ವಿಭಿನ್ನ ಕಥಾವಸ್ತುವುಳ್ಳ ಈ ಚಲನಚಿತ್ರ ವೀಕ್ಷಕರನ್ನು ಮೋಡಿ ಮಾಡುತ್ತಿದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಆಪ್ತ ಸಂಬಂಧ ಚಿತ್ರದುದ್ದಕ್ಕೂ ಅನಾವರಣಗೊಂಡಿದೆ. ಆಸ್ತಿಕರು ಶ್ರದ್ಧಾ-ಭಕ್ತಿಯಿಂದ ಆರಾಧಿಸಿಕೊಂಡು ಬಂದಿರುವ ದೈವದ ಕಾರಣಿಕವನ್ನು ಜಗದಗಲ ಪಸರಿಸುತ್ತಿರುವ ಈ ಚಲನಚಿತ್ರ ನಾಸ್ತಿಕರನ್ನೂ ಒಮ್ಮೆಗೆ ನಿಬ್ಬೆರಗಾಗಿಸುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಕಂಬಳ ಓಟಗಾರನಾಗಿ ಹಾಗೂ ದೈವ ನರ್ತಕನಾಗಿ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ತನ್ನ ಪಾತ್ರದೊಳಗೆ…
ಯಕ್ಷಗಾನವು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಹುಟ್ಟಿಕೊಂಡ ಸಾಂಪ್ರದಾಯಿಕ ನೃತ್ಯ ನಾಟಕ ರೂಪವಾಗಿದೆ. ಪ್ರಾಚೀನ ಕಾಲದಿಂದಲೂ ಯಕ್ಷಗಾನವು ಶ್ರೀಮಂತ ಮತ್ತು ರೋಮಾಂಚಕ ಕಲಾ ಪ್ರಕಾರವಾಗಿ ವಿಕಸನಗೊಂಡಿದೆ. ಅದು ತನ್ನ ವರ್ಣರಂಜಿತ ವೇಷಭೂಷಣಗಳು, ಲಯಬದ್ಧ ಸಂಗೀತ ಮತ್ತು ಕ್ರಿಯಾತ್ಮಕ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಹೀಗೆ ಈ ಶ್ರೀಮಂತ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ನೀಡುತ್ತಿರುವ ಹಿರಿಯ ಕಲಾವಿದರು ಪೆರ್ಲ ಜಗನ್ನಾಥ ಶೆಟ್ಟಿ. ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಯ ಪಟ್ಲದಲ್ಲಿ 21.10.1966 ರಂದು ಮಂಜಪ್ಪ ಶೆಟ್ಟಿ ಹಾಗೂ ಕಮಲಾ ಎಂ ಶೆಟ್ಟಿ ಇವರ ಮಗನಾಗಿ ಜನನ. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯಾಭ್ಯಾಸವನ್ನು ನಾಟ್ಯ ಗುರುಗಳು ಕುಂಞರಾಮ ಮಣಿಯಾಣಿ (ಪ್ರಥಮ ಗುರುಗಳು)ಯವರಿಂದ ಕಲಿತು ನಂತರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್, ಕೆ.ಗೋವಿಂದ ಭಟ್ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿರುತ್ತಾರೆ. ಒಡನಾಡಿ ಹಿರಿಯರು ಗುರು ಸ್ವರೂಪರೆನಿಸಿದವರು ತೆಕ್ಕಟ್ಟೆ ಆನಂದ ಮಾಸ್ತರರು. ಯಕ್ಷಗಾನ ರಂಗದಲ್ಲಿ ಸರ್ವ ಸಾಧಾರಣ ಎಲ್ಲಾ ವೇಷಗಳು ಮಾಡಿರುವ ಅನುಭವ ಪೆರ್ಲ ಜಗನ್ನಾಥ…
ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಮಾತಿನಂತೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ತತ್ವದಡಿ ಕಳೆದ 40 ವರ್ಷಗಳಿಂದ ಸರ್ವ ಕ್ಷೇತ್ರಗಳಲ್ಲಿ ತೊಡಗಿ ಸಮಾಜ ಸೇವೆಯಲ್ಲಿ ಎ.ಹೇಮನಾಥ ಶೆಟ್ಟಿ ಕಾವುರವರು ನಿರತರಾಗಿದ್ದಾರೆ. ಸುದೀರ್ಘ ಕಾಲದಿಂದ ಕೃಷಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣ, ಉದ್ಯಮ, ಧಾರ್ಮಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಹೇಮನಾಥ ಶೆಟ್ಟಿ ಅವರು ಬಂಟ ಸಮುದಾಯದ ಜತೆಗೆ ಸರ್ವ ಸಮುದಾಯದ ಪ್ರೀತಿ ಗಳಿಸಿದ ವ್ಯಕ್ತಿ. ನೊಂದವರಿಗೆ, ಅಶಕ್ತರ ಆಶಾಕಿರಣರಾಗಿರುವ ಇವರು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ನಿರೀಕ್ಷೆಗಳಿಗೆ ಸ್ವಂದಿಸುವ ಧಣಿವರಿಯದ ನಾಯಕ ಅನ್ನುವ ಅಭಿಮಾನಕ್ಕೆ ಪಾತ್ರರಾದವರು. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಬನ್ನೂರು ಗುತ್ತು ಮನೆಯಲ್ಲಿ ಡಿಸೆಂಬರ್ 21-1964 ರಲ್ಲಿ ಕಾವು ಅಂತಪ್ಪ ಶೆಟ್ಟಿ ಮತ್ತು ಬನ್ನೂರು ಗುತ್ತು ತಾರಾ ಅಂತಪ್ಪ ಶೆಟ್ಟಿ ದಂಪತಿಗಳ ತೃತೀಯ ಪುತ್ರನಾಗಿ ಜನಿಸಿದರು. ಮಡಿಕೇರಿ ಸೈಂಟ್ ಮೈಕೆಲ್, ಮಾಡ್ನೂರು ಕಾವು ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪೆರ್ನಾಜೆ ಸೀತಾ ರಾಘವ ಪ್ರೌಢಶಾಲೆ ಮತ್ತು ಕಾವು ಸರಕಾರಿ ಪ್ರಾಥಮಿಕ…
ಬೆಳ್ತಂಗಡಿ ತಾಲೂಕಿನ ಸವಣಾಲು ಡಿ.ದೇವಪ್ಪ ಶೆಟ್ಟಿ ಮತ್ತು ಲಕ್ಷ್ಮೀ ಶೆಟ್ಟಿ ದಂಪತಿಗೆ 01-06-1948 ರಂದು ಜನಿಸಿದ ದಯಾನಂದ ಶೆಟ್ಟರು ಕಲಿತದ್ದು ಎರಡನೇ ತರಗತಿ. ಯಕ್ಷಗಾನದ ಸಾಮಾನು ಸರಂಜಾಮುಗಳನ್ನು ಎತ್ತಿನ ಗಾಡಿಯಲ್ಲಿ ಸಾಗಿಸುತ್ತಿದ್ದ ಕಾಲದಲ್ಲಿ 12 ನೇ ವರ್ಷ ಪ್ರಾಯದ ದಯಾನಂದ ಕುಮಾರ ವೇಣೂರು ದೇಲಂಪುರಿ ಮೇಳದಲ್ಲಿ ಬಾಲ ಕಲಾವಿದರಾಗಿ ಸೇರಿಕೊಂಡರು. ದಶಾವತಾರಿ ಸೂರಿಕುಮೇರು ಗೋವಿಂದ ಭಟ್ಟರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತ ಅವರು ಮುಂದೆ ತಮ್ಮ ನೃತ್ಯಾಭಿನಯವನ್ನು ವಿಸ್ತರಿಸಿಕೊಂಡದ್ದು ಇತರರನ್ನು ನೋಡಿಯೇ. ಕುಂಡಾವು ಮೇಳದಲ್ಲಿ ಅರುವ ಕೊರಗಪ್ಪ ಶೆಟ್ಟರ ಸಾಂಗತ್ಯದಲ್ಲಿ ಅದು ಸ್ಪುಟಗೊಂಡಿತು. ಮುಂದೆ ಕರ್ನಾಟಕ ಮೇಳವೊಂದರಲ್ಲೇ 36 ವರ್ಷ ವ್ಯವಸಾಯ ಮಾಡಿದ ಹಿರಿಮೆ ಅವರದು. ದಾಮೋದರ ಮಂಡೆಚ್ಚ, ಅಳಿಕೆ, ಬೋಳಾರ, ಮಂಕುಡೆ, ಸಾಮಗ, ಕ್ರಿಶ್ಚನ್ ಬಾಬು, ಮಿಜಾರು, ಕೋಳೂರು ಮೊದಲಾದ ದಿಗ್ಗಜರ ಒಡನಾಟದಲ್ಲಿ ಕಲ್ಲಾಡಿ ಮನೆತನದ ಮೂವರು ಯಜಮಾನರನ್ನು ಕಂಡ ದಯಾನಂದ, ಕಲ್ಲಾಡಿ ಕೊರಗ ಶೆಟ್ಟರಿಂದಾಗಿ ಮಂಗಳೂರಿನ ಜಪ್ಪಿನ ಮೊಗರಿನಲ್ಲಿ ನೆಲೆಸಿ ಜಪ್ಪು ದಯಾನಂದ ಶೆಟ್ಟಿ ಎಂದಾದರು. ಖಚಿತ ಲಯ…
ರಾಜಕೀಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿ, ಕಾನೂನು ರಂಗದಲ್ಲೂ ಗಮನ ಸೆಳೆಯುವ ಹಿರಿಯ ನಾಯಕ ಕೆ. ಮೋನಪ್ಪ ಭಂಡಾರಿ. ಇವರ ಬಗ್ಗೆ ಒಂದು ಕಿರು ಪರಿಚಯ ಇಲ್ಲಿದೆ. ಕೆಲ್ಲೆಕಾರುಗುತ್ತು ಮೋನಪ್ಪ ಭಂಡಾರಿ ಅವರು ಕೆ. ದೂಮಣ್ಣ ಶೆಟ್ಟಿ ಹಾಗೂ ಶ್ರೀಮತಿ ಲಕ್ಷ್ಮೀ ಅವರ ಪುತ್ರರಾಗಿ 1952 ರ ಜನವರಿ 3ರಂದು ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಕೋಡಿಬೈಲಿನ ಕರವೂರು ಎಂಬಲ್ಲಿ ಜನಿಸಿದವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಕೋಡಿಬೈಲು ಐಡೆಡ್ ಲೋವರ್ ಫ್ರೈಮರಿ ಶಾಲೆಯಲ್ಲಿ ಮುಗಿಸಿ, ಬಳಿಕ ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನಲ್ಲಿ, ಕನ್ಯಾನದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ ಮಂಗಳೂರಿನ ಸೈಂಟ್ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಕಲಿತು ಬಿ.ಎ. ಪದವಿ ಪಡೆದರು. ಆ ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಮಂಗಳೂರಿನ ಎಸ್ ಡಿ ಎಂ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಪಡೆದು ನ್ಯಾಯವಾದಿಯಾದರು. ಪ್ರಸ್ತುತ ಇವರು ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜತೆಗೆ ನೋಟರಿಯೂ ಆಗಿದ್ದಾರೆ.…
ಸಣ್ಣ ಪ್ರಾಯದಲ್ಲೇ ಉದ್ಯಮ ಆರಂಭಿಸಿ ಯಶಸ್ಸಿನ ಪಥದಲ್ಲಿ ಸಾಗುತ್ತಿರುವ, ಕಠಿಣ ಪರಿಶ್ರಮಿಯಾಗಿರುವ ಕುಂದಾಪುರದ ಪ್ರಸಿದ್ಧ ಕೈಗಾರಿಕೋದ್ಯಮಿ ಶ್ರೀ ಜಯಕರ ಶೆಟ್ಟಿಯವರು 1960 ರಲ್ಲಿ ದಿವಂಗತ ಚಾರ್ಮಾಕ್ಕಿ ಸಂಜೀವ ಶೆಟ್ಟಿ ಮತ್ತು ದಿವಂಗತ ಗಿರಿಜಾ ಶೆಟ್ಟಿಯವರ ಸುಪತ್ರರಾಗಿ ಜನಿಸಿದರು. ಜಯಕರ ಶೆಟ್ಟಿಯವರು ತನ್ನ ಶಿಕ್ಷಣವನ್ನು ಬೆಂಗಳೂರಿನ ಬಾಲ್ಡ್ವಿನ್ ಶಾಲೆಯಲ್ಲಿ ಪ್ರಾರಂಭಿಸಿ, ಭಂಡಾರ್ ಕರ್ಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿ, ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ ತನ್ನ ವೃತ್ತಿ ಜೀವನವನ್ನು ಬೆಂಗಳೂರಿನಲ್ಲಿ ಪ್ರಾರಂಭ ಮಾಡಿದರು. ಉದ್ಯೋಗ ಕ್ಷೇತ್ರದಲ್ಲಿ ಬೇರೆ ಬೇರೆ ರಂಗದಲ್ಲಿ ದುಡಿದರೂ ಅವರಿಗೆ ಪೂರ್ತಿ ತೃಪ್ತಿ ಸಿಗಲಿಲ್ಲ. ಅವರಲ್ಲಿರುವ ಸಾಧನೆಯ ತುಡಿತ ಹೆಚ್ಚುತ್ತಲೇ ಹೋಯಿತು. ಯಾವುದಾದರೂ ಸ್ವಂತ ಉದ್ಯಮ ಆರಂಭಿಸಿ ಹಲವರಿಗೆ ಉದ್ಯೋಗದಾತರಾಗುವ ಕನಸು ಕಂಡರು. ಇದರ ಫಲವಾಗಿ 1987 ರಲ್ಲಿ ಗಿರಿಜಾ ಟೈಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಯಶಸ್ವೀ ಉದ್ಯಮಿ ಎಂದು ಗುರುತಿಸಿಕೊಂಡ ಜಯಕರ ಶೆಟ್ಟಿಯವರು ತನ್ನ ಉದ್ಯಮವನ್ನು…