ಫೇಮಸ್ ಯೂತ್ ಕ್ಲಬ್ (ರಿ) 10ನೇ ತೋಕೂರು ಇದರ ವಾರ್ಷಿಕ ಮಹಾಸಭೆಯನ್ನು ದಿನಾಂಕ 26.01.2027 ನೇ ಭಾನುವಾರ ಸಂಸ್ಥೆಯ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರುವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು. ವಾರ್ಷಿಕ ವರದಿ ಮತ್ತು ಆಯವ್ಯಯದ ಮಂಡನೆಯನ್ನು ಕಾರ್ಯದರ್ಶಿ, ಹಿಮಕರ್ ಕೋಟ್ಯಾನ್ ರವರು ನೆರವೇರಿಸಿಕೊಟ್ಟರು. ಗೌರವ ಅಧ್ಯಕ್ಷರಾದ ಗುರುರಾಜ ಪೂಜಾರಿಯವರು ಉಪಸ್ಥಿತರಿದ್ದು, ಈ ಹಿಂದಿನ ಆರು ವರ್ಷಗಳ ಕಾಲ ಸಂಸ್ಥೆಯು ಅತ್ಯುತ್ತಮ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುತ್ತದೆ. ಈ ಬಗ್ಗೆ ಅಭಿನಂದನೆಯನ್ನು ಸಲ್ಲಿಸಿದರು.
ಅಧ್ಯಕ್ಷೀಯ ಮಾತಿನಲ್ಲಿ ಭಾಸ್ಕರ್ ಅಮೀನ್ ರವರು ಮಾತನಾಡಿ, ತನ್ನ ಅಧ್ಯಕ್ಷತೆಯ ಆರು ವರ್ಷಗಳ ಕಾಲ ಸಂಸ್ಥೆಯ ಸದಸ್ಯರ ವಿಶೇಷವಾಗಿ ಮಹಿಳಾ ಮಂಡಲದ ಸದಸ್ಯರ ಸಹಕಾರವನ್ನು ಸ್ಮರಿಸಿದರು. ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಜವಾಬ್ದಾರಿ ನೂತನ ಸಮಿತಿ ಸಮಿತಿಯದ್ದಾಗಿದೆ ಎಂಬ ಅಬಿಪ್ರಾಯವನ್ನು ವ್ಯಕ್ತಪಡಿಸಿದರು. ನೂತನ ಅಧ್ಯಕ್ಷರಾಗಿ ಸಂಘಟಕ ಸಂಪತ್ ಜೆ. ಶೆಟ್ಟಿ, ಕಾರ್ಯದರ್ಶಿಯಾಗಿ ಮೋಹನ್ ದಾಸ್ ದೇವಾಡಿಗ, ಉಪಾಧ್ಯಕ್ಷರಾಗಿ ಮಹಮ್ಮದ್ ಶರೀಫ್, ಕೋಶಾಧಿಕಾರಿಯಾಗಿ ಶಂಕರ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಗಳಾಗಿ ಸಂದೇಶ ಆಚಾರ್ಯ ಮತ್ತು ಜಹಿನ್ ಸೇರಿದಂತೆ ಸಂಘಟನಾ ಸಮಿತಿ ಮತ್ತು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾದ ಭಾಸ್ಕರ್ ಅಮೀನ್ ರವರು ಸಂಪತ್ ಜೆ. ಶೆಟ್ಟಿಯವರಿಗೆ ಅಧಿಕಾರ ಹಾಸ್ತಾಂತರವನ್ನು ನೆರವೇರಿಸಿಕೊಟ್ಟರು. ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಸಂಪತ್ ಜೆ ಶೆಟ್ಟಿ ಮತ್ತು ಮೋಹನ್ ದಾಸ್ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರ ಸಹಕಾರವನ್ನು ಬಯಸಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಹಿಮಕರ್ ಕೋಟ್ಯಾನ್ ರವರು ನಿರೂಪಿಸಿದರು.