ಬ್ರಹ್ಮಾವರ ಜ 29 : ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅದ್ಧೂರಿಯ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೈಂಟ್ ಜೋಸೆಫ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ. ಜೆ. ಜೋಸೆಪ್ರವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು ಅವರು ಮಾತನಾಡಿ ಜಿ ಎಮ್ ಸಂಸ್ಥೆ ನಿಮಗೆ ಉತ್ತಮ ಆಕಾರವನ್ನು ಕೊಟ್ಟು ಪ್ರಜ್ವಲಿಸುವಂತೆ ಮಾಡಿದೆ. ಇಲ್ಲಿ ಪಡೆದ ಜ್ಞಾನವನ್ನು ವಿವೇಕದಿಂದ ಉಪಯೋಗಿಸಬೇಕು, ಪ್ರತಿಯೊಬ್ಬರು ಶಿಸ್ತು, ಮೌಲ್ಯಗಳೊಂದಿಗೆ ಗುರಿಯತ್ತ ಸಾಗಬೇಕೆಂದರು.
ಸಂಸ್ಥೆಯ ಹಳೆ ವಿದ್ಯಾರ್ಥಿನಿ ಡಾ. ರಿತಿಕಾ ಶೆಟ್ಟಿ ಮಾತನಾಡಿ ಈ ಸ್ಪರ್ದಾತ್ಮಕ ಯುಗದಲ್ಲಿ ನಾವು ಸಮಯವನ್ನು ವ್ಯರ್ಥಮಾಡದೇ ಆತ್ಮಸ್ಥೈರ್ಯದೊಂದಿಗೆ ಸಾಧನೆಯತ್ತ ಮುನ್ನುಗ್ಗಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿ ಎಲ್ಲರೂ ತಮ್ಮ ಪೆÇೀಷಕರ ಮುಖದಲ್ಲಿ ನಗುವನ್ನು, ಅವರು ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಬೇಕು. ಹಾಗೆಯೇ ಭವಿಷ್ಯದಲ್ಲಿ ನಿಮ್ಮ ಸಾಧನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಾಗ ಸಾರ್ಥಕತೆಯ ಭಾವನೆ ಉಂಟಾಗುತ್ತದೆ ಎಂದರು.ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಕ್ಕಳ ಅಂತಿಮ ಪರೀಕ್ಷೆಗೆ, ಜೀವನಕ್ಕೆ ಶುಭಹಾರೈಸಿದರು. ನಂತರ ಶಾಲಾ ವಾರ್ಷಿಕ ಸಂಚಿಕೆ ಪರಿಕ್ರಮ ಮತ್ತು ಜಿ ಎಮ್ ಟೈಮ್ಸ್ನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಜಿ ಎಮ್ ಗ್ಲೋಬಲ್ ಸ್ಕೂಲ್ನ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಡಾ. ಅನುಷಾ ಸುಬ್ರಹ್ಮಣ್ಯಂ, ಶ್ರೀಮಾ ಪ್ರಣವ್ ಶೆಟ್ಟಿ, ಶಿಕ್ಷಕವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.