Author: admin
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಂಟ ಕುಟುಂಬವೊಂದರ ಪ್ರತಿಭಾನ್ವಿತ ಮಕ್ಕಳ ವಿದ್ಯಾರ್ಜನೆಗೆ ನಾವು ಬೆಂಬಲವಾಗಿ ನಿಲ್ಲೋಣವೇ…?
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಶೇಡಿ ಎಂಬಲ್ಲಿ ವಾಸವಿರುವ ಕೃಷ್ಣ ಭಂಡಾರಿ ಮತ್ತು ಗುಣವತಿ ದಂಪತಿಗಳ ಕುಟುಂಬ ಆರ್ಥಿಕವಾಗಿ ತೀರಾ ದುಸ್ಥಿತಿಯಲ್ಲಿದ್ದು ಕೂಲಿ ಕೆಲಸದ ಆದಾಯವೇ ಇವರಿಗೆ ಆಧಾರ. ಈ ದಂಪತಿಗಳ ಮಕ್ಕಳಿಬ್ಬರೂ ಪ್ರತಿಭಾವಂತರು. ಓದಿ ಸಾಧನೆ ಮಾಡಬೇಕೆಂಬ ತುಡಿತ ಮಕ್ಕಳದಾದರೆ, ಕಲಿಕೆಯಲ್ಲಿ ಮುಂದಿರುವ ಕುಟುಂಬದ ಕುಡಿಗಳನ್ನು ಓದಿಸಿ ಉನ್ನತ ಸ್ಥಾನಕ್ಕೇರಿಸಬೇಕು. ನಾವು ಅನುಭವಿಸುತ್ತಿರುವ ಸಂಕಷ್ಟ, ಸಮಸ್ಯೆ ,ನೋವು ತಮ್ಮ ಮಕ್ಕಳಿಗೆ ಆಗಬಾರದೆಂಬ ಮಹದಾಸೆ ಹೆತ್ತವರದು. ಪುತ್ರ ಪವನ್ ಇಂಜಿನಿಯರಿಂಗ್, ಪುತ್ರಿ ಸ್ಪಂದನ ಪಿಯುಸಿ ವಿಧ್ಯಾಬ್ಯಾಸ ಮಾಡುತ್ತಿದ್ದು, ಡಿಸ್ಟಿಂಕ್ಷನ್ ಸಾಧನೆ ಮಾಡುತ್ತಿರುವ ಇವರಿಗೆ ಕುಟುಂಬದ ಆರ್ಥಿಕ ಸಂಕಷ್ಟ ಅಡ್ಡಿಯಾಗುತ್ತಿದೆ. ಭವಿಷ್ಯ ಮಸುಕಾಗುತ್ತಿದೆ. ಇವರುಗಳು ವಿಧ್ಯಾಬ್ಯಾಸ ಕುಂಠಿತಗೊಳ್ಳಬಾರದೆಂಬ ಆತಂಕದ ಮಧ್ಯೆ ಯಾವುದೇ ದಾರಿ ಕಾಣದೇ ಮಕ್ಕಳ ಭವಿಷ್ಯದ ಆಶಾಭಾವನೆಯಿಂದ ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಮೂಲಕ ಸಹಾಯ ಹಸ್ತವನ್ನು ಯಾಚಿಸಿದ್ದಾರೆ. ಇತರರ ಸಂಕಷ್ಟಕ್ಕೆ ಸದಾ ಸ್ಪಂದಿಸುವ ಸಹೃದಯಿ ಬಂಟ ಬಂಧುಗಳಾದ ತಾವು ತಮ್ಮ ಕೈಲಾದ ಸಹಾಯವನ್ನು ಮಾಡುವಂತೆ ಈ ಮೂಲಕ ಕಳಕಳಿಯ…
ಸಿ.ಎ ಹಾಗೂ ಸಿ.ಎಸ್ ಫೌಂಡೇಶನ್ ಕೋರ್ಸ್ ಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ಅಗ್ರಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಸುಣ್ಣಾರಿ. ಇಲ್ಲಿನ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಗಳು ನವೆಂಬರ್ ಹಾಗೂ ಡಿಸೆಂಬರ್ 2023 ರಲ್ಲಿ ನಡೆಸಿದ ಸಿ.ಎ ಹಾಗೂ ಸಿ.ಎಸ್ ಫೌಂಡೇಶನ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಹೃತೀಕ್ ಎಂ.( ಸಿ.ಎ -237), ಆಯುಷ್ (ಸಿ.ಎ-236), ದೀಕ್ಷಾ (ಸಿ.ಎ-223), ಸಮೃದ್ಧಿ (ಸಿ.ಎ-218), ಅಮೋಘ (ಸಿ.ಎ-202), ವೈಷ್ಣವಿ (ಸಿ.ಎಸ್ -137), ಸಹನಾ (ಸಿ.ಎಸ್-118), ಭೂಮಿಕಾ (ಸಿ.ಎಸ್-112), ಅಂಕಗಳೊಂದಿಗೆ ಸಿ.ಎ ಹಾಗೂ ಸಿ.ಎಸ್ ಫೌಂಡೇಶನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕಳೆದ ಹಲವು ವರ್ಷಗಳಿಂದ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ಬಂದಿದ್ದು ಅನೇಕ ವಿದ್ಯಾರ್ಥಿಗಳು ಫೌಂಡೇಶನ್ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ…
ಇಂದು ಬಂಟರು ಕೇವಲ ಹೋಟೆಲ್ ಉದ್ಯಮಕ್ಕೆ ಸೀಮಿತರಾಗಿಲ್ಲ. ಬಂಟರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದಾರೆ. ಕ್ರೀಡೆಯಲ್ಲಿ ಜಯ ಅಪಜಯ ಮುಖ್ಯವಲ್ಲ. ಇಲ್ಲಿ ಎಲ್ಲಾ ವಿಧದಲ್ಲೂ ಅಂದರೆ ತಳಮಟ್ಟದಲ್ಲಿ ಶ್ರಮಿಸಿದವರ ಯೋಗದಾನವನ್ನು ಪರಿಗಣಿಸಬೇಕಾಗುತ್ತದೆ. ಯಶಸ್ಸಿನಲ್ಲಿ ಎಲ್ಲರ ಪಾಲು ಕಾರಣವಾಗುತ್ತದೆ ಎಂದು ಶಾಸಕ ಹಿತೇಂದ್ರ ಠಾಕೂರ್ ನುಡಿದರು. ಅವರು ಮೀರಾ ದಹಾಣೂ ಬಂಟ್ಸ್ ಇದರ ವಾರ್ಷಿಕ ಕ್ರೀಡಾ ಉತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಕ್ರೀಡೆ ಬದುಕಿನ ಏಕತೆಯನ್ನು ಮೂಡಿಸುತ್ತದೆ. ಕ್ರೀಡೆಯು ಸ್ಪರ್ಧಿಗಳ ಮನೋಕಾಮನೆಯ ಮಹಾದಾಸೆಯನ್ನು ಪೂರೈಸುವ ಶ್ರಮದ ಅಂಗಳವಾಗಿದೆ. ಬಂಟ ಕ್ರೀಡಾಳುಗಳು ಕೇವಲ ತನ್ನ ಸಮಾಜದಲ್ಲಿ ಮಾತ್ರವಲ್ಲದೇ ಜಯ ಅಪಜಯದ ಯಶಸ್ಸನ್ನು ಕ್ರಮೇಣವಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಣುವಂತಾಗಬೇಕು ಮೀರಾ ದಹಾಣೂ ಬಂಟ್ಸ್ ನ ಎಲ್ಲಾ ಬಂಟ ಬಾಂಧವರ ವೇದಿಕೆಗೆ ನನ್ನ ಸಂಪೂರ್ಣ ಸಹಕಾರ ಸದಾ ಲಭ್ಯ ಎಂದು ಭಾಗವಹಿಸಿದ ಬಂಟ ಕ್ರೀಡಾಪಟುಗಳಿಗೆ ಯಶಸ್ಸನ್ನು ಕೋರಿದರು. ಸಂಸ್ಥೆಯ ಗೌ. ಅಧ್ಯಕ್ಷರಾದ ವಿರಾರ್ ಶಂಕರ್ ಶೆಟ್ಟಿಯವರು ಪ್ರಸ್ತಾವಿಕವಾಗಿ ಮಾತನಾಡುತ್ತಾ 2009 ರಲ್ಲಿ ಸ್ಥಾಪನೆಗೊಂಡ…
ಮಹಾಸಿಂಹ ಮೂವೀಸ್ ಲಾಂಛನದಲ್ಲಿ ತಯಾರಾದ ದೀಕ್ಷಿತ್ ಶೆಟ್ಟಿ ಅಭಿನಯದ ಕೆಟಿಎಂ ಕನ್ನಡ ಸಿನಿಮಾ ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಟಿ ಉಷಾ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕನ್ನಡದ ದಿಯಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ತಾಣಗಳಲ್ಲಿ ಕೆಟಿಎಂ ಸಿನಿಮಾಕ್ಕೆ ಚಿತ್ರೀಕರಣ ನಡೆದಿದೆ ಎಂದು ಉಷಾ ಭಂಡಾರಿ ತಿಳಿಸಿದರು. ಕೆಟಿಎಂ ಸಿನಿಮಾ ಟೈಟಲ್ ನಿಂದ ಗಮನ ಸೆಳೆಯುತ್ತಿದೆ. ಹಾಡುಗಳ ಮೂಲಕ ಮೋಡಿ ಮಾಡುತ್ತಿರುವ ಕೆಟಿಎಂ ಸಿನಿಮಾದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿದ್ದು ಪ್ರೇಕ್ಷಕರಲ್ಲಿ ಸಿನಿಮಾದ ಕುರಿತು ಆಸಕ್ತಿ ಮೂಡಿದೆ. ಒಂದು ಸುಂದರ ಪ್ರೇಮಕಥೆ. ಈ ಕಥೆಯಲ್ಲಿ ಒಬ್ಬ ನಾಯಕ ಇಬ್ಬರು ನಾಯಕಿಯರು. ಪ್ರೀತಿಗಾಗಿ ಪರಿತಪಿಸುವ ನಾಯಕ. ಅವನಂದ್ರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಾಯಕಿಯರು. ನಾಯಕನ ಜೀವನದಲ್ಲಿ ನಡೆದ ಏರಿಳಿತಗಳು ಕೆಟಿಎಂ ಸಿನಿಮಾದ ಹೈಲೆಟ್ಸ್. ದೀಕ್ಷಿತ್ ಶೆಟ್ಟಿಗೆ ಜೋಡಿಯಾಗಿ ಸಂಜನಾ ದಾಸ್ ಹಾಗೂ ಕಾಜಲ್ ಕುಂದರ್ ಅಭಿನಯಿಸಿದ್ದಾರೆ. ಉಷಾ…
ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮಾದರಿ ಬ್ರಹ್ಮಕಲಶೋತ್ಸವಾಗಿ ಆಗಬೇಕೆಂಬ ನಿಟ್ಟಿನಲ್ಲಿ ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕರ ಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಸಂಪರ್ಕ ರಸ್ತೆ ಸಂಪೂರ್ಣವಾಗಿ ಅಭಿವೃದ್ಧಿಯಾಗಿದೆ. ಮುಖ್ಯ ರಸ್ತೆಯಲ್ಲಿ ಮಹಾದ್ವಾರ ನಿರ್ಮಾಣವಾಗಿದೆ. ವಲ್ಮೀಕದಲ್ಲಿ ನೆಲೆನಿಂತ ದೇವರು ಶ್ರೀಸುಬ್ರಹ್ಮಣ್ಯ ಸ್ವಾಮಿ: ಪ್ರಕೃತಿ ಸೌಂದರ್ಯದ ನೆಲೆ ಬೀಡು, ತಂಪು ತಂಪು ಹಸಿರಿನಿಂದ, ಬೆಟ್ಟ, ಗುಡ್ಡ ಬಯಲುಗಳಿಂದ ಸಮೃದ್ಧವಾದ, ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನವಿದೆ. ಇಲ್ಲಿ ಗುಹೆಯ ರೂಪದಲ್ಲಿದ್ದ ಸ್ಥಳದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರನ್ನು ಆರಾಧಿಸುತ್ತಾ ಬರುತ್ತಿರುವ ಪುಣ್ಯ ತಾಣ. ಇಲ್ಲಿ ವಲ್ಮೀಕ(ಹುತ್ತ)ದ ರೂಪದಲ್ಲಿ ನೆಲೆ ನಿಂತ ಶ್ರೀ ಸುಬ್ರಹ್ಮಣ್ಯ ದೇವರ ದೇವಸ್ಥಾನ ಪರಮ ಪವಿತ್ರವಾಗಿದ್ದು, ಭಕ್ತರ ಶ್ರದ್ಧಾ ಭಕ್ತಿ, ಶಕ್ತಿಯ ತಾಣವಾಗಿದೆ. ತನ್ನ ಕಾರಣಿಕ ಶಕ್ತಿಯಿಂದ ನಂಬಿ ಬಂದ ಭಕ್ತ ಜನರಿಗೆ ತಾಯಿ ಸಮಾನ ನೆಲೆಯಾಗಿದೆ.…
ಎಫ್ ಕೆಸಿಸಿಐ ಮಾಜಿ ಅಧ್ಯಕ್ಷ, ಹಿರಿಯ ಮುಖಂಡ ತುಮ್ಕಾನೆ ಸುಧಾಕರ್ ಎಸ್ ಶೆಟ್ಟಿ ಅವರನ್ನು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅದೇಶಿಸಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶ ಮಾಡಿದ ಸುಧಾಕರ ಶೆಟ್ಟಿ ಚುನಾವಣೆಯಲ್ಲಿ ಸೋತರೂ ಶೃಂಗೇರಿ ಕ್ಷೇತ್ರದಲ್ಲಿ ನೆಲೆ ಕಳೆದುಕೊಂಡಿದ್ದ ಜೆಡಿಎಸ್ ನ್ನು ಬಲವರ್ಧನೆಗೊಳಿಸುವಲ್ಲಿ ಯಶಸ್ವಿಯಾದರು. ಇವರ ಪಾದರಸ ವ್ಯಕ್ತಿತ್ವ, ಸಂಘಟನಾ ಚತುರತೆ, ಸಾಮಾಜಿಕ ಕಳಕಳಿ ತಿಳಿದಿರುವ ಎಚ್ಡಿಕೆ ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟಿಸಿರುವ ನಿಟ್ಟಿನಲ್ಲಿ ಪಕ್ಷದ ಹಿರಿಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ನನ್ನ ಮೇಲೆ ಇರಿಸಿದ ನಂಬಿಕೆಗೆ ಚಿರಋಣಿಯಾಗಿದ್ದೇನೆ. ಪಕ್ಷ ಬಲವರ್ಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿರುವ ಸುಧಾಕರ್ ಶೆಟ್ಟಿ ತನಗೆ ಜವಾಬ್ದಾರಿಯುತ ಸ್ಥಾನ ನೀಡಿರುವ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ. ಕುಮಾರ ಸ್ವಾಮಿಯವರಿಗೆ ಕೃತಜ್ಞತೆ ತಿಳಿಸಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಜಾನಪದ ಪರಿಷತ್ತು ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಸುಳ್ಯದ ಉದ್ಯಮಿ ಜಯರಾಮ ಶೆಟ್ಟಿ ಕೆ.ಎನ್. ಆಯ್ಕೆಯಾಗಿದ್ದಾರೆ. ಜಯರಾಮ ಶೆಟ್ಟಿಯವರು ದುಗ್ಗಲಡ್ಕದ ಮಿತ್ರ ಯುವಕ ಮಂಡಳಿ ಕೊಯಿಕುಳಿ ಇದರ ಅಧ್ಯಕ್ಷರಾಗಿ, ಕಾರ್ಯಕ್ರಮ ಸಂಘಟಕರಾಗಿ ಕೆಲಸ ನಿರ್ವಹಿಸಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಜಾನಪದ, ಸಂಸ್ಕೃತಿ, ಕಲೆ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಮತ್ತು ಜಿಲ್ಲಾ ಘಟಕದಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಸಹಕರಿಸುವುದು ತಾಲೂಕು ಘಟಕದ ಕಾರ್ಯವಾಗಿದೆ.
ಗೋವಾ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜಸೇವಕ ಸದಾಶಿವ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೋವಾ ಮಡಗಾವ್ ಲಕ್ಷ್ಮಿ ಎಂಪಾಯರ್ ಹೋಟೆಲಿನ ಮಾಲಿಕರಾಗಿರುವ ಸದಾಶಿವ ಶೆಟ್ಟಿಯವರು ಗೋವಾ ಕನ್ನಡ ಸಾಹಿತ್ಯ ಪರಿಷತ್ತಿನ ಸಲಹಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ವಿವಿಧ ಸಮಾಜಮುಖಿ ಸೇವೆಯಿಂದ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಧನೆ ಜೆಇಇ ಮೈನ್ಸ್ ಫಲಿತಾಂಶ: 53 ವಿದ್ಯಾರ್ಥಿಗಳಿಗೆ 95ಕ್ಕೂ ಅಧಿಕ ಪಸರ್ಂಟೈಲ್
ವಿದ್ಯಾಗಿರಿ: ಜೆಇಇ ಮೈನ್ಸ್ ಫೆಸ್-1 ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಉತ್ತಮ ಸಾಧನೆ ಮಾಡಿದ್ದಾರೆ. 53 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 95 ಪಸರ್ಂಟೈಲ್ಗಿಂತ ಅಧಿಕ ಅಂಕ ಪಡೆದಿದ್ದಾರೆ. ವಿದ್ಯಾರ್ಥಿ ಎಚ್.ಆರ್. ರಜತ್ 99.271023 ಪರ್ಸಂಟೈಲ್ (ಭೌತಶಾಸ್ತ್ರ- 97.2200028, ರಸಾಯನಶಾಸ್ತ್ರ- 97.1516355 ಹಾಗೂ ಗಣಿತ- 99.537079) ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿ ಪ್ರಶಾಂತ್ ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್ ಪಡೆಯುವುದರ ಜೊತೆಗೆ ಒಟ್ಟು 98.7993863 ಪರ್ಸಂಟೈಲ್ ಪಡೆದಿರುತ್ತಾರೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ಸೇರಿದಂತೆ ಮೂರು ವಿಷಯಗಳಲ್ಲಿ 98 ಪಸರ್ಂಟೈಲ್ಗಿಂತ ಅಧಿಕ ಒಂಬತ್ತು ವಿದ್ಯಾರ್ಥಿಗಳು, 97 ಪಸರ್ಂಟೈಲ್ಗಿಂತ ಅಧಿಕ 19 ವಿದ್ಯಾರ್ಥಿಗಳು ಪಡೆದಿದ್ದಾರೆ. ವಿದ್ಯಾರ್ಥಿಗಳಾದ ರಜತ್ ಮತ್ತು ಪ್ರಶಾಂತ್ ಜೊತೆ ದರ್ಶನ್ಕುಮಾರ್ ತಲ್ಲೊಳ್ಳಿ (98.6175507), ನಮಿತಾ ಎ.ಪಿ. (98.5761436), ಪ್ರೀತಮ್ ಎಂ. (98.1895688), ಪ್ರಜ್ವಲ್ ಡಿ.ಎಸ್. (98.1603894), ನವೀನ್ ಬಿ. ಸೋಲಂಕಿ (98.0893667), ಪುನೀತ್ ಎಸ್. (98.079865) ಮತ್ತು ರೋಹಿತ್ ಕುಮಾರ್ ಎಲ್.…
ಉಡುಪಿಯಲ್ಲಿ ನಾಡವರೆಂದು, ದ.ಕ. ದಲ್ಲಿ ಬಂಟರೆಂದು ಕರೆದರೂ, ಈಗಲೂ ಈ ಜಿಲ್ಲೆ ಭಾವನಾತ್ಮಕವಾಗಿ ಒಂದೇ ಆಗಿದೆ. ಬ್ಯಾಂಕ್ ಅಥವಾ ಉದ್ಯಮ ಆರಂಭಿಸಿ, ಸಮುದಾಯದ ಇನ್ನಷ್ಟು ಯುವಕರಿಗೆ ಕೆಲಸ ಕೊಡುವ ಕಾರ್ಯ ಆಗಲಿ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು. ಕೋಟೇಶ್ವರದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮದ ಭಾಗವಾಗಿ ಆಯೋಜಿಸಿದ “ಭಾವೈಕ್ಯ” ಬಂಟರ ಮಹಾ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂಬಯಿ ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಿದರು. ದಿ| ಯಡ್ತರೆ ನರಸಿಂಹ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಸ್ವೀಕರಿಸಿದ ಎಂಆರ್ಜಿ ಸಮೂಹ ಸಂಸ್ಥೆ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಬಂಟ ಸಮಾಜದವರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಆ ಋಣ ನನ್ನ ಮೇಲಿದೆ. ಅದಕ್ಕಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುತ್ತಿದ್ದೇನೆ ಎಂದರು. ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಕಾಸರಗೋಡಿನಿಂದ ಶಿರೂರುವರೆಗಿನ ಬಂಟರೆಲ್ಲರೂ ಒಂದೇ. ಅವರ ಕೀರ್ತಿ…