ಮಂದಾರ್ತಿ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್ ಗಂಗಾಧರ ಶೆಟ್ಟಿ ಮಂದಾರ್ತಿ ನೇತೃತ್ವದ ಬಿಜೆಪಿ ಬೆಂಬಲಿತ ಸದಸ್ಯರು ಎಲ್ಲಾ 12 ಸ್ಥಾನಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಸಾಮಾನ್ಯ ಸ್ಥಾನದಿಂದ ಎಚ್. ಗಂಗಾಧರ ಶೆಟ್ಟಿ ಮಂದಾರ್ತಿ, ಪೃಥ್ವಿರಾಜ ಶೆಟ್ಟಿ ಬಿಲ್ಲಾಡಿ, ಗಣೇಶ ಶೆಟ್ಟಿ ಮಂದಾರ್ತಿ, ಜಂಲಧರ ಶೆಟ್ಟಿ ನಡೂರು, ದಿನೇಶ ಮರಕಾಲ ಮಂದಾರ್ತಿ, ಚಂದ್ರಶೇಖರ ಪೂಜಾರಿ ಶಿರೂರು, ಹಿಂದುಳಿದ ವರ್ಗ ಬಿ ಸ್ಥಾನದಿಂದ ಸುರೇಶ ಶೆಟ್ಟಿ ಕಾಡೂರು, ಹಿಂದುಳಿದ ವರ್ಗ ಎ ಸ್ಥಾನದಿಂದ ಕೆ. ಶಂಭುಶಂಕರ ರಾವ್ ಹೆಗ್ಗುಂಜೆ, ಮಹಿಳಾ ಮೀಸಲು ಸ್ಥಾನದಿಂದ ಗುಲಾಬಿ ಬಾಯಿ ಹೆಗ್ಗುಂಜೆ, ಪ್ರೇಮಾ ಮರಕಾಲ್ತಿ ಹೆಗ್ಗುಂಜೆ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಬಸವ ನಾಯ್ಕ್ ಕಾಡೂರು, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ರಾಧಾ ಹೆಗ್ಗುಂಜೆ ಆಯ್ಕೆಯಾದರು. ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಕೆ.ಆರ್ ರೋಹಿತ್ ಚುನಾವಣಾ ಅಧಿಕಾರಿಯಾಗಿದ್ದರು.