ಜೈನ ಜಟ್ಟಿಗೇಶ್ವರ ದೇವಸ್ಥಾನ ಅರಸನಕೆರೆ ಮೆಟ್ಟಿನಹೊಳೆ ಇದರ ವಾರ್ಷಿಕ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಆಡಳಿತ ಮೋಕ್ತೆಸರರಾದ ಕರುಣಾಕರ ಶೆಟ್ಟಿ ನೆಲ್ಯಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲ್ತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಶುಭ ಸಂಶನೆಗೈದರು. ಬೈಂದೂರು ಬಂಟರ ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ಸಾಲ್ಗದ್ದೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ವೇದಿಕೆಯಲ್ಲಿ ಉದ್ಯಮಿ ಬಿಎಸ್ ಸುರೇಶ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಮಹಾಲಿಂಗ ನಾಯ್ಕ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶೇಖರ ಪೂಜಾರಿ ಇವರುಗಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಮೆಟ್ಟಿನಹೊಳೆ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಈಗ ಬಿ ಆರ್ ಪಿ ಆಗಿರುವ ಮಂಜುನಾಥ ದೇವಾಡಿಗ ಅನ್ನ ಸಂತರ್ಪಣೆ ಸೇವಾಕರ್ತರಾದ ಮೋಹಿನಿ ಶೆಟ್ಟಿ ನೆಲ್ಯಾಡಿ, ರಾಘವೇಂದ್ರ ಕುಲಾಲ್ ಸಿದ್ದು ಮನೆ, ಮುತ್ತು ನಾರಾಯಣ ದೇವಾಡಿಗ ಅಂಬಾಗಿಲು, ಅನುಷಾ ಅಭಿಷೇಕ್ ದೇವಡಿಗ ಬಿಜೂರು ಹಾಗೂ ಯೋಗಾಸನದ ಪ್ರತಿಭೆ ಕುಮಾರಿ ಸಂಜನಾರವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ವಿದ್ಯಾಲಕ್ಷ್ಮಿ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇದರ ಛೇರ್ಮನ್ ಸುಬ್ರಹ್ಮಣ್ಯ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶೇಖರ್ ಶೆಟ್ಟಿ, ಶಾರದ ಕುಲಾಲ್, ಜಗನ್ನಾಥ ಕುಲಾಲ್, ಹೋಟೆಲ್ ಉದ್ಯಮಿಗಳಾದ ಸೀತಾರಾಮ ಕುಲಾಲ್, ವಿಜಯ ಕುಲಾಲ್, ನಾರಾಯಣ ಕುಲಾಲ್, ಬಾಬು ಕುಲಾಲ್, ಉದಯ ಕುಲಾಲ್, ಉಮೇಶ್ ದೇವಾಡಿಗ, ಕುಲಾಲ್ ಯುವ ವೇದಿಕೆ ಅಧ್ಯಕ್ಷ ಸುರೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ನಾರಾಯಣ್ ರಾಜು ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೀವ ಶೆಟ್ಟಿ, ಶಿಕ್ಷಕ ತಾಜುದ್ದೀನ್ ಹಾಗೂ ಗಾಯಕಿ ವಿಜಯಲಕ್ಷ್ಮಿ ಸಹಕರಿಸಿದರು. ಶ್ರೀಧರ ಜೋಯಿಷ ನೇತೃತ್ವದ ಅರ್ಚಕ ವರ್ಗ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಚೇತನ್ ನೈಲಾಡಿ ತಂಡದವರು ಮನೋರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.