ತುಳುಕೂಟ ಉಡುಪಿ(ರಿ). ಮತ್ತು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ನಡೆದ 23 ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆ -2025 ಇದರಲ್ಲಿ ನಮ್ಮ ಮುಂಬೈಯ ರಂಗಮಿಲನ ತಂಡ ಸುಮಾರು 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಮುಂಬೈ ರಂಗಮಿಲನ ತಂಡ ಸೋಕ್ರೆಟಿಸ್ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಮೂಲ ಆರ್ ಡಿ ಕಾಮತ್, ತುಲುವಿಗೆ ನಾರಾಯಣ ಶೆಟ್ಟಿ ನಂದಲಿಕೆ ಭಾಷಾoತರಿಸಿದ್ದಾರು. ಮನೋಹರ್ ಶೆಟ್ಟಿ ನಂದಲಿಕೆ ಅವರ ನಿರ್ದೇಶನ ಜೊತೆಗೆ ಸಾದಯ, ನವೀನ್ ಇನ್ನ ಬಾಳಿಕೆ,ರಹೀಮ್ ಸಚ್ಚಿರಿಪೇಟೆ ಇವರ ಸಹಕಾರದಿಂದ ನಾಟಕ ಪ್ರದರ್ಶನಗೊಂಡಿತ್ತು.ಪ್ರತಿ ವರುಷದಂತೆ ಈ ವರುಷವೂ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆಯುವ ಉಡುಪಿ ದೊಡ್ಡಣ್ಣ ಶೆಟ್ಟಿ ಸ್ಮರಣಾರ್ಥ ತುಳುಕೂಟ ಉಡುಪಿ (ರಿ ) ಇವರು ಸ್ಪರ್ಧೆಯನ್ನು ಏರ್ಪಡಿಸಿದ್ದರು.ಸೋಕ್ರೋಟಿಸ್ ನಾಟಕದಲ್ಲಿ ಮುಂಬೈ ಕಲಾವಿದರಾದ ಸೂರಿ ಮಾರ್ನಾಡ್, ರವಿ ಹಗ್ದೆ ಹೆರ್ಮುಂಡೆ, ದೀಕ್ಷಾ ದೇವಾಡಿಗ, ಲತೇಶ್ ಪೂಜಾರಿ, ಸಚಿನ್ ಶೇರಿಗಾರ್ , ಕಿಶೋರ್ ಪಿಲಾರ್ ಮತ್ತು ಸುಶೀಲ್ ಅವ್ರು ನಟಿಸಿದ್ದಾರೆ ಜೊತೆಗೆ ಪ್ರಸಾದನದಲ್ಲಿ ಮಂಜುನಾಥ್ ಶೆಟ್ಟಿಗಾರ್, ಬೆಳಕು ಪ್ರವೀಣ್ ಕೊಡವೂರು, ಸಂಗೀತ ದಿವಾಕರ ಕಟೀಲ್ ಕೈ ಜೋಡಿಸಿದ್ದಾರೆ.ಈ ನಾಟಕಕ್ಕೆ ಒಟ್ಟು 8 ಬಹುಮಾನಗಳು ಸಿಕ್ಕಿವೆ ಜೊತೆಗೆ ನಗದು ಹಾಗೂ ಶಾಶ್ವತ ಫಲಕ, ಸರ್ಟಿಫಿಕೇಟ್ ನೀಡಲಾಗುತ್ತದೆ. ಮುಂಬೈ ಕಲಾವಿದರ ಸೋಕ್ರೋಟಿಸ್ ನಾಟಕಕ್ಕೆ
ಶ್ರೇಷ್ಠ ನಟ :ಪ್ರಥಮ : ಸುರೇಂದ್ರಕುಮಾರ್ ಶೆಟ್ಟಿ ಮಾರ್ನಾಡ್ -ಸೋಕ್ರೋಟೀಸ್
ಶ್ರೇಷ್ಠ ನಟಿ : ದ್ವಿತೀಯ : ದೀಕ್ಷಾ ದೇವಾಡಿಗ – ಸಾಂತಿಪೆ
ಶ್ರೇಷ್ಠ ರಂಗ ಪರಿಕರ : ದ್ವಿತೀಯ – ರಂಗ ಮಿಲನ ಮುಂಬೈ
ಶ್ರೇಷ್ಠ ನಾಟಕ : ತೃತೀಯ -ಸೋಕ್ರೋಟಿಸ್
ಶ್ರೇಷ್ಠ ನಿರ್ದೇಶನ : ತೃತೀಯ : ಮನೋಹರ ಶೆಟ್ಟಿ ನಂದಳಿಕೆ
ಶ್ರೇಷ್ಠ ಬೆಳಕು : ತೃತೀಯ : ಪ್ರವೀಣ ಜಿ ಕೊಡವೂರು
ಶ್ರೇಷ್ಠ ಸಂಗೀತ :ತೃತೀಯ, ದಿವಾಕರ್ ಕಟೀಲ್
ತೀರ್ಪುಗಾರರ ಮೆಚ್ಚುಗೆ ಪಡೆದ ನಟ : ಲತೇಶ್ ಪೂಜಾರಿ – ಪ್ಲೇಟೋ
ಹೀಗೆ ಒಟ್ಟು 8 ಪ್ರೈಸ್ ಗೆದ್ದಿದೆ.23ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ರಂಗಕರ್ಮಿಗಳಾದ ಡಾ. ಗಣನಾಥ ಜಿ. ಎಕ್ಕಾರ್, ಡಾ. ಭರತ್ ಕುಮಾರ್ ಪೊಲಿಪು ಮುಂಬಯಿ, ಡಾ. ಸುಕನ್ಯ ಮಾರ್ಟಿಸ್ ಇವರು ಸಹಕರಿಸಿದ್ದರು. ನಾಟಕ ಸ್ಟರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭವು ಜನವರಿ 26,2025 ರಂದು ಉಡುಪಿ ಎಮ್. ಜಿ. ಎಮ್. ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿರುವುದು. ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ. ತುಳುಕೂಟ ಉಡುಪಿ(ರಿ). ಇದರ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಶ್ರೀ ಗಂಗಾಧರ ಕಿದಿಯೂರು, ಕೆಮ್ತೂರು ನಾಟಕ ಸ್ಪರ್ಧೆಯ ಸಂಚಾಲಕರಾದ ಶ್ರೀ ಬಿ. ಪ್ರಭಾಕರ ಭಂಡಾರಿ ಇವರು ಉಪಸ್ಥಿತರಿರುವರು. ಇದೊಂದು ಒಳ್ಳೆಯ ಸುವರ್ಣವಕಾಶ ಮತ್ತು ಮುಂಬೈ ತುಳು ಕನ್ನಡಿಗರಿಗೆ ಹೆಮ್ಮಯ ವಿಷಯ.
