ಮುಂಬಯಿ ಮಹಾನಗರ ಹಾಗೂ ತವರು ನೆಲದಲ್ಲಿ ಕಮನೀಯ ಕಲೆ ಯಕ್ಷಗಾನ ಹಾಗೂ ಅದರ ವಾಚಿಕ ಪ್ರದಾನ ಅಂಗ ತಾಳಮದ್ದಳೆಯ ಕಂಪನ್ನು ವ್ಯಾಪಕ ರೀತಿಯಲ್ಲಿ ಪಸರಿಸುವಲ್ಲಿ ಮಹತ್ತರ ಶ್ರಮ ವಹಿಸುತ್ತಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಹಾಗೂ ಅಜೆಕಾರು ಕಲಾಭಿಮಾನಿ ಬಳಗದ ಸದಸ್ಯರು ಸೆಪ್ಟೆಂಬರ್ 29ರಂದು ಭಾನುವಾರ ಅಪರಾಹ್ನ 3.00 ರಿಂದ ಸಂಭ್ರಮೋಲ್ಲಾಸದಿಂದ ನಡೆಯಲಿರುವ ತ್ರಯೋವಿಂಶತಿ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಯಕ್ಷಗಾನ ಕಲಾ ಬಾಂಧವರಿಗೆ ಪತ್ರಿಕಾ ಪ್ರಕಟನೆ ಮೂಲಕ ಆತ್ಮೀಯ ಆಮಂತ್ರಣ ನೀಡಿದ್ದಾರೆ. ಬಂಟರ ಸಂಘ ಮುಂಬಯಿ ಕುರ್ಲಾ ಪೂರ್ವದಲ್ಲಿ ನಡೆಯಲಿರುವ ಈ ಅದ್ದೂರಿ ಕಾರ್ಯಕ್ರಮದಲ್ಲಿ ಯಕ್ಷಗಾನ ಸಂಬಂಧಿ ಸಾಧಕರು ಪ್ರೋತ್ಸಾಹಕರುಗಳಿಗೆ ಪ್ರಶಸ್ತಿ ಪ್ರದಾನದ ಜೊತೆಗೆ ಮಾತೃ ಶ್ರೀ ಸಂಸ್ಮರಣ ಪ್ರಶಸ್ತಿ, ಕೃತಿ ಪ್ರಕಟನೆ ಗೌರವ ಪ್ರಶಸ್ತಿಗಳನ್ನು ಪ್ರದಾನಿಸಲಾಗುತ್ತದೆ. ಪ್ರತಿಷ್ಠಿತ ಯಕ್ಷರಕ್ಷ ಪ್ರಶಸ್ತಿ, ಗೌರವ ಯಕ್ಷ ರಕ್ಷ ಸಾಧಕ ಪ್ರಶಸ್ತಿ ಇತ್ಯಾದಿ ಪುರಸ್ಕಾರ ಇದ್ದು ಮನರಂಜನೆಯಂಗವಾಗಿ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಲಾಡ್ ಕರ್ನಾಟಕ ಸಂಘದ ಅಧ್ಯಕ್ಷ ಅಡ್ವಕೇಟ್ ಜಗದೀಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು ಮುಲುಂಡ್ ಜಿ.ಎಸ್.ಶೆಟ್ಟಿ ಇಂಟರ್ನ್ಯಾಷನಲ್ ಸ್ಕೂಲ್ ಭಾಂಡುಪ್ ನ ಛೇರ್ಮನ್ ಶಂಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಮುಖ್ಯ ಅತಿಥಿಯಾಗಿ ಕೆ.ಎಂ.ಶೆಟ್ಟಿ ಸಿಎಂಡಿ ವಿಕೆ ಗ್ರೂಫ್ ಆಫ್ ಕಂಪೆನಿ ಅವರು ಭಾಗವಹಿಸಲಿದ್ದು, ಉಳಿದಂತೆ ನಾಗರಾಜ್ ಶೆಟ್ಟಿ ಅಧ್ಯಕ್ಷರು ಹೋಟೆಲ್ ಅಸೋಸಿಯೇಷನ್ ವಸಾಯಿ ತಾಲೂಕು, ರಮೇಶ್ ಶೆಟ್ಟಿ ಕಾಪು ಹಿರಿಯ ಹೊಟೇಲ್ ಉದ್ಯಮಿ, ಅಶೋಕ್ ಶೆಟ್ಟಿ ವಸಾಯಿ ಕಾರ್ಯಾಧ್ಯಕ್ಷರು ನಾಯ್ಗಾಂವ್ ವಸಾಯಿ ಬಂಟ್ಸ್, ಗಿರೀಶ್ ಶೆಟ್ಟಿ ಕಾರ್ಯಾಧ್ಯಕ್ಷರು ಕುರ್ಲಾ ಭಾಂಡುಪ್ ಪ್ರಾದೇಶಿಕ ಸಮಿತಿ ಬಂಟರ ಸಂಘ ಮುಂಬಯಿ, ಸತೀಶ್ ಶೆಟ್ಟಿ ಉದ್ಯಮಿ ಮುಂಬಯಿ ಕಲಾಪೋಷಕರು, ರವೀಂದ್ರ ಶೆಟ್ಟಿ ಕೊಟ್ರಪಾಡಿ ಕಾರ್ಯಾಧ್ಯಕ್ಷರು ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿ ಬಂಟರ ಸಂಘ ಮುಂಬಯಿ, ನವೀನ್ ಶೆಟ್ಟಿ ಇನ್ನ ಬಾಳಿಕೆ ಕಾರ್ಯಾಧ್ಯಕ್ಷರು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಬಂಟರ ಸಂಘ ಮುಂಬಯಿ, ಸುಬೋದ್ ಭಂಡಾರಿ ಕಾರ್ಯಾಧ್ಯಕ್ಷರು ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿ ಬಂಟರ ಸಂಘ ಮುಂಬಯಿ, ರಮೇಶ್ ಶೆಟ್ಟಿ ಸಿದ್ಧಕಟ್ಟೆ ಉಪಕಾರ್ಯದರ್ಶಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿ ಬಂಟರ ಸಂಘ ಮುಂಬಯಿ ಹಾಗೂ ಸತೀಶ್ ಶೆಟ್ಟಿ ಅಜೆಕಾರು ಉದ್ಯಮಿ, ಕಲಾ ಪೋಷಕರು ಆಹ್ವಾನಿತ ಅತಿಥಿಗಳಾಗಿ ಭಾವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ನಿರ್ವಹಣೆಯನ್ನು ಕಲಾ ಸಂಘಟಕ, ಬಂಟರ ವಾಣಿ ಮಾಸಿಕದ ಕಾರ್ಯಧ್ಯಕ್ಷ ಕರ್ನೂರು ಮೋಹನ್ ರೈ ಅವರು ವಹಿಸುತ್ತಾರೆ. ಮನರಂಜನಾ ಕಾರ್ಯಕ್ರಮದಂಗವಾಗಿ ಊರ ಪರವೂರ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಪರಕೆದ ಪಲ್ಲಂಕಿ ಎಂಬ ತುಳು ಯಕ್ಷಗಾನ ಪ್ರಸಂಗ ಪ್ರದರ್ಶಿಸಲ್ಪಡುತ್ತದೆ. ಅದೇ ರೀತಿ ಕಾರ್ಯಕ್ರಮ ಮಧ್ಯಂತರದಲ್ಲಿ ಕೋಟಿ ಚೆನ್ನಯ ಅರ್ಥಸಹಿತ ಕೃತಿ ಗಣ್ಯರ ಹಸ್ತದಿಂದ ಬಿಡುಗಡೆಗೊಳ್ಳುತ್ತದೆ ಹಾಗೂ ಉಪಸ್ಥಿತ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷರು ಹಾಗೂ ಕಲಾ ಪೋಷಕ ಸಿಎ ಸುರೇಂದ್ರ ಕೆ ಶೆಟ್ಟಿಯವರಿಗೆ ಗೌರವ ಯಕ್ಷರಕ್ಷ ಪ್ರಶಸ್ತಿ, ಹೆಸರಾಂತ ಭಾಗವತರಾದ ಗಣೇಶ್ ಹೆಬ್ರಿ ಅವರಿಗೆ ಯಕ್ಷ ರಕ್ಷ ಪ್ರಶಸ್ತಿ, ರೇಶ್ಮಾ ಶೆಟ್ಟಿ ಪತ್ರಕರ್ತೆ ಇವರಿಗೆ ಮಾತೋಶ್ರೀ ಯಕ್ಷರಕ್ಷ ಪ್ರಶಸ್ತಿ ಹಾಗೂ ಸುರೇಂದ್ರಕುಮಾರ್ ಹೆಗ್ಡೆ ರಂಗಭೂಮಿ ಕಲಾವಿದರು, ಕರುಣಾಕರ ಶೆಟ್ಟಿ ಕುಕ್ಕುಂದೂರು ಕಲಾ ಸಂಘಟಕರು, ದಯಾನಂದ ಗೌಡ ಸಂಪಾಜೆ ಯಕ್ಷಗಾನ ಕಲಾವಿದರು, ಜಯಪ್ರಕಾಶ್ ನಿಡ್ವಣ್ಣಾಯ ಯಕ್ಷಗಾನ ಭಾಗವತರು, ಸುರೇಶ್ ಶೆಟ್ಟಿ ಕಣಂಜಾರು ಮದ್ದಳೆ ವಾದಕರು, ಶೈಲೇಶ್ ಪುತ್ರನ್ ಯಕ್ಷಗಾನ ಕಲಾವಿದರು ಇವರಿಗೆ ಸಾಧಕ ಯಕ್ಷರಕ್ಷ ಪ್ರಶಸ್ತಿ ಹಾಗೂ ದಿವಂಗತ ಶೇಖರ ಅಜೆಕಾರು ಪತ್ರಕರ್ತರು ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಸೌಮ್ಯಾ ಶೇಖರ್ ಅಜೆಕಾರು ಪ್ರಶಸ್ತಿ ಸ್ವೀಕರಿಸಲಿರುವರು.
ಸಮಾರೋಪ ಸಮಾರಂಭದಲ್ಲಿ ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಕೃತಿ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಯಾಗಿ ಕನ್ಯಾನ ಸದಾಶಿವ ಶೆಟ್ಟಿ ಸಿಎಂಡಿ ಹೇರಂಬ ಇಂಡಸ್ಟ್ರೀಸ್ ಉಪಸ್ಥಿತರಿರುವರು. ಉಳಿದಂತೆ ಆಹ್ವಾನಿತ ಅತಿಥಿಗಳಾಗಿ ಕೃಷ್ಣ ವೈ ಶೆಟ್ಟಿ ಸಿಎಂಡಿ ಕೃಷ್ಣಾ ಪ್ಯಾಲೇಸ್, ಮಹೇಶ್ ಎಸ್ ಶೆಟ್ಟಿ ಉಪಾಧ್ಯಕ್ಷರು ಬಂಟರ ಸಂಘ ಮುಂಬಯಿ, ಹರೀಶ್ ಡಿ ಅಮೀನ್ ಅಧ್ಯಕ್ಷರು ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಡಾ| ಆರ್ ಕೆ ಶೆಟ್ಟಿ ಗೌರವ ಪ್ರಧಾನ ಕಾರ್ಯದರ್ಶಿ ಬಂಟರ ಸಂಘ ಮುಂಬಯಿ, ರತ್ನಾಕರ್ ಶೆಟ್ಟಿ ಮುಂಡ್ಕೂರು ಕಾರ್ಯಾಧ್ಯಕ್ಷರು ಬಂಟರ ಸಂಘದ ಎಸ್ ಎಂ ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆ ಮುಂಬಯಿ, ರವೀಂದ್ರನಾಥ ಭಂಡಾರಿ ಕಾರ್ಯಾಧ್ಯಕ್ಷರು ಸಮನ್ವಯಕ ಪ್ರಾದೇಶಿಕ ಸಮಿತಿ ಬಂಟರ ಸಂಘ ಮುಂಬಯಿ, ಸಿಎ ಸದಾಶಿವ ಶೆಟ್ಟಿ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಬಂಟರ ಸಂಘ ಮುಂಬಯಿ, ಮಂಜುನಾಥ ಶೆಟ್ಟಿ ಕೊಡ್ಲಾಡಿ ಕಾರ್ಯಾಧ್ಯಕ್ಷರು ವಸಾಯಿ ದಹಾಣು ಪ್ರಾದೇಶಿಕ ಸಮಿತಿ ಬಂಟರ ಸಂಘ ಮುಂಬಯಿ, ಶಿವರಾಮ ಜಿ ಶೆಟ್ಟಿ ಅಜೆಕಾರು ಅಧ್ಯಕ್ಷರು ಶ್ರೀ ಮಹಾವಿಷ್ಣು ದೇವಸ್ಥಾನ ಅಜೆಕಾರು, ಮುರಳಿ ಮೋಹನ್ ಶೆಟ್ಟಿ ಮಾಜಿ ಅಧ್ಯಕ್ಷರು ಬಂಟರ ಸಂಘ ಗೋವಾ, ಸುರೇಶ್ ಭಂಡಾರಿ ಕಡಂದಲೆ ಛೇರ್ಮನ್ ಮನಿಫೋಲ್ಡ್ ಕ್ರೆಡಿಟ್ ಸೊಸೈಟಿ, ರಾಜೇಂದ್ರ ವಿ ಶೆಟ್ಟಿ ಸಿಎಂಡಿ ಪಂಜುರ್ಲಿ ಗ್ರೂಫ್ ಹೊಟೇಲ್ಸ್, ಗಿರೀಶ್ ಶೆಟ್ಟಿ ತೆಳ್ಳಾರ್ ಉಪ ಕಾರ್ಯದರ್ಶಿ ಬಂಟರ ಸಂಘ ಮುಂಬಯಿ, ಶಶಿಧರ ಶೆಟ್ಟಿ ಇನ್ನಂಜೆ ಉಪ ಕೋಶಾಧಿಕಾರಿ ಬಂಟರ ಸಂಘ ಮುಂಬಯಿ, ಆನಂದ ಶೆಟ್ಟಿ ಎಕ್ಕಾರು ಕಾರ್ಯಾಧ್ಯಕ್ಷರು ಡೊಂಬಿವಲಿ ಪ್ರಾದೇಶಿಕ ಸಮಿತಿ ಬಂಟರ ಸಂಘ ಮುಂಬಯಿ, ಕರ್ನೂರು ಶಂಕರ ಆಳ್ವ ಅಧ್ಯಕ್ಷರು ಮಣಿಕಂಠ ಸೇವಾ ಸಮಿತಿ ವಸಾಯಿ ಮೊದಲಾದ ಗಣ್ಯರು ಭಾಗವಹಿಸಲಿದ್ದು, ಅಶೋಕ ಪಕ್ಕಳ ಕಾರ್ಯಾಧ್ಯಕ್ಷರು ಸಿಟಿ ರೀಜನ್ ಬಂಟರ ಸಂಘ ಮುಂಬಯಿ ಇವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಯಕ್ಷಗಾನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕಾರ್ಯಕ್ರಮ ಸಂಘಟಕ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಹಾಗೂ ಬಳಗದ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ಸುದ್ಧಿ ವಿವರ : ಅರುಣ್ ಶೆಟ್ಟಿ ಎರ್ಮಾಳ್