Author: admin
ಅಳಪೆ ಕಣ್ಣೂರು ಗ್ರಾಮದ ಕೊಡಕಾಲ ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನದ ಪುನಃ ಪ್ರತಿಷ್ಠ ಬ್ರಹ್ಮಕಲಶೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಜನಪದೀಯವಾಗಿ ನಂಬಿಕೊಂಡು ಬಂದ ದೈವಗಳು ನಮ್ಮ ಸಂರಕ್ಷಕರು. ಜಗತ್ತಿನ ಬೇರೆಲ್ಲೂ ಇರದ ವಿಶಿಷ್ಟ ನಂಬಿಕೆ, ಸಂಸ್ಕೃತಿ ತುಳುನಾಡಿನಲ್ಲಿದೆ. ದೈವರಾಧನೆ ನಮ್ಮ ಜಿಲ್ಲೆಯ ವಿಶಿಷ್ಟ ಪರಂಪರೆ. ಆಗಮಶಾಸ್ತ್ರ ಬರುವುದಕ್ಕೂ ಹಿಂದೆ ನಾವು ದೈವರಾಧನೆಯನ್ನು ನಂಬಿಕೊಂಡು ಬಂದಿದ್ದೇವೆ ಎನ್ನುವುದು ಪಾಡ್ದನದ ಮೂಲಕ ತಿಳಿಯುತ್ತದೆ ಎಂದರು. ಪುರಾಣ ಪ್ರಸಿದ್ಧ ಮತ್ತು ನಮ್ಮ ಹಿರಿಯರು ನಂಬಿಕೊಂಡು ಬಂದ ಪುರಾತನ ದೈವಗಳಲ್ಲಿ ಮುಂಡಿತ್ತಾಯ ವೈದ್ಯನಾಥ ಕ್ಷೇತ್ರವೂ ಒಂದು. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಕೇವಲ 9 ತಿಂಗಳೊಳಗೆ ದೈವಸ್ಥಾನದ ಅಭಿವೃದ್ಧಿ ಕಾರ್ಯಗಳು ಅದ್ಬುತವಾಗಿ ಮೂಡಿಬಂದಿವೆ ಎಂದರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ದೈವರಾಧನೆಯು ಸಮಾಜವನ್ನು ಒಟ್ಟು ಮಾಡುವ ವಿಶಿಷ್ಟವಾದ ಆರಾಧನಾ ಪದ್ಧತಿ. ಈ ದೈವಸ್ಥಾನದ ಕಾರ್ಯ ಉತ್ತಮವಾಗಿ ಮೂಡಿಬಂದಿದೆ. ಈ ಶಕ್ತಿ ಪೀಠ…
ವಿದ್ಯಾಗಿರಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಫಲಿತಾಂಶ ಪ್ರಕಟಿಸಿದ್ದು, ಸ್ನಾತಕೋತ್ತರ ವಿಭಾಗದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು 9 ರ್ಯಾಂಕ್ಗಳನ್ನು ಪಡೆದಿದ್ದಾರೆ. ಎಂ.ಡಿ. ಕ್ಲಿನಿಕಲ್ ಯೋಗದಲ್ಲಿ ಡಾ.ಅಂಶುಮಾನ್ ಆರ್ ಯಾದವ್ (ಪ್ರಥಮ), ಮೊಯಿರಂಗ್ತೇಮ್ ಜಾಯ್ಚಂದ್ ಸಿಂಗ್(6ನೇ), ಡಾ.ಖಂದುರಕ್ಪ್ಮಾ ಗೀತಾರಾಣಿ ದೇವಿ (7ನೇ), ಡಾ.ಒಯಿನಮ್ ಬಾಬ್ಬಿಚಂದ್ ಬಾಷ್ ದೇವಿ (8ನೇ) ಮತ್ತು ಡಾ.ಬಾಲಗೋವಿಂದ ಟಿ.ಪಿ. (10ನೇ) ರ್ಯಾಂಕ್ ಪಡೆದಿದ್ದಾರೆ. ಎಂ.ಡಿ. ಕ್ಲಿನಿಕಲ್ ನ್ಯಾಚರೋಪತಿಯಲ್ಲಿ ಡಾ.ವನಿತಾ ಶೆಟ್ಟಿ (2ನೇ), ಡಾ.ಸ್ವಾತಿ ಎಸ್. (5ನೇ), ಡಾ. ಪ್ರಜ್ವಲ್ ಎಚ್.ಎಂ.(6ನೇ) ಮತ್ತು ಡಾ.ರಂಜಿನಿ ಮೂರ್ತಿ (7ನೇ) ರ್ಯಾಂಕ್ ಪಡೆದಿದ್ದಾರೆ. ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ಸಾಹಸ ತ್ಯಾಗ ಬಲಿದಾನಕ್ಕೆ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಗೋರ್ಖಾ ರೈಫಲ್ಸ್ ರೇಜಿಮೆಂಟ್ ಸೇವೆ ಸಲ್ಲಿಸಿದ್ದ ನಿವೃತ್ತ ಸೇನಾಧಿಕಾರಿ ಯುವ ನಾಯಕ ಕ್ಯಾಪ್ಟನ್ ಬೃಜೇಶ್ ಚೌಟ ಅವರು 2024ರ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಮಂಗಳೂರಿನ ಮಿಲಾಗ್ರಿಸಿನಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿಎಸ್ಸಿ ಪದವಿ ಮುಗಿಸಿದ ಬೃಜೇಶ್ ಬಳಿಕ ಮಧ್ಯಪ್ರದೇಶದ ಇಂದೋರ್ ಐಐಎಂನಲ್ಲಿ ಉನ್ನತ ಶಿಕ್ಷಣವನ್ನು ಮುಗಿಸಿದರು. ಪದವಿಯಲ್ಲಿದ್ದಾಗ ಎನ್.ಸಿ.ಸಿ ಸೇರಿ ವಿಶ್ವವಿದ್ಯಾಲಯದಲ್ಲಿ ಬೆಸ್ಟ್ ಕೇಡೆಟ್ ಎಂದು ಗುರುತಿಸಿಕೊಂಡು ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಎನ್.ಸಿ.ಸಿ ಕೇಡೆಟ್ ಆಗಿ ಪಾಲ್ಗೊಂಡಿದ್ದರು. ಯು.ಪಿ.ಎಸ್.ಸಿ ಆಯೋಜಿಸುವ ಕಂಬೈನ್ಸ್ ಡಿಫೆನ್ಸ್ ಸರ್ವಿಸಸ್ ಎಕ್ಸಾಮಿನೇಷನ್ (CDSE) ಪರೀಕ್ಷೆ ಹಾಗೂ ಎಸ್.ಎಸ್.ಬಿ ಇಂಟರ್ವ್ಯೂನಲ್ಲಿ ತೇರ್ಗಡೆಗೊಂಡು ಚೆನ್ನೈಯಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂ ಸೇನೆಯ ಪ್ರತಿಷ್ಠಿತ ಗೋರ್ಖಾ ರೈಫಲ್ಸ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಅಸ್ಸಾಂ ಮತ್ತು ಮಣಿಪುರ ಸೇರಿದಂತೆ…
1976ರಲ್ಲಿ ಶಿಬರೂರುಗುತ್ತು ಮುದ್ದಣ್ಣ ಶೆಟ್ಟರ ಮುತುವರ್ಜಿಯಲ್ಲಿ ಶಿಬರೂರು ಕ್ಷೇತ್ರವು ಸಂಪೂರ್ಣ ನವೀಕರಣಗೊಂಡಿದ್ದು 2010ರಲ್ಲಿ ಕೊಂಜಾಲಗುತ್ತು ಪ್ರಭಾಕರ ಶೆಟ್ಟರ ನೇತೃತ್ವದಲ್ಲಿ ಹಾಗೂ ಊರವರ ಸಹಕಾರದಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡು ಈಗ ಮತ್ತೊಮ್ಮೆ ಧ್ವಜಸ್ತಂಭ ಸಹಿತ ಸುತ್ತುಪೌಳಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಈ ವರ್ಷ ಕೈಗೊಂಡಿದ್ದು ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ನಡೆಯುತ್ತಿದೆ. ಕ್ಷೇತ್ರವು ದೈವ ಕ್ಷೇತ್ರ ಮಾತ್ರವಲ್ಲದೇ ನಾಗ ಕ್ಷೇತ್ರವು ಆಗಿರುತ್ತದೆ. ಕ್ಷೇತ್ರದ ವಿಶೇಷವೇನೆಂದರೆ ಬ್ರಹ್ಮಕುಂಭಾಭಿಷೇಕ ನಡೆಯುವ ಸಂದರ್ಭದಲ್ಲಿ ನಾಗಮಂಡಲ ಸೇವೆಯು ನಡೆಯುವುದು ಗಮನಾರ್ಹ. ಇದೇ ಬರುವ ಎಪ್ರಿಲ್ 22ರಿಂದ 30ರ ತನಕ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮಗಳು ಜರಗಲಿದ್ದು 26ರಂದು ಶ್ರೀ ಉಳ್ಳಾಯ ಕೊಡಮಣಿತ್ತಾಯ ದೈವಗಳಿಗೆ ಬ್ರಹ್ಮಕುಂಭಾಭಿಷೇಕವು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಶಿಬರೂರುರವರ ನೇತೃತ್ವದಲ್ಲಿ ಜರಗಲಿದ್ದು, ಅದೇ ದಿನ ರಾತ್ರಿ ಕ್ಷೇತ್ರದಲ್ಲಿ ನಾಗಮಂಡಲ ಸೇವೆ ಜರುಗಲಿದೆ. ಎಪ್ರಿಲ್ 27ರಿಂದ 30ರ ತನಕ ವಿಶೇಷ ಜಾತ್ರಾ ಮಹೋತ್ಸವವು ಜರಗಲಿದ್ದು ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು…
ಮೂಡುಬಿದಿರೆ: ಇಂದಿನ ಸಮಾಜ ಅಭಿವೃದ್ಧಿಯತ್ತಾ ಸಾಗುತ್ತಿದೆ, ನಿಜ. ಆದರೆ ಮೂಲಭೂತವಾಗಿ ಬಡವ- ಶ್ರೀಮಂತ, ಅಕ್ಷರಸ್ಥ- ಅನಕ್ಷರಸ್ಥ, ಆರೋಗ್ಯ ಸೇವೆಯನ್ನು ಪಡೆಯಲು ಶಕ್ತರಾದ ಹಾಗೂ ಅಶಕ್ತರಾದ ನಡುವಿನ ಕಂದಕ ಮಾತ್ರ ಹೆಚ್ಚುತ್ತಲೆ ಸಾಗಿದೆ. ಇಂತಹ ಸನ್ನಿವೇಶದಲ್ಲಿ ಈ ರೀತಿಯ ಸಮಾಜಮುಖಿ ಉಚಿತ ಸೇವೆಗಳು ಸ್ತುತ್ಯರ್ಹ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು, ಯುವವಾಹಿನಿ(ರಿ.) ಮೂಡುಬಿದಿರೆ ಘಟಕ, ನೇತ್ರಾಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಜರುಗಿದ ಎರಡನೇ ‘ಉಚಿತ ನೇತ್ರ ತಪಾಸಣಾ ಶಿಬಿರ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮತನಾಡಿದರು. ಸಮಾಜದ ಪರಿಕಲ್ಪನೆಯಲ್ಲಿ ಜರಗುವ ಪ್ರತಿ ಕೆಲಸಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೇರಲು ಸಹಕಾರಿ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿ…
ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಅಂಗವಾಗಿ ಮಾ.9 ರಂದು ರಾತ್ರಿ ದೇವರ ದರ್ಶನ ಬಲಿ ಹಾಗೂ ದೈವಗಳ ನೇಮೋತ್ಸವು ನಡೆಯಿತು. ವೇ. ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆದ ಜಾತ್ರೋತ್ಸವದಲ್ಲಿ ಮಾ. 8 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಗಣಪತಿ ಹೋಮ, ಕಲಶ ಪೂಜೆ, ಕಳಶಾಭಿಷೇಕ, ನಾಗ ಸನ್ನಿದಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ದೈವಗಳಿಗೆ ತಂಬಿಲ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದ ನಂತರ ಶ್ರೀದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ಶ್ರೀದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಕ್ಷೇತ್ರದ ದೈವಗಳಾದ ಉಳ್ಳಾಕುಲು, ರಕ್ತೇಶ್ವರಿ, ವ್ಯಾಘ್ರ ಚಾಮುಂಡಿ, ವರ್ಣರ ಪಂಜುರ್ಲಿ, ಬೊಟ್ಟಿ ಭೂತ, ಗುಳಿಗ ದೈವಗಳ ನೇಮೋತ್ಸವ, ಮಾ.10 ರಂದು ಕಲಶ, ಆರಾಧನೆ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆಯೊಂದಿಗೆ ಜಾತ್ರೋತ್ಸವ ಕಾರ್ಯಕ್ರಮಗಳು…
ಭಾರತದಲ್ಲಿ 28 ವರ್ಷಗಳ ಬಳಿಕ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿಗೆ ಕಿರೀಟ್ ಜಸ್ಟ್ ಮಿಸ್ ಆಗಿದೆ. ಟಾಪ್ 8ಗೆ ಬಂದರೂ ಟಾಪ್ 4ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ. 112 ಸ್ಪರ್ಧಿಗಳಲ್ಲಿ ಟಾಪ್ 8 ಕ್ಕೆ ಹೋಗುವುದು ಕೂಡಾ ಸಣ್ಣ ಮಾತಲ್ಲ. ಆದರೂ ಕೊನೆಯ ಗಳಿಗೆಯಲ್ಲಿ ಕಿರೀಟ ತಮ್ಮದಾಗಿಸಿಕೊಳ್ಳುವಲ್ಲಿ ಸಿನಿ ಶೆಟ್ಟಿ ವಿಫಲರಾದರು. ಜೆಕ್ ಗಣರಾಜ್ಯದ ಸುಂದರಿ 25 ವರ್ಷದ ಕ್ರಿಸ್ಟೈನಾ ಪಿಸ್ಕೋವಾ (Krystyna Pyszkova) ಅವರು ಮಿಸ್ ವರ್ಲ್ಡ್ ಆಗಿ ಹೊರಹೊಮ್ಮಿದರು. ವಜ್ರಗಳಿಂದ ಕೂಡಿದ ಕಿರೀಟ, ರೂ 10 ಕೋಟಿ ನಗದು, ಫ್ರೀ ವರ್ಲ್ಡ್ ಟೂರ್ ಇವೆಲ್ಲವನ್ನೂ ಈಗ ಕ್ರಿಸ್ಟೈನಾ ಪಿಸ್ಕೋವಾ ಪಡೆದುಕೊಂಡಿದ್ದಾರೆ. ಮುಂಬಯಿ ಹೋಟೆಲ್ ಉದ್ಯಮಿ ಸದಾನಂದ ಶೆಟ್ಟಿ ಇನ್ನಂಜೆ ಅವರ ಸುಪುತ್ರಿ, ಫೆಮಿನಾ ಮಿಸ್ ಇಂಡಿಯಾ 2022 ವಿಜೇತ 21 ವರ್ಷದ ಸಿನಿ ಶೆಟ್ಟಿ ಮಿಸ್ ವರ್ಲ್ಡ್ 2023 ಸ್ಪರ್ಧೆಯಲ್ಲಿ ಇವರು ದೇಶವನ್ನು ಪ್ರತಿನಿಧಿಸಿದ್ದರು. ಟಾಪ್ 8 ಕ್ಕೆ ಬಂದು ಭಾರತದ ಹೆಮ್ಮೆ ಹೆಚ್ಚಿಸಿದ ಸಿನಿ…
ಬೊರಿವಲಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಮುಂಬಯಿ ಬಂಟರ ಸಂಘದ ಜೋಗೇಶ್ವರಿ ದಹಿಸರ್ ಸಮಿತಿಯ ಮಹಿಳಾ ಸದಸ್ಯರಿಂದ ಭಜನಾ ಸಂಕೀರ್ತನೆ
ಬಂಟರ ಸಂಘ ಮುಂಬಯಿಯ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸದಸ್ಯರಿಂದ ಮಾ 8 ರಂದು ಮಹಾ ಶಿವರಾತ್ರಿಯ ಶುಭದಿನ ಬೊರಿವಲಿ ಪಶ್ಚಿಮದ ಜಯರಾಜ್ ನಗರದ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸ್ಮರಣೀಯ ಭಜನಾ ಸಂಕೀರ್ತನೆ ಜರಗಿತು. ಬೆಳಿಗ್ಗೆ ಭಜನೆ ಕಾರ್ಯಕ್ರಮ ಇಂಚರ ತಂಡದ ರಜನಿ ಶೆಟ್ಟಿ ಮತ್ತು ಶೋಭಾ ಶೆಟ್ಟಿಯವರ ನೇತೃತ್ವದಲ್ಲಿ ಜರಗಿತು. ಭಜನೆ ಮಹಿಳಾ ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರು ಸೇವೆ ಸಲ್ಲಿಸಿದರು. ಆ ಬಳಿಕ ಮಹಿಳಾ ಸದಸ್ಯರಿಂದ ಆತ್ಮವು ಸೂರೆಗೊಳ್ಳುವ ಭಜನೆಯು ಎಲ್ಲರ ಮನ ತಣಿಸಿತು. ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನೀತಾ ಎನ್ ಹೆಗ್ಡೆ ಅವರು ಭಜನೆ ಹಾಡಿದ ಎಲ್ಲಾ ಸದಸ್ಯರಿಗೆ ನಿತ್ಯ ಪ್ರಾರ್ಥನೆಯ ಪುಸ್ತಕವನ್ನು ವಿತರಿಸಿ ಅವರ ಅಧ್ಯಾತ್ಮಿಕ ಸಾಧನೆಗೆ ಸ್ಪೂರ್ತಿ ನೀಡಿದರು. ಮಧ್ಯಾಹ್ನ ಮಹಾ ಮಂಗಳಾರತಿ ಜರಗಿ ದೇವರ ಕೃಪೆಯಿಂದ ವಾತಾವರಣವು ಮಂಗಲಮಯವಾಗಿ ಕಾರ್ಯಕ್ರಮವು ಮುಕ್ತಾಯಗೊಂಡಿತು. ಪಾಲ್ಗೊಂಡ ಭಕ್ತರೆಲ್ಲರಿಗೂ ಪ್ರಸಾದ ರೂಪವಾಗಿ ಅನ್ನ…
ಖ್ಯಾತ ದಾರ್ಶನಿಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಅರವಿಂದ ಘೋಷ್ ಅವರು ತಮ್ಮ ಒಂದು ವೇದಾಂತ ಗ್ರಂಥದಲ್ಲಿ ಸಾರ್ವಕಾಲಿಕ ಸತ್ಯವಾದ ಒಂದು ವಾಕ್ಯವನ್ನು ಉದ್ಗರಿಸಿದ್ದಾರೆ. “ಈ ಪ್ರಪಂಚದಲ್ಲಿ ಒಳ್ಳೆಯವರಿಗಿಂತಲೂ ಒಳ್ಳೆಯವರಂತೆ ನಟಿಸುವವರ ಸಂಖ್ಯೆಯೇ ಅಧಿಕ. ಅಂತಹವರಿಗಿಂತ ಕೆಟ್ಟವರೆಂದು ಪರಿಗಣಿಸಲ್ಪಟ್ಟವರೇ ಕಡಿಮೆ ಅಪಾಯಕಾರಿಗಳು’ ಎಂತಹ ಅದ್ಭುತ ಚಿಂತನೆ. ಇಂದು ಸಮಾಜದಲ್ಲಿ ನಾವು ಕಾಣುತ್ತಿರುವವರಲ್ಲಿ ಪ್ರತಿಶತ 90ರಷ್ಟು ಮಂದಿಗೆ ಮೇಲಿನ ವಾಕ್ಯ ನೇರವಾಗಿ ಅನ್ವಯಿಸುತ್ತದೇನೊ? ಸಮಾಜದ ಸರ್ವಸ್ತರದಲ್ಲೂ ಮುಖವಾಡವಾದಿಗಳೇ ಪ್ರಮುಖವಾಗಿ ಗೋಚರಿಸುತ್ತಾರೆ. ಅಂಥವರ ಕಳಕಳಿಗಳ ಅಂತರಂಗವು ಅಪವಿತ್ರ ಮತ್ತು ಅಪರಿಶುದ್ಧವಾಗಿರುವುದು ಹಾಗೂ ನಾಟಕೀಯತೆಯನ್ನು ಹೊಂದಿರುವುದು ಸರ್ವ ದುರಂತಗಳಿಗೆ ಮೂಲ ಎಂದರೆ ತಪ್ಪಾಗದು. ಘೋಷರ ದಿಟವಾದ ನುಡಿಯು ನೇರವಾಗಿ ಅನ್ವಯಿಸುವುದು ಪ್ರಸ್ತುತದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗೆ ಎಂದು ಹೇಳಲು ಸಾಧ್ಯವಿದೆ. ಹಿರಿಯ ರಾಜಕೀಯ ಮತ್ತು ಸಾಮಾಜಿಕ ಮುತ್ಸದ್ಧಿ ರಾಮ್ಮನೋಹರ ಲೋಹಿಯಾರ ಸಮಾಜವಾದ ತಣ್ತೀದ ಕಟ್ಟಾಳು ಕಾಗೋಡು ತಿಮ್ಮಪ್ಪ ಅವರು ತಮ್ಮ ಆಪ್ತರಲ್ಲಿ ಯಾವಾಗಲೂ ಒಂದು ಹಿತನುಡಿ ನುಡಿಯುತ್ತಾರೆ. “ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ…
ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ಆದರೆ ಬಡ ಸಮಾಜಕ್ಕಾಗಿ ಸೇವಾ ಕಾರ್ಯ ಮಾಡುವಾಗ ಸಂಘ ನನಗಾಗಿ ಅಲ್ಲ ಸಮಾಜಕ್ಕಾಗಿ ಇರುವುದು ಎಂಬ ಆತ್ಮ ಸ್ಮರಣೆ ಇರಲಿ ಹಾಗೂ ಸೇವೆ ಕೂಡಾ ಸಮಾಜಕ್ಕಾಗಿ ಮಾಡಿದೆ ಎಂಬ ಹೆಮ್ಮೆ ನಮ್ಮಲ್ಲಿರಲಿ. ಸಮಾಜ ಕಾರ್ಯ ಯಾವುದೇ ಇರಲಿ ಧನಾತ್ಮಕವಾಗಿ ನಡೆದಾಗ ಅದಕ್ಕೆ ಫಲ ಸಿಗುವುದು ಸೃಷ್ಟಿಯ ನಿಯಮ. ನಿರ್ಮಲ ಮನಸ್ಸಿನ ಸೇವೆಯಿಂದ ಚಿತ್ತ ಶುದ್ಧಿಯನ್ನು ಪಡೆಯಲು ಸಾಧ್ಯ. ನಮ್ಮನ್ನು ನಾವು ಗಟ್ಟಿಗೊಳಿಸಿದಂತೆ ನಮ್ಮವರನ್ನು ಗಟ್ಟಿಗೊಳಿಸುವ ಕಾರ್ಯ ಅಗಲಿ. ನಮ್ಮ ಶ್ರೀಮಂತ ಸಂಸ್ಕ್ರತಿಗೆ ತಕ್ಕಂತೆ ಕೈಗೊಂಡ ಕಾರ್ಯ ಪರಿಪೂರ್ಣಗೊಳ್ಳುವ ತನಕ ವಿರಮಿಸದೇ ಸಮಾಜಕ್ಕಾಗಿ ಅರ್ಪಣೆ ಮಾಡುವ ಛಲವೊಂದಿದ್ದರೆ ಅದು ಬಂಟರಲ್ಲಿ ಕಾಣಬಹುದು. ನಮಗೆ ಬಂದ ಶ್ರೀಮಂತಿಕೆಯಲ್ಲಿ ಮೆರೆಯದೆ ದಾನ ಧರ್ಮದ ಮೂಲಕ ನಾವು ಸಮಾಜದಲ್ಲಿ ಶ್ರೇಷ್ಠರಾಗಬೇಕು ಎಂದು ಹೇರಂಬ ಇಂಡಸ್ಟ್ರೀಸ್ ಪ್ರೈ ಲಿಮಿಟೆಡ್ ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ನುಡಿದರು. ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕೊತ್ಸವ, ಸ್ನೇಹ ಸಮ್ಮಿಲನ ಸಮಾರಂಭವು ಮಾರ್ಚ್…