Author: admin
ಜಗತ್ತಿನ ಅತ್ಯಂತ ಪ್ರಾಚೀನ ಯುದ್ಧಕಲೆ ಎಂದು ಖ್ಯಾತಿ ಪಡೆದ ಕಳರಿ ಪೈಟ್ ತುಳುನಾಡಿನಿಂದಲೇ ಉದ್ಭವವಾಗಿದೆ ಎಂಬುದು ಹೆಮ್ಮೆಯ ವಿಷಯ. ಹಿಂದೆ ದ.ಕ, ಕಣ್ಣೂರು, ವಯನಾಡು ಮತ್ತು ಕೊಝೀಕೋಡ್ ಭಾಗಗಳನ್ನೊಳಗೊಂಡ ಭಾಗವನ್ನು ತುಳುನಾಡು ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವು ಯುದ್ಧಕಲೆ ಅಭ್ಯಾಸದ ಪ್ರಬಲ ಕೇಂದ್ರವಾಗಿತ್ತು. ಕೇರಳದಲ್ಲೂ ಇದನ್ನು “ತುಳುನಾಡನ್ ಕಳರಿ” ಎಂದೇ ಕರೆಯುತ್ತಾರೆ. ಪುರಾವೆಗಳ ಪ್ರಕಾರ, ಹಲವಾರು ರಾಜರು ಹಾಗೂ ಸೇನಾ ನಾಯಕರು ತುಳುನಾಡಿಗೆ ಬಂದು ಕಲರಿ ಪೈಟ್ ಕಲಿತಿದ್ದರು. ಕೋಟಿ ಚೆನ್ನಯರು ಗರಡಿಗಳ ಮೂಲಕ ಈ ಕಲೆಯ ಉಳಿವಿಗೆ ಶ್ರಮಿಸಿದರು. ಅವರ ಗುರು ನಾನಯ್ಯರಿಗೆ ಕೇರಳದ ರಾಜರು ಗ್ರಾಮಗಳನ್ನು ದತ್ತವಾಗಿ ನೀಡಿದ ದಾಖಲೆಗಳೂ ಇವೆ. ಅದೇ ರೀತಿ ಅವಳಿ ವೀರರಾದ ಮುದ್ದ ಕಳಲೆರ್, ಕಾನದ ಕಟದೆರ್ ಇವರ ಶೌರ್ಯಗಳು ಕಳರಿಯಿಂದಲೇ ಬೆಳೆದು ಬಂದಿದೆ.ಕಲರಿ ಪೈಟ್ನಲ್ಲಿ 108 ಮರ್ಮ ಬಿಂದುಗಳಲ್ಲಿ 64ಕ್ಕೆ ಸಂಬಂಧಪಟ್ಟ ಮರ್ಮ ವಿದ್ಯೆಗಳು ಪ್ರಮುಖ. ಇದು ದೇಹ ಹಾಗೂ ಮನಸ್ಸಿಗೆ ಆರೋಗ್ಯ ನೀಡುವುದಲ್ಲದೆ, ಯುದ್ಧ ತಂತ್ರಗಳು, ಕಣ್ಕಟ್ಟು ವಿದ್ಯೆ, ಗೆರಿಲ್ಲ…
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ ಪಿ.ಯು ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರದ ಮೂರನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುರೇಂದ್ರ ಶೆಟ್ಟಿಯವರು ಮಾತನಾಡಿ, ಈ ಪರಿಸರದ ಎಲ್ಲಾ ಮಕ್ಕಳಿಗೂ ಉಪಯೋಗವಾಗುವಂತೆ ಬೇಸಿಗೆ ಶಿಬಿರ ಆಯೋಜಿಸಿರುವುದು ಅಭಿನಂದನೀಯ. ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಒಂದೆಡೆ ಸೇರಿಸಿ ಬೇಸಿಗೆ ಶಿಬಿರವನ್ನು ಆಯೋಜಿಸಿ ಚಟುವಟಿಕೆಗಳನ್ನು ನಡೆಸುವುದು ನಿಜಕ್ಕೂ ಒಂದು ಸವಾಲಿನ ಸಂಗತಿ. ಸಮಾಜಮುಖಿ ಚಿಂತನೆಯ ಸದುದ್ದೇಶದಿಂದ ಬೇಸಿಗೆ ಶಿಬಿರವನ್ನು ಈ ಸಂಸ್ಥೆಯು ಆಯೋಜಿಸಿರುವುದು ಇತರರಿಗೆ ಮಾದರಿ. ಜೀವನದಲ್ಲಿ ಎದುರಾಗುವ ಸಾಕಷ್ಟು ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನೆಡೆದಾಗ ನಮ್ಮ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ. ಮಕ್ಕಳು ಈ ಶಿಬಿರದಲ್ಲಿ ಕಲಿಸುವ ಎಲ್ಲಾ ಚಟುವಟಿಕೆಗಳನ್ನು, ವಿಚಾರಗಳನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಂಡು ಸವಾಲುಗಳನ್ನು ಎದುರಿಸುವ ಗುಣವನ್ನು ಕಲಿಯಬೇಕು. ಆ ಮೂಲಕ ಯಶಸ್ಸು ಕಂಡು ತನ್ನ ಗುರಿ ಉದ್ದೇಶಗಳನ್ನು…
ಮೂಡುಬಿದಿರೆ: ‘ಮಕ್ಕಳಿಗೆ ಸಮಯ ನೀಡಿ , ಬೆನ್ತಟ್ಟಿ ಬೆಳೆಸಿ ’ ಎಂದು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಆಶ್ರಯದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರವು ಮೂಡುಬಿದಿರೆ ನಗರದ ಸ್ಕೌಟ್ಸ್ -ಗೈಡ್ಸ್ ಕನ್ನಡ ಭವನದಲ್ಲಿ ಸೋಮವಾರ ಆಯೋಜಿಸಿದ್ದ 34 ನೇ ವರ್ಷದ ರಾಜ್ಯಮಟ್ಟದ ಮಕ್ಕಳ ಅಭಿನಯ ಶಿಬಿರ ಅಭಿನಯ ಪ್ರಧಾನ ‘ಚಿಣ್ಣರ ಮೇಳ – 2025’ ಉದ್ಘಾಟಿಸಿ ಅವರು ಮಾತನಾಡಿದರು. ‘ಬದುಕಿನಲ್ಲಿ ಎಲ್ಲರೂ ನಟರೇ. ಆದರೆ, ಅಭಿನಯ ವಿಭಿನ್ನ’. ಮಕ್ಕಳಿಗೆ ಸಮಯ ನೀಡುವುದು ಎಂದರೆ ಅವರ ಭಾವನೆಗಳಿಗೆ ಸ್ಪಂದಿಸುವುದು, ಮುಕ್ತವಾಗಿ ಸಂವಹನ ನಡೆಸುವುದು. ಮಕ್ಕಳಲ್ಲಿ ಅಡಗಿರುವ ಆತಂಕ, ಭಯ, ತುಂಟಾಟ, ಪ್ರತಿಭೆಯನ್ನು ಸರಿಯಾದ ಸಮಯದಲ್ಲಿ ಗುರುತಿಸುವುದು ಬಹಳ ಅವಶ್ಯಕ ಎಂದರು. ಮನುಷ್ಯ ಸಮಾಜಜೀವಿ. ಸಮಾಜದ ಜೊತೆ ಬೆರೆತಾಗಲೇ ನೆಮ್ಮದಿ, ಯಶಸ್ಸು ಎಲ್ಲವೂ ಸಾಧ್ಯ. ಮಕ್ಕಳು ಮಾತನಾಡಬೇಕು. ಎಲ್ಲರೊಂದಿಗೆ ಬೆರೆಯುವಂತೆ ಮಾಡಲು ಇಂತಹ ಶಿಬಿರ ಪೂರಕವಾಗಿರಲಿದೆ ಎಂದು ತಿಳಿಸಿದರು. ವಿದ್ವಾನ್ ಚಂದ್ರಶೇಖರ ನಾವಡ ಮಾತನಾಡಿ,…
ವಿದ್ಯಾಗಿರಿ: ನಮ್ಮ ದೇಶದಲ್ಲಿ 11 ಕೋಟಿಗೂ ಹೆಚ್ಚು ವಿದ್ಯಾರ್ಥಿ ಸಮುದಾಯವಿದ್ದು, ನಾವು ಕ್ರೀಡೆಗೆ ವಿಶೇಷ ಆಸಕ್ತಿ ನೀಡಬೇಕು. ಕ್ರೀಡಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶವಿದೆ. ದೇಶದ ಯುವಶಕ್ತಿ ರಾಷ್ಟ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಆದರೆ ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚಿನ ಸಹಕಾರ ನೀಡದೆ ಇರುವುದು ವಿದ್ಯಾರ್ಥಿಗಳ ಸಾಧನೆಗೆ ಅಡ್ಡಿಯಾಗುತ್ತಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಯುವ ಸಂಪನ್ಮೂಲ ಇರುವ ದೇಶದ ಜೊತೆಗೂ ನಮಗೂ ಹೊರಡಲು ಕಷ್ಟವಾಗುತ್ತಿದೆ ಎಂದು ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಷನ್ನ ಗೌರವಾಧ್ಯಕ್ಷ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ನುಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಈಜುಕೊಳ ಆವರಣದಲ್ಲಿ ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಷನ್ನ ಖೇಲೋ ಇಂಡಿಯಾಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಈಜುಗಾರರಿಗೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗುವಂತ ವ್ಯವಸ್ಥೆ ಕಲ್ಪಿಸಬೇಕು ಎಂದರು. ದಕ್ಷಿಣ ಕನ್ನಡ ಈಜುಗಾರರ ಸಂಘದ ಅಧ್ಯಕ್ಷ ಯತೀಶ್ ಬೈಕಂಪಾಡಿ…
ಪ್ರತಿಷ್ಠಿತ ವಿಜಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಶಮೀನಾ ಆಳ್ವ ಅವರು ಆಯ್ಕೆಯಾಗಿದ್ದಾರೆ. ಅವರು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಪ್ರಸಕ್ತ ಮುಲ್ಕಿ ವಿಜಯ ಕಾಲೇಜು ವಿಶ್ವಸ್ಥ ಮಂಡಳಿಯ ಸದಸ್ಯರಾಗಿ ಕಾಲೇಜಿನ ಅಭಿವೃದ್ಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ತುಳುನಾಡು ಬಂಟರ ಮಹಿಳಾ ಸಂಘದ ಅಧ್ಯಕ್ಷೆ, ತುಳುವೆರೆ ಆಯನ ಕೂಟ (ರಿ)ದ ಅಧ್ಯಕ್ಷೆಯಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿಜಯ ಕಾಲೇಜು ಅಲೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶಮೀನಾ ಆಳ್ವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಡಾ ಎ ಸದಾನಂದ ಶೆಟ್ಟಿ, ತುಳು ವರ್ಲ್ಡ್ ಸ್ಥಾಪಕಾಧ್ಯಕ್ಷ ಡಾ ರಾಜೇಶ್ ಆಳ್ವ ಮತ್ತಿತರರು ಅಭಿನಂದಿಸಿದ್ದಾರೆ.
ಶಿಕ್ಷಣ ಎಂದರೆ ಕೇವಲ ಅಕ್ಷರ ಅಭ್ಯಾಸ ಅಲ್ಲ. ಕ್ರೀಡೆ, ಕಲೆ ಮುಂತಾದ ಚಟುವಟಿಕೆಗಳು ಅದರ ಭಾಗವಾದರೆ ಮಾತ್ರ ಅವರೊಳಗಿನ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಬೇಸಿಗೆ ಶಿಬಿರಗಳು ಹೆಚ್ಚು ಸಹಕಾರಿಯಾಗುತ್ತದೆ. ಮಕ್ಕಳು ರಜಾದಿನಗಳ ಸಮಯವನ್ನ ಸದುಪಯೋಗ ಪಡಿಸಿಕೊಂಡು ಇನ್ನಷ್ಟು ಕ್ರಿಯಾಶೀಲರಾಗಲು ಬೇಸಿಗೆ ಶಿಬಿರಗಳು ಉತ್ತಮ ಆಯ್ಕೆ ಆಗಿರುತ್ತದೆ. ಮಕ್ಕಳಿಗೆ ಶಾಲಾ ಮಟ್ಟದಲ್ಲಿಯೇ ದುಶ್ಚಟಗಳಿಂದ, ಕೆಟ್ಟ ಹವ್ಯಾಸಗಳಿಂದ ದೂರವಿರಿಸುವ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಇಂತಹ ಬೇಸಿಗೆ ಶಿಬಿರಗಳು ಮಕ್ಕಳು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಹಕಾರಿ ಎಂದು ಮಾಜಿ ಸಚಿವ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದರು. ಇವರು ಕೋಟೇಶ್ವರ ಯಡಾಡಿ ಮತ್ಯಾಡಿ ಸುಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಆಯೋಜಿಸಿದ ಬೇಸಿಗೆ ಶಿಬಿರ ‘ಮಂಥನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಚಲನಚಿತ್ರ ನಟಿ ಸಂಗೀತ ಶೃಂಗೇರಿ ಮಾತನಾಡುತ್ತಾ, ನಾವೆಲ್ಲರೂ ದ್ವೇಷವನ್ನು ಬಿಟ್ಟು ಮನುಷ್ಯತ್ವಕ್ಕೆ…
“ಧರ್ಮ ದೈವ” ತುಳು ಚಿತ್ರದ ನಿರ್ದೇಶಕರ ಎರಡನೇ ಚಿತ್ರ “ಧರ್ಮ ಚಾವಡಿ” ತುಳು ಚಿತ್ರದ ಟೀಸರ್ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿದ್ದು, ಸಿನಿಮಾ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಸಾಕಷ್ಟು ಜನರು ಇದು ಧರ್ಮ ದೈವದ ಮುಂದುವರೆದ ಭಾಗ ಎಂದು ಭಾವಿಸಿದ್ದರು. ಆದರೆ ಟೀಸರ್ ಬೇರೆಯೇ ರೀತಿಯಲ್ಲಿದ್ದು ಬಹಳಷ್ಟು ಕುತೂಹಲವನ್ನು ಹುಟ್ಟಿ ಹಾಕಿದೆ. ಎಂ.ರ್.ಟಿ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆ ಗೊಂಡಿದೆ. ಟೀಸರ್ ಬಿಡುಗಡೆ ಸಮಾರಂಭದಲ್ಲಿ ತುಳು ಸಿನಿಮಾ ರಂಗದ ಗಣ್ಯರು ಭಾಗವಹಿಸಿದ್ದರು. ಟೀಸರ್ ಬಗ್ಗೆ ಎಲ್ಲರೂ ಕುತೂಹಲ ವ್ಯಕ್ತಪಡಿಸಿದ್ದರು. ನಿರ್ದೇಶನ, ಛಾಯಾಗ್ರಹಣ, ಸಂಕಲನ ಹಾಗೂ ಹಿನ್ನೆಲೆ ಸಂಗೀತ, ಕಲರ್ ಗ್ರೇಡಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ ನಡೆದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ನಿರ್ಮಾಪಕ, ನಿರ್ದೇಶಕರಾದ ಪ್ರಕಾಶ್ ಪಾಂಡೇಶ್ವರ ಉದ್ಘಾಟನೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಟೀಸರ್ ಬಿಡುಗಡೆಯನ್ನು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಡೆಸಿಕೊಟ್ಟು ಧರ್ಮ ಚಾವಡಿ…
ಸುಜ್ಞಾನ ಎಜುಕೇಷನಲ್ ಟ್ರಸ್ಟ್ ನ ವತಿಯಿಂದ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾದ್ಯಮ ಶಾಲೆ ಮತ್ತು ಸುಜ್ಞಾನ ಪಿ.ಯು. ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರ ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಘುರಾಮ ದೇವಾಡಿಗ, ವಿದ್ಯಾರ್ಥಿಗಳು ಪ್ರಪಂಚ ಜ್ಞಾನವನ್ನು ಪಡೆಯಬೇಕು. ಆದರೆ ಅದಕ್ಕಿಂತ ಮೊದಲು ತಂದೆ ತಾಯಿ, ಅಜ್ಜ ಅಜ್ಜಿ ಹಾಗೂ ನಮ್ಮ ಸುತ್ತ ಮುತ್ತಲಿನ ಚರಿತ್ರೆಗಳ ಬಗ್ಗೆ, ಆಚಾರ- ವಿಚಾರಗಳ ಬಗ್ಗೆ ಅರಿವನ್ನು ಪಡೆಯಬೇಕು. ಬಾಲ್ಯದಲ್ಲಿಯೇ ಹೆಚ್ಚು ಕ್ರೀಯಾಶೀಲರಾಗಲು ಮತ್ತು ಖುಷಿ- ಖುಷಿಯಿಂದ ಬಾಲ್ಯವನ್ನು ಕಳೆಯಲು ಬೇಸಿಗೆ ಶಿಬಿರಗಳು ಉತ್ತಮ ಸಹಕಾರಿಯಾಗುತ್ತದೆ. ಈ ಬೇಸಿಗೆ ಶಿಬಿರ ಮಂಥನ ಕಾರ್ಯಕ್ರಮದಲ್ಲಿ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಿದ್ದು, ಮಕ್ಕಳಿಗೆ ತುಂಬಾ ಜ್ಙಾನವನ್ನು ಪಡೆಯಲು ಸಾದ್ಯವಾಗುತ್ತದೆ. ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಪಡೆದು ಭವ್ಯ ಭಾರತದ ಪ್ರಜೆಗಳಾಗಬೇಕು ಎಂದರು. ಪ್ರಥಮ ದರ್ಜೆ ಗುತ್ತಿಗೆದಾರ ಅರುಣ ಕುಮಾರ ಹೆಗ್ಡೆ ಮಾತನಾಡಿ, ಮಕ್ಕಳ…
ಅರಂತಬೆಟ್ಟು ಗುತ್ತು ಶ್ರೀ ನಾಗದೇವರು ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಇಲ್ಲಿ ಅರಂತಬೆಟ್ಟು ಗುತ್ತು ಮಾರ್ಲ ಮನೆತನದ ಗಡಿ ಸ್ವೀಕಾರ ಸಮಾರಂಭ ಮೇ 4 ರಂದು ಭಾನುವಾರ ಬೆಳಿಗ್ಗೆ 8.20 ಕ್ಕೆ ಅರಂತಬೆಟ್ಟು ಗುತ್ತುವಿನಲ್ಲಿ ನಡೆಯಲಿದೆ. ಸುರತ್ಕಲ್ ಮಧುಸೂದನ ಮಯ್ಯರವರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸುರತ್ಕಲ್ ಕೊಡಿಪಾಡಿ ಬಾಳಿಕೆ ಹಾಗೂ ಪಡ್ರೆ ಚಾವಡಿಯ ಗಡಿ ಪ್ರಧಾನರುಗಳ ಉಪಸ್ಥಿತಿಯಲ್ಲಿ ಹಾಗೂ ಗೌರವಾನ್ವಿತ ಎಲ್ಲಾ ಗಡಿ ಪ್ರಧಾನರ ಸಮ್ಮುಖದಲ್ಲಿ ಅರಂತಬೆಟ್ಟು ಗುತ್ತು ಮಾರ್ಲ ಮನೆತನದ ನಿಡ್ಡೋಡಿ ಮೈಂದಡಿ ಸದಾನಂದ ಶೆಟ್ಟಿಯವರಿಗೆ ಕಾಂತೇರಿ ಜುಮಾದಿಯ ಗಡಿ ಸ್ವೀಕಾರ ನಡೆಯಲಿದೆ. ಮೇ 4 ಭಾನುವಾರ ಬೆಳಿಗ್ಗೆ 8.20 ಕ್ಕೆ ಗಡಿ ಸ್ವೀಕಾರ, 10.30 ಕ್ಕೆ ಧರ್ಮರಸು ಉಳ್ಳಾಯ, ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ಭಂಡಾರ ಇಳಿಸುವುದು, ನಂತರ ಧರ್ಮರಸು ಉಳ್ಳಾಯ ದೈವಕ್ಕೆ ನೇಮ, ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6 ಕ್ಕೆ ಮೈಸಂದಾಯ ದೈವಕ್ಕೆ ನೇಮ, ರಾತ್ರಿ 8 ಕ್ಕೆ…
ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ವತಿಯಿಂದ ಎಂ.ಆರ್.ಜಿ ಗ್ರೂಪ್ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ, ಸಮಾಜ ಸೇವಕ ಡಾ| ಕೆ ಪ್ರಕಾಶ್ ಶೆಟ್ಟಿ ಬಂಜಾರ ಅವರನ್ನು ಸನ್ಮಾನಿಸಲಾಯಿತು. ಎಪ್ರಿಲ್ 14ರಂದು ನಡೆದ ಬಿಸು ಪರ್ಬ ಸಮಾರಂಭದಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ ನೇತೃತ್ವದಲ್ಲಿ ಮಾತೃಭೂಮಿಯ ಬೆಳವಣಿಗೆಗೆ ಮತ್ತು ವ್ಯವಹಾರ ಅಭಿವೃದ್ಧಿಗೆ ಸಾರ್ವಕಾಲಿಕ ಬೆಂಬಲ ನೀಡಿದಕ್ಕಾಗಿ ಪ್ರಕಾಶ್ ಶೆಟ್ಟಿ ಅವರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭ ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಮತ್ತು ಮಾತೃಭೂಮಿ ಸೊಸೈಟಿಯ ನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ, ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾತೃಭೂಮಿ ಸೊಸೈಟಿ ನಿರ್ದೇಶಕ ಮತ್ತು ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಮಾತೃಭೂಮಿ ಸೊಸೈಟಿ ಉಪ ಕಾರ್ಯಾಧ್ಯಕ್ಷ ಹಾಗೂ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್…















