೨೦೨೪-೨೫ರ ಸಾಲಿನಲ್ಲಿ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ತೆರ್ಗಡೆ ಹೊಂದಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಹೆಮ್ಮೆಯ ಸಂಸ್ಥೆಯಾಗಿದೆ. ಅಷ್ಟೇ ಅಲ್ಲದೇ ೨೦೨೫ರ ಸಾಲಿನ ಸಿಎಸ್ ಪರೀಕ್ಷೆಯಲ್ಲಿಯೂ ನಿರೀಕ್ಷೆಗೂ ಮೀರಿ ತೇರ್ಗಡೆಯ ಫಲಿತಾಂಶ ಪಡೆದು, ಇಡೀ ಉಡುಪಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂಕ ಪಡೆದಿದ್ದು ನಮ್ಮ ಎಕ್ಸಲೆಂಟ್ ಸಂಸ್ಥೆ ಆಗಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಎಲ್ಲಾ ಅತ್ಯುತ್ತಮ ಸಾಧನೆ ಮಾಡಲು ಸಿಎ, ಸಿಎಸ್ & ಸಿಎಮ್ಎ ಫೌಂಡೇಶನ್ ತರಗತಿಗಳನ್ನು ವಿದ್ಯಾರ್ಥಿಗಳಿಗೆ ಸತತವಾಗಿ ತರಬೇತಿಯನ್ನು ನೀಡುತ್ತಾ ಬಂದಿರುವುದರಿ0ದ ಸಾಧ್ಯವಾಗಿದೆ.
ದಿನಾಂಕ: ೩೦-೬-೨೦೨೫ರಂದು ಎಕ್ಸಲೆಂಟ್ ಸಂಸ್ಥೆಯ ಆವರಣದಲ್ಲಿ ಸಿಎ, ಸಿಎಸ್ & ಸಿಎಮ್ಎ ಫೌಂಡೇಶನ್ ತರಗತಿಯ ಉದ್ಘಾಟನೆಯನ್ನು ಪ್ರಖ್ಯಾತ ತರಬೇತುದಾರರಾದ ನಾಗೇಂದ್ರ ಭಕ್ತ ಅವರ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಲಾಯಿತು.

ಈ ಸುಸಂದರ್ಭ ವಿದ್ಯಾರ್ಥಿಗಳ ಕುರಿತು ಮಾತನಾಡಿದ ಶ್ರೀಯುತರು, ವಿದ್ಯಾರ್ಥಿಗಳ ಕಲಿಕೆಯ ತವಕ ಮತ್ತು ಸಂಸ್ಕಾರದ ಬಗ್ಗೆ ತಿಳಿಸಿ, ಸಿಎ, ಸಿಎಸ್, ಸಿಎಮ್ಎ ಫೌಂಡೇಶನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಮಗ್ರವಾಗಿ ನೀಡಿದರು. ಈ ಸಂದರ್ಭ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ ಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ಗುರಿ ಇರಬೇಕು. ಆ ಗುರಿ ಇದ್ದರೆ ಮಾತ್ರ ತಾವು ಇಚ್ಛಿಸಿದ ಹಂತ ತಲುಪಲು ಸಾಧ್ಯ ಎಂದು ಜೀವನದ ಉತ್ತಮ ಸಂಸ್ಕಾರದ ಬಗ್ಗೆ ತಿಳಿಸಿದರು. ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿಯವರು ಮಾತನಾಡಿ ಸಿಎ, ಸಿಎಸ್ ಹಾಗೂ ಸಿಎಮ್ಎ ಎನ್ನುವ ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತರಗತಿಯಲ್ಲಿ ಹೇಗೆ ಶಿಸ್ತು, ಸಂಯಮವನ್ನು ಪಾಲಿಸಿಕೊಳ್ಳಬೇಕು ಎಂದು ಮನವರಿಕೆ ಮಾಡಿಸಿದರು. ಆ ಸಂದರ್ಭ ಎಕ್ಸಲೆಂಟ್ ಹೈಸ್ಕೂಲಿನ ಮುಖೋಪಾಧ್ಯಾಯಿನಿ ಸರೋಜಿನಿ ಪಿ ಆಚಾರ್ಯರವರು ಅತಿಥಿಗಳನ್ನು ಸ್ವಾಗತಿಸಿದರು. ಎಕ್ಸಲೆಂಟ್ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಪ್ರಣೀತ್ ಹಾಗೂ ಸುವಿತ್ ಕಾರ್ಯಕ್ರಮವನ್ನು ನಿರೂಪಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಚಿನ್ಮಯಿ ವಂದಿಸಿದರು.