Author: admin
ಮುಂಬಯಿ ಮಹಾನಗರದ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ವತಿಯಿಂದ ವಾಸಕ್ಕಾಗಿ ರಸ್ತೆ ಮತ್ತು ಬೀದಿ ಬದಿಯ ಫುಟ್ಪಾತ್ ಗಳನ್ನು ಆಶ್ರಯಿಸಿರುವ ನಿರಾಶ್ರಿತರಿಗೆ ಕಂಬಳಿ ವಿತರಿಸುವ ಮೂಲಕ 2025 ರ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಲಾಯಿತು. ಬೈಕಲಾ, ಲಾಲ್ ಭಾಗ್, ಕಾಲಾ ಚೌಕಿ, ಪರೇಲ್, ಮಜ್ಗಾಂವ್, ನವಿಮುಂಬಯಿಯ ಕೆಲವು ಪ್ರದೇಶಗಳಲ್ಲಿ ಶಿವಾಯ ಫೌಂಡೇಶನ್ ಸ್ವಯಂ ಸೇವಕರು ರಾತ್ರಿ ಸುತ್ತಾಡಿ ಅರ್ಹ ನಿರಾಶ್ರಿತರಿಗೆ ಕಂಬಳಿಗಳನ್ನು ವಿತರಿಸಿದರು. ಮುಂಬಯಿ ಪರಿಸರದ ಸೇವಾ ಚಟುವಟಿಕೆಗಳಲ್ಲಿ ಮಧುಸೂದನ್ ಶೆಟ್ಟಿ ಹಿರಿಯಡ್ಕ, ಪ್ರಶಾಂತ್ ಶೆಟ್ಟಿ ಪಲಿಮಾರು, ಡಾ. ಸ್ವರ್ಣಲತಾ ಶೆಟ್ಟಿ, ಪ್ರಶಾಂತ್ ಶೆಟ್ಟಿ ಪಂಜ, ಪ್ರಶಾಂತ್ ಎ ಶೆಟ್ಟಿ ಬೈಕಲಾ, ರಾಜೇಶ್ ಶೆಟ್ಟಿ ಕಟಪಾಡಿ ಉಪಸ್ಥಿತರಿದ್ದರು. ನವಿ ಮುಂಬಯಿ ಪರಿಸರದ ಸೇವಾ ಚಟುವಟಿಕೆಗಳಲ್ಲಿ ಹರೀಶ್ ಕೋಟ್ಯಾನ್ ಪಡು ಇನ್ನ, ಕೆ. ವಾಸುದೇವ ಶೆಟ್ಟಿ ಕಟಪಾಡಿ, ಸಂಗೀತಾ ಶೆಟ್ಟಿ, ಪ್ರಭಾವತಿ ಶೆಟ್ಟಿ ಭಾಗವಹಿಸಿದ್ದರು.
ನಮ್ಮ ನಾಡ ಮಡಿಲಲ್ಲಿ ಅದೆಷ್ಟೋ ಸುಂದರ, ವಿಸ್ಮಯ ಹಾಗೂ ವಿಶಿಷ್ಟ, ಬೆರಗು ಮೂಡಿಸುವ ಅಚ್ಚರಿಯ ತಾಣಗಳಿವೆ. ಈ ಅದ್ಭುತ ಆಗರಗಳ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟ ಗ್ರಾಮದ ಶ್ರೀ ಅಮೃತೇಶ್ವರಿ, ಹಲವು ಮಕ್ಕಳ ತಾಯಿ ದೇವಸ್ಥಾನ. ಸೃಷ್ಟಿಯ ವಿಚಿತ್ರಗಳೆಲ್ಲವೂ ಪರಮಾತ್ಮನ ಲೀಲಾ ಕಲ್ಪನೆಯ ಸಾಕಾರ ರೂಪಗಳಿದ್ದು, ಮಾನವನ ಬದುಕಿನ ಔನ್ನತ್ಯಕ್ಕೆ ಒಂದೊಂದು ಬಗೆಯಲ್ಲಿ ಕ್ರಿಯಾತ್ಮಕ ಪೋಷಣೆಗಳಾಗಿವೆ ಎಂಬಂತೆ ಇಂದಿಗೂ ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಲಿಂಗಾಕೃತಿಯ ಕಲ್ಲು ಮೂಡಿ ಬರುವುದು ಇಲ್ಲಿನ ವಿಸ್ಮಯ. ಎಣಿಸಲಾರದಷ್ಟು ಲಿಂಗ ರೂಪದ ಮಕ್ಕಳಿಗೆ ಜನ್ಮ ನೀಡಿದ, ನೀಡುತ್ತಿರುವ ಚಿರಯೌವನ ಮಹಾತಾಯಿ ಅಮೃತೇಶ್ವರಿ. ಇದಕ್ಕೆ ಸಾಕ್ಷಿಯಾಗಿ ದೇವಸ್ಥಾನದ ಸುತ್ತಾ ಮೂಡಿಬಂದ ಲಿಂಗ ರೂಪದ ಕಲ್ಲು ಗೋಚರಿಸುತ್ತದೆ. ಯೂನಿಯನ್ ಆಫ್ ಸಾಯಿಲ್ಸೈನ್ಸ್ ಸಂಸ್ಥೆಯೊಂದು ಇಲ್ಲಿನ ಮಣ್ಣಿನ ಪರೀಕ್ಷೆ ನಡೆಸಿ ಇಲ್ಲಿ ನಿರಂತರವಾಗಿ ಲಿಂಗರೂಪದ ಕಲ್ಲು ಮೂಡಿ ಬರುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ.ಐತಿಹಾಸಿಕವಾಗಿ ಮಹತ್ವ ಹೊಂದಿರುವ ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರದಲ್ಲಿ ಜನವರಿ ಹತ್ತರಂದು ಗೆಂಡ ಸೇವೆ…
ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದಿರುವ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ ಯು.ವೆಂಕಟ್ರಾಜ ರಾವ್, ಅಶೋಕ ಪಕ್ಕಳ, ಅನಿತಾ ತಾಕೋಡೆ ಅವರ ಕೃತಿಗಳು ಆಯ್ಕೆಯಾಗಿವೆ. ಅದೇ ರೀತಿ ಡಾ. ವಿಶ್ವನಾಥ ಕಾರ್ನಾಡ್ ವಾರ್ಷಿಕ ಸಾಹಿತ್ಯ ಪುರಸ್ಕಾರಕ್ಕೆ ಹಿರಿಯ ಬರಹಗಾರರು, ನಿವೃತ್ತ ಪ್ರಾಂಶುಪಾಲರಾದ ಡಾ.ಉಮಾ ರಾಮರಾವ್ ಅವರು ಆಯ್ಕೆಯಾಗಿರುತ್ತಾರೆ. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಜಿ.ಎನ್.ಉಪಾಧ್ಯ, ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ವಿಶ್ವನಾಥ ಕಾರ್ನಾಡ್, ಕೋಶಾಧಿಕಾರಿ ಶರತ್ ಕಾರ್ನಾಡ್ ಅವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.ಹಿರಿಯ ಸಾಹಿತಿ ಯು. ವೆಂಕಟ್ರಾಜ್ ಅವರ ‘ಪಟೇಲರ ಹುಲಿ ಬೇಟೆ’ (ಕಥಾ ಸಂಕಲನ), ಅಂಕಣಕಾರ ಅಶೋಕ ಪಕ್ಕಳ ಅವರ ‘ಶತಾಮೃತಧಾರೆ’ (ಅಂಕಣ ಬರಹಗಳ ಸಂಗ್ರಹ) ಹಾಗೂ ಅನಿತಾ ತಾಕೋಡೆ ಅವರ ‘ಸುವರ್ಣಯುಗ’ ಜಯ ಸುವರ್ಣ ಯಶೋಗಾಥೆ ಕೃತಿಗಳು ಈ ಬಾರಿಯ ಬಹುಮಾನಕ್ಕೆ ಆಯ್ಕೆಯಾಗಿವೆ ಎಂಬುದಾಗಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಪೂರ್ಣಿಮಾ.ಎಸ್.ಶೆಟ್ಟಿ ಅವರು…
ಪುಣೆ ಬಂಟರ ಸಂಘದ ವತಿಯಿಂದ ಜರಗಿದ ಅಂತರಾಷ್ಟ್ರೀಯ ಬಂಟರ ಕ್ರೀಡಾಕೂಟದಲ್ಲಿ ಗುರುಪುರ ಬಂಟರ ಮಾತೃ ಸಂಘವು ತ್ರೋಬಾಲ್ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದು ಕೆ.ಎಸ್.ಎಚ್ ಟ್ರೋಫಿ ಹಾಗು ನಗದನ್ನು ತನ್ನದಾಗಿಸಿಕೊಂಡಿದೆ. ಈ ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ಮಟ್ಟದ 14 ಬಂಟರ ಸಂಘಗಳ ತ್ರೋಬಾಲ್ ತಂಡಗಳು ಸ್ಪರ್ಧಿಸಿದ್ದವು. ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕ್ರೀಡಾಕೂಟದಲ್ಲಿ ಪುಣೆ ಮಹಾನಗರದ ಬಂಟ ಸಮಾಜದ ಹಿರಿಯರಾದ ಕುಶಾಲ್ ಹೆಗ್ಡೆ, ಕ್ರೀಡಾಕೂಟದ ಸಂಚಾಲಕ ಚಂದ್ರಹಾಸ ಶೆಟ್ಟಿ ಎರ್ಮಾಳು, ಮಹಿಳಾ ವಿಭಾಗದ ಅಧ್ಯಕ್ಷೆ ಸುಲತಾ ಶೆಟ್ಟಿ, ಸುನೀಲ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಚರಿತ ಶೆಟ್ಟಿ, ಮುಂಬಯಿ ಬಂಟರ ಸಂಘದ ಕ್ರೀಡಾ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪುಣೆ…
ಎಲ್ಲವನ್ನೂ ವಿವರಿಸಲಾಗದಷ್ಟು ನಿಗೂಢ ರಹಸ್ಯದ ಭಿನ್ನ ವೈವಿಧ್ಯತೆಗಳನ್ನು ಹೊಂದಿರುವ ಕಾರಣೀಕ ಧಾರ್ಮಿಕ ಕ್ಷೇತ್ರ ಶ್ರೀ ಮುದುಸ್ವಾಮಿ ದೇವಸ್ಥಾನ. ನ್ಯೆಸರ್ಗಿಕವಾದ ಸಹಜ ಹುತ್ತಕ್ಕೆ ಪೂಜಾವಿಧಿಗಳನ್ನು ನಡೆಸುವವರು ಬಂಟ ಅರ್ಚಕರು ಎನ್ನುವುದು ವಿಶೇಷ. ಎರಡು ವರ್ಷಗಳಿಗೊಮ್ಮೆ ಜನವರಿ 2 ರಿಂದ ಮಕರ ಸಂಕ್ರಾಂತಿಯ ತನಕ ಹನ್ನೆರಡು ರಾತ್ರಿ ನಡೆಯುವ ಕೋಲವನ್ನು ಪಾಣರಾಟ ಎಂದು ಕರೆಯುವುದು ಇಲ್ಲಿನ ರೂಢಿ. ಸಂಪ್ರದಾಯಬದ್ಧ ಶಿಷ್ಟಾಚಾರದೊಂದಿಗೆ ಹಿರಿಯರಿಂದ ನಡೆದು ಬಂದ ಕಟ್ಟು ಪಾಡಿನಂತೆ ಪಾಣಾರು, ಅರ್ಚಕರು, ಗ್ರಾಮಸ್ಥರು ಹಾಗೂ ದೇವಳದ ಸ್ಥಳ ಮನೆಯವರು ಭಕ್ತಿ ಭರಿತ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ.ಪಾಡ್ದನ : ಪಾಣರಾಟ ಪ್ರಾರಂಭಕ್ಕೆ ಮೊದಲು ಪಾಣಾರು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಮುದ್ದುಸ್ವಾಮಿ ದೇವಳದ ಎದುರು ಸಾಲಾಗಿ ನಿಂತು ಹಿರಿಯರಿಂದ ಕಲಿತ ಪಾಡ್ದನದ ಕಥಾ ಹಂದರವನ್ನು ಸನ್ನಿವೇಶದ ವರ್ಣನೆಯೊಂದಿಗೆ ನಿಯತವಾದ ಲಯ, ವಿಶಿಷ್ಟವಾದ ದಾಟಿಯಲ್ಲಿ, ಭಕ್ತಿಪೂರ್ವಕವಾಗಿ ಅರ್ಥಗರ್ಭಿತವಾಗಿ ಆಯಾ ದಿನ ಸೇವೆ ನಡೆಯುವ ದೇವರನ್ನು ಹಾಡಿ ಹೊಗಳುವ ಕ್ಷೇತ್ರ ಪರಿಚಯ ಪಾಡ್ದನದಲ್ಲಿ ಹಾಡುತ್ತಾರೆ. ಅಣಿ ಸೇವೆ : ಅಪರೂಪದಲ್ಲಿ…
ಬಳ್ಳಾರಿಯ ರೇಣುಕಾ ಬೇಕರಿ ಮಾಲೀಕ ವಸಂತ ಶೆಟ್ಟಿಯವರ ಸುಪುತ್ರಿ ಸ್ವಾತಿ ಪ್ರಶಾಂತ್ ಶೆಟ್ಟಿಯವರ ಸೀಮಂತ ಸಮಾರಂಭಕ್ಕೆ ಗಣ್ಯರ ಶುಭ ಹಾರೈಕೆ
ಬಳ್ಳಾರಿಯ ರೇಣುಕಾ ಬೇಕರಿ ಮಾಲೀಕರಾದ ಶ್ರೀಮತಿ ಸುಮಿತ್ರ ವಸಂತ ಶೆಟ್ಟಿಯವರ ಸುಪುತ್ರಿ ಶ್ರೀಮತಿ ಸ್ವಾತಿ ಪ್ರಶಾಂತ್ ಶೆಟ್ಟಿಯವರ ಸೀಮಂತ ಸಮಾರಂಭಕ್ಕೆ ಬಳ್ಳಾರಿಯ ಹೋಟೆಲ್, ಬೇಕರಿ ಉದ್ಯಮಿಗಳಾದ ಪಿ. ಸತೀಶ್ ಶೆಟ್ಟಿ ಗುರ್ಮೆ, ಎಸ್ ವಿಶ್ವನಾಥ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಸಂದೇಶ್ ಶೆಟ್ಟಿ ಹಾಗೂ ಹೋಟೆಲ್ ಉಡುಪಿ ಪಾರ್ಕ್ ನ ಮಾಲಕರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಮರ್ಲು ಚಿಕ್ಕು ದೇವಸ್ಥಾನ ಹಾಲಾಡಿ ಇದರ ಆಡಳಿತ ಮೊಕ್ತೇಸರರಾದ ಶ್ರೀಯುತ ಅಮರನಾಥ ಶೆಟ್ಟಿಯವರು ಹಿತೈಷಿಗಳೊಂದಿಗೆ ಆಗಮಿಸಿ ಶುಭ ಹಾರೈಸಿದರು.
ಮೂಡುಬಿದಿರೆ: ವಿದ್ಯಾರ್ಥಿಗಳು ಪಠ್ಯದಷ್ಟೇ ಆಸಕ್ತಿ ಪಠ್ಯೇತರ ಚಟುವಟಿಕೆಯಲ್ಲಿ ವಹಿಸಬೇಕು. ಅದರಲ್ಲೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮಾತ್ರವಲ್ಲದೆ ಅವರ ಮಾನಸಿಕ ವಿಕಸನಕ್ಕೂ ಪೂರಕವಾಗಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸ್ಕೌಟ್ಸ್ ಮತ್ತು ಗೈಡ್ನ ದ.ಕ.ಜಿಲ್ಲಾ ಮುಖ್ಯ ಆಯುಕ್ತ ಡಾ. ಎಂ. ಮೋಹನ್ ಆಳ್ವ ನುಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳಿಗಾಗಿ ಸ್ವರಾಜ್ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರೀಡೋತ್ಸವ-2024ನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಸೌಹಾರ್ದ, ಸಾಮರಸ್ಯದ ಬದುಕನ್ನು ಕಲಿಸುವುದರ ಜೊತೆಗೆ ಹೋರಾಟ ಮನೋಭಾವವನ್ನು ಮೈಗೂಡಿಸಿಕೊಳ್ಳಲು ಸಹಕರಿಸುತ್ತದೆ. ಇದೇ ಮೊದಲ ಬಾರಿಗೆ ಇಂತಹ ಕ್ರೀಡಾ ಕೂಟ ಆಯೋಜನೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಏರ್ಪಡಿಸುವ ಉದ್ದೇಶವಿದೆ ಎಂದು ಆಶಯ ವ್ಯಕ್ತಪಡಿಸಿದರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ಬಿ ಮೊಹಮ್ಮದ್ ತುಂಬೆ, ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್, ಜಿಲ್ಲಾ…
ಮೂಡುಬಿದಿರೆ: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ ಡಾ ಎಂ ವೀರಪ್ಪ ಮೊಯಿಲಿಯವರ ‘’ವಿಶ್ವಸಂಸ್ಕೃತಿ ಮಹಾಯಾನ’’ – ಸಂಪುಟ-2, ಗದ್ಯ ಮಹಾಕಾವ್ಯ ಬಿಡುಗಡೆ ಸಮಾರಂಭ ಜನವರಿ 12ರಂದು ಭಾನುವಾರ 11 ಗಂಟೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿ ಆವರಣದ ಡಾ ವಿಎಸ್ ಆಚಾರ್ಯ ಸಭಾಭವನದಲ್ಲಿ ಜರುಗಲಿದೆ. ಈ ಕಾರ್ಯಕಮ್ರವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಹಾಗೂ ಬೆಂಗಳೂರಿನ ಸಪ್ನ ಬುಕ್ ಹೌಸ್ನ ಸಹಯೋಗದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ವಹಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ವಿವಿಯ ನಿವೃತ್ತ ಆಂಗ್ಲ ಪ್ರಾಧ್ಯಪಕ ಹಾಗೂ ಖ್ಯಾತ ವಿಮರ್ಶಕ ಪ್ರೋ.ಸಿ. ನಾಗಣ್ಣ ಗ್ರಂಥವನ್ನು ಬಿಡುಗಡೆಗೊಳಿಸಲಿದ್ದಾರೆ. ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿಗಳಾದ ಡಾ ಬಿ.ಎಂ ವಿವೇಕ…
ರಾಷ್ಟ್ರೀಯ ಸ್ವಯಂಸೇವಕ ಸಂಘ, ಧಾರ್ಮಿಕ ಕ್ಷೇತ್ರ, ಭಾರತೀಯ ಜನತಾಪಕ್ಷ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾರ್ವಜನಿಕ ಬದುಕಿಗೆ ಕಾಲಿಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಸದಾ ಕ್ರಿಯಾಶೀಲ, ಸಂಘಟನಾ ಚತುರ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಹೆಸರು ಬಿಜೆಪಿ ವಲಯದಲ್ಲಿ ಸದಾ ಚಾಲ್ತಿಯಲ್ಲಿದೆ. ಧರ್ಮ ಜಾಗರಣಾ, ಆರ್.ಎಸ್.ಎಸ್, ಭಾಜಾಪದ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ಹೊತ್ತ ಸಂದರ್ಭದಲ್ಲೇ ನಳಿನ್ ಕುಮಾರ್ ಕಟೀಲ್ ಹೆಸರು ಜಿಲ್ಲೆಯ ಮೂಲೆ ಮೂಲೆಯ ತಳಮಟ್ಟದ ಕಾರ್ಯಕರ್ತರಿಗೆ ಬಹಳ ಹತ್ತಿರದ ನಂಟು ಹೊಂದಿತ್ತು. ಜಿಲ್ಲೆಯಲ್ಲಿ ಸುಮಾರು ಎರಡುವರೆ ದಶಕಗಳ ಹಿಂದೆ ತಲೆಯೆತ್ತಿದ ಪರಿಸರದ ಮಾರಕ ಅವೈಜ್ಞಾನಿಕ ಯೋಜನೆಗಳ ವಿರುದ್ಧ ಸಂಘಟಿತ ಹೋರಾಟ, ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ನೂರಾರು ಬ್ರಹ್ಮಕಲಶೋತ್ಸವದ ಅಧ್ಯಕ್ಷ ಗೌರವಾಧ್ಯಕ್ಷರಾಗಿ ಮಾದರಿ ಬ್ರಹ್ಮಕಲಶೋತ್ಸವನ್ನು ಹಾಗೂ ಸಂಘಟನಾ ಚಾತುರ್ಯತೆಯನ್ನು ಜಿಲ್ಲೆಗೆ ಪಸರಿಸಿ ಮಾದರಿ ಬ್ರಹ್ಮಕಲಶೋತ್ಸವದ ರೂವಾರಿಯಾಗಿ, ಎತ್ತಿನಹೊಳೆ ಯೋಜನೆಯ ವಿರುದ್ಧದ ಹೋರಾಟ ಸಂಘಟನೆಯ ಪ್ರಚಾರಕರಾಗಿ ಸಂಘಟನಾತ್ಮಕ ಹಿನ್ನೆಲೆಯಲ್ಲಿ ಪಕ್ಷದ…
ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಹಿರ್ಗಾನದ ಸಿರಿಯಣ್ಣ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉದ್ಯಮಿ, ಪ್ರಗತಿಪರ ಕೃಷಿಕರಾಗಿರುವ ಸಿರಿಯಣ್ಣ ಶೆಟ್ಟಿಯವರು ಕಳೆದ ಸಾಲಿನಲ್ಲೂ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಆ ಮೊದಲು ಸಂಘದ ನಿರ್ದೇಶಕರಾಗಿ, ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜನವರಿ 8ರಂದು ಸಂಘದ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಚುನಾವಣಾ ಅಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಜಯಂತಿ ಎಸ್. ಕಾರ್ಯ ನಿರ್ವಹಿಸಿದರು. ಈ ಸಂದರ್ಭ ಉದ್ಯಮಿ ಚೇತನ್ ಶೆಟ್ಟಿ, ವಾಸು ಶೆಟ್ಟಿ, ಸಂಘದ ಮಾಜಿ ನಿರ್ದೇಶಕ ಎಂ. ರತ್ನಾಕರ ರಾವ್, ಸಂಘದ ನಿರ್ದೇಶಕರಾದ ಶಂಕರ ನಾಯಕ್, ಹರೀಶ್ ಶೆಟ್ಟಿ, ತಾರನಾಥ ಶೆಟ್ಟಿ, ಉಮೇಶ್ ನಾಯ್ಕ್, ಪ್ರಕಾಶ್ ಗೋಕುಲ್ ನಾಯ್ಕ್, ಕಲ್ಯಾಣಿ ಶೆಟ್ಟಿ, ರತ್ನಾವತಿ ಎನ್. ನಾಯಕ್, ಅನಿಲ್ ಪೂಜಾರಿ ಉಪಸ್ಥಿತರಿದ್ದರು. ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಜಯಂತ್ ಕುಮಾರ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ವಾಘಲೆ ಕಾರ್ಯಕ್ರಮ ನಿರ್ವಹಿಸಿದರು.