Author: admin
ಸುಳ್ಯ ಬಂಟರ ಸಂಘದ ಮಹಿಳಾ ವಿಭಾಗದ ಆಶ್ರಯದಲ್ಲಿ ಮಾ.20 ರಂದು ವಿಶ್ವ ಮಹಿಳಾ ದಿನಾಚರಣೆ ಮತ್ತು ಮಹಿಳೆಯರಿಗೆ ಯೆನಪೋಯ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಸ್ಥನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್ ಪತ್ತೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ಆರ್. ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗುಣವತಿ ಕೊಲ್ಲಂತಡ್ಕ, ಸವಿತಾ ಗಿರೀಶ್, ರೂಪಶ್ರೀ ಜೆ ರೈ, ನಿವೃತ್ತ ಶಿಕ್ಷಕಿ ಕಮಲಾಕ್ಷಿ ಶೆಟ್ಟಿ, ಶ್ರದ್ಧಾ ಎಲ್ ರೈ, ಉಷಾ ಬಿ ರೈ ಪಾಜೆಪಲ್ಲ ಹಾಗೂ ಯೆನಪೋಯ ಮಹಿಳಾ ಕ್ಲಿನಿಕ್ ನ ವೈದ್ಯಾಧಿಕಾರಿ, ಶ್ರೀಮತಿ ಶಶಿಕಲಾ ಹರಿಪ್ರಸಾದ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸುಳ್ಯ ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ, ಮತ್ತಿತರ ನಿರ್ದೇಶಕರು, ಸದಸ್ಯರು ಭಾಗವಹಿಸಿದ್ದರು. ವೇದಾ ಶೆಟ್ಟಿ ಸ್ವಾಗತಿಸಿ ಉಷಾ ಶೆಟ್ಟಿ ಮತ್ತು ಮೀರಾ ಎಂ ರೈ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ತಾಲೂಕಿನ…
ಮಹಿಳೆಯು ಮನೆ ಕೆಲಸದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿದಾಗ ಎಲ್ಲವನ್ನೂ ಎದುರಿಸುವ ಶಕ್ತಿವಂತಳಾಗುತ್ತಾಳೆ : ವಿನೋದ ಡಿ ಶೆಟ್ಟಿ.
ಕಾಂದಿವಲಿ ಪಶ್ಚಿಮದಲ್ಲಿ ಬಹಳಷ್ಟು ವರ್ಷಗಳಿಂದ ಈ ಭಾಗದಲ್ಲಿ ವಾಸ್ತವ್ಯವಿರುವ ಎಲ್ಲಾ ತುಳು ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ ಸದಾ ಕ್ರಿಯಾಶೀಲವಾಗಿದ್ದುಕೊಂಡ ಕಾಂದಿವಲಿ ಕನ್ನಡ ಸಂಘ (ರಿ), ದಹಾನುಕರ್ ವಾಡಿ, ತನ್ನ ಸ್ವಂತ ಕಛೇರಿಯನ್ನು ಹೊಂದಿದ್ದು , ಬಹಳಷ್ಟು ಸದಸ್ಯ ಸಂಪತ್ತಿನೊಂದಿಗೆ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ತುಳು ಕನ್ನಡಿಗರ ಸೇವೆಯನ್ನು ಗೈಯುತ್ತಾ ಬಂದಿರುತ್ತದೆ. ಈ ಸಂಸ್ಥೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರಗಿದ್ದು, ನಿಕಟಪೂರ್ವ ಅಧ್ಯಕ್ಷರಾದ ಪೊಲ್ಯ ಜಯಪಾಲ ಶೆಟ್ಟಿಯವರು ಅಧ್ಯಕ್ಷರಾಗಿ ಪುನರಾಯ್ಕೆಗೊಂಡರೆ, ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದು ಅಪಾರ ಅನುಭವವನ್ನು ಹೊಂದಿದ, ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ವಿನೋದ ದೇವದಾಸ್ ಶೆಟ್ಟಿಯವರು ಆಯ್ಕೆಗೊಂಡರು. ವಿನೋದ ಶೆಟ್ಟಿಯವರು ಪುನರಾಯ್ಕೆಗೊಂಡ ಬಳಿಕದ ಪ್ರಪ್ರಥಮ ಕಾರ್ಯಕ್ರಮವಾಗಿ ಇತ್ತೀಚೆಗೆ, ವಸಾಯಿಯಲ್ಲಿರುವ ಶ್ರದ್ಧಾನಂದ ಮಹಿಳಾ ಆಶ್ರಮ (ವಸಾಯಿ ವೃದ್ಧಾಶ್ರಮ)ಕ್ಕೆ ಭೇಟಿ ನೀಡಿ, ಒಂದು ದಿನವನ್ನು ಆಶ್ರಮ ವಾಸಿಗಳ ಜತೆ ಕಳೆದರು. ಆಶ್ರಮದ ಆ ದಿನದ…
ವಿದ್ಯಾಗಿರಿ: ‘ಉದ್ಯೋಗದಲ್ಲಿ ಯಶಸ್ವಿಯಾಗಲು ಕೇವಲ ಕೌಶಲ ಮತ್ತು ತಾಂತ್ರಿಕತೆ ಮಾತ್ರವಲ್ಲ, ಮೌಲ್ಯ ಅತಿ ಮುಖ್ಯ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. ಡೆಲಾಯಿಟ್ ಕಂಪೆನಿಯಲ್ಲಿ ಅತ್ಯುತ್ತಮ ವೇತನದ ಉದ್ಯೋಗಕ್ಕೆ ಆಯ್ಕೆಯಾದ ವಿಭಾಗದ ವಿದ್ಯಾರ್ಥಿನಿ ಸುಚಿತಾ ಎಂ. ಅವರಿಗೆ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಮಂಗಳವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪೋಷಕರು ಮಕ್ಕಳ ಪದವಿಪೂರ್ವ ಶಿಕ್ಷಣದವರೆಗೆ ತೀವ್ರ ಅಸ್ಥೆ ವಹಿಸುತ್ತಾರೆ. ಆದರೆ, ವಿದ್ಯಾರ್ಥಿಗಳ ಪದವಿ ಹಾಗೂ ಉನ್ನತ ಶಿಕ್ಷಣದ ಬಗ್ಗೆ ಒತ್ತು ನೀಡುವುದು ಅಗತ್ಯವಾಗಿದೆ ಎಂದರು. ನಾವು ಶಿಕ್ಷಣ ಪಡೆಯುವುದು ಯಾಕೆ? ಎಂಬ ಸ್ಪಷ್ಟತೆ ಇದ್ದರೆ, ವಿದ್ಯಾರ್ಥಿಗಳು ಯಶಸ್ಸು ಕಾಣಲು ಸಾಧ್ಯ. ಕೇವಲ ಯಶಸ್ಸು ಕಾಣುವುದು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಏನನ್ನು ಕೊಡುಗೆ ನೀಡುತ್ತೇವೆ ಎಂಬುದು ಕೂಡ ಮುಖ್ಯ ಎಂದರು . ಉದ್ಯೋಗ ಮಾಡಲು ಅರ್ಹತೆ ಇದೆ ಎಂಬುದನ್ನು ಎದುರಿನ ವ್ಯಕ್ತಿಗಳಿಗೆ ಸಾಬೀತುಪಡಿಸುವುದಕ್ಕಿಂತ ತನ್ನೊಳಗೆ ಆತ್ಮವಿಶ್ವಾಸ ವೃದ್ಧಿಸುವುದು ಮುಖ್ಯ ಎಂದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ…
ಮೂಡುಬಿದಿರೆ: ಸುಸ್ಥಿರ ತಂತ್ರಜ್ಞಾನದಲ್ಲಿ ಮಹತ್ತರ ಸಾಧನೆ ಮಾಡಿದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ‘ಎ ಪ್ರೊಸೆಸ್ ಫಾರ್ ಫ್ಯಾಬ್ರಿಕೇಷನ್ ಆಫ್ ಪಿ(ವಿಡಿಎಫ್-ಟಿಆರ್ಎಫ್ಇ) ಪೈಸೊಲೆಕ್ಟ್ರಿಕ್ ಬೀಮ್ಸ್ ಆಂಡ್ ಕ್ಯಾಂಟಿಲೆವರ್ಸ್ ಯಾಸ್ ವೈಬ್ರೇಷನ್ ಸೆನ್ಸಾರ್ಸ್ ಆಂಡ್ ಎನರ್ಜಿ ಹಾರ್ವೆಸ್ಟರ್ಸ್’ ಗೆ ಪೇಟೆಂಟ್ ಸಂಖ್ಯೆ 525988 ಪಡೆದುಕೊಂಡಿದೆ. ಆ ಮೂಲಕ ಸುಸ್ಥಿರ ಇಂಧನ ಪರಿಹಾರ ಮತ್ತು ರಚನಾತ್ಮಕ ಉಸ್ತುವಾರಿ ತಂತ್ರಗಳಲ್ಲಿ ಮುಂದಡಿ ಇಟ್ಟಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಸಂಶೋಧನಾ ಡೀನ್ ಡಾ. ರಿಚರ್ಡ್ ಪಿಂಟೊ ಅವರ ನಾಯಕತ್ವದಲ್ಲಿ ಈ ಸಾಧನೆ ಮಾಡಿದೆ. ಈ ಸಾಧನೆಯು ಕೈಗಾರಿಕೆ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುವಲ್ಲಿ ಕ್ರಾಂತಿಕಾರಿಯಾಗಿದೆ. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಡಾ. ರಶ್ಮಿ ಕೆ.ಆರ್., ಡಾ. ಜಯರಾಮ ಎ., ಐಐಟಿ ಬಾಂಬೆಯ ಡಾ. ಸಿದ್ಧಾರ್ಥ ಪಿ. ದತ್ತಗುಪ್ತ ಮತ್ತು ಡಾ. ಗಣೇಶ್ ಪ್ರಭು(ಟಿಐಎಫ್ ಆರ್, ಮುಂಬೈ) ಸಹಯೋಗದಲ್ಲಿ ಡಾ. ರಿಚರ್ಡ್ ಪಿಂಟೋ ಅವರ ಸಹಕಾರದಲ್ಲಿ ಅಭಿವೃದ್ಧಿ ಹೊಂದಿದ ಪ್ರಮುಖ…
ಉದ್ಯೋಗ ಅರಸಿಕೊಂಡು ಇಲ್ಲವೇ ಇನ್ನಿತರ ಯಾವುದೇ ಕಾರಣದಿಂದ ಮುಂಬೈ ಮಹಾನಗರಕ್ಕೆ ಬಂದು ಏನನ್ನಾದರೂ ಸಾಧಿಸಿಬೇಕೆಂಬ ಛಲ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ಸಮಯ ಪ್ರಜ್ಞೆ, ವಿದ್ಯೆ,ವಿನಯ ಇದ್ದು ಬುದ್ಧಿವಂತಿಕೆಯಿಂದ ದುಡಿದವರನ್ನು ಮುಂಬೈಯ ಮಹಾಲಕ್ಷ್ಮೀ ಮಾತೆಯು ಉದ್ದರಿಸದೆ ಎಂದೂ ಕೈ ಬಿಡುವುದಿಲ್ಲ ಎಂಬುದಕ್ಕೆ ಹಲವಾರು ಮಂದಿ ಉನ್ನತ ಉದ್ಯೋಗಿಗಳಾಗಿ, ಹೋಟೆಲ್ ಮಾಲೀಕರಾಗಿ, ಕಂಪನಿಗಳ ನಿರ್ದೇಶಕರಾಗಿ ಮೆರೆಯುತ್ತಾ ತಮಗೆ ಸಾಧ್ಯವಾದಷ್ಟು ಸಮಾಜ ಸೇವೆ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂಬುದು ಸಂತೋಷದ ಸಂಗತಿ. ಇಂತಹ ಸಮಾಜ ಸೇವಕರಲ್ಲಿ ಸರಳ ಸಜ್ಜನಿಕೆಯ ರಮೇಶ್ ಶೆಟ್ಟಿ, ಸಿದ್ಧಕಟ್ಟೆ ಪ್ರಮುಖರು. ಇವರ ಕಿರು ಪರಿಚಯವನ್ನು ಸಮಾಜ ಬಾಂಧವರಾದ ಬಂಧುಗಳೊಂದಿಗೆ ಹಂಚಿಕೊಳ್ಳಲು ಸಂತೋಷ ಪಡುತ್ತೇನೆ. ಸಿದ್ಧಕಟ್ಟೆ ಉಗ್ರೋಡಿ ಮನೆ ದಿ. ಮಹಾಬಲ ಶೆಟ್ಟಿ ಮತ್ತು ಕಲ್ಲಬೆಟ್ಟು ಮನೆ ದಿ.ಸೇಸಿ ಶೆಟ್ಟಿ ದಂಪತಿಗಳ ಸುಪುತ್ರನಾಗಿ 1968 ಜೂನ್ 4 ರಂದು ಜನಿಸಿದ ರಮೇಶ್ ಶೆಟ್ಟಿಯವರು ಪ್ರಾಥಮಿಕ ಶಿಕ್ಷಣವನ್ನು ಆರಂಬೋಡಿ ಶಾಲೆಯಲ್ಲೂ ಹೈಸ್ಕೂಲ್ ಶಿಕ್ಷಣವನ್ನು ಸಿದ್ಧಕಟ್ಟೆಯ “ಸೈಂಟ್ ಪ್ಯಾಟ್ರಿಕ್ ಹೈಸ್ಕೂಲ್”ನಲ್ಲಿ ಪೂರೈಸಿದ ನಂತರ ಭವಿಷ್ಯವನ್ನು ಅರಸಿಕೊಂಡು ಮುಂಬೈ…
ಹಲವಾರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಸೇವೆಗೈದಿದ್ದರೂ ಇಲ್ಲಿನ ಮಂತ್ರಮೂರ್ತಿ ಗುಳಿಗನ ಸನ್ನಿಧಿಯ ವಿಶೇಷ ಶಕ್ತಿಯನ್ನು ಮನಸಾರೆ ಅನುಭವಿಸುತ್ತಿದ್ದೇನೆ. ಪ್ರಾರ್ಥನೆ ಮೂಲಕ ದೈವಿಕ ಶಕ್ತಿಯನ್ನು ಒಳಿಸಿಕೊಳ್ಳಲು ಸಾಧ್ಯ ಎಂಬುದು ಇಲ್ಲಿ ಸಾಕಾರಗೊಂಡಿದೆ ಎಂದು ಕೊಡುಗೈ ದಾನಿ, ಹೇರಂಭ ಇಂಡಸ್ಟ್ರೀಸ್ ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು. ಉಪ್ಲೇರಿ ವಾಂತಿಚ್ಚಾಲು ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿದಿಯಲ್ಲಿ ಜರುಗಿದ ವಿಶೇಷ ತಂಬಿಲ ಸೇವೆ ಮತ್ತು ನೂತನ ಟ್ರಸ್ಟ್ ನ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಜನರಿಗೆ ದೈವದ ಮೇಲೆ ಅಪಾರ ಭಕ್ತಿ ಇದೆ. ಮಂತ್ರ ಮೂರ್ತಿ ಗುಳಿಗ ಸನ್ನಿಧಿಯು ಪ್ರಸಿದ್ಧ ಕ್ಷೇತ್ರವಾಗಿ ಬೆಳಗಲಿ ಎಂದು ಹಾರೈಸಿದರು. ಉದ್ಯಮಿ ದಾನಿ ಗೋಪಾಲಕೃಷ್ಣ ಪೈ ಬರಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ತಾರಾನಾಥ ರೈ, ತುಳುವೆರ್ ಚಾವಡಿಯ ಮಧು ಕುಮಾರ್ ಬೆಂಗಳೂರು, ಕುಂಬ್ಡಾಜೆ…
ಕಳೆದ ಐದು ದಶಕಗಳಿಂದ ತೆಂಕುತಿಟ್ಟಿನ ಡೇರೆ ಹಾಗೂ ಬಯಲಾಟ ಮೇಳಗಳಲ್ಲಿ ಕಲಾ ಸೇವೆಗೈದಿರುವ, ಕಟೀಲು ಮೇಳದಲ್ಲಿ ಎರಡು ದಶಕಗಳಿಂದ ವೇಷಧಾರಿಯಾಗಿ ಹಾಗೂ ಪ್ರಬಂಧಕರಾಗಿ ದುಡಿಯುತ್ತಿರುವ ಖ್ಯಾತ ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ಅವರಿಗೆ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ ನೀಡಲಾಯಿತು. ಕದ್ರಿ ಕಂಬಳಗುತ್ತು ವಾಸವಿ ಬಾಲಕೃಷ್ಣ ಶೆಟ್ಟಿ ಮತ್ತು ಮಕ್ಕಳು ಸಂಯೋಜನೆ ಮಾಡಿದ್ದ ಶ್ರೀ ಕಟೀಲು ಮೇಳದ ಸೇವೆ ಆಟ ಸಂಧರ್ಭದಲ್ಲಿ ಕದ್ರಿ ಕಂಬಳ ಸಂಯೋಜಕರಾಗಿ, ಹವ್ಯಾಸಿ ತಾಳಮದ್ದಳೆ ಕಲಾವಿದರಾಗಿ, ಸಂಘ ಪರಿವಾರದ ಹಿರಿಯ ನಾಯಕನಾಗಿದ್ದ ಬಾಲಕೃಷ್ಣ ಶೆಟ್ಟಿ ಅವರ ನೆನಪಿನಲ್ಲಿ ಪ್ರಶಸ್ತಿ ನೀಡಲಾಯಿತು. ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣರು ಕದ್ರಿ ಕಂಬಳ ಗುತ್ತು ಪರಿವಾರದ ಕಲಾಪ್ರೀತಿಯನ್ನು ಶ್ಲಾಘಿಸಿದರು. ಹಿರಿಯ ವಿದ್ವಾಂಸ ಡಾ. ಎಮ್ ಪ್ರಭಾಕರ ಜೋಶಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ, ಡಾ. ಬಿ.ನಿಶಾಕಾಂತ್ ಶೆಟ್ಟಿ ಬೆಂಗಳೂರು, ಸುರೇಶ ಹೆಗ್ಡೆ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಿವರಾಮ್ ಶೆಟ್ಟಿ ಇಂದ್ರಾಳಿ, ಸಿದ್ಧಾರ್ಥ್ ಶೆಟ್ಟಿ, ಅರ್ಜುನ್ ಹೆಗ್ಡೆ, ಸಾಕೇತ್ ಶೆಟ್ಟಿ…
ಜಿಲ್ಲೆಯ ಕ್ರೀಡಾಪಟುಗಳಿಗೆ ಸಹಾಯ ಮತ್ತು ತರಬೇತಿ ನೀಡುವ ಮೂಲಕ ಅವರನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವುದು ನಮ್ಮ ಕರ್ತವ್ಯ. ರಾಜಕೀಯ ರಹಿತವಾಗಿ ಕ್ರೀಡೆ ಮೇಲೆ ಅಭಿಯಾನ ಇಟ್ಟುಕೊಂಡು ಮುಂದೆ ಸಾಗಬೇಕು ಎಂದು ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಪೂರ್ವಾಧ್ಯಕ್ಷ ಅಶೋಕ್ ಅಡ್ಯಂತಾಯ ಹೇಳಿದರು. ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಬೆಳ್ಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, 1999 ರಲ್ಲಿ ಆರಂಭವಾದ ಸಂಸ್ಥೆ ಇಂದಿನವರೆಗೆ ಎರಡು ರಾಷ್ಟ್ರೀಯ ಮಟ್ಟದ, ಐದು ರಾಜ್ಯ ಮಟ್ಟದ ಹಾಗೂ ಹಲವಾರು ಜಿಲ್ಲಾ ಮಟ್ಟದ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ನೂರಾರು ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಮೂಲಕ ಭಾರತಕ್ಕೆ ಉತ್ತಮ ಕ್ರೀಡಾಪಟುಗಳನ್ನು ನೀಡಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರಾದ ಬಾಲಕೃಷ್ಣ ಹೆಗ್ಡೆ ಕೊಕ್ಕರ್ಣೆ, ರಘುರಾಮ್ ನಾಯಕ್, ಅಶೋಕ…
ಡಾ. ತೇಜಸ್ವಿ ಭಂಡಾರಿ ಇವರು ಡಾ ಪಾರಿ ಕೆ ಎ ಇವರ ಮಾರ್ಗದರ್ಶನದಲ್ಲಿ ಸಂಭಾವ್ಯ ಪ್ರೊಬಯೋಟಿಕ್ ಬ್ಯಾಕ್ಟೀರಿಯಾದ ಮೇಲೆ ಮಾಡಿದ ಸಂಶೋಧನೆಗಾಗಿ ಬೆಂಗಳೂರಿನ ಕ್ರೈಸ್ತ್ ಯೂನಿವರ್ಸಿಟಿ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿದೆ. ಇವರು ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೈಲು ಮೂಡುಕರೆ ಮಂಜುನಾಥ ಭಂಡಾರಿ ಶೆಡ್ಯೆ ಮತ್ತು ಅಮ್ಮುಂಜೆ ಬಡಕಬೈಲು ಅನುಸೂಯ ಭಂಡಾರಿಯವರ ಪುತ್ರಿ ಹಾಗೂ ಮಲ್ಲೂರು ಪರಾರಿ ಸಿದ್ದಾರ್ಥ ರೈಯವರ ಪತ್ನಿಯಾಗಿದ್ದಾರೆ.
ಖ್ಯಾತ ತಮಿಳು ಹಾಸ್ಯ ನಟ ಯೋಗಿಬಾಬು ಜತೆಗೆ ನಟಿಸಲಿರುವ ನಮ್ಮೂರಿನ ಬಿಗ್ಬಾಸ್ ವಿನ್ನರ್ ನಮ್ಮ ಕರಾವಳಿಯ ರೂಪೇಶ್ ಶೆಟ್ಟಿ ಗಡಿ ದಾಟಿ ಹೋಗಿ ಸಿನೆಮಾ ರಂಗದಲ್ಲಿ ಸಾಧನೆ ಮಾಡುತ್ತಿದ್ದು, ಅದಕ್ಕೆ ಈಗ ಅವರು ತಮಿಳಿನಲ್ಲಿ ನಟಿಸುವ ಅವಕಾಶ ಪಡೆದುಕೊಂಡಿರುವುದು ಹೊಸ ಸೇರ್ಪಡೆ. ಬಿಗ್ ಬಾಸ್ ವಿನ್ನರ್ ಆದ ಬಳಿಕ ಅವರ ವೃತ್ತಿ ಜೀವನ ಮತ್ತೊಂದು ಎತ್ತರಕ್ಕೆ ಹೋಗಿದೆ. ಅದಕ್ಕೂ ಮೊದಲು ಅವರು ಮಾಡಿರುವ ಸಾಧನೆ, ಗಳಿಸಿರುವ ಜನಪ್ರಿಯತೆಯಿಂದಲೇ ಅವರಿಗೆ ಬಿಗ್ಬಾಸ್ನಲ್ಲಿ ಅವಕಾಶ ಸಿಕ್ಕಿದ್ದು, ಬಳಿಕ ಬಿಗ್ಬಾಸ್ ಮನೆಯಲ್ಲಿ ತೋರಿದ್ದ ನಿರ್ವಹಣೆಯಿಂದ ವಿನ್ನರ್ ಆದಾಗ ತುಳುನಾಡಿನ ಜತೆಗೆ ಇಡೀ ರಾಜ್ಯವೇ ಸಂಭ್ರಮಿಸಿತ್ತು. ಗಿರಿಗಿಟ್, ಗಮ್ಜಾಲ್, ಸರ್ಕಸ್ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿರುವ ರೂಪೇಶ್ ಶೆಟ್ಟಿ ಸ್ಯಾಂಡಲ್ವುಡ್ನ ಸುದೀಪ್ ಮುಂತಾದ ಫಟಾನುಫಟಿಗಳ ಜತೆಗೆ ಸ್ನೇಹ ಸಂಪಾದಿಸಿದ್ದಾರೆ. ಬಿಗ್ ಬಾಸ್ ವಿನ್ನರ್ ಆದ ಮೇಲೆ ರೂಪೇಶ್ ಕನ್ನಡದಲ್ಲಿ ಅಭಿನಯಿಸಿದ ಅಧಿಪತ್ರ ಸಿನಿಮಾದ ಚಿತ್ರೀಕರಣ ಪೂರೈಸಿದೆ. ಅವರು ಕನ್ನಡದಲ್ಲಿ ಅಭಿನಯಿಸಿದ “ಮಂಕುಭಾಯ್ ಫಾಕ್ಸಿರಾಣಿ” ಯಶಸ್ಸನ್ನು ಕಂಡಿದೆ. ಅಲ್ಲದೇ…